• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Election Campaign: ಕಾಂಗ್ರೆಸ್-ಜೆಡಿಎಸ್ ಕರ್ನಾಟಕದ ಅಭಿವೃದ್ಧಿಗೆ ಕಂಟಕ ಪ್ರಾಯ ಎಂದ ಮೋದಿ

Election Campaign: ಕಾಂಗ್ರೆಸ್-ಜೆಡಿಎಸ್ ಕರ್ನಾಟಕದ ಅಭಿವೃದ್ಧಿಗೆ ಕಂಟಕ ಪ್ರಾಯ ಎಂದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ

PM Modi Campaign: ಡಬಲ್ ಇಂಜಿನ್ ಸರ್ಕಾರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೆಲಸ ಮಾಡುತ್ತಿದೆ. ಹೆದ್ದಾರಿಗಳ ನಿರ್ಮಾಣ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಸಂಪರ್ಕ ಮುಳಬಾಗಿಲು ದೋಸೆಯ ಪರಿಮಳವನ್ನು ದೂರ ದೂರದವರೆಗೆ ಹರಡುವಂತೆ ಮಾಡಿದೆ.

 • News18 Kannada
 • 2-MIN READ
 • Last Updated :
 • Kolar, India
 • Share this:

ಕೋಲಾರ: ಚುನಾವಣೆ ಪ್ರಚಾರದ (Election Campaign) ಹಿನ್ನೆಲೆ ಕೋಲಾರದ (Kolar) ಕೆಂದಟ್ಟಿ ಗ್ರಾಮದ ಬಳಿ ಆಯೋಜಿಸಲಾಗಿರುವ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಮಾಜಿ ಸಿಎಂ ಸದಾನಂದಗೌಡರು (Former CM Sadanandagowda) ಸೇರಿದಂತೆ ಬಿಜೆಪಿ ನಾಯಕರು ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಂಬಳಿ ಹೊದಿಸಿ ಬುದ್ಧನ ವಿಗ್ರಹ ನೀಡಿ ಗೌರವಿಸಲಾಯ್ತು. ಈ ಸಮಾವೇಶದ ಮೂಲಕ ಕೋಲಾರ, ಚಿಕ್ಕಬಳ್ಳಾಪುರ (Chikkaballapur) ಮತ್ತು ಬೆಂಗಳೂರು ಗ್ರಾಮಾಂತರ (Bengaluru Rural) ಆಭ್ಯರ್ಥಿಗಳ ಪರ ನರೇಂದ್ರ ಮೋದಿ ಅವರು ಮತಯಾಚನೆ ಮಾಡಿದರು. ಪ್ರಧಾನಿಗಳು ಕನ್ನಡದಲ್ಲಿಯೇ (Kannada) ಮಾತು ಆರಂಭಿಸುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ಕೂಗುವ ಮೂಲಕ ಸಂತೋಷ ಹೊರ ಹಾಕಿದರು.


ಇಂದು ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ರೆ ಕಾಂಗ್ರೆಸ್​ಗೆ ಕಷ್ಟವಾಗುತ್ತಿದೆ. ನನ್ನ ಈ  ಹೋರಾಟ ತಡೆದುಕೊಳ್ಳಲು ಆಗುತ್ತಿಲ್ಲ. ಮೊದಲು ನನಗೆ ಬೈಯುತ್ತಿದ್ರು. ಈಗ ನಿಮ್ಮ ಸಮಾಧಿಗೆ ಹಳ್ಳ ತೋಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ.


ಕರ್ನಾಟಕದಲ್ಲಿ ಕಾಂಗ್ರೆಸ್ ಹಾವು ಮತ್ತು ಹಾವಿನ ವಿಷದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.ಕಾಂಗ್ರೆಸ್​ನವರು ನನ್ನ ಹೋಲಿಕೆಯನ್ನು ಹಾವಿನೊಂದಿಗೆ ಮಾಡುತ್ತಿದ್ದಾರೆ. ನನಗೆ ಇದರ ಬಗ್ಗೆ ಬೇಸರವಿಲ್ಲ.


ಜನರೇ ನನಗೆ ಪರಮೇಶ್ವರ


ಹಾವು ಭಗವಾನ್ ಪರಮೇಶ್ವರ ಕೊರಳಲ್ಲಿರುವ ದೇವರು. ನನಗೆ ಈ ದೇಶದ ಜನರೇ ಈಶ್ವರ ಸ್ವೂರೂಪಿಗಳು. ನಾನು ಜನರ ಕೊರಳಲ್ಲಿರುವ ಹಾವು ಆಗಲು ಯಾವ ಬೇಸರವಿಲ್ಲ. ಚುನಾವಣೆ ಸಮಯದಲ್ಲಿ ಇಂತಹ ಮಾತನ್ನು ಕರ್ನಾಟಕದ ಜನತೆ ಸಹಿಸಲ್ಲ. ಈ ಬಗ್ಗೆ ಜನರಲ್ಲಿ ಆಕ್ರೋಶವಿದ್ದು, ಮೇ 10ರಂದು ಬಿಜೆಪಿ ಪರ ಮತ ಹಾಕೋ ಮೂಲಕ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವ ಜನರನ್ನು ನೋಡಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿದ್ದೆಗೆಡಲಿದೆ. ಕರ್ನಾಟಕದ ವಿಕಾಸಕ್ಕೆ ಕಂಟಕ ಪ್ರಾಯವಾಗಿವದೆ. ಈ ಎರಡೂ ಪಕ್ಷಗಳು ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿವೆ. ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳನ್ನು ಕರ್ನಾಟಕದ ಜನರು ಕ್ಲೀನ್ ಬೋಲ್ಡ್ ಮಾಡಲು ನಿರ್ಧರಿಸಿದ್ದಾರೆ. ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ತರಲು ಕರುನಾಡಿನ ಜನರು ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.


ಕರ್ನಾಟಕವನ್ನ ಅಸ್ಥಿರ ಸರ್ಕಾರದಿಂದ ರಕ್ಷಿಸಿ


ಕರ್ನಾಟಕದ ಈ ಚುನಾವಣೆ ಎಂಎಲ್​ಎ, ಮಂತ್ರಿ, ಸಿಎಂ ಮಾಡೋದು ಮಾತ್ರ ಅಲ್ಲ. ಮುಂದಿನ 25 ವರ್ಷ ಭಾರತ ಮತ್ತು ಕರ್ನಾಟಕದ ವಿಕಾಸಕ್ಕೆ ಇಂದು ನೀವು ಮತ ಹಾಕಬೇಕಿದೆ. ರಾಜ್ಯದಲ್ಲಿ ಅಸ್ಥಿರ ಸರ್ಕಾರ ಬಂದ್ರೆ ಏನೆಲ್ಲಾ ಕಷ್ಟ ಬರಲಿದೆ ಎಂಬುದನ್ನು ನೀವು ನೋಡಿದ್ದೀರಿ. ಕರ್ನಾಟಕವನ್ನ ಅಸ್ಥಿರ ಸರ್ಕಾರದಿಂದ ರಕ್ಷಿಸಬೇಕಿದೆ ಎಂದರು.


ದೇಶದಲ್ಲಿ ಉಚಿತ ಕೊರೊನಾ ಲಸಿಕೆ ವಿತರಣೆ


ಅನೇಕ ದಶಕಗಳ ಬಳಿಕ ಕೇಂದ್ರದಲ್ಲಿ ಒಂದು ಬಲಿಷ್ಠ ಬಿಜೆಪಿ ಸರ್ಕಾರ ಬಂದಿದೆ. ಬಿಜೆಪಿ ಸರ್ಕಾರ ಬಂದ್ಮೇಲೆ ಭಾರತದ ವಿಕಾಸ ಹೇಗೆ ಆಗಿದೆ ಎಂಬುದನ್ನು ನೀವೆಲ್ಲಾ ನೋಡಿದ್ದೀರಿ. ಇಂದು ಇಡೀ ವಿಶ್ವ ಭಾರತದತ್ತ ನೋಡುತ್ತಿದೆ. ಕೊರೊನಾ ಸಂದರ್ಭದಲ್ಲಿ ಭಾರತ ತೆಗೆದುಕೊಂಡ ಕ್ರಮಗಳ ಬಗ್ಗೆ ಇಡೀ ವಿಶ್ವದ ಗಮನ ಸಳೆದಿದೆ. ಭಾರತದಲ್ಲಿ ಉಚಿತ ಕೊರೊನಾ ಲಸಿಕೆಯನ್ನು ನೀಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ್ದು ಔಟ್ ಡೇಟೆಡ್​ ಇಂಜಿನ್​


ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ. ಅದಕ್ಕಾಗಿ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಬರಬೇಕಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷದ ಔಟ್ ಡೇಟೆಡ್​ ಇಂಜಿನ್​ನಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.


ಮುಳಬಾಗಿಲು ದೋಸೆ 


ಡಬಲ್ ಇಂಜಿನ್ ಸರ್ಕಾರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೆಲಸ ಮಾಡುತ್ತಿದೆ. ಹೆದ್ದಾರಿಗಳ ನಿರ್ಮಾಣ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಸಂಪರ್ಕ ಮುಳಬಾಗಿಲು ದೋಸೆಯ ಪರಿಮಳವನ್ನು ದೂರ ದೂರದವರೆಗೆ ಹರಡುವಂತೆ ಮಾಡಿದೆ.


ಇಂದು ಮತ್ತೊಮ್ಮೆ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಮೂಲಕ ಬರುತ್ತಿದೆ. 2005ರಲ್ಲಿ ಪ್ರತಿ ಮನೆಗೆ 2009ರೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೆ ಎಂದು ಆಶ್ವಾಸನೆ ನೀಡಿದ್ದರು. ಆದ್ರೆ 2014ರವರೆಗೂ ಕಾಂಗ್ರೆಸ್​ನಿಂದ ಸಾಧ್ಯವಾಗಲಿಲ್ಲ. 2014ರಲ್ಲಿ ನಮ್ಮ ಸರ್ಕಾರ ಬಂದ ನಂತರ ಕಾಂಗ್ರೆಸ್ ಯಾವುದೇ ಕೆಲಸ ಮಾಡದಿರೋದು ನಮ್ಮ ಗಮನಕ್ಕೆ ಬಂತು.


ನಾವು ಅಧಿಕಾರಕ್ಕೆ ಬಂದ 1000 ದಿನಗಳಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡಿದೆ. ಕಾಂಗ್ರೆಸ್ ಸುಳ್ಳು ಹೇಳುವ ಮೂಲಕ ಜನರಿಗೆ ಮೋಸ ಮಾಡಿದೆ


ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳು ಯಾವುದೇ ಸಂಕಲ್ಪಕ್ಕಿಂತ ಕಡಿಮೆ ಇರಲ್ಲ. 2004ರಲ್ಲಿ ರೈತರಿಗಾಗಿ Direct Income Support Scheme ನೀಡುವ ಮಾತು ನೀಡಿತ್ತು. ಆದ್ರೆ ದಶಕಗಳಾದ್ರೂ ಈ ಮಾತು ಈಡೇರಿಸಲಿಲ್ಲ. ನಮ್ಮ ಸರ್ಕಾರ ಪಿಎಂ ಕಿಸಾನ್ ಯೋಜನೆ ಮೂಲಕ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತಿದೆ. ಕಾಂಗ್ರೆಸ್ ನೀಡಿದ ಗ್ಯಾರಂಟಿಯನ್ನು ಬಿಜೆಪಿ ಸರ್ಕಾರ ಪೂರ್ಣ ಮಾಡಿದೆ ಎಂದರು. ಪಿಎಂ ಕಿಸಾನ್ ಯೋಜನೆಯ ಹಣದ ಜೊತೆಗೆ ಇಲ್ಲಿಯ ರಾಜ್ಯ ಸರ್ಕಾರ ಸಹ ನಾಲ್ಕು ಸಾವಿರ ನೀಡುತ್ತಿದೆ.


ಕಾಂಗ್ರೆಸ್ ಎಂದಿಗೂ ರೈತರ ಬಗ್ಗೆ ಯೋಚನೆ ಮಾಡಿಲ್ಲ. ನಮ್ಮ ಸರ್ಕಾರ ಬಿತ್ತನೆ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೂ ನಾವು ಯೋಚನೆ ಮಾಡುತ್ತೇವೆ. ಇದರ ಜೊತೆಯಲ್ಲಿ ಟೆಕ್ಷ್​ಟೈಲ್ ಪಾರ್ಕ್​, ಕೋಲ್ಡ್​ ಸ್ಟೋರೇಜ್, ಫುಡ್ ಪಾರ್ಕ್​ಗಳನ್ನು ಎಲ್ಲಾ ಕಡೆ ಪ್ರಾರಂಭ ಮಾಡುತ್ತಿದ್ದೇವೆ. ಇದರಿಂದ ರಾಜ್ಯದ ಎಲ್ಲಾ ಜನರಿಗೆ ಉಪಯೋಗ ಆಗಲಿದೆ.


ರೈತರ ಖಾತೆಗೆ ನೇರವಾಗಿ ಹಣ


ಕಾಂಗ್ರೆಸ್ ರಾಜ ಪರಿವಾರ ರೈತರಿಗೆ ಮೋಸ ಮಾಡಿಕೊಂಡು ಬರುತ್ತಿವೆ. ಕೇಂದ್ರದಿಂದ 1 ರೂಪಾಯಿ ಕಳುಹಿಸಿದ್ರೆ ರೈತರಿಗೆ 15 ಪೈಸೆ ತಲುಪುತ್ತೆ ಎಂದು ಕಾಂಗ್ರೆಸ್ ಪ್ರಧಾನಿಗಳೇ ಹೇಳುತ್ತಾರೆ. 85 ಪರ್ಸೆಂಟ್ ಕಮಿಷನ್ ತಿನ್ನುವ ಕಾಂಗ್ರೆಸ್​ನಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯ ಇಲ್ಲ. ಇಂದು ಬಿಜೆಪಿ ಸರ್ಕಾರ ನೇರವಾಗಿ ರೈತರ ಖಾತೆಗೆ ಹಣ ವರ್ಗಾಯಿಸುತ್ತಿದೆ ಎಂದು ಹೇಳಿದರು.


80 ಕೋಟಿ ಜನರಿಗೆ ಉಚಿತವ ರೇಷನ್


ಕಾಂಗ್ರೆಸ್ ಎಸ್​ಸಿ ಎಸ್​ಟಿ ಮತ್ತು ಮಹಿಳೆಯರಿಗೆ ಅನ್ಯಾಯ ಮಾಡಿದೆ. ನಿಮ್ಮ ಒಂದು ವೋಟಿನ ಮೂಲಕ ಗ್ಯಾಸ್ ಸಂಪರ್ಕ, ಶೌಚಾಲಯ, ಮನೆಗಳನ್ನು ನೀಡಿದ್ದೇವೆ. ಹಿಂದುಳಿದ ವರ್ಗಕ್ಕೆ ಸೇರಿದ 10 ಕೋಟಿ ಮನೆಗಳಿಗೆ ಶೌಚಾಲಯ ನಿರ್ಮಿಸಿ ಕೊಟ್ಟಿದ್ದೇವೆ. ಎರಡೂವರೆ ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಕೋವಿಡ್ ಸಮಯದಲ್ಲಿ 80 ಕೋಟಿ ಜನರಿಗೆ ಉಚಿತ ರೇಷನ್ ತಲುಪಿಸಿದ್ದೇವೆ.


ಇದನ್ನೂ ಓದಿ:  Hubballi: ಸೋಲಿಸಲು ಕರೆ ನೀಡಿದ್ದ ಯಡಿಯೂರಪ್ಪಗೆ ಟಕ್ಕರ್ ಕೊಟ್ಟ ಜಗದೀಶ್ ಶೆಟ್ಟರ್

top videos


  ಕಾಂಗ್ರೆಸ್ ಭ್ರಷ್ಟಚಾರದಲ್ಲಿ ಬೆಳೆದಿದೆ, ಭ್ರಷ್ಟಚಾರ ರಹಿತ ಯೋಜನೆಯನ್ನು ಮಾಡಲು ಸಾಧ್ಯವಿಲ್ಲ. ಸಾವಿರಾರು ಕೋಟಿ ಹಗರಣದ ಆರೋಪ ಹೊಂದಿರುವ ಕಾಂಗ್ರೆಸ್ ನಾಯಕರು ಇಂದು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಆದರೂ ಅವರು ಉಪದೇಶ ನೀಡೋದನ್ನು ಬಿಡಲ್ಲ ಎಂದು ವಾಗ್ದಾಳಿ ನಡೆಸಿದರು.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು