ಚಿತ್ರದುರ್ಗ: ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ಎನ್.ವೈ.ಗೋಪಾಲಕೃಷ್ಣ (NY Gopalakrishna) ರಾಜೀನಾಮೆ ಹಿನ್ನೆಲೆ ಮೊಳಕಾಲ್ಮೂರು ಕ್ಷೇತ್ರದಿಂದ (Molakalmuru) ಗೋಪಾಲಕೃಷ್ಣಗೆ 'ಕೈ' ಟಿಕೆಟ್ ಸಾಧ್ಯತೆ ಇದೆ. ಮೊಳಕಾಲ್ಮೂರು 'ಕೈ' ಟಿಕೆಟ್ ಆಕಾಂಕ್ಷಿ ಡಾ.ಯೊಗೀಶ್ ಬಾಬು (Dr Yogish Babu) ಪಕ್ಷಕ್ಕಾಗಿ ದುಡಿದವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ಇದೆ. ಭಾರತ್ ಜೋಡೋ ಯಾತ್ರೆ (Bharat Jodo) ವೇಳೆ ಬಹಿರಂಗ ಘೋಷಣೆ ಮಾಡಿದ್ದರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar), ಮಾಜಿ ಶಾಸಕ ತಿಪ್ಪೇಸ್ವಾಮಿ (Former MLA Tippeswamy) ನಮ್ಮ ಕೈ ಹಿಡಿದು ಎತ್ತಿದ್ರು ಎಂದಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಗೆಲ್ಲಿಸುವಂತೆ ಹೇಳಿದ್ರು.
ಡಾ.ತಿಪ್ಪೇಸ್ವಾಮಿ, ಸೋಮಣ್ಣ ಮತ್ತು ನಾನು ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದೇವೆ. ನಮ್ಮಲ್ಲಿ ಯಾರಿಗಾದರೂ ಟಿಕೆಟ್ ನೀಡಲಿ. ಈಗ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಿದರೆ ಅವತ್ತು ಉತ್ತರಿಸುತ್ತೇವೆ ಎಂದಿದ್ದಾರೆ.
ಇತ್ತ, ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಗೋಪಾಲಕೃಷ್ಣ ಮಾತನಾಡಿದ್ದು, ಮೊಳಕಾಲ್ಮೂರು ಕ್ಷೇತ್ರದ ಜನ ಉತ್ಸಾಹ ತೋರಿದ್ದಾರೆ. ಕಾಂಗ್ರೆಸ್ ನಾಯಕರು 2 ವರ್ಷದಿಂದ ಪಕ್ಷಕ್ಕೆ ಆಹ್ವಾನಿಸುತ್ತಿದ್ದರು. ಘರ್ ವಾಪ್ಸಿ ಆಗುವಂತೆ ಮಿತ್ರ ಶಾಸಕರು ಹೇಳುತ್ತಿದ್ದರು.
ಟಿಕೆಟ್ ಸಿಗುವ ವಿಶ್ವಾಸದಲ್ಲಿ ಗೋಪಾಲಕೃಷ್ಣ
ಮೊಳಕಾಲ್ಮೂರು 'ಕೈ' ಟಿಕೆಟ್ ಸಂಭಾವ್ಯ ಪಟ್ಟಿಯಲ್ಲಿ ನನ್ನ ಹೆಸರಿದ್ದು, ಫೈನಲ್ ಆಗುವ ವಿಶ್ವಾಸವಿದೆ. 2 ದಿನದಲ್ಲಿ ಪಕ್ಷದ ನಾಯಕರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಟಿಕೆಟ್ ನೀಡಿದ್ರೆ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಮೊಳಕಾಲ್ಮೂರು ಕ್ಷೇತ್ರ ನನ್ನ ಹುಟ್ಟೂರು, ಸ್ವಕ್ಷೇತ್ರ. ನನ್ನ ವಿರುದ್ಧ ಗೋ ಬ್ಯಾಕ್ ಗೋಪಾಲಕೃಷ್ಣ ಎನ್ನುವ ನೈತಿಕ ಹಕ್ಕಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Congress: ಅಳೆದು ತೂಗಿ ಬಿಡುಗಡೆಯಾಗಿರೋ ‘ಕೈ’ ಮೊದಲ ಪಟ್ಟಿಯ ವಿಶೇಷತೆಗಳೇನು?
ಮೊಳಕಾಲ್ಮೂರು ಸ್ವಾಭಿಮಾನ, ಗೌರವದ ಪ್ರಶ್ನೆ
ನನ್ನ ವಿರುದ್ಧ ಪ್ರತಿಭಟನೆ ಮಾಡುವುದು ಸಣ್ಣತನ. 2018ರಲ್ಲಿ ನನಗೆ ಟಿಕೆಟ್ ತಪ್ಪಿದಾಗ ನಾನು ಹೀಗೆ ಅಸಹ್ಯ ವಾತಾವರಣ ನಿರ್ಮಿಸಲಿಲ್ಲ. ಮೊಳಕಾಲ್ಮೂರು ಸ್ವಾಭಿಮಾನ, ಗೌರವದ ಪ್ರಶ್ನೆ. ಮೊಳಕಾಲ್ಮೂರು ಗೌರವವನ್ನು ಯಾರೂ ಕಳೆಯಬಾರದು ಎಂದು ಗೋಪಾಲಕೃಷ್ಣ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ