ಯಾದಗಿರಿ(ಜ.17): ಕರ್ನಾಟಕ ರಾಜ್ಯದಲ್ಲಿ ಚುನಾವಣೆ (Karnataka Assembly Elections) ಸಮೀಪಿಸುತ್ತಿದ್ದು, ಪಕ್ಷಗಳು ಭರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಅತ್ತ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರೂ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಸದ್ಯ ಪ್ರಧಾನಿ ಮೋದಿ (PM Narendra Modi) ಇದೇ ಮೊದಲ ಬಾರಿ ಯಾದಗಿರಿಗೆ (Yadgir)ಆಗಮಿಸಲಿದ್ದಾರೆ. ಹೌದು ಜನವರಿ 19ರಂದು ಪಿಎಂ ಮೋದಿ ರಾಜ್ಯಕ್ಕೆ ಯಾದಗಿರಿ ಜಿಲ್ಲೆಯ ಹಣಸಗಿ ತಾಲೂಕಿನ ಕೊಡೇಕಲ್ನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಯಲ್ಲಿ ಅಂದು ಹುಣಸಗಿ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನ ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಹುಣಸಗಿ ತಹಶೀಲ್ದಾರ್ ಜಗದೀಶ್ ಚೌರ್ ಮಾಹಿತಿ ನೀಡಿದ್ದಾರೆ.
ನಿರಾವರಿ ಯೋಜನೆ ಉದ್ಘಾಟನೆ
ಜನವರಿ 19ರ, ಗುರುವಾರ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿಗೆ ಆಗಮಿಸಲಿರುವ ಪ್ರಧಾನಿ ಮೋದಿ 1,050 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಸವಸಾಗರ ಜಲಾಶಯದ 365 ಗೇಟ್ಗಳನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಜಲಧಾರೆ ಯೋಜನೆಯ 2,004 ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದನ್ನೂ ಓದಿ: SCADA: ದೇಶದ ಮೊದಲ ಸ್ಕಾಡಾ ಪ್ರಾಜೆಕ್ಟ್ ಯಾದಗಿರಿಯಲ್ಲಿ ಜಾರಿ, ಅನ್ನದಾತರಿಗೆ ವರವಾದ ಯೋಜನೆ!
ಈ ಯೋಜನೆಗಳಿಂದ ಜಿಲ್ಲೆಯ ಹುಣಸಗಿ, ಸುರಪುರ , ಶಹಾಪುರ, ವಡಗೇರಾ, ಯಾದಗಿರಿ ಹಾಗೂ ಗುರುಮಠಕಲ್ ತಾಲ್ಲೂಕಿನ ಒಟ್ಟು 710 ಗ್ರಾಮೀಣ ಜನವಸತಿಗಳಿಗೆ ಹಾಗೂ 3 ಸ್ಥಳೀಯ ಸಂಸ್ಥೆಗಳು ಸೇರಿದಂತೆ ಹುಣಸಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜಾಗಲಿದೆ.
ಮಕ್ಕಳಿಗೆ ತೊಂದರೆಯಾಗಬಾರದೆಂದು ಶಾಲೆಗಳಿಗೆ ರಜೆ
ಇನ್ನು ಮೋದಿ ಕಾರ್ಯಕ್ರದಿಂದ ಸಾರಿಗೆ ವ್ಯವಸ್ಥೆಯಲ್ಲಿ ಸಮಸ್ಯೆ ಮತ್ತು ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ, ಹೀಗಿರುವಾಗ ಮಕ್ಕಳಿಗೆ ಯಾವುದೇ ತೊಂದರೆಗಳು ಆಗಬಾರದು ಎನ್ನುವ ಕಾರಣಕ್ಕೆ ರಜೆ ಘೋಷಣೆ ಮಾಡಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ.
ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ
ಇದೇ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆಯನ್ನೂ ಮಾಡಲಾಗಿದೆ. ಹುಣಸಗಿ ಪಟ್ಟಣದಿಂದ ನಾರಾಯಣಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳ ಮಾರ್ಗ ಜ.18 ಮತ್ತು 19 ಹೀಗೆ ಎರಡು ದಿನ ಬದಲಾಯಿಸಲಾಗಿದೆ.
* ಹುಣಸಗಿಯಿಂದ ನಾರಾಯಣಪುಕ್ಕೆ ಹೋಗುವವರು ಕೊಡೇಕಲ್ ಮಾರ್ಗವಾಗಿ ಹೋಗಲು ಸೂಚಿಸಲಾಗಿದೆ.
* ಹುಣಸಗಿಯಿಂದ ನಾರಾಯಣಪುರಕ್ಕೆ ಹೋಗುವ ವಾಹನಗಳಿಗೆ ಬಲಶೆಟ್ಟಿಹಾಳ್, ಗೆದ್ದಲಮರಿ, ಜೋಗುಂಡಬಾವಿ ಮಾರ್ಗವಾಗಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
* ನಾರಾಯಣಪುರದಿಂದ ಹುಣಸಗಿಗೆ ಬರುವವರೂ ಇದೇ ಮಾರ್ಗವಾಗಿ ಸಂಚರಿಸಲು ಆದೇಶಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ