ಚಿತ್ರದುರ್ಗ(ಜು.13): ಹಿಂದೂ ಸಮಾಜದ (Hindu Society) ಪ್ರಮುಖ ಸಮಸ್ಯೆಗಳಾದ ಅಸ್ಪೃಶ್ಯತೆ, ವಿಷಮತೆ, ಅಸಮಾನತೆ ಇವುಗಳು ಮುಖ್ಯವಾಗಿ ಇರುವುದು ನಮ್ಮ ಮನಸ್ಸಿನಲ್ಲಿ. ಶಾಸ್ತ್ರಗಳಲ್ಲಿ ಸಮಸ್ಯೆ ಇಲ್ಲ. ಮತ್ತು ಈ ಸಮಸ್ಯೆಗಳು ಹಲವಾರು ಶತಮಾನಗಳಿಂದ ನಮ್ಮ ಮನಸ್ಸಿನಲ್ಲಿ ಉಳಿದಿವೆ. ಹಾಗಾಗಿ ಇದರ ಪರಿಹಾರಕ್ಕೂ ಸಮಯ ತಗುಲುವುದು. ನಿಧಾನವಾಗಿ ಇದನ್ನು ಮನಸ್ಸಿನಿಂದ ತೆಗೆಯುವ ಕೆಲಸವಾಗಬೇಕಿದೆ. ಅಲ್ಲಿಯವರೆಗೂ ಸಹನೆ ಮತ್ತು ಧೈರ್ಯವನ್ನು ನಾವು ಹೊಂದಬೇಕು ಎಂದು RSS ಸರ ಸಂಚಾಲಕ ಮೋಹನ್ ಭಾಗವತ್ (Mohan Bhagawat) ಹೇಳಿದ್ದಾರೆ.
ಚಿತ್ರದುರ್ಗದ ಶ್ರೀ ಶಿವಶರಣ ಮಾದಾರಚನ್ನಯ್ಯ ಗುರುಪೀಠದಲ್ಲಿ ದಲಿತ, ಹಿಂದುಳಿದ ವರ್ಗಗಳ 21 ಮಠಾಧೀಶರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿ, ಸಂವಾದದಲ್ಲಿ ಅನೇಕ ಸ್ವಾಮೀಜಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
21 ಮಠಾಧೀಶರು ಭಾಗಿ
ಈ ಕಾರ್ಯಕ್ರಮದಲ್ಲಿಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಡಾ. ಶ್ರೀ ಶಾಂತವೀರ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಡಾ.ಪುರುಷೋತ್ತಮಾನಂದ ಸ್ವಾಮೀಜಿ, ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ, ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಶ್ರೀ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ, ಸೇರಿದಂತೆ ದಲಿತ, ಹಿಂದುಳಿದ ವರ್ಗಗಳ 21 ವಿವಿಧ ಮಠಾಧೀಶರು, ಪೂಜ್ಯರು ಭಾಗವಹಿಸಿದ್ದರು.
ಸಂಘಕ್ಕೆ ಹೆಚ್ಚು ಹೊಂದುವುದು ರಾಜಕೀಯ ಅಲ್ಲ, ಧಾರ್ಮಿಕತೆ
ಇದರ ನೇತೃತ್ವ ವಹಿಸಿದ್ದ ಪೂಜ್ಯ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಎಲ್ಲರನ್ನೂ ಸ್ವಾಗತಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್ ಅವರು ಸಂಘಕ್ಕೆ ಹೆಚ್ಚು ಹೊಂದುವುದು ರಾಜಕೀಯ ಅಲ್ಲ. ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ. ಹಾಗಾಗಿ ನಮಗೆ ಸಂಘಕ್ಕೆ ರಾಜಕೀಯದವರಿಗಿಂತ ಸ್ವಾಮೀಜಿಗಳೇ ಹೆಚ್ಚು ಹತ್ತಿರವಾಗುತ್ತಾರೆ.ನಮ್ಮ ಸಮಾಜದಲ್ಲಿ ಕೆಲವು ಭಾಗ ಹಿಂದುಳಿಯಿತು. ಏಕೆಂದರೆ ಸಂಪರ್ಕ ಮುರಿದು ಹೋಯಿತು.
ಸಂಘದಿಂದ ಸಮರಸತೆ ಪ್ರಯತ್ನ
ಹಿಂದು ಸಮಾಜದ ಎಲ್ಲಾ ಅಂಗಗಳನ್ನು ಸುಸ್ಥಿತಿಯಲ್ಲಿಡುವುದು ಕರ್ತವ್ಯ. ಮತ್ತೆ ಮತ್ತೆ ಸೇರುವುದರಿಂದ ಇದು ಸರಿ ಆಗುತ್ತದೆ. ಇದನ್ನೇ ಸಮರಸತೆ ಎನ್ನುವರು. ಸಂಘ ಇದೇ ಪ್ರಯತ್ನ ಮಾಡುತ್ತಿದೆ.ಅರಿವು ಹೆಚ್ಚಾದಾಗ ಸಂಶಯಗಳು, ಅಪನಂಬಿಕೆಗಳು ದೂರ ಆಗುತ್ತವೆ. ಆಗ ಮನಸ್ಸುಗಳು ಒಂದಾಗುತ್ತವೆ.
ರಾ.ಸ್ವ.ಸಂಘ ಮತ್ತು ಮಠಗಳು ಹಾಗೂ ಸ್ವಾಮೀಜಿಗಳೂ ಪರಸ್ಪರ ಮತ್ತೆ ಮತ್ತೆ ಭೇಟಿ ಮಾಡುತ್ತಿರಬೇಕು. ಹಿಂದೂ ಸಮಾಜದ ಪ್ರಮುಖ ಸಮಸ್ಯೆಗಳಾದ ಅಸ್ಪೃಶ್ಯತೆ, ವಿಷಮತೆ, ಅಸಮಾನತೆ ಇವುಗಳು ಮುಖ್ಯವಾಗಿ ಇರುವುದು ನಮ್ಮ ಮನಸ್ಸಿನಲ್ಲಿ. ಶಾಸ್ತ್ರಗಳಲ್ಲಿ ಸಮಸ್ಯೆ ಇಲ್ಲ. ಮತ್ತು ಈ ಸಮಸ್ಯೆಗಳು ಹಲವಾರು ಶತಮಾನಗಳಿಂದ ನಮ್ಮ ಮನಸ್ಸಿನಲ್ಲಿ ಉಳಿದಿವೆ. ಹಾಗಾಗಿ ಇದರ ಪರಿಹಾರಕ್ಕೂ ಸಮಯ ತಗುಲುವುದು. ನಿಧಾನವಾಗಿ ಇದನ್ನು ಮನಸ್ಸಿನಿಂದ ತೆಗೆಯುವ ಕೆಲಸವಾಗಬೇಕಿದೆ.
ಅಲ್ಲಿಯವರೆಗೂ ಸಹನೆ ಮತ್ತು ಧೈರ್ಯವನ್ನು ನಾವು ಹೊಂದಬೇಕು. ಅದು ಆಗೇ ಆಗುತ್ತದೆ. ಮತ್ತು ಆ ಕಾರ್ಯದಲ್ಲಿ ನಾವು ನಿರತರಾಗಿದ್ದೇವೆ ಎಂದು ಹೇಳಿದ್ದಾರೆ. ಇನ್ನೂ ಭಾರತ ಭಾರತವಾಗಿ ಉಳಿಯಬೇಕಾದರೆ, ನಾವು ನಾವಾಗಿ ಉಳಿಯಬೇಕು. ಇಲ್ಲದಿದ್ದರೆ ಭಾರತ ಭಾರತವಾಗಿ ಉಳಿಯುವುದಿಲ್ಲ. ಹಾಗಾಗಿ ಧರ್ಮವು ಎಲ್ಲಕಡೆ ಓತಪ್ರೋತವಾಗಿ ಇರುವಂತೆ ಆಗಬೇಕು. ಮತಾಂತರ ಆಗುವುದರಿಂದ ನಮ್ಮಲ್ಲಿ ಪ್ರತ್ಯೇಕತೆಯನ್ನು ತರುತ್ತದೆ. ಮೂಲದಿಂದ ಬೇರಿನಿಂದ ಮತಾಂತರ ಆದವರು ದೂರ ಉಳಿಯುವಂತೆ ಮಾಡುತ್ತದೆ.
ಸಂಸ್ಕಾರ, ನಿಷ್ಠೆ ದೃಢವಾಗಬೇಕು
ಹಾಗಾಗಿ ನಾವು ಮತಾಂತರವನ್ನು ತಡೆಯುವ ಪ್ರಯತ್ನ ಮಾಡಬೇಕು. ಸಂಸ್ಕಾರದ ಬಗ್ಗೆಯೂ ಗಮನಹರಿಸಬೇಕಿದೆ. ದೊಡ್ಡವರಿಗೆ ಗೌರವಕೊಡುವುದು, ನಮ್ಮ ಮಾತೆಯರು ಸೋದರಿಯಲ್ಲಿ ಹೇಗೆ ನಡೆದುಕೊಳ್ಳಬೇಕು? ಅ ನಮ್ಮ ಸಮಾಜದ ನವ ಪೀಳಿಗೆಗಳಿಗೆ ಹೇಳಿಕೊಡಬೇಕಿದೆ. ಆಧುನಿಕ ವಿದ್ಯಾಭ್ಯಾಸದೊಂದಿಗೆ ಶಿಕ್ಷಣ ಸಿಗುತ್ತಿದೆ, ಆದರೆ ಸಂಸ್ಕಾರ ಸ್ವಲ್ಪ ದೂರ ಆಗುತ್ತಿದೆ. ಸಂಸ್ಕಾರ, ನಿಷ್ಠೆ ದೃಢವಾಗಬೇಕು ಎಂದರೆ ಏನಾದರೂ ಒಂದು ರೀತಿಯ ಉಪಾಸನೆಯನ್ನು ಜೋಡಿಸಿಕೊಳ್ಳಬೇಕು.
ನೀವು, ಸ್ವಾಮೀಜಿಗಳು. ಸಾಧನೆ, ನಿಯಮಿತ ತಪಸ್ಸನ್ನು ನೀವು ಮಾಡುವವರು. ನಿಮ್ಮ ಜೀವನದ ಕಾರಣಕ್ಕಾಗಿ ನೀವು ಇದನ್ನು ಕೊಡಲು ಅಧಿಕಾರಿಗಳು. ನೀವು ಸಮಾಜವನ್ನು ಸಂಸ್ಕಾರವಂತ ಸಮಾಜವನ್ನಾಗಿ ಎಬ್ಬಿಸಿ ನಿಲ್ಲಿಸಬೇಕು. ಎಲ್ಲರೂ ಒಟ್ಟಾಗಿ ಮುನ್ನಡೆಯಬಹುದು. ಮುನ್ನಡೆಯಬೇಕು. ಸೇವೆ ಮತ್ತು ಸಂಸ್ಕಾರದ ಮೂಲಕ ನಾವು ಸಮಾಜವನ್ನು ಕಟ್ಟಿಬೆಳೆಸಬೇಕಿದೆ. ಸತ್ಯದ ಸಾಧನೆ ಮಾಡುತ್ತಾ ಸರ್ವರ ಸೇವೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Belagavi: ಮಳೆ ಆರ್ಭಟಕ್ಕೆ ಬೆಳಗಾವಿ ತತ್ತರ; 317 ಮನೆ, ಶಾಲಾ ಕಟ್ಟಡ ಕುಸಿತ; ಏನೂ ಆಗಿಲ್ಲ ಅಂದ್ರು ಸಚಿವರು
ಬಳಿಕ ಸಭೆ ಮುಗಿಸಿ ಶ್ರೀಮಠದಿಂದ ಭಾಗವತರಿಗೆ ಬೀಳ್ಕೊಡಲಾಯಿತು. ಈ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು, RSS ಮುಖ್ಯಸ್ಥರಾದ ಮೋಹನ್ ಭಾಗವತ್ ನಿನ್ನೆ ಸಂಜೆ ಆಗಮಿಸಿದ್ದರು, ಇಂದು ಬೆಳಿಗ್ಗೆ ಮಠಾಧೀಶರ ಜೊತೆಗೆ ಚರ್ಚೆ ನಡೆಯಿತು, ಅಸೃಶ್ಯತೆ, ಅಸಮಾನತೆ ಹೋಗಲಾಡಿಸುವ ಕುರಿತು ಚರ್ಚೆ ನಡೆಯಿತು.
ಮತಾಂತರ ಕುರಿತು ಚರ್ಚೆ
ಮುಂದೆ ಸಮುದಾಯದ ಜಾಗೃತಿ ಕುರಿತು ಸಂವಾದದಲ್ಲಿ ಚರ್ಚೆ ಮಾಡಿಸಾಮರಸ್ಯದಲ್ಲಿ ಮುನ್ನಡೆಯಲು ತೀರ್ಮಾನಕ್ಕೆ ಬರಲಾಯಿತು, ನಮಗೆ ಹಿಂದೆಯೇ ಸಂಪರ್ಕದಲ್ಲಿ ಇದ್ದು, ಕೊವೀಡ್ ಕಾರಣಕ್ಕೆ ಕಾರ್ಯಕ್ರಮ ಮುಂದೂಡಲಾಗಿತ್ತು, ಈ ಬಾರಿ ಶ್ರೀ ಮಠಕ್ಕೆ ಭೇಟಿ ನೀಡಿ, ನಮ್ಮ ಜೊತೆಗೆ ಭಾಂಧ್ಯವ್ಯ ಬೆಸೆಯುವ ಮಾತನಾಡಿದರು. ಮತಾಂತರದ ಕುರಿತು ಚರ್ಚೆ ನಡೆಯಿತು, ಮತಾಂತರಕ್ಕೆ ಕಾರಣ, & ಪರಿಹಾರದ ಕುರಿತು ಚರ್ಚೆ ನಡೆಯಿತು, ಮೀಸಲಾತಿ ವಿಷಯದ ಕುರಿತು ಕೂಡಾ ಚರ್ಚೆ ನಡೆಯಿತು.
ಇದನ್ನೂ ಓದಿ: Mangaluru News: ಮಂಗಳೂರಿನ ಜನರೇ, ಈಗಲೇ ತ್ವರೆ ಮಾಡಿ! ಆಧಾರ್ ಕಾರ್ಡ್- ಮೊಬೈಲ್ ನಂಬರ್ ಲಿಂಕ್ ಹೀಗೆ ಮಾಡಿ
ನಮ್ಮ ಜೊತೆಗೆ ಅವರು ಕೂಡಾ ದ್ವನಿ ಗೂಡಿಸಿದ್ದಾರೆ, ಒಳ ಮೀಸಲಾತಿ ಕುರಿತು ಪ್ರಸ್ತಾಪ ಆದರೂ ಬೇರೆ ಮಠಾಧೀಶರು ಇರುವ ಕಾರಣ ಹೆಚ್ಚು ಒತ್ತು ನೀಡಲು ಸಾಧ್ಯವಾಗಲಿಲ್ಲ, ಯಾವುದೇ ಉದ್ದೇಶ ಮಠಾಧೀಶರ ಜೊತೆಗೆ ಸಂವಾದದ ಇರಲಿಲ್ಲ, ನಮ್ಮ ಸಹಪಾಠಿಗಳ ಜೊತೆಗೆ ಸಂವಾದಕ್ಕೆ ಸೌಹಾರ್ದ ಭೇಟಿಗೆ ಆಪೇಕ್ಷೆ ಇತ್ತು, ಬೇರೆ ಯಾವುದೇ ಅನಗತ್ಯ ಮಹತ್ವ ನೀಡುವುದು ಬೇಡ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ