• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • MM Kalburgi Case: ನಮ್ಮ‌ ತಂದೆಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ಇವರೇ: ಕಣ್ಣೀರು ಹಾಕಿದ ಕಲಬುರ್ಗಿ ಅವರ ಪುತ್ರಿ

MM Kalburgi Case: ನಮ್ಮ‌ ತಂದೆಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ಇವರೇ: ಕಣ್ಣೀರು ಹಾಕಿದ ಕಲಬುರ್ಗಿ ಅವರ ಪುತ್ರಿ

ಎಂ ಎಂ ಕಲಬುರಗಿ

ಎಂ ಎಂ ಕಲಬುರಗಿ

ಎರಡು ವರ್ಷ ವಿಳಂಬವಾಗಿ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿದ್ದು, ಇಡೀ ಪ್ರಕರಣದ ವಿಚಾರಣೆ ಸಾಕಷ್ಟು ವಿಚಾರಗಳನ್ನು ಒಳಗೊಂಡಿರೋ ಕಾರಣಕ್ಕೆ ಸುದೀರ್ಘವಾದ ವಿಚಾರಣೆ ಇನ್ನೂ ಮುಂದುವರೆಯಲಿದ್ದು, ಏಪ್ರಿಲ್ 5ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

  • Share this:

ಧಾರವಾಡ : ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ(M M Kalburgi)ಯವರನ್ನು ಗುಂಡಿಟ್ಟು ಹತ್ಯೆ ಮಾಡಿ ಈಗ ಏಳು ವರ್ಷಗಳೇ ಗತಿಸಿದವು. ಕಲಬುರ್ಗಿ ಅವರ ಹತ್ಯೆಯ ಬಳಿಕ ನಾಡಿನ ಮತ್ತೋರ್ವ ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ (Gauri Lankesh)ರನ್ನು ಸಹ ಇದೇ ರೀತಿ ಗುಂಡಿಟ್ಟು ಹತ್ಯೆಲಾಗಿತ್ತು. ಆ ಬಳಿಕ ನಡೆದ ಎಸ್ಐಟಿ (SIT Investigation) ತನಿಖೆಯಲ್ಲಿ ಗೌರಿ ಲಂಕೇಶ ಹತ್ಯೆಯ ಜೊತೆಗೆ ಕಲಬುರ್ಗಿ ಹಂತಕರನ್ನು (Accused) ಬಂಧಿಸಲಾಗಿತ್ತು. ಸದ್ಯ ಸುದೀರ್ಘ ಅವಧಿಯ ಬಳಿಕ ಈಗ ಆರೋಪಿಗಳ ಪ್ರಮುಖ ವಿಚಾರಣೆ ಧಾರವಾಡ ನ್ಯಾಯಾಲಯ (Dharwad Court)ದಲ್ಲಿ ಆರಂಭಗೊಂಡಿದೆ. 


ಧಾರವಾಡದ ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಯ ಪ್ರಮುಖ ಆರೋಪಿಗಳಾದ ಗಣೇಶ ಮಿಸ್ಕಿನ್, ಅಮೂಲ್ ಕಾಳೆ, ಅಮಿತ್ ಬದ್ದಿ, ವಾಸುದೇವ ಸೂರ್ಯವಂಶಿ, ಪ್ರವೀಣ ಚತುರ್.  ಈ ಆರೋಪಿಗಳನ್ನು ಈ ಹಿಂದೆಯೇ ವಿಚಾರಣೆ ಮಾಡಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಎರಡು ವರ್ಷ ಭೌತಿಕ ಕಲಾಪಗಳೇ ನಡೆದಿರಲಿಲ್ಲ.


ಎಲ್ಲ ಆರೋಪಿಗಳನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕವೇ ಸಾಕ್ಷಿಗಳ ಮುಂದೆ ಮುಖಾಮುಖಿಯಾಗಿಸಿ ವಿಚಾರಣೆ ನಡೆಸಬೇಕಿತ್ತು. ಹೀಗಾಗಿ ಧಾರವಾಡದ 4ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಈ ಐವರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು.


ಇದನ್ನೂ ಓದಿ:  Judgment: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್​ಗೆ 20 ವರ್ಷ ಜೈಲು ಶಿಕ್ಷೆ


2015 ಆಗಸ್ಟ್ 30ರಂದು ಕೊಲೆ


ಧಾರವಾಡ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಸುದೀರ್ಘವಾದ ವಿಚಾರಣೆ ನಡೆಯಿತು. 2015ರ ಆಗಸ್ಟ್ 30ರಂದು ಬೆಳಗಿನ ಜಾವ ಕಲಬುರ್ಗಿಯವರು ಕಲ್ಯಾಣ ನಗರದಲ್ಲಿನ ತಮ್ಮ ಮನೆಯಲ್ಲಿ ಕುಳಿತಿದ್ದಾಗ, ಮನೆಗೆ ಬಂದ ಆಗಂತುಕರು ಬಾಗಿಲು ಬಡೆದಿದ್ದರು. ಆಗ ಹೊರಗೆ ಬಂದು ಬಾಗಿಲು ತೆಗೆಯುತ್ತಿದ್ದಂತೆಯೇ ಕಲಬುರ್ಗಿಯವರ ತಲೆಗೆ ಗುಂಡು ಹೊಡೆದು ಆರೋಪಿಗಳು ಬೈಕ್ ಮೇಲೆ ಪರಾರಿಯಾಗಿದ್ದರು.


ಈ ಪ್ರಕರಣದಲ್ಲಿ ಗುಂಡು ಹೊಡೆದವರು ಹುಬ್ಬಳ್ಳಿ ಮೂಲದ ಗಣೇಶ್ ಮಿಸ್ಕಿನ್ ಆನ್ನೋದು ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಮನೆಯಲ್ಲಿದ್ದ ಕಲಬುರ್ಗಿಯವರ ಪುತ್ರಿ ರೂಪದರ್ಶಿಯವರಿಗೆ ಆರೋಪಿಗಳನ್ನು ಗುರುತಿಸುವಂತೆ ಸೂಚಿಸಲಾಯಿತು.


ಆರೋಪಿಯನ್ನು ಗುರುತಿಸಿದ ಕಲಬರ್ಗಿ ಅವರ ಪುತ್ರಿ


ಇದಕ್ಕೂ ಮೊದಲು ಅಂದು ನಡೆದ ಘಟನೆಯನ್ನು ನ್ಯಾಯಾಧೀಶರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟ ಪುತ್ರಿ ರೂಪದರ್ಶಿ, ತಂದೆಯನ್ನು ನೆನೆದು ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದರು. ಇನ್ನೂ ಅಂದು ಗುಂಡು ಹೊಡೆದು ಹೋಗಿದ್ದ ಆರೋಪಿಯನ್ನು ಗುರುತಿಸುವ ವೇಳೆಯೂ ರೂಪದರ್ಶಿ ಕಣ್ಣೀರು ಹಾಕಿದರು.


ಕಣ್ಣೀರು ಹಾಕುತ್ತಲೇ ಆಕ್ರೋಶದಿಂದ ಇವನೇ ಗುಂಡು ಹೊಡೆದಿದ್ದು ಅಂತಾ ಹೇಳಿದರು. ಇನ್ನು ಅಂದು ಮಿಸ್ಕಿನ್ ಗುಂಡು ಹೊಡೆದಿದ್ರೆ, ಹೊರಗಡೆ ರಸ್ತೆಯಲ್ಲಿ ಬೈಕ್ ಮೇಲೆ ಮತ್ತೋರ್ವ ಆರೋಪಿ ಇದ್ದರು. ಆತನೇ ಮಿಸ್ಕಿನ್‌ನನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದನು.  ಅದನ್ನೂ ಸಹ ರೂಪದರ್ಶಿ ಗುರುತಿಸಿದ್ರು.


ಈ ವಿಚಾರದ ಕುರಿತು ಸಮಗ್ರವಾದ ವಾದ-ವಿವಾದ ನಡೆದ ಬಳಿಕ ಕಲಬುರ್ಗಿಯವರ ಪತ್ನಿ ಉಮಾದೇವಿಯವರ ಸಾಕ್ಷ್ಯದ ವಿಚಾರಣೆಯನ್ನೂ ಸಹ ನಡೆಸಲಾಯಿತು. ಈ ವೇಳೆ  ಸಾಕ್ಷಿಗಳನ್ನು ಏಕಕಾಲಕ್ಕೆ ಕ್ರಾಸ್ ಮಾಡಲು ತಮಗೆ ಸಿಆರ್‌ಪಿಸಿ 231 ಸೆಕ್ಷನ್ ಅಡಿಯಲ್ಲಿ ಅನುವು ಮಾಡಿಕೊಡುವಂತೆ ಅರ್ಜಿ ಸಹ ಸಲ್ಲಿಸಿದರು.


ಕೊಲೆ ನಡೆದ ಸ್ಥಳದಲ್ಲಿ ವಸ್ತುಗಳು


ಈ ಮಧ್ಯೆ ವಿಚಾರಣೆಯಲ್ಲಿ ಕಲಬುರ್ಗಿಯವರು ಕೊಲೆ ನಡೆದ ಸಮಯದಲ್ಲಿ ಹಾಕಿಕೊಂಡಿದ್ದ ಶರ್ಟ್, ಬನಿಯನ್, ಪ್ಯಾಂಟ್, ಗುಂಡುಗಡಿಗೆ ಸೇರಿದಂತೆ ಅಂದಿನ ಕೆಲವೊಂದು ವಸ್ತುಗಳನ್ನು ಸಹ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.


ಮೂವರ ಹತ್ಯೆಯಲ್ಲಿ ಸಾಮ್ಯತೆ


ಕಲಬುರ್ಗಿಯವರ ಹತ್ಯೆ ನಡೆದಾಗ ಅವರನ್ನು ವಿಚಾರವಾದಿ ಅನ್ನೋ ಕಾರಣಕ್ಕಾಗಿಯೇ ಹತ್ಯೆ ಮಾಡಲಾಗಿದೆ ಅನ್ನೋ ದೊಡ್ಡ ಮಟ್ಟದ ಕೂಗು ಎದ್ದಿತ್ತು. ಮೇಲಾಗಿ ಮಹಾರಾಷ್ಟ್ರದ ವಿಚಾರವಾದಿ ದಾಬೋಲ್ಕರ, ಕಲಬುರ್ಗಿ ಹಾಗೂ ಗೌರಿ ಲಂಕೇಶ ಮೂರೂ ಹತ್ಯೆಗಳಲ್ಲಿ ಸಾಮ್ಯತೆಯೂ ಇತ್ತು.


ಆದರೆ ಕಲಬುರ್ಗಿ ಹತ್ಯೆ ನಡೆದ ಬಳಿಕ ಕೆಲ ದಿನಗಳವರೆಗೆ ಆರೋಪಿಗಳೇ ಪತ್ತೆಯಾಗಿರಲಿಲ್ಲ. ಸಿಓಡಿ ತನಿಖೆ ಮಾಡುತ್ತಲೇ ಇತ್ತು. ಆದ್ರೆ ಗೌರಿ ಲಂಕೇಶ ಹತ್ಯೆಯ ತನಿಖೆ ಕೈಗೊಂಡ ಎಸ್ಐಟಯವರೇ ಆ ಹತ್ಯೆಯಲ್ಲಿದ್ದರೇ ಕಲಬುರ್ಗಿ ಹತ್ಯೆಯಲ್ಲಿದ್ದಾರೆ ಅನ್ನೋದನ್ನು ತನಿಖೆಯಲ್ಲಿ ಬಯಲಿಗೆಳೆದಿತ್ತು.


ಇದನ್ನೂ ಓದಿ:  Murder Sketch: ಮುಸ್ಲಿಂ ಯುವತಿ, ಹಿಂದೂ ಯುವಕನ ಪ್ರೇಮ್ ಕಹಾನಿ; ತಂಗಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟ ರೌಡಿಶೀಟರ್!


ಏಪ್ರಿಲ್ 5ಕ್ಕೆ ವಿಚಾರಣೆ ಮುಂದೂಡಿಕೆ


ಆ ಬಳಿಕವೇ ಕಲಬುರ್ಗಿ ಹತ್ಯೆ ಕೇಸ್ ಗೆ ವೇಗ ಸಿಕ್ಕಿದ್ದು, ಕೊರೊನಾ ಕಾರಣಕ್ಕೆ ಈಗ ಎರಡು ವರ್ಷ ವಿಳಂಬವಾಗಿ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿದ್ದು, ಇಡೀ ಪ್ರಕರಣದ ವಿಚಾರಣೆ ಸಾಕಷ್ಟು ವಿಚಾರಗಳನ್ನು ಒಳಗೊಂಡಿರೋ ಕಾರಣಕ್ಕೆ ಸುದೀರ್ಘವಾದ ವಿಚಾರಣೆ ಇನ್ನೂ ಮುಂದುವರೆಯಲಿದ್ದು, ಏಪ್ರಿಲ್ 5ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು