• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • 2023 Karnataka Election: ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ; ಶೂನ್ಯ ಅವಧಿಯಲ್ಲಿ ಏನೆಲ್ಲಾ ಮಾಡಬಾರದು?

2023 Karnataka Election: ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ; ಶೂನ್ಯ ಅವಧಿಯಲ್ಲಿ ಏನೆಲ್ಲಾ ಮಾಡಬಾರದು?

ಚುನಾವಣಾ ಆಯೋಗ

ಚುನಾವಣಾ ಆಯೋಗ

Election Commission: ಈ ಶೂನ್ಯ ಅವಧಿಯಲ್ಲಿ ಚುನಾವಣೆ ಆಯೋಗ ಫುಲ್ ಆಲರ್ಟ್ ಆಗಿರಲಿದ್ದು, ಅನುಮಾನಸ್ಪದ ವಾಹನಗಳ ಪರಿಶೀಲನೆ ಸಹ ನಡೆಸುತ್ತದೆ.

  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಬಹಿರಂಗ ಚುನಾವಣಾ ಪ್ರಚಾರಕ್ಕೆ (Open Election Campaign) ಸೋಮವಾರ ಸಂಜೆ 6 ಗಂಟೆಗೆ ತೆರೆ ಬೀಳಲಿದೆ. ನಂತರದ ಸಮಯವನ್ನು ಚುನಾವಣಾ ಆಯೋಗ (Election Commission) ಶೂನ್ಯ ಅವಧಿ ಎಂದು ಪರಿಗಣಿಸುತ್ತದೆ. ಮತದಾನಕ್ಕೂ ಮುನ್ನ ಅಂದ್ರೆ 48 ಗಂಟೆ ಯಾರೂ ಸಹ ಬಹಿರಂಗವಾಗಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿ ಸಮಾವೇಶ ಮಾಡುವಂತಿರಲ್ಲ. ಸಂಜೆಯ ನಂತರ ಧ್ವನಿವರ್ಧಕ ಬಳಸಿಯೂ ಪ್ರಚಾರ ನಡೆಸುವಂತಿರಲ್ಲ. ಚುನಾವಣೆ ಪ್ರಚಾರ ಮತ್ತು ಪಕ್ಷದ ಕೆಲಸಕ್ಕಾಗಿ ಕ್ಷೇತ್ರದಲ್ಲಿರುವ ಸ್ಟಾರ್​ ಪ್ರಚಾರಕರು, ರಾಷ್ಟ್ರೀಯ ನಾಯಕರು ಸಹ ಕ್ಷೇತ್ರದಿಂದ ಹೊರ ಹೋಗಬೇಕಾಗುತ್ತದೆ.


ಇನ್ನು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಸಂಬಂಧಪಡದವರು ಇರುವಂತಿಲ್ಲ. ಈ ಸಂಬಂಧ ಚುನಾವಣಾ ಆಯೋಗ ಕ್ಷೇತ್ರದ ಮೇಲೆ ಹದ್ದಿನ ಕಣ್ಣು ಇರಿಸಲಿದೆ.


ಈ ಶೂನ್ಯ ಅವಧಿಯಲ್ಲಿ ಚುನಾವಣೆ ಆಯೋಗ ಫುಲ್ ಆಲರ್ಟ್ ಆಗಿರಲಿದ್ದು, ಅನುಮಾನಸ್ಪದ ವಾಹನಗಳ ಪರಿಶೀಲನೆ ಸಹ ನಡೆಸುತ್ತದೆ. ಅಭ್ಯರ್ಥಿಗಳು ಮಂಗಳವಾರ ಸಂಜೆ ಆರು ಗಂಟೆವರೆಗೆ ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಬಹುದು.


ಮೇ 10ಕ್ಕೆ ಮತದಾನ, ಮೇ 13ಕ್ಕೆ ಫಲಿತಾಂಶ


ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಹೀಗಾಗಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗವೇ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮೇ 13ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಮೇ 15ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ:  Priyank Kharge ಬೆಂಬಲಿಗನ ಮನೆ ಮೇಲೆ ಐಟಿ ದಾಳಿ


3 ದಿನ ಮದ್ಯ ಮಾರಾಟ ಬಂದ್


ಮೇ 8ರ ಮಧ್ಯರಾತ್ರಿಯಿಂದ ಮೇ10 ರ ಮಧ್ಯರಾತ್ರಿಯವರೆಗೂ ಎಣ್ಣೆ ಸಿಗೋದಿಲ್ಲ. ಮೇ 10 ರಂದು ಮತದಾನ ನಡೆಯಲಿದೆ. ಹೀಗಾಗಿ ಒಂದು ದಿನ ಮುಂಚೆಯೇ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗುತ್ತದೆ.
ಮೇ 13ರಂದು ಫಲಿತಾಂಶ ಇರೋ ಕಾರಣ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೂ ಎಣ್ಣೆ ಸಿಗೋದಿಲ್ಲ.

top videos
    First published: