ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಅತ್ಯಾಧುನಿಕ ಲ್ಯಾಬ್ ಪ್ರಾರಂಭ

ದೇಶದಲ್ಲಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಕೊರೋನಾ ಮಹಾಮಾರಿ ಕಾಣಿಸಿಕೊಂಡಿತು. ಮಾರ್ಚ್‌ 22ರ ನಂತರ ಈ ಮಹಾಮಾರಿ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಘೋಷಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಪರಿಣಾಮ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದರು ಡಾ.ಕೆ ಸುಧಾಕರ್.

ಸಿದ್ದಾರ್ಥ ಮೆಡಿಕಲ್​ ಕಾಲೇ

ಸಿದ್ದಾರ್ಥ ಮೆಡಿಕಲ್​ ಕಾಲೇ

  • Share this:
ತುಮಕೂರು(ಸೆ.19): ಇಡೀ ವಿಶ್ವಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಪ್ರಮಾಣ ಬಹಳ ಕಡಿಮೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದರು. ನಗರ ಹೊರವಲಯದ ಅಗಳಕೋಟೆಯಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಿಂದ ನೂತನವಾಗಿ ಪ್ರಾರಂಭಿಸಲಾದ ಬಿಎಸ್​​ಎಲ್​​-2, ಆಟಿಪಿಸಿಆರ್, ಕೋವಿಡ್-19 ಪರೀಕ್ಷಾ ಪ್ರಯೋಗಾಲಯವನ್ನು ಶನಿವಾರ ಉದ್ಘಾಟಿಸಿ ಮಾತಾಡಿದರು. ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ . ಬಲಾಡ್ಯ ದೇಶಗಳು ಸಹ ವಿಚಲಿತಗೊಂಡು ಆರ್ಥಿಕವಾಗಿ ಕುಸಿತ ಕಂಡಿವೆ . ಸೋಂಕಿನಿಂದ ಬೇರೆ ಬೇರೆ ದೇಶಗಳಲ್ಲಿ ಸತ್ತವರ ಪ್ರಮಾಣ ತುಂಬಾ ಜಾಸ್ತಿ ಇದೆ . ಆದರೆ ಭಾರತದಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದರು.

ದೇಶದಲ್ಲಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಕೊರೋನಾ ಮಹಾಮಾರಿ ಕಾಣಿಸಿಕೊಂಡಿತು. ಮಾರ್ಚ್‌ 22ರ ನಂತರ ಈ ಮಹಾಮಾರಿ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಘೋಷಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಪರಿಣಾಮ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದರು.

ರಾಜ್ಯದಲ್ಲಿ ಪ್ರತಿದಿನ 75 ಸಾವಿರಕ್ಕೂ ಅಧಿಕ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ಪ್ರಸ್ತುತ 1.5 ಲಕ್ಷ ಕೋವಿಡ್ ಪರೀಕ್ಷೆ ಮಾಡುವ ಸಾಮರ್ಥ್ಯವನ್ನು ಹೊಂದಲಾಗಿದೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ರಾಜ್ಯ ಮತ್ತು ದೇಶದಲ್ಲಿ ಪ್ರತಿಷ್ಠಿತ ಸಂಸ್ಥೆಯನ್ನಾಗಿ ಮಾಡಲೇಬೇಕು ಎಂಬ ಛಲದಿಂದ ಕೆಲಸ ಮಾಡಿದಂತಹ ಶಿಕ್ಷಣ ಭೀಷ್ಮ ಹೆಚ್.ಎಂ. ಗಂಗಾಧರಯ್ಯ ಮತ್ತು ಅವರ ಮಗ ಡಾ. ಶಿವಪ್ರಸಾದ್ ಅವರ ಸೇವೆಯನ್ನು ಸ್ಮರಿಸಲೇಬೇಕು ಎಂದರು.

ಜೀವನದಲ್ಲಿ ಶಿಸ್ತು , ಸಂಯಮ ಇದ್ದರೆ ಏನನ್ನುಬೇಕಾದರೂ ಸಾಧಿಸಬಹುದು ಎಂಬುದನ್ನು ಶಿವಪ್ರಸಾದ್ ಅವರು ತೋರಿಸಿಕೊಟ್ಟಿದ್ದಾರೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಆದರೆ ಡಾ.ಜಿ ಪರಮೇಶ್ವರ್ ಅವರು ನನ್ನ ಮೇಲೆ ತುಂಬಾ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ ಎಂದ ಅವರು, ನಾನು ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ನನಗೆ 'ಬಿ' ಫಾರಂ ಕೊಡುವಲ್ಲಿ ಪರಮೇಶ್ವರ್ ಅವರು ಶ್ರಮ ವಹಿಸಿದ್ದಾರೆ ಎಂದರು.

ಹಾಗಾಗಿ ಅವರು ನನಗೆ ತಂದೆ ಸಮಾನರಾಗಿದ್ದಾರೆ. ಡಾ.ಜಿ. ಪರಮೇಶ್ವರ್‌ ಮತ್ತು ಕನ್ನಿಕಾ ಪರಮೇಶ್ವರ್ ಅವರು ನಿಜವಾದ ಆದರ್ಶ ದಂಪತಿಗಳು. ನಾನು ಎರಡೂ ಬಾರಿ ಚುನಾವಣೆ ನಿಂತಾಗಲೂ ಈ ದಂಪತಿಗಳ ಆಶೀರ್ವಾದ ಪಡೆದಿದ್ದೆ. ಮೊನ್ನೆ ಉಪಚುನಾವಣೆ ಸಂದರ್ಭದಲ್ಲೂ ಹೋಗಬೇಕು ಎಂದುಕೊಂಡಿದ್ದೆ. ಆದರೆ ಭಯ ಆಗಿ ಹೋಗಲಿಲ್ಲ. ಮನಸ್ಸಿನಲ್ಲೇ ಅವರನ್ನು ನೆನೆದು ಚುನಾವಣೆಗೆ ಸ್ಪರ್ಧಿಸಿದೆ ಎಂದರು.

90 ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸುಲಭದ ಮಾತಲ್ಲ. ಅದನ್ನು ಮುನ್ನಡೆಸಿಕೊಂಡು ಹೋಗುವುದು ಸಹ ಸವಾಲಿನ ಕೆಲಸವಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ 200-300 ಪರೀಕ್ಷೆ ಮಾಡಲಾಗುತ್ತಿತ್ತು. ಲ್ಯಾಬ್‌ಗಳ ಕೊರತೆ ಇದ್ದಾಗ ಕೊರೋನಾ ವಿಚಾರದಲ್ಲಿ ತುಂಬಾ ಅವಾಂತರಗಳು ಆಗಿತ್ತು. ಆದರೆ ಈಗ ಲ್ಯಾಬ್‌ಗಳು ಸ್ಥಾಪನೆಯಾಗಿರುವುದರಿಂದ ಪ್ರತಿದಿನ ಸಾವಿರಾರು ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಲಾಗಿದೆ ಎಂದರು.

ಈಗಲೂ ಸಹ ಜಿಲ್ಲೆಯಲ್ಲಿ ಐಸಿಯು ಬೆಡ್‌ಗಳ ಕೊರತೆ ಇದೆ. ಹಾಗಾಗಿ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಈಗಿರುವ ಐಸಿಯು ಬೆಡ್‌ಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಡಾ . ಜಿ . ಪರಮೇಶ್ವರ್ ಅವರಿಗೆ ಮನವಿ ಮಾಡಿದರು.

ಜನರ ಆರೋಗ್ಯ ರಕ್ಷಣೆಗೆ ಧಾವಿಸಿರುವುದು ಉತ್ತಮ ಕಾರ್ಯವಾಗಿದೆ. ಈ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕಾಗಿದೆ. ಸಿದ್ದಾರ್ಥ ಸಂಸ್ಥೆಯಲ್ಲಿ ಶೈಕ್ಷಣಿಕ ಸೇವೆ ನಡೆದಿದೆ. ಈಗ ವೈದ್ಯಕೀಯ ಸೇವೆ ಹೆಚ್ಚು ನಡೆಯಬೇಕಿದೆ. ಇದಕ್ಕೆ ಸಿದ್ಧಾರ್ಥ ಮೆಡಿಕಲ್ ಶಿಕ್ಷಣ ಸಂಸ್ಥೆ ಮತ್ತಷ್ಟು ಆಸಕ್ತಿ ವಹಿಸಬೇಕು ಎಂದರು.

ಇದನ್ನೂ ಓದಿ: ’ದಿವಾಳಿಯಾಗಿ ಅದೋಗತಿಗೆ ತಲುಪಿದ ರಾಜ್ಯ ಸರ್ಕಾರ‘ - ಮಾಜಿ ಸಚಿವ ಬಸವರಾಜ ರಾಯರೆಡ್ಡಿ

ಜಿಲ್ಲೆಯ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲೂ ಕೋವಿಡ್ ಪ್ರಯೋಗಾಲಯ ತೆರೆಯುವ ಚಿಂತನೆ ಇದೆ ಎಂದು ಅವರು ತಿಳಿಸಿದರು. ವೈದ್ಯರು ರೋಗಿಗಳ ಮನಸ್ಥಿತಿ ಅರ್ಥ ಮಾಡಿಕೊಂಡು ಚಿಕಿತ್ಸೆ ನೀಡಬೇಕು. ರೋಗಿಗಳನ್ನು ಗಾಬರಿ ಮಾಡದೆ ಧೈರ್ಯ ನೀಡಿ ಶುಕ್ರೂಷೆ ಮಾಡಿದರೆ ರೋಗಿಗಳು ಅರ್ಧ ಗುಣಮುಖರಾಗುತ್ತಾರೆ ಎಂದು ಅವರು ಸಲಹೆ ಮಾಡಿದರು.
Published by:Ganesh Nachikethu
First published: