• Home
  • »
  • News
  • »
  • state
  • »
  • ಮತ್ತೆ ಹ್ಯಾರಿಸ್ ಮಗ ನಲಪಾಡ್​ನ ಪುಂಡಾಟ; ಮತ್ತಿನಲ್ಲಿ ಕಾರ್ ಅಪಘಾತ

ಮತ್ತೆ ಹ್ಯಾರಿಸ್ ಮಗ ನಲಪಾಡ್​ನ ಪುಂಡಾಟ; ಮತ್ತಿನಲ್ಲಿ ಕಾರ್ ಅಪಘಾತ

ಮೊಹಮ್ಮದ್ ನಲಪಾಡ್

ಮೊಹಮ್ಮದ್ ನಲಪಾಡ್

2018ರಲ್ಲಿ ಯುಬಿ ಸಿಟಿಯಲ್ಲಿ ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ 118 ದಿನಗಳ ಕಾಲ ಜೈಲಿನಲ್ಲಿದ್ದರು. ಈಗ ಜಾಮೀನನ ಮೇಲೆ ಅವರು ಹೊರಗೆ ಬಂದಿದ್ಧಾರೆ. ತಂದೆಯ ರಾಜಕೀಯ ಚಟುವಟಿಕೆಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ನಲಪಾಡ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿಕೊಂಡಿರುವುದು ಗಮನಾರ್ಹವಾಗಿದೆ.

ಮುಂದೆ ಓದಿ ...
  • News18
  • Last Updated :
  • Share this:

    ಬೆಂಗಳೂರು(ಫೆ. 11): ಯುಬಿ ಸಿಟಿ ಗಲಾಟೆ ಪ್ರಕರಣದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದ ಮೊಹಮ್ಮದ್ ನಲಪಾಡ್ ಇತ್ತೀಚಿನ ದಿನಗಳಲ್ಲಿ ರಾಜಕಾರಣಕ್ಕೆ ಬರುವ ಪ್ರಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ನಲಪಾಡ್ ಕಾರ್ ಅಪಘಾತ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಭಾನುವಾರ ನಗರದ ಮೇಖ್ರಿ ಸರ್ಕಲ್ ಬಳಿ ಐಷಾರಾಮಿ ಬೆಂಟ್ಲಿ ಕಾರು ಅಪಘಾತ ಮಾಡಿದ್ದು ಮಹಮ್ಮದ್ ನಲಪಾಡ್ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಮೂರು ವಾಹನಗಳಿಗೆ ಡಿಕ್ಕಿ ಹೊಡೆದ ಬೆಂಟ್ಲಿ ಕಾರನ್ನು ಅಂದು ನಲಪಾಡ್ ಅವರೇ ಚಲಾಯಿಸುತ್ತಿದ್ದುದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ. ಶಾಸಕ ಎನ್.ಎ. ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಅವರಿಗೆ ಪೊಲೀಸರು ನೋಟೀಸ್ ನೀಡುತ್ತಿದ್ದಾರೆ.


    ಮೇಖ್ರಿ ಸರ್ಕಲ್​ನಲ್ಲಿ ಅಪಘಾತ ಮಾಡಿದ ಬೆಂಟ್ಲಿ ಕಾರನ್ನು ನಲಪಾಡ್ ಅವರೇ ಚಲಾಯಿಸುತ್ತಿದ್ದುದು ಟೆಕ್ನಿಕಲ್ ಹಾಗೂ ಪ್ರತ್ಯಕ್ಷದರ್ಶಿಗಳ ಸಹಾಯದಿಂದ ತಿಳಿದುಬಂದಿದೆ. ಅಜಾಗರೂಕ ಚಾಲನೆಯಿಂದಾಗಿ ಈ ಅಪಘಾತವಾಗಿದೆ. ಮೊಹಮ್ಮದ್ ನಲಪಾಡ್ ಅವರಿಗೆ ವಿಚಾರಣೆ ಹಾಜರಾಗಲು ನೋಟೀಸ್ ನೀಡಿದ್ದೇವೆ. ವಿಚಾರಣೆಗೆ ಹಾಜರಾದ ನಂತರ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಂಚಾರ ವಿಭಾಗ ಜಂಟಿ ಆಯುಕ್ತ ರವಿಕಾಂತೇ ಗೌಡ ಹೇಳಿಕೆ ನೀಡಿದ್ಧಾರೆ.


    ಇದನ್ನೂ ಓದಿ: ಅಸಮಾಧಾನಕ್ಕೆ ಮಣಿದ ಯಡಿಯೂರಪ್ಪ; ಅರಣ್ಯ ಬದಲು ಕೃಷಿ ಖಾತೆ ದಕ್ಕಿಸಿಕೊಂಡ ಬಿ.ಸಿ. ಪಾಟೀಲ್​


    ಮೊನ್ನೆ ಭಾನುವಾರ ಮೇಖ್ರಿ ಸರ್ಕಲ್​ನ ಅಂಡರ್​ಪಾಸ್​ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಐಷಾರಾಮಿ ಬೆಂಟ್ಲಿ ಕಾರು ಮೂರು ವಾಹನಗಳಿಗೆ ಗುದ್ದಿತ್ತು. ಬೈಕ್ ಸವಾರನೊಬ್ಬನಿಗೆ ಗಂಭೀರ ಗಾಯವಾಗಿತ್ತು. ಆಟೋವೊಂದು ಜಖಂಗೊಂಡಿತ್ತು. ಆದರೆ, ಅಪಘಾತವಾದ ಕೂಡಲೇ ಆತ ಬೇರೊಂದು ಕಾರಿನಲ್ಲಿ ಕೂತು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಪ್ರಭಾವಿ ವ್ಯಕ್ತಿಯೊಬ್ಬ ಮಗ ಕಾರಿನಲ್ಲಿದ್ದ ಎಂಬ ಮಾಹಿತಿಯನ್ನು ಮಾಧ್ಯಮಗಳು ಬಿತ್ತರಿಸಿದ್ದವು.


    ನಿನ್ನೆ ಗನ್ ಮ್ಯಾನ್​ವೊಬ್ಬರು ತಾನೇ ಆ ಕಾರು ಚಲಾಯಿಸುತ್ತಿದ್ದಾಗಿ ಹೇಳಿಕೊಂಡು ಪೊಲೀಸರಲ್ಲಿ ಶರಣಾಗಲು ಬಂದಿದ್ದರಂತೆ. ಆದರೆ, ವಿಚಾರಣೆ ನಡೆಸಿದಾಗ ಆ ವ್ಯಕ್ತಿ ಕಾರು ಚಾಲನೆ ಮಾಡಿದ್ದಲ್ಲ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಈಗ ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ತಾಂತ್ರಿಕ ಮಾಹಿತಿಯನ್ನಾಧರಿಸಿ ಆ ಕಾರು ಚಲಾಯಿಸುತ್ತಿದ್ದುದು ಮೊಹಮ್ಮದ್ ನಲಪಾಡ್​ನೇ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ಅಭಿಪ್ರಾಯಕ್ಕೆ ಬಂದಿದ್ದಾರೆ.


    2018ರಲ್ಲಿ ಯುಬಿ ಸಿಟಿಯಲ್ಲಿ ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ 118 ದಿನಗಳ ಕಾಲ ಜೈಲಿನಲ್ಲಿದ್ದರು. ಈಗ ಜಾಮೀನನ ಮೇಲೆ ಅವರು ಹೊರಗೆ ಬಂದಿದ್ಧಾರೆ. ತಂದೆಯ ರಾಜಕೀಯ ಚಟುವಟಿಕೆಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ನಲಪಾಡ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿಕೊಂಡಿರುವುದು ಗಮನಾರ್ಹವಾಗಿದೆ.


    ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.


    Published by:Vijayasarthy SN
    First published: