ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಸುಳ್ಳು ಆರೋಪ - ಸಿದ್ಧರಾಮಯ್ಯ, ಡಿಕೆಶಿಗೆ ನೋಟೀಸ್ ; ರವಿಕುಮಾರ್

4 ಸಾವಿರ ಕೋಟಿ ಖರ್ಚಾಗಿದೆ. 2 ಸಾವಿರ ಕೋಟಿ ಅಕ್ರಮವಾಗಿದೆ ಎಂದು ಹೇಗೆ ಹೇಳಿದ್ರಿ. ಈ ಆರೋಪ ಸತ್ಯಕ್ಕೆ ದೂರವಾದ ಹೇಳಿಕೆಯಾಗಿದೆ. ಆರೋಪ ಮಾಡಿರುವ ಕಾರಣ ಇಬ್ಬರಿಗೂ‌ ನೋಟೀಸ್ ನೀಡಲಾಗಿದೆ

ವಿಧಾನ ಪರಿಷತ್ ಸದಸ್ಯ ರವಿಕುಮಾರ್​

ವಿಧಾನ ಪರಿಷತ್ ಸದಸ್ಯ ರವಿಕುಮಾರ್​

  • Share this:
ಬೆಂಗಳೂರು(ಜುಲೈ.31): ಸಿಎಂ ಯಡಿಯೂರಪ್ಪನವರ ಸರ್ಕಾರ ಒಂದು ವರ್ಷ ಪೂರೈಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ವಿಪಕ್ಷ ಕಾಂಗ್ರೆಸ್ ಗೆ ಹೊಟ್ಟೆ ಉರಿ. ಈ ಹೊಟ್ಟೆ ಉರಿಯಿಂದ ಕಾಂಗ್ರೆಸ್ ಪ್ರತಿಭಟನೆ, ಆರೋಪ ಪ್ರತ್ಯಾರೋಪ ಮಾಡಿ, ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯತ್ನ ಮಾಡುತ್ತಿದೆ ಎಂದು ವಿಧಾನ ಪರಿಷತ್​ ಸದಸ್ಯ ರವಿಕುಮಾರ್ ಕಿಡಿಕಾರಿದರು.

ಸಿದ್ದರಾಮಯ್ಯ ಹಾಗೂ ಡಿಕೆಶಿ ಸರ್ಕಾರದ ವಿರುದ್ದ ಆರೋಪಕ್ಕೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು,  20 ಪತ್ರ ಬರೆದರೂ ಒಂದಕ್ಕೂ ಉತ್ತರ ಕೊಟ್ಟಿಲ್ಲ. ‌ಮಾಹಿತಿ ನೀಡಿಲ್ಲ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಹಾಗಾದ್ರೆ ಅಂಕಿ ಅಂಶಗಳನ್ನಿಟ್ಟುಕೊಂಡು ಹೇಳಿದ್ದೀರಲ್ಲಾ 4 ಸಾವಿರ ಕೋಟಿ ಖರ್ಚಾಗಿದೆ. 2 ಸಾವಿರ ಕೋಟಿ ಅಕ್ರಮವಾಗಿದೆ ಎಂದು ಹೇಗೆ ಹೇಳಿದ್ರಿ. ಈ ಆರೋಪ ಸತ್ಯಕ್ಕೆ ದೂರವಾದ ಹೇಳಿಕೆಯಾಗಿದೆ. ಆರೋಪ ಮಾಡಿರುವ ಕಾರಣ ಇಬ್ಬರಿಗೂ‌ ನೋಟೀಸ್ ನೀಡಲಾಗಿದೆ. ನಮ್ಮ‌ ನೋಟೀಸ್ ಗೆ 15 ದಿನದಲ್ಲಿ ಉತ್ತರ ಕೊಡಬೇಕು ಎಂದರು.

ನೀವು ಮಾಹಿತಿ ಕೇಳಿದ್ರಿ. ಸರ್ಕಾರ ಮಾಹಿತಿ ನೀಡಲು ರೆಡಿಯಿದೆ. ಆದರೆ, ನೀವು ಮಾಹಿತಿ ಇಲ್ಲದೇ 4167 ಕೋಟಿ ಖರ್ಚು ಮಾಡಿ 2 ಸಾವಿರ ಕೋಟಿ ಅಕ್ರಮ ಎಂದು ಹೇಳಿ ಸರ್ಕಾರಕ್ಕೆ ಕೆಟ್ಟ ಹೆಸರು ಮಾಡುವ ಯತ್ನ ಮಾಡಿದ್ದೀರಿ ಭ್ರಮ‌ನಿರಸನರಾಗಿ ಹೀಗೆಲ್ಲಾ ಮಾತಾಡ್ತಿದ್ದೀರಾ ? ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೀರಿ ಎಂದು ರವಿ ಕುಮಾರ ಪ್ರಶ್ನೆ ಮಾಡಿದರು.

ಹ್ಯೂಬ್ಲೋಟ್ ವಾಚ್ ಬಗ್ಗೆ ಸಿದ್ದರಾಮಯ್ಯನವರೇ ಉತ್ತರ ಕೊಟ್ಟಿದ್ದೀರಾ ? ಸಿದ್ದರಾಮಯ್ಯ ನವರೇ ಯಾವ ನೈತಿಕತೆ ಇಟ್ಟುಕೊಂಡು ಡಿಕೆ ಶಿವಕುಮಾರ್ ಪಕ್ಕದಲ್ಲಿ ಕೂರುತ್ತೀರಿ ? ಯಾವ ನೈತಿಕತೆ ಇಟ್ಕೊಂಡು ಡಿಕೆ ಶಿವಕುಮಾರ್ ಜೊತೆ ಸೇರಿ ಪ್ರತಿಭಟನೆ ಮಾಡ್ತೀರಾ ? ಡಿಕೆ ಶಿವಕುಮಾರ್​ ಅವರು ಆಸ್ತಿಯನ್ನು ಹೇಗೆ ದುಪ್ಪಟ್ಟು ಮಾಡಿಕೊಂಡರು. ನಮಗೂ ಹೇಳಿ ಕೊಡಿ ಕಡಿಮೆ ಅವಧಿಯಲ್ಲಿ ಹೇಗೆ ಜಾಸ್ತಿ ಆಯ್ತು‌ಎಂದು ತಿಳಿಸಿದರು.

ಇದನ್ನೂ ಓದಿ : ಕೊರೋನಾ ರೋಗಿಗಳ ನಿರ್ಲಕ್ಷ್ಯ ಆರೋಪ ; ಚಿಕಿತ್ಸೆ ಸಿಗದೆ ಬೇಸತ್ತು ಸಾರ್ವಜನಿಕ ವಾಹನದಲ್ಲಿ ತೆರಳಿದ ಸೋಂಕಿತರು

ಕೇಂದ್ರ ಸರ್ಕಾರ 2 ಸಾವಿರ ಕೋಟಿ ಹಣ ಖರ್ಚು ಮಾಡಿ 50 ಸಾವಿರ ವೆಂಟಿಲೇಟರ್ಸ್ ಖರೀದಿ ಮಾಡಿದೆ. ಒಂದು ವೆಂಟಿಲೇಟರ್​ಗೆ 4 ಲಕ್ಷ ರೂನಂತೆ ಖರ್ಚು ಮಾಡಿದೆ. ತಮಿಳುನಾಡು ಸರ್ಕಾರ 4.78 ಲಕ್ಷ ರೂನಂತೆ ನೂರು ವೆಂಟಿಲೇಟರ್ ಖರೀದಿಸಿದೆ. ರಾಜ್ಯ ಸರ್ಕಾರ ಮಾರ್ಚ್ 22ರಂದು 5.6 ಲಕ್ಷ ರೂನಂತೆ ವೆಂಟಿಲೇಟರ್ ಖರೀದಿ ಮಾಡಿದೆ. ಅದಾದ ಬಳಿಕ ಮತ್ತೊಂದು ಬಾರಿ 12.32 ಲಕ್ಷ ರೂನಂತೆ ಖರೀದಿ ಮಾಡಿದೆ. ಏಪ್ರಿಲ್ 23ರಂದು 18.23 ಲಕ್ಷದಂತೆ ವೆಂಟಿಲೇಟರ್ ಪರ್ಚೇಸ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು.

ಪಿಪಿಇ ಕಿಟ್ ಖರೀದಿ ವಿಚಾರದಲ್ಲೂ ರಾಜ್ಯ ಸರ್ಕಾರ ವ್ಯಾಪಕ ಅವ್ಯವಹಾರ ನಡೆದಿರುವುದಕ್ಕೆ ಸಿದ್ದರಾಮಯ್ಯ ದಾಖಲೆ ನೀಡಿದ್ದರು. ಒಂದು ಪಿಪಿಇ ಕಿಟ್​ಗೆ ಮಾರುಕಟ್ಟೆಯಲ್ಲಿ 330 ರೂ ಇದೆ. ಆದರೆ, ರಾಜ್ಯ ಸರ್ಕಾರ ಚೀನಾದ ಪಿಪಿಇ ಕಿಟ್​ಗಳನ್ನ 2,117 ರೂ ಕೊಟ್ಟು ಖರೀದಿ ಮಾಡಿದೆ. ಇವೆಲ್ಲವೂ ಕಳಪೆ ಗುಣಮಟ್ಟದ್ದೆಂದು ವೈದ್ಯರೇ ಅಸಮಾಧಾನಗೊಂಡಿದ್ದಾರೆ. ಸರ್ಕಾರ ದುಬಾರಿ ಬೆಲೆ ತೆತ್ತು ಕಳಪೆ ಪಿಪಿಇ ಕಿಟ್ ಖರೀದಿಸಿದೆ ಎಂದು ಸರ್ಕಾರದ ವಿರುದ್ದ ಸಿದ್ದರಾಮಯ್ಯ ಆರೋಪ ಮಾಡಿದ್ದರು.
Published by:G Hareeshkumar
First published: