Biryani ಬಿರಿಯಾನಿಗಾಗಿ 2 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ಬಾವ-ಬಾಮೈದ

ಬ್ಯಾಂಕ್ ನಲ್ಲಿ ಸಾಲ (Bank Loan) ಮಾಡಿಕೊಂಡಿದ್ದ ಹನುಮಂತು ಕಂತುಗಳನ್ನು ಕಟ್ಟಿರಲಿಲ್ಲ. ಆದ್ದರಿಂದ ಮನೆಯಲ್ಲಿ ಚಿನ್ನ ಅಡವಿಟ್ಟು ಹಣ ಪಡೆದುಕೊಂಡಿದ್ದರು. ಬ್ಯಾಂಕ್ ಸಾಲ ತೀರಿಸಲು ಹಣ ಸಿದ್ಧಮಾಡಿಕೊಂಡಿದ್ದ ಹನುಮಂತು ಬೈಕ್ ನಲ್ಲಿ ಬಾಮೈದನ ಜೊತೆ ತೆರಳುತ್ತಿದ್ದರು.

ಬಿರಿಯಾನಿ

ಬಿರಿಯಾನಿ

  • Share this:
ಬೆಂಗಳೂರು: ಕೆಲವೊಮ್ಮೆ ಸಣ್ಣ ತಪ್ಪುಗಳು ಫಜೀತಿಗೆ ಸಿಲುಕುವಂತೆ ಮಾಡುತ್ತವೆ. ಹಾಗಾಗಿ ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಇರಿಸಬೇಕು. ನಮ್ಮ ಸಣ್ಣ ಆಸೆಗಳು ದೊಡ್ಡ ಸಮಸ್ಯೆಗೆ ಕಾರಣ ಆಗಬಹುದು. ಆದ್ದರಿಂದ ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಒಂದೇ ಸಮಯದಲ್ಲಿ ಎರಡ್ಮೂರು ಕೆಲಸ ಮಾಡಲು ಹೋದ್ರೂ ಯಾವುದೇ ಪೂರ್ಣಗೊಳ್ಳಲ್ಲ. ಒಂದು ವೇಳೆ ಪೂರ್ಣವಾದ್ರೂ ಲೋಪದೋಷಗಳಿಂದ ಕೂಡಿರುತ್ತದೆ. ಇದೀಗ ಅಂತಹವುದೇ ಒಂದು ಘಟನೆ ಬೆಂಗಳೂರಿ(Bengaluru)ನಲ್ಲಿ ನಡೆದಿದೆ. ಬಿರಿಯಾನಿ ಸವಿಯಲು ಹೋದ ಆಟೋ ಚಾಲಕ(Auto Driver)ನೋರ್ವ ಬರೋಬ್ಬರಿ ಎರಡು ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಕಷ್ಟಕ್ಕೆ ಅಂತ ಸಾಲ ಮಾಡಿ ಹಣ (Money) ತಂದಿದ್ದ ಚಾಲಕ ಈಗ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಯಾರು ಆ ಚಾಲಕ? ಹಣ ಕಳೆದುಕೊಂಡಿದ್ದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಹಣ ಬಿಟ್ಟು ಬಿರಿಯಾನಿ ತಿನ್ನಲು ಹೋದ ಬಾವ-ಬಾಮೈದ

ಈ ಘಟನೆ ನಡೆದಿದ್ದು ಬೆಂಗಳೂರಿನ ಬ್ಯಾಡರಹಳ್ಳಿ (Byadarahalli, Bengaluru) ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ. ಹನುಮಂತು ಹಣ ಕಳೆದುಕೊಂಡ ಆಟೋ ಚಾಲಕ. ಬ್ಯಾಂಕ್ ನಲ್ಲಿ ಸಾಲ (Bank Loan) ಮಾಡಿಕೊಂಡಿದ್ದ ಹನುಮಂತು ಕಂತುಗಳನ್ನು ಕಟ್ಟಿರಲಿಲ್ಲ. ಆದ್ದರಿಂದ ಮನೆಯಲ್ಲಿ ಚಿನ್ನ ಅಡವಿಟ್ಟು ಹಣ ಪಡೆದುಕೊಂಡಿದ್ದರು. ಬ್ಯಾಂಕ್ ಸಾಲ ತೀರಿಸಲು ಹಣ ಸಿದ್ಧಮಾಡಿಕೊಂಡಿದ್ದ ಹನುಮಂತು ಬೈಕ್ ನಲ್ಲಿ ಬಾಮೈದನ ಜೊತೆ ತೆರಳುತ್ತಿದ್ದರು. ಈ ವೇಳೆ ಚಿನ್ನ (Gold) ಅಡವಿಟ್ಟು ಪಡೆದ ಹಣವನ್ನು ಬೈಕ್ ಸೈಡ್ ಬ್ಯಾಗ್ ನಲ್ಲಿರಿಸಿದ್ರು. ಮಾರ್ಗ ಮಧ್ಯೆ  ಊಟಕ್ಕೆ ಬೈಕ್ ನಿಲ್ಲಿಸಿ ಬಿರಿಯಾನಿ ತಿನ್ನಲು ಬಾವ-ಬಾಮೈದ ಹೋಟೆಲ್ ಒಳಗೆ ಹೋಗಿದ್ದಾರೆ. ಆದ್ರೆ ಊಟಕ್ಕೆ ಹೋಗುವಾದ  ಹಣವನ್ನು ಬೈಕ್ ನಲ್ಲಿ ಬಿಟ್ಟು ಹೋಗಿದ್ದಾರೆ. ಊಟ ಮುಗಿಸಿ ಬರೋವಷ್ಟರಲ್ಲ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಇದನ್ನೂ ಓದಿ: ಕಳ್ಳತನ ಮಾಡಲು ಮಗನಿಗೆ ಕುಮ್ಮಕ್ಕು ಕೊಟ್ಟ ತಾಯಿ; 1 ಲಕ್ಷ ದೋಚಿ ಸಿಕ್ಕಿಬಿದ್ದ ಅಪ್ರಾಪ್ತ ಬಾಲಕ

ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈ ಚಳಕ ಸೆರೆ

ಹೋಟೆಲ್ ನಿಂತ ಬಂದ ಹನುಮಂತು ಬೈಕ್ ನಲ್ಲಿರಿಸಿದ್ದ ಹಣ ನೋಡಿದ್ದಾರೆ. ಅಲ್ಲಿ ಹಣ ಇರದಿರೋದನ್ನು ಕಂಡು ಆತಂಕಕ್ಕೊಳಗಾದ ಹನುಮಂತು ಸುತ್ತಮತ್ತ ಹುಡುಕಾಟ ನಡೆಸಿದ್ದಾರೆ. ಬೈಕ್ ಪಾರ್ಕ್ ಮಾಡಿದ್ದ ಸ್ಥಳದ ಮುಂದಿರುವ ಅಂಗಡಿಯ ಸಿಸಿಟಿವಿ (CCTV Footage) ಪರಿಶೀಲಿಸಿದಾಗ ಕಳ್ಳರ ಕೈ ಚಳಕ ಬಯಲಾಗಿದೆ. ಈ ಸಂಬಂಧ ಹನುಮಂತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಮಕ್ಕಳ ಮೂಲಕ ಕಳ್ಳತನ ಮಾಡಿಸುತ್ತಿದ್ದ ದಂಪತಿ

ಹೈದ್ರಾಬಾದ್ ಮೂಲದ ನಿವಾಸಿಗಳಾದ ಆನಂದ ಹಾಗೂ ಆಶ್ವಿನಿ ಇಬ್ಬರು ಆರೋಪಿಗಳು ‌ರಾಜ್ಯದ ಬೆಳಗಾವಿ, ಬಾಗಲಕೋಟೆ, ಬಳ್ಳಾರಿ ಹಾಗೂ ವಿವಿಧ ಭಾಗಗಳಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡು ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದರು. ಅನೇಕ ಕಡೆ ಸಾಕಷ್ಟು ಮೊಬೈಲ್ ಕಳ್ಳತನ ನಡೆಸಿದ್ದಾರೆ. 2 ಲಕ್ಷ ರೂಪಾಯಿ ಮೌಲ್ಯದ 40 ವಿವಿಧ ಕಂಪನಿಯ ‌ಮೊಬೈಲ್ ಹಾಗೂ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಕಾರನ್ನು ಜಪ್ತಿ ಮಾಡಲಾಗಿತ್ತು. ಯಾದಗಿರಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ:  50 ಲಕ್ಷ ಮೌಲ್ಯದ 68 ಆ್ಯಪಲ್ ಮೊಬೈಲ್ ಕದ್ದ ಖತರ್ನಾಕ್ ಕಳ್ಳರ ಬಂಧಿಸಿದ ಮಂಗಳೂರು ಪೊಲೀಸರು

ಹೈದರಾಬಾದ್ ನಲ್ಲಿ ಮೊಬೈಲ್ ಮಾರಾಟ

ದಂಪತಿ ಮೊಬೈಲ್ ಗಳನ್ನು ಕಾರಿನಲ್ಲಿ ತೆಗೆದುಕೊಂಡು ಹೈದ್ರಾಬಾದ್ ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬೆಳಗಾವಿ, ಬಳ್ಳಾರಿ, ಬಾಗಲಕೋಟೆ ಮೊದಲಾದ ಭಾಗದಲ್ಲಿ ಆರೋಪಿಗಳಿಬ್ಬರು, ಮಕ್ಕಳ ‌ಮೂಲಕ ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದರು.ಆರೋಪಿಗಳು ಮೊಬೈಲ್ ಸಮೇತ ಕಾರ ಮೂಲಕ ತೆರಳುವಾಗ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣ ಮುಂಭಾಗದಲ್ಲಿ ಕಾರ ನಿಲ್ಲಿಸಿದರು.ಈ ವೇಳೆ ಅನುಮಾನಗೊಂಡ ಯಾದಗಿರಿ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
Published by:Mahmadrafik K
First published: