ವಿಜಯನಗರ: ಹೊಸಪೇಟೆಯ (Hosapete) ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ (Congress Manifesto) ಮತ್ತು ಅದರಲ್ಲಿ ಪ್ರಸ್ತಾಪಿಸಿರುವ ಭಜರಂಗದಳ (Bajrang Dal) ನಿಷೇಧ ಪ್ರಸ್ತಾಪದ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಇಂದು ನಾನು ವಾಯುಪುತ್ರನ ಜನ್ಮಸ್ಥಳಕ್ಕೆ ಬಂದಿದ್ದೇನೆ. ಹನುಮಂತನ ಪವಿತ್ರ ಭೂಮಿಗೆ ಬಂದಿರೋದು ನನ್ನ ಸೌಭಾಗ್ಯ. ನಾನು ಹನುಮಂತನಿಗೆ ಶತ ಶತ ಪ್ರಣಾಮಗಳನ್ನು ಮಾಡುತ್ತೇನೆ. ಕಾಂಗ್ರೆಸ್ನವರು (Congress) ತಮ್ಮ ಪ್ರಣಾಳಿಕೆಯಲ್ಲಿ ಭಜರಂಗಬಲಿ ಅಂದ್ರೆ ಆಂಜನೇಯನನ್ನು ಬೀಗ ಹಾಕಿ ಬಂಧಿಸಿಡುವ ಮಾತನ್ನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಹಿಂದೆ ಪ್ರಭು ಶ್ರೀರಾಮನನ್ನು ಬಂಧಿಸಿಡುವ ಕೆಲಸ ಮಾಡಿದ್ದರು. ಆದ್ರೆ ಅದ್ಯಾಕೋ ಗೊತ್ತಾಗುತ್ತಿಲ್ಲ, ಈ ಹಿಂದೆ ಪ್ರಭು ರಾಮಚಂದ್ರನನ್ನು ಕಂಡರೂ ಆಗ್ತಿರಲಿಲ್ಲ. ಈಗ ವಾಯುಪುತ್ರನನ್ನು ಕಂಡರೂ ಆಗುತ್ತಿಲ್ಲ ಎಂದು ಮಾತಿನೇಟು ನೀಡಿದರು.
ಆಂಜನೇಯನ ಆಶೀರ್ವಾದ ಕೇಳಲು ಬಂದಿದ್ದೇನೆ
ನಮಗೆ ಶ್ರೀರಾಮಚಂದ್ರ ಮತ್ತು ಹನುಮಂತನೂ ಪೂಜ್ಯ. ಈ ಪವಿತ್ರ ಭೂಮಿಯಲ್ಲಿ ಒಂದು ಘೋಷಣೆ ಮಾಡುತ್ತಿದ್ದೇನೆ. ಇಡೀ ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವ ಸಂಕಲ್ಪ ಮಾಡಿದ್ದೇವೆ. ಈ ಸಂಕಲ್ಪಕ್ಕೆ ಹನುಮಂತನ ಆಶೀರ್ವಾದ ಕೇಳಲು ಬಂದಿದ್ದೇನೆ.
ಇದನ್ನೂ ಓದಿ: Congress Manifesto 2023 Karnataka: 5 ಗ್ಯಾರಂಟಿಗಳ ಜೊತೆ ಸಾಲು ಸಾಲು ಭರವಸೆಗಳ ಪ್ರಣಾಳಿಕೆ ಬಿಡುಗಡೆ
ಕರ್ನಾಟಕದ ಆಸ್ಮಿಯತೆ ಧಕ್ಕೆ ಮಾಡಲ್ಲ
ಕರ್ನಾಟಕದ ಜನತೆ ಮತ್ತು ಇಲ್ಲಿಯ ಸಂಸ್ಕತಿಗೆ ಯಾವುದೇ ಒಂದು ಕಪ್ಪು ಚುಕ್ಕೆ ಬರದಂತೆ ನೋಡಿಕೊಳ್ಳುತ್ತೇವೆ. ಕರ್ನಾಟಕದ ಆಸ್ಮಿಯತೆ ಧಕ್ಕೆ ಆಗದಂತೆ ಬಿಜೆಪಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ