ಮಂಗಳೂರು: ಕಾಂಗ್ರೆಸ್ (Congress) ಟಿಕೆಟ್ ತಪ್ಪಿದ ಹಿನ್ನೆಲೆ ಮಾಜಿ ಶಾಸಕ ಮೊಯಿದ್ದಿನ್ ಬಾವಾ (Former MLA Mohiuddin Bava) ಜೆಡಿಎಸ್ ನಿಂದ ಸ್ಪರ್ಧೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಮಾಜಿ ಶಾಸಕರಾಗಿರುವ ಬಾವಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ (Mangaluru North) ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ಮೂಲಕ ಚುನಾವಣಾ ಕಣಕ್ಕಿಳಿಯಲು ಮೊಯಿದ್ದಿನ್ ಬಾವಾ ನಿರ್ಧಾರ ಮಾಡಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಾವಾ ಸ್ಪರ್ಧೆಯಿಂದ ಸಾಂಪ್ರದಾಯಿಕ ಮತ ವಿಭಜನೆ ಆಗುವ ಆತಂಕ ಕಾಂಗ್ರೆಸ್ಗೆ ಎದುರಾಗಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಇನಾಯತ್ ಅಲಿ ಅವರಿಗೆ ಟಿಕೆಟ್ ನೀಡಲಾಗಿದೆ.
2023ರ ವಿಧಾನಸಭೆ ಚುನಾವಣೆಗೆ (Karnataka Assembly Election) ಕಾಂಗ್ರೆಸ್ ಪಕ್ಷ (Congress Candidate List) ತಡರಾತ್ರಿ ಆರು ಮತ್ತು ಕೊನೆಯ ಪಟ್ಟಿ ರಿಲೀಸ್ ಮಾಡಿದೆ. ಬುಧವಾರ ರಾತ್ರಿ ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ 5 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿತ್ತು.
ಅಂತಿಮ ಐದು ಕ್ಷೇತ್ರಗಳು
ಶಿಡ್ಲಘಟ್ಟ: ಬಿ ವಿ ರಾಜೀವ್ ಗೌಡ
ಸರ್ ಸಿವಿ ರಾಮನ್ ನಗರ: ಎಸ್ ಆನಂದಕುಮಾರ್
ರಾಯಚೂರು ನಗರ: ಮೊಹಮದ್ ಶಲಾಮ್
ಅರಕಲಗೂಡು: ಹೆಚ್ ಪಿ ಶ್ರೀಧರ್ ಗೌಡ
ಮಂಗಳೂರು ಉತ್ತರ: ಇನಾಯತ್ ಅಲಿ
ಇಂದು ಬಾಬುರಾವ್ ಚಿಂಚನಸೂರ್ ನಾಮಪತ್ರ ಸಲ್ಲಿಕೆ
ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುರಮಿಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಇದನ್ನೂ ಓದಿ: Belur Gopalkrishna: ಮಂತ್ರಿ ಕನಸು ಕಾಣುತ್ತಿರುವ ಅಭ್ಯರ್ಥಿಯ 'ಕೈ' ಹಿಡಿತಾರಾ ಸಾಗರದ ಜನತೆ?
ಇದೇ ಸೋಮವಾರ ಚಿಂಚನಸೂರ ಪರವಾಗಿ ಪತ್ನಿ ಅಮರೇಶ್ವರಿ ಚಿಂಚನಸೂರ ನಾಮಪತ್ರ ಸಲ್ಲಿಸಿದ್ದರು. ಚಿಂಚನಸೂರಗೆ ಶಾಸಕ ಪ್ರಿಯಾಂಕ ಖರ್ಗೆ ಸೇರಿ ಅನೇಕರು ಸಾಥ್ ನೀಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ