PM Modi: ಮನ್ ಕೀ ಬಾತ್​​ನಲ್ಲಿ ಕೋಲಾರದ ತ್ರಿವರ್ಣ ಧ್ವಜಕ್ಕೆ ಮೋದಿ ಶ್ಲಾಘನೆ!

ಮೋದಿ ಆಗಸ್ಟ್ 28ರಂದು ದೇಶವನ್ನು ಉದ್ದೇಶಿಸಿ ಮನ್ ಕೀ ಬಾತ್ ನ 92ನೇ ಆವೃತ್ತಿಯಲ್ಲಿ ಮಾತನಾಡಿದರು. ಈ ವೇಳೆ ಮೋದಿ ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಅನಾವರಣಗೊಂಡಿದ್ದ ತ್ರಿವರ್ಣ ಧ್ವಜ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ದೇಶದ ಅತೀ ದೊಡ್ಡ ಧ್ವಜ

ದೇಶದ ಅತೀ ದೊಡ್ಡ ಧ್ವಜ

  • Share this:
ಆಗಸ್ಟ್ 15ರಂದು ಭಾರತ (India) ಸ್ವಾತಂತ್ರ್ಯದ ಅಮೃತ ಮಹೋತ್ಸವ (Azadi ka amrit mahotsava) ಆಚರಿಸಿಕೊಂಡಿತ್ತು. ಇಡೀ ದೇಶವೇ ಸ್ವಾತಂತ್ರ್ಯದ ಆಜಾದಿ ಮಹೋತ್ಸವದ ಸಂಭ್ರಮದಲ್ಲಿ ಮಿಂದೇಳಿತ್ತು. ಇದರ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಮನ್ ಕೀ ಬಾತ್ (Mann ki baat) 92ನೇ ಆವೃತ್ತಿಯಲ್ಲಿ ಮಾತನಾಡಿದರು. ಈ ವೇಳೆ ಕರ್ನಾಟಕದ (Karnataka) ಬಗ್ಗೆ ಸ್ಮರಿಸಿಕೊಂಡರು. ಕೋಲಾರದ ಬೃಹತ್ ಧ್ವಜದ (Kolar Big Flag) ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಅತಿದೊಡ್ಡ 1.30 ಲಕ್ಷ ಚದರಡಿಯ ಬೃಹತ್ ತ್ರಿವರ್ಣ ಧ್ವಜದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಶ್ಲಾಘಿಸಿದರು. ಪ್ರಧಾನಿ ನರೇಂದ್ರ ಮೋದಿಯ ಶ್ಲಾಘನೆಗೆ ಸಂಸದ‌ ಎಸ್. ಮುನಿಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 28ರಂದು ದೇಶವನ್ನು ಉದ್ದೇಶಿಸಿ ಮನ್ ಕೀ ಬಾತ್ ನ 92ನೇ ಆವೃತ್ತಿಯಲ್ಲಿ ಮಾತನಾಡಿದರು. ಈ ವೇಳೆ ಮೋದಿ ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಅನಾವರಣಗೊಂಡಿದ್ದ ತ್ರಿವರ್ಣ ಧ್ವಜ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Modi praises kolara made indian flag in Mann Ki Baat
ಪ್ರಧಾನಿ ನರೇಂದ್ರ ಮೋದಿ


ದೇಶದಲ್ಲೇ ಅತಿದೊಡ್ಡ ತ್ರಿವರ್ಣ ಧ್ವಜ
ಕೋಲಾರದಲ್ಲಿ ಆಗಸ್ಟ್ 15 ಕ್ಕೆ ದೇಶದಲ್ಲೇ ಅತಿದೊಡ್ಡ ಅಂದರೆ 1.30 ಲಕ್ಷ ಚದರಡಿಯ ಬೃಹತ್ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಗಿತ್ತು. ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಈ ತ್ರಿವರ್ಣ ಧ್ವಜ ಮೂಡಿಬಂದಿತ್ತು.

ಇದನ್ನೂ ಓದಿ: ಸಕ್ಕರೆನಾಡಿನ ಜನರಿಗೆ ಗೌರಿ-ಗಣೇಶ ಹಬ್ಬದ ಗಿಫ್ಟ್! 4 ವರ್ಷದ ನಂತರ ಮೈಶುಗರ್ ಆರಂಭ

ಲಿಮ್ಕಾ ದಾಖಲೆಗೆ ಸೇರಿದ್ದ ತ್ರಿವರ್ಣ ಧ್ವಜ
204 ಅಡಿ ಉದ್ದ 630 ಅಡಿ ಅಗಲದ ಈ ತ್ರಿವರ್ಣ ಧ್ವಜ ಲಿಮ್ಕಾ‌ ದಾಖಲೆ ಸಹ ಬರೆದಿತ್ತು. ಮೋದಿ ಈ ಕುರಿತು ಮನ್‌ ಕೀ ಬಾತ್​​ನಲ್ಲಿ ಮಾತನಾಡಿದ್ದಾರೆ. ಮೋದಿಯ ಶ್ಲಾಘನೆಗೆ ಸಂಸದ‌ ಎಸ್. ಮುನಿಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

Modi praises kolara made indian flag in Mann Ki Baat
ಅತೀ ದೊಡ್ಡ ಧ್ವಜದ ತಯಾರಿಕೆ


25ಕ್ಕೂ ಹೆಚ್ಚು ಕಾರ್ಮಿಕರಿಂದ ನಿರ್ಮಾಣ
ಸುಮಾರು 25ಕ್ಕೂ ಹೆಚ್ಚಿನ ಕಾರ್ಮಿಕರು ಈ ಬೃಹತ್ ತ್ರಿವರ್ಣ ಧ್ವಜ ನಿರ್ಮಾಣ ಮಾಡಿದ್ದಾರೆ. ಧ್ವಜ ಮೇಲಿನ ಅಶೋಕ ಚಕ್ರ 60-60 ಅಂದರೆ 3400 ಚದರಡಿ ವಿಸ್ತೀರ್ಣ ಹೊಂದಿತ್ತು. ಈ ಧ್ವಜ ನಿರ್ಮಾಣಕ್ಕಾಗಿ ಸುಮಾರು 13,000 ಮೀಟರ್ ಬಟ್ಟೆ ಬಳಸಲಾಗಿದೆ.

3 ಟನ್ ನಷ್ಟು ಇರುವ ತ್ರಿವರ್ಣ ಧ್ವಜ
ಸುಮಾರು 3 ಟನ್​​ನಷ್ಟು ತೂಕ ಹೊಂದಿರುವ ಈ ಧ್ವಜ ದೇಶದಲ್ಲೇ ಅತಿ ದೊಡ್ಡದಾದ ತ್ರಿವರ್ಣ ಧ್ವಜ ಎಂಬ ಹೆಗ್ಗಳಿಕೆ ಹೊಂದಿದೆ. ಇದು ಕೈಯಿಂದ ನಿರ್ಮಾಣ ಮಾಡಲಾಗಿರುವ ರಾಷ್ಟ್ರಧ್ವಜ ಎಂಬ ಹೆಗ್ಗಳಿಕೆಯೂ ಇದೆ. ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್​ ಕೂಡ ಸೇರಿದೆ.

ಧ್ವಜ ಹಿಡಿದುಕೊಳ್ಳಲು ನೇಮಕವಾಗಿದ್ದರು 2000 ಮಂದಿ
ಆಗಸ್ಟ್ 15 ರಂದು ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಈ ಬೃಹತ್ ಧ್ವಜವನ್ನು ಅನಾವರಣ ಮಾಡಲಾಗಿತ್ತು. ಮಾತ್ರವಲ್ಲದೇ ಅಂದು ಈ ಬೃಹತ್ ತ್ರಿವರ್ಣ ಧ್ವಜವನ್ನು ಹಿಡಿದುಕೊಳ್ಳಲು 2000 ಜನರನ್ನು ನೇಮಿಸಲಾಗಿತ್ತು.

ಸೇನಾ ಹೆಲಿಕಾಪ್ಟರ್​ನಿಂದ ಪುಷ್ಪಾರ್ಚನೆ
ಕೋಲಾರದಲ್ಲಿ ರಚಿಸಲ್ಪಿಟ್ಟಿದ್ದ ಈ ಬೃಹತ್ ಧ್ವಜಕ್ಕೆ ಅಂದು ಸೇನಾ ಹೆಲಿಕಾಪ್ಟರ್​​ನಿಂದ ಪುಷ್ಪಾರ್ಚನೆ ಮಾಡಲಾಗಿತ್ತು. ಇದನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ದೇಶದಲ್ಲೇ ಅತಿ ದೊಡ್ಡದಾದ ಬೃಹತ್ ತ್ರಿವರ್ಣ ಧ್ವಜವು ಲಿಮ್ಕಾ ದಾಖಲೆಗೂ ಸೇರ್ಪಡೆಯಾಯಿತು.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಗರ್ಭಗುಡಿ ನಿರ್ಮಾಣದ ಲೇಟೆಸ್ಟ್​ ಫೊಟೋಸ್​ ವೈರಲ್!

7 ಜನರ ತಂಡ ಸತತವಾಗಿ 8 ದಿನಗಳ ಕಾಲ ಹಗಲು ರಾತ್ರಿ ಶ್ರಮಿಸಿದರ ಫಲವಾಗಿ ಈ ಬೃಹತ್ ತ್ರಿವರ್ಣ ಧ್ವಜವನ್ನು ನಿರ್ಮಾಣ ಮಾಡಲು ಸಾಧ್ಯವಾಗಿತ್ತು ಎಂದು ಕೋಲಾರ ಸಂಸದ ಮುನಿಸ್ವಾಮಿ ಸಂತಸ ವ್ಯಕ್ತಪಡಿಸಿದ್ದರು.

ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಖಾದಿ ಉಡುಗೊರೆ ಕೊಡಿ ಎಂದ ಮೋದಿ
ಅಹಮದಾಬಾದ್​ನ ಸಾಬರಮತಿ ನದಿ ತೀರದಲ್ಲಿ ನಡೆದ 'ಖಾದಿ ಉತ್ಸವ'ದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಚರಕದಲ್ಲಿ ನೂಲು ತೆಗೆದರು. ಬಳಿಕ ಮಾತನಾಡಿ, ಈ ಬಾರಿಯ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಖಾದಿ ಉಡುಗೊರೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ರು.
Published by:Thara Kemmara
First published: