ಮುಂದುವರೆದ ಸಚಿವಾಕಾಂಕ್ಷಿಗಳ ಲಾಬಿ, 'ಕೊಟ್ಟ ಮಾತು ಉಳಿಸಿಕೊಳ್ಳಿ' ಬಿಎಸ್ವೈ ಮನೆ ಮುಂದೆ ಸುನಿಲ್ ವಲ್ಯಾಪುರೆ ಬೆಂಬಲಿಗರ ಪ್ರತಿಭಟನೆ

ಕೆಲವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಮತ್ತು ಹಾಲಿ ಸಿಎಂ ಬೊಮ್ಮಾಯಿ ಸುತ್ತಲೇ ಗಿರಕಿ ಹೊಡೆಯುತ್ತಿದ್ದಾರೆ. ಇದೆಲ್ಲದರ ನಡುವೆ ಹಿಂದೆ ನಡೆದ ಕೆಲವು ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿ ಬಿ ಎಸ್ ಯಡ್ಯೂರಪ್ಪ ಸಚಿವ ಸ್ಥಾನ ನೀಡುವ ಮಾತು ಕೊಟ್ಟವರೂ ಈಗ ಆ ಸ್ಥಾನಕ್ಕಾಗಿ ಕಾಯುತ್ತಾ ಇದ್ದಾರೆ.

ಪ್ರತಿಭಟನೆ

ಪ್ರತಿಭಟನೆ

 • Share this:
  ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ್ದೇ ರಾಜ್ಯದ ನಾನಾ ಭಾಗಗಳಿಂದ ಶಾಸಕರುಗಳು ಸಚಿವಾಕಾಂಕ್ಷಿಗಳಾಗಿ ಸಾಕಷ್ಟು ಸಾಹಸ ಮಾಡ್ತಿದ್ದಾರೆ, ಕೆಲವರು ನೇರವಾಗಿ ಹೈಕಮಾಂಡ್ ಜೊತೆಗೇ ಲಾಬಿ ಮಾಡುತ್ತಿದ್ದರೆ ಇನ್ನು ಕೆಲವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಮತ್ತು ಹಾಲಿ ಸಿಎಂ ಬೊಮ್ಮಾಯಿ ಸುತ್ತಲೇ ಗಿರಕಿ ಹೊಡೆಯುತ್ತಿದ್ದಾರೆ. ಇದೆಲ್ಲದರ ನಡುವೆ ಹಿಂದೆ ನಡೆದ ಕೆಲವು ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿ ಬಿ ಎಸ್ ಯಡ್ಯೂರಪ್ಪ ಸಚಿವ ಸ್ಥಾನ ನೀಡುವ ಮಾತು ಕೊಟ್ಟವರೂ ಈಗ ಆ ಸ್ಥಾನಕ್ಕಾಗಿ ಕಾಯುತ್ತಾ ಇದ್ದಾರೆ. ಅಂದ್ಹಾಗೆ ಈ ವಿಚಾರ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಕುರಿತದ್ದು.

  ದಲಿತ ಕೋಟಾದಡಿಯಲ್ಲಿ ಸುನೀಲ್ ವಲ್ಯಾಪುರೆ ಗೆ ಸಚಿವ ಸ್ಥಾನ ನೀಡುವಂತೆ ಭೋವಿ (ವಡ್ಡರ) ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ. ಚಿಂಚೋಳಿಯಲ್ಲಿ ಬಿಎಸ್‌ ವೈ ನೀಡಿದ್ದ ಮಾತು ಉಳಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಚಿಂಚೋಳಿ ಉಪಚುನಾವಣೆಯ ಸಂಧರ್ಭದಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನುಡಿದಂತೆ ವಿಧಾನಪರಿಷತ್‌ ಸದಸ್ಯರಾದ ಸುನೀಲ್‌ ವಲ್ಯಾಪುರೆ ಅವರನ್ನು ದಲಿತ ಕೋಟಾದಡಿಯಲ್ಲಿ ಮಂತ್ರಿ ಸ್ಥಾನ ನೀಡಬೇಕು ಎನ್ನುವ ಬೇಡಿಕೆಯ ಕೂಗು ಎದ್ದಿದೆ.

  ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭೋವಿ(ವಡ್ಡರ) ಸಮುದಾಯದ ಮುಖಂಡರು ಈ ಸಂಬಂಧ ಒಂದು ಹೋರಾಟವನ್ನೇ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭೋವಿ ಸಮುದಾಯವು ಬಿ.ಜೆ.ಪಿ. ಪಕ್ಷಕ್ಕೆ ಮೊದಲಿನಿಂದಲೂ ಬೆಂಬಲ ನೀಡುತ್ತಲೇ ಬಂದಿದೆ. ಅದರಲ್ಲೂ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಭೋವಿ ಸಮುದಾಯ ಬಿ.ಜೆ.ಪಿ. ಪಕ್ಷಕ್ಕೆ ನಿರಂತರವಾಗಿ ಬೆಂಬಲ ಸೂಚಿಸಿದೆ.  ಈ ಭಾಗದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಸಂಧರ್ಭದಲ್ಲಿ ಪಕ್ಷದಿಂದ ಶಾಸಕರು ಮತ್ತು ಸಂಸದರಾಗಿ ಆಯ್ಕೆಯಾಗಲು ನಮ್ಮ ಸಮುದಾಯದ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸುನೀಲ ವಲ್ಯಾಪುರೆ ಅವರ ಕೊಡುಗೆ ಅಪಾರವಾಗಿದೆ ಎನ್ನುವುದು ಬೆಂಬಲಿಗರ ವಾದ.

  ಇದನ್ನೂ ಓದಿ: Sunday Special Recipe: ಆಂಧ್ರ ಸ್ಟೈಲ್ Spicy Chilli Chicken ಮಾಡುವ ಅತ್ಯಂತ ಸರಳ ವಿಧಾನ ಇಲ್ಲಿದೆ

  ಈ ಸಂಬಂಧ ಸುನೀಲ್ ವಲ್ಯಾಪುರೆ ಬೆಂಬಲಿಗರು ಶನಿವಾರ ಯಡಿಯೂರಪ್ಪ ನಿವಾಸದ ಎದುರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. 2018ರಲ್ಲಿ ಬೈ ಎಲೆಕ್ಷನ್ ವೇಳೆ ಬಿಎಸ್​ವೈ ಸುನಿಲ್ ವಲ್ಯಾಪುರೆಗೆ ಸಚಿವ ಸ್ಥಾನ ನೀಡುವ ಆಶ್ವಾಸನೆ ಕೊಟ್ಟಿದ್ದು ಅದಿನ್ನೂ ಪೂರೈಸಿಲ್ಲ. ಇನ್ನು ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ, ಈ ಬಾರಿಯ ಮಂತ್ರಿ ಮಂಡಳದಲ್ಲಿ ಅವರಿಗೆ ಸ್ಥಾನ ನೀಡಲೇಬೇಕು ಎಂದು ಬೆಂಬಲಿಗರು ಆಗ್ರಹಿಸಿದರು.

  ಶನಿವಾರ ಮಾಜಿ ಸಿಎಂ ಬಿಎಸ್‌ವೈ ನಿವಾಸ ಕಾವೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಕಲಬುರಗಿ, ಗದಗ ಸೇರಿದಂತೆ ವಿವಿಧೆಡೆಯಿಂದ ಬೆಂಬಲಿಗರು ಆಗಮಿಸಿದ್ದರು. ಇವರೆಲ್ಲಾ ರಾಜ್ಯ ಬೋವಿ ಸಮಾಜ ಸಂಘಟನೆ ನೇತೃತ್ವದಲ್ಲಿ ಬಿಎಸ್‌ವೈ ಮನವಿ ಸಲ್ಲಿಸಲು ಆಗಮಿಸಿದ್ದರು. ಇಂದು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಪತ್ರವನ್ನೂ ಸಲ್ಲಿಸಿದ್ದಾರೆ. ಇನ್ನೇನಿದ್ದರೂ ಸಚಿವ ಸಂಪುಟ ರಚನೆಯಾದಾಗಷ್ಟೇ ಇವರೆಲ್ಲರ ಬೇಡಿಕೆ ಈಡೇರಿದೆಯಾ ಇಲ್ಲವಾ ಎನ್ನುವುದು ಸ್ಪಷ್ಟವಾಗಲಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Soumya KN
  First published: