• Home
  • »
  • News
  • »
  • state
  • »
  • Gadaga: ಡಿಕೆಶಿ, ಸಿದ್ದರಾಮಯ್ಯ ಮಧ್ಯೆ ಗುದ್ದಾಟ! ಅವರ ಪ್ರೀತಿ ತೋರಿಸಿ; ಹ್ಯಾರಿಸ್ ನಾಲಪಾಡ್ ಹೇಳಿದ್ದೇನು?

Gadaga: ಡಿಕೆಶಿ, ಸಿದ್ದರಾಮಯ್ಯ ಮಧ್ಯೆ ಗುದ್ದಾಟ! ಅವರ ಪ್ರೀತಿ ತೋರಿಸಿ; ಹ್ಯಾರಿಸ್ ನಾಲಪಾಡ್ ಹೇಳಿದ್ದೇನು?

ಮೊಹಮ್ಮದ್ ಹ್ಯಾರಿಸ್ ನಾಲಪಾಡ್

ಮೊಹಮ್ಮದ್ ಹ್ಯಾರಿಸ್ ನಾಲಪಾಡ್

ಡಿಕೆಶಿ ಹೇಳಿಕೆಗೆ ಗದಗದಲ್ಲಿ ರಿಯಾಕ್ಷನ್ ನೀಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಾಲಪಾಡ್, ಯಾವುದೋ ಒಂದು ಸಮಾಜದ ಬೆಂಬಲ ಕೇಳೋದು ತಪ್ಪಾ?  ನಾನು ಮುಸಲ್ಮಾನ. ಮುಸಲ್ಮಾನರ ಸಪೋರ್ಟ್ ಕೇಳ್ತೇನೆ. ಮುಖ್ಯಮಂತ್ರಿ ಆಗೋದಕ್ಕೆ ಅಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

ಮುಂದೆ ಓದಿ ...
  • Share this:

    ಗದಗ(ಜು.20): ಎಸ್.ಎಂ.ಕೃಷ್ಣ ಬಳಿಕ ಒಕ್ಕಲಿಗರೊಬ್ಬರಿಗೆ ಸಿಎಂ ಆಗುವ ಅವಕಾಶ ಇದೆ. ಸಮಾಜ ಅವಕಾಶ ತಪ್ಪಿಸಿಕೊಳ್ಳಬಾರದು ಅಂತಾ ಹೇಳುವ ಮೂಲಕ ಒಕ್ಕಲಿಗ ಸಮಾಜದ ಬೆಂಬಲ ಕೇಳಿದ್ದ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ವ್ಯಾಪಕ ಚರ್ಚೆಗೆ ವೇದಿಕೆ ಸೃಷ್ಟಿಸಿದೆ. ಇನ್ನು ಡಿಕೆಶಿ ಹೇಳಿಕೆಗೆ ಗದಗದಲ್ಲಿ (Gadag) ರಿಯಾಕ್ಷನ್ ನೀಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಾಲಪಾಡ್ (Mohammed Haris Nalapad), ಯಾವುದೋ ಒಂದು ಸಮಾಜದ ಬೆಂಬಲ ಕೇಳೋದು ತಪ್ಪಾ?  ನಾನು ಮುಸಲ್ಮಾನ. ಮುಸಲ್ಮಾನರ ಸಪೋರ್ಟ್ ಕೇಳ್ತೇನೆ. ಮುಖ್ಯಮಂತ್ರಿ ಆಗೋದಕ್ಕೆ ಅಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ಮುಂದೆ ಅವಕಾಶ ಇದೆ. ಬೆಂಬಲಿಸಿ ಅಂತಾ ಕೇಳಿದ್ದಾರೆ.


    ಡಿಕೆಶಿ, ಸಿದ್ದರಾಮಯ್ಯ ಅವರ ಫೇಸ್ ಚೆನ್ನಾಗಿದೆ. ಮಾಧ್ಯಮದವರು ಅವ್ರನ್ನ ತೋರಿಸುತ್ತಿದ್ದೀರಾ, ತುಂಬಾ ಸಂತೋಷ. ಆದ್ರೆ ಅವ್ರ ಪ್ರೀತಿ ತೋರಿಸಿ. ಅವ್ರ ಜಗಳ ತೋರಿಸಬೇಡಿ.ಅವ್ರು ಇಬ್ಬರು ಫೋಟೋ ಇದೆ. ಅದನ್ನ ತೋರಿಸಿ ಅಂತಾ ಹೇಳಿದ್ರು.
    ಅವ್ರು ಒಗ್ಗಟ್ಟಾಗಿದ್ದಾರೆ. ನಾವೆಲ್ಲ ಕಾಂಗ್ರೆಸ್ ಗೆ ನಿಯತ್ತಾಗಿದ್ದೇವೆ. ಕಾಂಗ್ರೆಸ್ ಸಾಮೂಹಿತಕ ನಾಯಕತ್ವದಲ್ಲೇ ಎಲೆಕ್ಷನ್ ಮಾಡೋದು ಎಂದು ಹೇಳಿದ್ದಾರೆ.


    ಇದನ್ನೂ ಓದಿ: Lovers Suicide: ಪ್ರೇಮಿಗಳನ್ನು ದೂರ ಮಾಡಿದ್ರು ಪೋಷಕರು; ಸಾವಿನಲ್ಲಿ ಒಂದಾದ ಲವ್ ಬರ್ಡ್ಸ್


    ಇನ್ನು ಸಿದ್ದರಾಮ ಉತ್ಸವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಉತ್ಸವದ ರೀತಿಯಲ್ಲಿ ಶಿವಕುಮಾರ್ ಉತ್ಸವ ಮಾಡಲು ಕೆಲವರು ಹೇಳಿದ್ರು. ಪಕ್ಷದ ಉತ್ಸವ ಅಗ್ಬೇಕು ಅಂತಾ ಡಕೆಶಿ ಹೇಳಿಕೆ ನೀಡಿದ್ದಾರೆ. ಪಕ್ಷದ ಉತ್ಸವ ಮಾಡ್ಬೇಕು ಅಂತಾ ಡಿಕೆ ಶಿವಕುಕಾರ್ ಹೇಳಿದ್ದರು..ಇನ್ನು, ಸಿದ್ದರಾಮಯ್ಯ ಅವರದ್ದಯ 75 ವರ್ಷದ ಜೀವನ ಸಾಧನೆ ಇದೆ. ಐದು ವರ್ಷ ಸಿಎಂ ಆದವರು ಅವರು ಹೀಗಾಗಿ ಅಭಿಮಾನಿಗಳು ಉತ್ಸವ ಮಾಡುತ್ತಿದ್ದಾರೆ. ಉತ್ಸವ ಕಮೀಟಿ ಬೇರೆಯಲ್ಲ. ಕಾಂಗ್ರೆಸ್ ಪಕ್ಷದ ಸಂಘಟನೆ ಬೇರೆಯಲ್ಲ. ಉತ್ಸವ ಕಮೀಟಿಯಲ್ಲಿದ್ದವರು ಮುಂದೆ ಪಕ್ಷ ಸಂಘಟನೆ ಮಾಡ್ತಾರೆ. ನಾನೂ ಮೂಲ ಕಾಂಗ್ರೆಸ್ಸಿಗ. ನಾನೂ ಕಮೀಟಿಯಲ್ಲಿದ್ದೇನೆ ಎಂದಿದ್ದಾರೆ.


    ಗಬ್ಬರ್ ಸಿಂಗ್ ಟ್ಯಾಕ್ಸ್


    ಜಿಎಸ್ ಟಿಯನ್ನ ಗಬ್ಬರ್ ಸಿಂಗ್ ಟ್ಯಾಕ್ಸ್ ಹೋಲಿಸಿದ ನಲ್ಪಾಡ್, ಯಾರಿಗಾಗಿ ಟ್ಯಾಕ್ಸ್ ಕಟ್ ಮಾಡಿದ್ದಾರೆ. ಯಾರಿಗಾಗಿ ಸಂಗ್ರಹ ಮಾಡ್ತಿದ್ದಾರೆ ಅನ್ನೊದು ಗೊತ್ತಾಗ್ತಿಲ್ಲ. ಬಿಜೆಪಿ ಪಿಕ್ ಪ್ಯಾಕೆಟ್ ಸರ್ಕಾರ ಅಂತಾ ಘೋಷಣೆ ಹಾಕ್ತೀನಿ. ಹಾಲು, ಮೊಸರಿನಲ್ಲಿ 5 ಪರ್ಸೆಂಟ್ ಜಿಎಸ್ ಟಿ ನಿಗದಿ ಮಾಡಿದೆ. ಡಿಜಿಟಲ್ ಇಂಡಿಯಾ ಅಂತಾ ಹೇಳ್ತಾ ಬ್ಯಾಂಕ್ ಚೆಕ್ ಲೀಫ್ ಗೆ 18 ಪರ್ಸೆಂಟ್ ಜಿಎಸ್ ಟಿ ಹಾಕಿದ್ದಾರೆ ಅಂತಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.


    ಇದನ್ನೂ ಓದಿ: Kolara: ಕೋಲಾರದಲ್ಲಿ ಒಂದೇ ದಿನ 45 ಲಕ್ಷ ಮೌಲ್ಯದ ಗಾಂಜಾ ಸೀಜ್!


    ಮುಂದಿನ ದಿನಗಳಲ್ಲಿ ಟ್ಯಾಕ್ಸ್ ಏರಿಕೆ ಖಂಡಿಸಿ ಉಗ್ರ ಹೋರಾಟ ಮಾಡ್ತೇವೆ.. ಜಿಎಸ್ ಟಿ ಎಷ್ಟು ಲಕ್ಷ ಕೋಟಿ ಕಲೆಕ್ಟ್ ಮಾಡಿದ್ದೀರಿ.. ಕರ್ನಾಟಕದ ಪಾಲು ಎಷ್ಟು ಅಂತಾ ಸರ್ಕಾರ ಸ್ಪಷ್ಟ ಪಡಿಸಬೇಕು.. ಕರ್ನಾಟಕದ ಪಾಲು ತರಲು ಮುಖ್ಯಮಂತ್ರಿಗಳಿಗೆ, ಸಂಸದರಿಗೆ ಆಗಿಲ್ಲ ಅಂತಾ ಮೊಹಮ್ಮದ್ ನಲ್ಪಾಡ್ ಆರೋಪಿಸಿದ್ದಾರೆ.

    Published by:Divya D
    First published: