ಮೋಸಗಾರರೊಬ್ಬರು ದೇಶದ ಪ್ರಧಾನಿಯಾಗಿದ್ದಾರೆ: ಮೋದಿ ವಿರುದ್ಧ ಗುಂಡೂರಾವ್ ವಾಗ್ದಾಳಿ


Updated:August 13, 2018, 8:22 PM IST
ಮೋಸಗಾರರೊಬ್ಬರು ದೇಶದ ಪ್ರಧಾನಿಯಾಗಿದ್ದಾರೆ: ಮೋದಿ ವಿರುದ್ಧ ಗುಂಡೂರಾವ್ ವಾಗ್ದಾಳಿ

Updated: August 13, 2018, 8:22 PM IST
ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ(ಆ.13): ಈ ದೇಶಕ್ಕೆ ಮೋಸಗಾರರೊಬ್ಬರು ಪ್ರಧಾನಿಯಾಗಿರುವುದು ನಮ್ಮ ದುರಂತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸ್ನೇಹಿರತೆಲ್ಲರೂ ಲೂಟಿ ಮಾಡುವವರಾಗಿದ್ದಾರೆ. ಅವರ ಸುತ್ತ ಲೂಟಿಕೋರರ ಪಡೆಯಿದ್ದು, ಲೂಟಿ ಮಾಡಿಕೊಂಡು ವಿದೇಶಗಳಿಗೆ ಹಾರಿ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.

ಕೇವಲ ಮನ್ ಕಿ ಬಾತ್ ಎಂದು ಮಾತನಾಡುತ್ತಾರೆ, ಆದರೆ ಈ ಮನ್ ಕಿ ಬಾತ್ ಕೇಳಿಸಿಕೊಂಡವರು ಯಾರು ಉದ್ಧಾರ ಆಗಿದ್ದಾರೆ ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ. ಕೇಂದ್ರದಲ್ಲಿ ಬರೀ ಸುಳ್ಳು ಹೇಳುವ, ವಂಚನೆ ಮಾಡುವವರ ಸರ್ಕಾರವಿದೆ. ಅದನ್ನು ಕಿತ್ತೊಗೆಯುವುದೇ ಲೋಕಸಭಾ ಚುನಾವಣೆಯ ಮುಂದಿನ ಗುರಿ ಎಂದಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೀದರ್ ನಿಂದ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ಈ ಪ್ರಸ್ತಾವನೆಯೂ ಬಂದಿಲ್ಲ, ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಅವರನ್ನೂ ಕೇಳಿಕೊಂಡಿಲ್ಲ. ಆದರೆ ರಾಹುಲ್ ಗಾಂಧಿ ಅವರು ಬೀದರ್ ನಿಂದ ಸ್ಪರ್ಧಿಸುವುದಾದರೆ ಸ್ವಾಗತಬಯಸುವುದಾಗಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಏರ್​ ಶೋ ಸ್ಥಳಾಂತರದ ಬಗ್ಗೆ ಯಾವೊಬ್ಬ ಬಿಜೆಪಿ ಸಂಸದರು ಏಕೆ ಚಕಾರವೆತ್ತುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

 
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...