HOME » NEWS » State » MOBILE THIEVES ACTIVE IN HAVERI RATTEHALLI FAIR SESR

ಊರ ಸಂತೆಗೆ ಹೋಗ್ತೀರಾ ಹಾಗಾದ್ರೆ ಎಚ್ಚರ; ಗ್ರಾಮಸ್ಥರ ಮೊಬೈಲ್​ಗಳೆ ಇಲ್ಲಿ ಮಾಯಾ

ಕಳೆದ ಕೆಲವು ತಿಂಗಳುಗಳಿಂದ ಸಂತೆಯಲ್ಲಿ ಖದೀಮರ ಹಾವಳಿ ಶುರುವಾಗಿದೆ. ತರಕಾರಿ, ದಿನಸಿ ವಸ್ತುಗಳನ್ನ ಖರೀದಿಸಿವ ನೆಪದಲ್ಲಿ ಸಂತೆಯಲ್ಲಿ ಓಡಾಡುವ ಕಳ್ಳರು ಮುಗ್ದ ಜನರ ಜೇಬಿನಲ್ಲಿರುವ ಮೊಬೈಲ್ ಗಳನ್ನೇ ಖದಿಯುತ್ತಿದ್ದಾರೆ.

news18-kannada
Updated:March 4, 2021, 7:23 PM IST
ಊರ ಸಂತೆಗೆ ಹೋಗ್ತೀರಾ ಹಾಗಾದ್ರೆ ಎಚ್ಚರ;  ಗ್ರಾಮಸ್ಥರ ಮೊಬೈಲ್​ಗಳೆ ಇಲ್ಲಿ ಮಾಯಾ
ಸಾಂದರ್ಭಿಕ ಚಿತ್ರ
  • Share this:
ಹಾವೇರಿ (ಮಾ. 4):: ಜಿಲ್ಲೆಯ ರಟ್ಟೀಹಳ್ಳಿ ವಾರಕ್ಕೊಮ್ಮೆ ಸಂತೆ ನಡೆಯುತ್ತದೆ. ಪಟ್ಟಣದ ಸುತ್ತಮುತ್ತಲಿನ ಕಡೂರು, ಕುಡುಪಲಿ, ಶಿರಗಂಬಿ, ಯಡಗೋಡ, ಮಳಗಿ, ಸಣ್ಣಗುಬ್ಬಿ ಸೇರಿದಂತೆ ಮೂವತ್ತು ಗ್ರಾಮಗಳ ಜನರು ಸಂತೆಗೆ ಬರುತ್ತಾರೆ. ತರಕಾರಿ, ದಿನಸಿ ವಸ್ತುಗಳು ಸೇರಿದಂತೆ ಕುಟುಂಬ ನಡೆಸಲು ಒಂದು ವಾರಕ್ಕೆ ಬೇಕಾಗುವ ದಿನಬಳಕೆ ವಸ್ತುಗಳನ್ನು ಜನರು ಸಂತೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಸುಮಾರು ವರ್ಷಗಳಿಂದಲೂ ಮೂವತ್ತು ಗ್ರಾಮಗಳ ಜನರು ವಾರಕ್ಕೊಮ್ಮೆ ನಡೆಯುವ ಈ ರಟ್ಟೀಹಳ್ಳಿ ಸಂತೆ ಇಲ್ಲಿ ಬಲು ಪ್ರಖ್ಯಾತಿ. ಆದರೆ,  ಕಳೆದ ಕೆಲವು ತಿಂಗಳುಗಳಿಂದ ಸಂತೆಯಲ್ಲಿ ಖದೀಮರ ಹಾವಳಿ ಶುರುವಾಗಿದೆ. ತರಕಾರಿ, ದಿನಸಿ ವಸ್ತುಗಳನ್ನ ಖರೀದಿಸಿವ ನೆಪದಲ್ಲಿ ಸಂತೆಯಲ್ಲಿ ಓಡಾಡುವ ಕಳ್ಳರು ಮುಗ್ದ ಜನರ ಜೇಬಿನಲ್ಲಿರುವ ಮೊಬೈಲ್ ಗಳನ್ನೇ ಖದಿಯುತ್ತಿದ್ದಾರೆ. ಸಂತೆಯಲ್ಲಿ ವಸ್ತುಗಳನ್ನ ಖರೀದಿ ಮಾಡುವಾಗ ಅವರಿಗೆ ಗೊತ್ತಾಗದಂತೆ ಕಳ್ಳರು ಮೊಬೈಲ್ ಎಗರಿಸಿಕೊಂಡು ಹೋಗುತ್ತಿದ್ದಾರೆ. ಇದು ಜನರಿಗೆ ಎಲ್ಲಿಲ್ಲದ ಆತಂಕ ತಂದೊಡ್ಡಿದೆ.

ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆ..!

ಕಳೆದ ಕೆಲವು ತಿಂಗಳುಗಳಿಂದ ಖದೀಮರು ವಾರಕ್ಕೊಮ್ಮೆ ತಮ್ಮ ಕೈಚಳಕ ತೋರಿಸುತ್ತಲೆ ಇದ್ದಾರೆ. ವಾರದ ಸಂತೆಯಲ್ಲಿ ಐದು, ಹತ್ತು, ಹದಿನೈದು ಜನರು ಹೀಗೆ ಮೊಬೈಲ್‌ ಕಳೆದುಕೊಳ್ಳುತ್ತಿದ್ದಾರೆ. ಈ ಮೊಬೈಲ್ ಕದಿಯುತ್ತಿರುವ ದೃಶ್ಯಗಳು ಸ್ಥಳೀಯರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮೊಬೈಲ್ ಕಳ್ಳರ ಹಾವಳಿಗೆ ಬೆಚ್ಚಿ ಬಿದ್ದಿದ್ದಾರೆ. ಇನ್ನು ಐದು, ಎಂಟು ಸಾವಿರ ರೂಪಾಯಿ ಮೊಬೈಲ್ ಕಳೆದುಕೊಂಡವರು ಪೊಲೀಸ್ ಠಾಣೆ ಸಹವಾಸ ಬೇಡ ಎಂದು ಸುಮ್ಮನಾಗುತ್ತಾರೆ.

ಇದನ್ನು ಓದಿ: ಮಗು ಆಗಮನಕ್ಕೆ ಮೊದಲೇ ಹೆಸರು ಪ್ರಕಟಿಸಿದ ಗಾಯಕಿ ಶ್ರೇಯಾ ಘೋಷಲ್​

ಹತ್ತು ಸಾವಿರ, ಹದಿನೈದು, ಇಪ್ಪತ್ತು ಸಾವಿರ ಹೀಗೆ ದೊಡ್ಡ ದೊಡ್ಡ ಬೆಲೆ ಬಾಳೋ ಮೊಬೈಲ್ ಗಳನ್ನ ಕಳೆದುಕೊಂಡವರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಅಲ್ಲದೆ ಕೆಲವು ದಿನಗಳ ಹಿಂದೆ ಸಂತೆಯಲ್ಲಿ ಮೊಬೈಲ್‌ ಕಳ್ಳತನ ಮಾಡಿದವನನ್ನ ಮೊಬೈಲ್‌ ಕಳೆದುಕೊಂಡವರು ಹಾಗೂ ಸ್ಥಳೀಯರು ಸೇರಿ ಹಿಡಿದುಕೊಟ್ಟಿದ್ದರಂತೆ. ಆದ್ರೆ ರಟ್ಟೀಹಳ್ಳಿ ಠಾಣೆ ಪೊಲೀಸರು ಕಳ್ಳನನ್ನ ಎರಡು ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಇಟ್ಕೊಂಡು ವಾಪಸ್ ಕಳಿಸಿದ್ದರಂತೆ. ರಟ್ಟೀಹಳ್ಳಿ ಪಟ್ಟಣದಲ್ಲೇ ದೊಡ್ಡ ಪ್ರಮಾಣದ ಸಂತೆ ನಡಿತಿದ್ದರೂ ಪೊಲೀಸರು ಸಂತೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವುದಿಲ್ಲ. ಕೆಲವೇ ಕೆಲವು ಸಿಬ್ಬಂದಿ ನೇಮಿಸಿರುತ್ತಾರೆ. ಹೀಗಾಗಿ ಮೊಬೈಲ್ ಕಳ್ಳರು ತಮ್ಮ ಬಾಲ‌ ಬಿಚ್ಚಿದ್ದಾರೆ.

ಮೊಬೈಲ್ ಕಳ್ಳರ ಬಗ್ಗೆ ತುಟಿ ಬಿಚ್ಚದ ಪೊಲೀಸರು..!

ವಾರಕ್ಕೊಮ್ಮೆ ನಡೆಯುವ ಸಂತೆಗೆ ಮೂವತ್ತು ಗ್ರಾಮಗಳ ಸಾವಿರಾರು ಸಂಖ್ಯೆಯ ಜನರು ಬರುತ್ತಾರೆ. ಜನರ ದಂಡು ಸೇರುವ ಸಂತೆಯಲ್ಲಿ ಮೊಬೈಲ್‌ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿ ಆಗುತ್ತಿದ್ದಾರೆ. ಈ ಬಗ್ಗೆ ಇನ್ನಾದರೂ ಎಚ್ಚೆತ್ತು ಪೊಲೀಸರು ಕ್ರಮಕ್ಕೆ ಮುಂದಾಬೇಕು ಎಂಬುದು ಜನರ ಆಗ್ರಹವಾಗಿದೆ.(ವರದಿ: ಮಂಜುನಾಥ್​ ತಲ್ವಾರ್​)
Published by: Seema R
First published: March 4, 2021, 7:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories