ಬೆಂಗಳೂರು: ನಗರದ ಗಿರಿನಗರ ಪೊಲೀಸ್ ಠಾಣೆ, ಹೊಸಕೆರೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ನೂರಾರು ಜನರಿಗೆ ನಂಬಿಸಿ ಸುಮಾರು 20 ಕೋಟಿ ರೂ. ವಂಚನೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ವಂಚನೆಗೆ ಒಳಗಾದವರು ಇಂದು ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಗಿರಿನಗರದ ವಂಚಕ ದಂಪತಿ ಜ್ಞಾನೇಶ್-ಲೀಲಾವತಿ ಹಾಗೂ ಅವರ ಮಗ ಮನೋಜ್ ಚೀಟಿ, ಷೇರುಪೇಟೆಯಲ್ಲಿ ಬಂಡವಾಳ ಹೂಡಿಕೆ ಮಾಡಿ ಹಣ ಡಬ್ಬಲ್ ಮಾಡಿಕೊಡುವುದಾಗಿ ನಂಬಿಸಿ ಬರೋಬ್ಬರಿ 900 ಜನರಿಂದ ಸುಮಾರು 20 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ.
ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಜ್ಞಾನೇಶ್-ಲೀಲಾವತಿ ಹಾಗೂ ಅವರ ಮಗ ಮನೋಜ್‍ನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಜತೆಗೆ ಜ್ಞಾನೇಶ್-ಲೀಲಾವತಿ ಪುತ್ರ ಮೇಘನಾ ಹಾಗೂ ಅಳಿಯ ರವಿಕುಮಾರ್ ಕೂಡ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಅಳಿಯ ರವಿಕುಮಾರ್ ಹನುಮಂತ ನಗರ ಠಾಣೆಯಲ್ಲಿ ರೈಟರ್. ಹೀಗಾಗಿ ಆತ ತನಿಖೆ ಮೇಲೆ ಪ್ರಭಾವ ಬೀರುತ್ತಿದ್ದಾನೆ. ಮಗಳು ಮೇಘನಾ, ಅಳಿಯ ರವಿಕುಮಾರ್‍ನನ್ನು ಬಂಧಿಸಿ, ಪ್ರಕರಣ ತನಿಖೆಯನ್ನು ಸಿಐಡಿ ಒಪ್ಪಿಸುವಂತೆ ಹಣ ಕಳೆದುಕೊಂಡವರು ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ: ಬಾದಾಮಿ ಬನಶಂಕರಿ ದೇವಿ ಜಾತ್ರೆ ರದ್ದು; ದೇವಿಗೆ ಕೊರೋನಾ ವಕ್ರದೃಷ್ಟಿ, ದೇಗುಲಕ್ಕೆ ದಿಗ್ಬಂಧನ!
ಆ ಐನಾತಿ ಜ್ಞಾನೇಶ್-ಲೀಲಾವತಿ ದಂಪತಿ ಮಿಡಲ್ ಕ್ಲಾಸ್ ಜನರನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ದಂಪತಿಯ ಹೆಚ್ಚುವರಿ ಬಡ್ಡಿ ಆಸೆಗೆ ಈಗ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಪತ್ನಿಗೆ ಹೇಳದಂತೆ ಪತಿ ಹೂಡಿಕೆ ಮಾಡಿದ್ದರೆ, ಪತಿಗೆ ಗೊತ್ತಾಗದಂತೆ ಪತ್ನಿಯಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಐನಾತಿಗಳು, ಸುಮಾರು 900ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ