HOME » NEWS » State » MONEY AND 250 CRORE VALUE PROPERTY PAPERS FOUND IN KAS OFFICER DR SUDHA FRIEND HOUSE MTV SCT

KAS ಅಧಿಕಾರಿ ಸುಧಾ ಆಪ್ತೆ ಮನೆಯಲ್ಲಿ ಸಿಕ್ಕ ಹಣ, ಆಸ್ತಿ ಪತ್ರ ನೋಡಿ ಎಸಿಬಿ ಅಧಿಕಾರಿಗಳೇ ಶಾಕ್!

ಕೆಎಎಸ್​ ಅಧಿಕಾರಿ ಡಾ. ಬಿ. ಸುಧಾ ಅವರ ಆಪ್ತೆ ರೇಣುಕಾ ಮನೆಯಲ್ಲಿ 250 ಕೋಟಿ ರೂ. ಮೌಲ್ಯದ ಪ್ರಾಪರ್ಟಿ ದಾಖಲೆಗಳು, ಮೂರೂವರೆ ಕೆ.ಜಿ ಚಿನ್ನ, 7 ಕೆ.ಜಿ ಬೆಳ್ಳಿ ಹಾಗೂ 35 ಲಕ್ಷ ರೂ., 40 ಬ್ಯಾಂಕ್​ಗಳ ಪಾಸ್ ಬುಕ್ ಪತ್ತೆಯಾಗಿದೆ.

news18-kannada
Updated:November 8, 2020, 3:36 PM IST
KAS ಅಧಿಕಾರಿ ಸುಧಾ ಆಪ್ತೆ ಮನೆಯಲ್ಲಿ ಸಿಕ್ಕ ಹಣ, ಆಸ್ತಿ ಪತ್ರ ನೋಡಿ ಎಸಿಬಿ ಅಧಿಕಾರಿಗಳೇ ಶಾಕ್!
ಕೆಎಎಸ್​ ಅಧಿಕಾರಿ ಡಾ. ಬಿ. ಸುಧಾ
  • Share this:
ಬೆಂಗಳೂರು (ನ. 8): ಅಕ್ರಮವಾಗಿ ಆಸ್ತಿ, ಹಣ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಕೆಎಎಸ್​ ಅಧಿಕಾರಿ ಡಾ. ಬಿ. ಸುಧಾ ಮನೆಗಳ ಮೇಲೆ ನಿನ್ನೆ ಎಸಿಬಿ ದಾಳಿ ನಡೆಸಲಾಗಿತ್ತು. ಇಂದು ಕೂಡ ಅವರಿಗೆ ಸಂಬಂಧಿಸಿದವರ ಮನೆ ಮೇಲೆ ಎಸಿಬಿ ದಾಳಿ ಮುಂದುವರೆದಿದೆ. ನಿನ್ನೆ ಬೆಂಗಳೂರು, ಮೈಸೂರು, ಉಡುಪಿಯಲ್ಲಿ ಏಕಕಾಲಕ್ಕೆ 6 ಕಡೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಇಂದು ಡಾ. ಸುಧಾ ಅವರ ಆಪ್ತೆ ರೇಣುಕಾ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಅಲ್ಲಿ ಸಿಕ್ಕ ದಾಖಲೆಗಳನ್ನು ನೋಡಿ ಎಸಿಬಿ ಅಧಿಕಾರಿಗಳೇ ದಂಗಾಗಿದ್ದಾರೆ. ರೇಣುಕಾ ಅವರ ಮನೆಯಲ್ಲಿ ಬರೋಬ್ಬರಿ 250 ಕೋಟಿ ರೂ. ಮೌಲ್ಯದ ಆಸ್ತಿಪತ್ರಗಳು ಪತ್ತೆಯಾಗಿವೆ.

ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಸುಧಾ ಅವರ ಆಪ್ತೆ ರೇಣುಕಾ ಮನೆಯ ಮೇಲೆಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮೂರೂವರೆ ಕೆ.ಜಿ ಚಿನ್ನ, 7 ಕೆ.ಜಿ ಬೆಳ್ಳಿ ಹಾಗೂ 35 ಲಕ್ಷ ನಗದು ಪತ್ತೆಯಾಗಿದೆ. ರೇಣುಕಾ ಮನೆಯಲ್ಲಿ 250 ಕೋಟಿ ರೂ. ಮೌಲ್ಯದ ಪ್ರಾಪರ್ಟಿ ದಾಖಲೆಗಳು ಸಹ ಪತ್ತೆಯಾಗಿವೆ. ಸುಧಾ ಆಪ್ತೆ ರೇಣುಕಾ ಅವರ ಚಂದ್ರಶೇಖರ್ ಮನೆಯಲ್ಲಿ ಸಿಕ್ಕ ದಾಖಲೆಗಳನ್ನು ನೋಡಿ ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ.

Money and 250 Crore Value Property Papers Found in KAS Officer Dr Sudha's Friend House.
ಡಾ. ಸುಧಾ ಅವರ ಆಪ್ತೆ ರೇಣುಕಾ ಮನೆಯಲ್ಲಿ ಸಿಕ್ಕ ಚಿನ್ನಾಭರಣ, ಹಣ, ದಾಖಲೆ


ರೇಣುಕಾ, ಸುಧಾರ ಅತ್ಯಾಪ್ತೆಯಾದ ಬ್ಯಾಟರಾಯನಪುರದಲ್ಲಿರುವ ರೇಣುಕಾ ಚಂದ್ರಶೇಖರ್ ಸುಧಾಗೆ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಸುಧಾ ಹೇಳಿದ ಕಡೆ ಹಣ ಪಡೆಯುತ್ತಿದ್ದ ಅನುಮಾನದ ಮೇಲೆ ಎಸಿಬಿ ಅಧಿಕಾರಿಗಳು ರೇಣುಕಾ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ರೇಣುಕಾ ಮನೆಯಲ್ಲಿ ಮೂರೂವರೆ ಕೆಜಿ ಚಿನ್ನ, 7 ಕೆಜಿ ಬೆಳ್ಳಿ, 36 ಲಕ್ಷ ನಗದು. ಸುಮಾರು 250 ಕೋಟಿಯ ಆಸ್ತಿ ಪತ್ರಗಳು, 40 ಬ್ಯಾಂಕ್​ಗಳ ಪಾಸ್ ಬುಕ್ ಪತ್ತೆಯಾಗಿದೆ. ಆ ಬ್ಯಾಂಕ್ ವಹಿವಾಟನ್ನು ಲೆಕ್ಕ ಹಾಕಲು ಎಸಿಬಿ ಅಧಿಕಾರಿಗಳಿಗೆ ಇನ್ನೂ 4 ದಿನಗಳು ಬೇಕು ಎನ್ನಲಾಗಿದೆ. ನೂರಕ್ಕೂ ಹೆಚ್ಚು ಚೆಕ್ ಗಳು ಮತ್ತು ಅಗ್ರಿಮೆಂಟ್ ಪೇಪರ್ ಗಳು ರೇಣುಕಾ ಮನೆಯಲ್ಲಿ ಪತ್ತೆಯಾಗಿವೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ; ಬೆಂಗಳೂರು, ಉಡುಪಿಯಲ್ಲಿ ಕೆಎಎಸ್​ ಅಧಿಕಾರಿ ಡಾ. ಸುಧಾ ಮನೆ ಮೇಲೆ ಎಸಿಬಿ ದಾಳಿ

ರೇಣುಕಾ ಅವರ ಗಂಡ ಚಂದ್ರಶೇಖರ್ ನಿವೃತ್ತ ಡಿವೈಎಸ್​ಪಿಯಾಗಿದ್ದು, ರೇಣುಕಾ ಅವರ ಮಗ ಕೂಡ ಎಇಇ ಆಗಿ ಕೆಲಸ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದ ರೇಣುಕಾ ನಾಲ್ಕು ಕಂಪನಿ ಹೆಸರಲ್ಲಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದರು. ಈ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಸುಧಾ ಬೇನಾಮಿ ಇದೆಯಾ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

ಈ ಕುರಿತು ರೇಣುಕಾ ಅವರ ಮನೆಯಲ್ಲಿ ತನಿಖೆ ನಡೆಸುತ್ತಿರುವಾಗಲೇ ರೇಣುಕಾ ಅವರ ತಂದೆ ಸಾವನ್ನಪ್ಪಿದ್ದಾರೆ. ರೇಣುಕಾ ಅವರ ತಂದೆ ಸಾವಿನಿಂದಾಗಿ ದಾಳಿಯ ಅರ್ಧದಲ್ಲೇ ಮನೆಯಿಂದ ಹೊರಟಿದ್ದ ರೇಣುಕಾ ಮತ್ತು ಚಂದ್ರಶೇಖರ್ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ರೇಣುಕಾ ಅವರ ಮಕ್ಕಳ ಸಮ್ಮುಖದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದರು.
Youtube Video

ಈ ಹಿಂದೆ ಶಿವಮೊಗ್ಗದ ಸೊರಬದಲ್ಲಿ ತಹಸೀಲ್ದಾರ್ ಆಗಿದ್ದ ಸುಧಾ ನಂತರ ಅಲ್ಲಿಂದ ಬಿಡಿಎ ಡೆಪ್ಯುಟಿ ಸೆಕ್ರೆಟರಿ ಆಗಿ ವರ್ಗಾವಣೆಯಾಗಿದ್ದರು. ಅಲ್ಲಿಂದ ಬಿಡಿಎ ಭೂ ಸ್ವಾಧೀನ ಅಧಿಕಾರಿಯಾಗಿ ವರ್ಗಾವಣೆಯಾಗಿದ್ದರು. ಭೂ ಸ್ವಾಧೀನ ಅಧಿಕಾರಿ ಆಗಿದ್ದಾಗ ಅವರು ಕೋಟ್ಯಾಂತರ ರೂ. ಅಕ್ರಮ ಹಣ ಸಂಪಾದನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಡಾ. ಸುಧಾ ಅವರ ಪತಿ ಸ್ಟ್ರೋನಿ‌ ಫಾಯಿಸ್ ಸ್ಯಾಂಡಲ್​ವುಡ್ ನಿರ್ಮಾಪಕರಾಗಿದ್ದು, ಸುಧಾ ಕ್ರಿಯೇಷನ್ ಅನ್ನೋ ಬ್ಯಾನರ್ ನಲ್ಲಿ ಚಿತ್ರಗಳ ನಿರ್ಮಾಣ ಮಾಡಿದ್ದಾರೆ. ಭೂ ಸ್ವಾಧೀನ ಅಧಿಕಾರಿಯಾಗಿದ್ದಾಗ ಡಾ. ಸುಧಾ ದಲ್ಲಾಳಿಗಳ ಮೂಲಕ ಹಣ ಪಡೆದಿರೋ ಆರೋಪ ಕೇಳಿಬಂದಿತ್ತು. ಕೆಂಪೇಗೌಡ ಲೇ ಔಟ್ ಹಾಗೂ ವಿಶ್ವೇಶ್ವರಯ್ಯ ಲೇ ಔಟ್ ನಿರ್ಮಾಣದಲ್ಲಿ ಹಣ ಪಡೆದಿರೋ ಆರೋಪ ಕೇಳಿಬಂದಿತ್ತು.
Published by: Sushma Chakre
First published: November 8, 2020, 3:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories