ವಿಧಾನ ಸೌಧದಲ್ಲಿ ಹಣ ಪತ್ತೆ ಪ್ರಕರಣ : ಆರೋಪಿ ಮೋಹನ್ ಗೆ ಜಾಮೀನು‌ ಮಂಜೂರು

ವಿಧಾನ ಸೌಧದ ವೆಸ್ಟ್ ಗೇಟ್ ಬಳಿ ಹಣ ಪತ್ತೆ ಪ್ರಕರಣ ಕ್ಕೆ ಸಂಬಂಧಿಸಿದಂತೆ ವಿಧಾನ ಸೌಧ ಠಾಣೆಯ ಇನ್​ಸ್ಪೆಕ್ಟರ್​​ ಅವರು ಮೋಹನ್ ಬಂಧನ ನಂತರ ಪ್ರಕರಣ ಎಸಿಬಿಗೆ ವರ್ಗಾವಣೆ ಆಗಿತ್ತು

G Hareeshkumar | news18
Updated:March 14, 2019, 3:11 PM IST
ವಿಧಾನ ಸೌಧದಲ್ಲಿ ಹಣ ಪತ್ತೆ ಪ್ರಕರಣ : ಆರೋಪಿ ಮೋಹನ್ ಗೆ ಜಾಮೀನು‌ ಮಂಜೂರು
ಮೋಹನ್
G Hareeshkumar | news18
Updated: March 14, 2019, 3:11 PM IST
ಬೆಂಗಳೂರು  (ಮಾ.14) :  ವಿಧಾನಸೌಧದಲ್ಲಿ  ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೋಹನ್ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ವಿಧಾನ ಸೌಧದ ಪಶ್ಚಿಮ ಗೇಟ್ ಬಳಿ ಕಾರು ಪರಿಶೀಲನೆ ನಡೆಸುತ್ತಿದ್ದ ವೇಳೆ ಮೋಹನ್ ಎಂಬಾತನ ಬಳಿ ಸುಮಾರು 25.76 ಲಕ್ಷ ರೂ. ಹಣ ಪತ್ತೆಯಾಗಿತ್ತು.  ಬಳಿಕ ಹಣ ಪತ್ತೆಯಾದ ಕೂಡಲೇ ಮೋಹನ್ ನನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದ್ದರು ಎನ್ನಲಾಗಿದೆ.

ಏನಿದು ಪ್ರಕರಣ?: ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಕಚೇರಿಯ ಸಿಬ್ಬಂದಿ ಸುಮಾರು 25.76 ಲಕ್ಷ ರೂ.ವನ್ನು ಕಚೇರಿಯಿಂದ ಹೊರಗೆ ತೆಗೆದುಕೊಂಡು ಹೋಗುವಾಗ ಸಿಕ್ಕಿ ಬಿದ್ದಿದ್ದರು. ಈ ಹಣದ ಬಗ್ಗೆ ಆರಂಭದಲ್ಲಿ ಗೊಂದಲಕಾರಿ ಹೇಳಿಕೆ ನೀಡಿದ್ದ ಮೋಹನ್ ಅವರು ಕೊನೆಗೆ ಆ ಹಣ ತಮ್ಮದೇ ಎಂದು ಒಪ್ಪಿಕೊಂಡಿದ್ದರು. ಒಂದು ಹಂತದಲ್ಲಿ ಹಣವನ್ನು ಸಾಹೇಬರಿಗೆ ತಲುಪಿಸಲು ಹೋಗುತ್ತಿದ್ದುದಾಗಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ : 25 ಲಕ್ಷ ಹಣ ಪತ್ತೆ ಪ್ರಕರಣ​: ಸಚಿವ ಪುಟ್ಟರಂಗಶೆಟ್ಟಿಗೆ ಸಂಕಷ್ಟ; ಆಪ್ತ ಸಹಾಯಕರ ಕೈವಾಡ ಶಂಕೆ!

ವಿಧಾನ ಸೌಧದ ವೆಸ್ಟ್ ಗೇಟ್ ಬಳಿ ಹಣ ಪತ್ತೆ ಪ್ರಕರಣ ಕ್ಕೆ ಸಂಬಂಧಿಸಿದಂತೆ ವಿಧಾನ ಸೌಧ ಠಾಣೆಯ ಇನ್​ಸ್ಪೆಕ್ಟರ್​​ ಅವರು ಮೋಹನ್ ಬಂಧನ ನಂತರ ಪ್ರಕರಣ ಎಸಿಬಿಗೆ ವರ್ಗಾವಣೆ ಆಗಿತ್ತು. ಈಗಾಗಲೇ ಈ  ಪ್ರಕರಣ ನಡೆದು 60 ದಿನ ಕ್ಕೂ ಹೆಚ್ಚು ಕಾಲ ಕಳೆದಿದೆ. ಆದರೂ ಇದುವರೆಗೂ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಹೇಳಿದೆ.

ಮೇಲಿನ ಈ ಅಂಶಗಳನ್ನ ಮುಂದಿಟ್ಟಿಕೊಂಡು ಆರೋಪಿ ಮೋಹನ್ ಪರ ವಕೀಲ‌ ಶ್ಯಾಮ್ ಸುಂದರ್ ವಾದ ಮಂಡನೆ ಮಾಡಿದ್ದರು.
First published:March 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...