ಮಂಡ್ಯದಲ್ಲಿ ರೆಡ್​ ಮೀ ಮೊಬೈಲ್​ ಸ್ಫೋಟ: ಪ್ರಾಣಾಪಾಯದಿಂದ ಅಂಗಡಿ ಮಾಲೀಕ ಪಾರು

ಈ ಹಿಂದೆ ಕೂಡ ಮಂಡ್ಯದ ಆರ್‌ಪಿ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ತಾಂತ್ರಿಕ ದೋಷದಿಂದ ರೆಡ್ಮಿ ನೋಟ್ 4 ಮೊಬೈಲ್ ಸ್ಫೋಟಗೊಂಡಿತ್ತು.

zahir | news18
Updated:February 11, 2019, 3:25 PM IST
ಮಂಡ್ಯದಲ್ಲಿ ರೆಡ್​ ಮೀ ಮೊಬೈಲ್​ ಸ್ಫೋಟ: ಪ್ರಾಣಾಪಾಯದಿಂದ ಅಂಗಡಿ ಮಾಲೀಕ ಪಾರು
ಸಾಂದರ್ಭಿಕ ಚಿತ್ರ
zahir | news18
Updated: February 11, 2019, 3:25 PM IST
ಮಂಡ್ಯ:  ಶ್ರೀರಂಗಪಟ್ಟಣದ ಶ್ರೀ ಲಕ್ಷ್ಮೀ ಕಾಲಭೈರವೇಶ್ವರ ಮೊಬೈಲ್ಸ್ ಅಂಗಡಿಯಲ್ಲಿ ಗ್ರಾಹಕರೊಬ್ಬರ ರೆಡ್ ಮೀ ಮೊಬೈಲ್​ ಸ್ಫೋಟಗೊಂಡಿರುವ ಘಟನೆ ನಡೆದಿದೆ. ಇದರಿಂದ ಅಂಗಡಿ ಮಾಲೀಕನ ಕೈಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ ತಿಳಿದು ಬಂದಿದೆ.

ಕಳೆದ ವಾರ ಇದೇ ಅಂಗಡಿಯಿಂದ ಗ್ರಾಹಕರೊಬ್ಬರು ರೆಡ್​ ಮೀ ಮೊಬೈಲ್​ ಖರೀದಿಸಿದ್ದರು. ಆದರೆ ಇಂದು ಮೊಬೈಲ್​ನಲ್ಲಿ ದೋಷ ಕಂಡು ಬಂದಿದ್ದು, ಆನ್​ ಆಗುತ್ತಿರಲಿಲ್ಲ. ಈ ಕಾರಣಕ್ಕೆ ಮೊಬೈಲ್ ಅನ್ನು ಪರಿಶೀಲನೆ ನೀಡಲಾಗಿತ್ತು. ಇದನ್ನು ಚೆಕ್​ ಮಾಡುವ ವೇಳೆ ಮೊಬೈಲ್ ಸ್ಫೋಟಗೊಂಡಿದೆ.  ಈ ವೇಳೆ ಅಂಗಡಿ ಮಾಲೀಕನ ಕೈಗೆ ಸುಟ್ಟ ಗಾಯಾಗಳಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಮೊಬೈಲ್ ಸ್ಪೋಟದ ಶಬ್ದ ಮತ್ತು ಹೊಗೆಯನ್ನು ಕಂಡ ಅಂಗಡಿಯಲ್ಲಿದ್ದ ಜನರು ಹೆದರಿ ಹೊರ ಓಡಿ ಬಂದರು. ಶೀಘ್ರದಲ್ಲೇ ಅಂಗಡಿ ಮಾಲೀಕನಿಗೆ ನೆರವಾಗುವ ಮೂಲಕ ಅಪಾಯವನ್ನು ತಪ್ಪಿಸಿದರು.

ಈ ಹಿಂದೆ ಕೂಡ ಮಂಡ್ಯದ ಆರ್‌ಪಿ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ತಾಂತ್ರಿಕ ದೋಷದಿಂದ ರೆಡ್ಮಿ ನೋಟ್ 4 ಮೊಬೈಲ್ ಸ್ಫೋಟಗೊಂಡಿತ್ತು. ಆದರೆ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಈಗ ಮತ್ತೊಮ್ಮೆ ರೆಡ್​ ಮೀ ಮೊಬೈಲ್​ಗಳಲ್ಲಿ ದೋಷಗಳು ಕಂಡು ಬರುತ್ತಿರುವುದರಿಂದ ಎಚ್ಚರಿಕೆ ವಹಿಸುವುದು ಉತ್ತಮ ಎನ್ನುತ್ತಾರೆ ಮೊಬೈಲ್ ತಜ್ಞರೊಬ್ಬರು.

ಇದನ್ನೂ ಓದಿ: BSNL ನೇಮಕಾತಿ: 40 ಸಾವಿರ ವೇತನದ 198 ಹುದ್ದೆಗಳಿಗೆ ಅರ್ಜಿ ಆಹ್ವಾನ

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...