• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • KS Eshwarappa: ಯಾಕೆ ಅದೊಂದನ್ನೇ ಕೇಳ್ತಿರಿ, ಅವರೆಲ್ಲರ ಬಗ್ಗೆ ಯಾಕೆ ಕೇಳಲ್ಲ: ಮಾಧ್ಯಮಗಳ ಪ್ರಶ್ನೆಗೆ ಕೆ.ಎಸ್.ಈಶ್ವರಪ್ಪ ಗರಂ

KS Eshwarappa: ಯಾಕೆ ಅದೊಂದನ್ನೇ ಕೇಳ್ತಿರಿ, ಅವರೆಲ್ಲರ ಬಗ್ಗೆ ಯಾಕೆ ಕೇಳಲ್ಲ: ಮಾಧ್ಯಮಗಳ ಪ್ರಶ್ನೆಗೆ ಕೆ.ಎಸ್.ಈಶ್ವರಪ್ಪ ಗರಂ

ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

ಅಷ್ಟಕ್ಕೆ ನೀವು ವಿಜಯೇಂದ್ರ.. ವಿಜಯೇಂದ್ರ ನೆನಪು ಮಾಡ್ತೀರಿ. ರಾಘವೇಂದ್ರ ದೇವರು ಅಂತ ನೆನಪು ಮಾಡಿಕೊಂಡ ಹಾಗಾಯ್ತು ಎಂದರು.

  • Share this:

ಗುತ್ತಿಗೆದಾರ ಸಂತೋಷ್ ಪಾಟೀಲ್ (Contractor Santosh Patil Case) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa) ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನು ಚಾಮುಂಡೇಶ್ವರಿ ದೇವಸ್ಥಾನಕ್ಕೆ (Chamundeshwari Temple) ಹೋಗಿ ಬಂದೆ. ಚೌಡೇಶ್ವರಿ ನನ್ನ ಮನೆ ದೇವರು. ನಾನೇನಾದ್ರೂ ತಪ್ಪು ಮಾಡಿದ್ರೆ ಚೌಡೇಶ್ವರಿ ನನಗೆ ಶಿಕ್ಷೆ ನೀಡಲಿ. ನಾನು ತಪ್ಪು ಮಾಡಿಲ್ಲ ಅಂದ್ರೆ ಶಿಕ್ಷೆಯಿಂದ ಹೊರಬರಲಿ. ಇದು ನನ್ನ ನಂಬಿಕೆ ಎಂದು ಹೇಳಿದ್ದಾರೆ. ಇದಕ್ಕೆ ಇನ್ನೊಂದು ವಾರ ಅಥವಾ 15 ದಿನದಲ್ಲಿ ಒಂದು ರೂಪ ಬರುತ್ತೇ ಅಂದುಕೊಂಡಿದ್ದೀನಿ. ಸಚಿವ ಸಂಪುಟ (Cabinet) ಸೇರಿಸೋದು, ಬಿಡೋದು ಹೈಕಮಾಂಡ್ ಗೆ (High command) ಬಿಟ್ಟಿದ್ದು. ಕೇಂದ್ರ ನಾಯಕರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ತಿಳಿಸಿದರು.


ನಾವು ಪಕ್ಷದಲ್ಲಿ ಶಿಸ್ತಿನ ಸಿಪಾಯಿಗಳು. ನಾನು ಸೀಟ್ ಗಾಗಿ ಬಡಿದಾಡೋರಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಂತೆ ನಮ್ಮಲ್ಲಿ ಗುಂಪುಗಳಿಲ್ಲ. ಕೇಂದ್ರ ನಾಯಕರ ನಿರ್ಧಾರಕ್ಕೆ ಬದ್ಧವಾಗಿರುತ್ತವೆ ಎಂದರು.


ರಾಜಕೀಯಕ್ಕಾಗಿ HDK ಏನೋ ಹೇಳ್ತಾರೆ!


ತಾಂಬೂಲ ಪ್ರಶ್ನೆ ವಿಚಾರವಾಗಿ ರಾಜ್ಯದ ಜನರ ಮೇಲೆ ಮೂಢನಂಬಿಕೆ ಹೇರುತ್ತಿದ್ದಾರೆಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ದೇವೇಗೌಡರ ವಂಶ ನನಗೂ ಒಂದು ಆದರ್ಶ ಇದೆ. ದೇವರು, ಧರ್ಮದ ಬಗ್ಗೆ ಆ ವಂಶ ಇಟ್ಟುಕೊಂಡ ನಂಬಿಕೆಯನ್ನ ಎಲ್ಲಾ  ಕುಟುಂಬ ಇಟ್ಟುಕೊಳ್ಳಬೇಕು. .ರಾಜಕಾರಣಕ್ಕಾಗಿ ಕುಮಾರಸ್ವಾಮಿ ಏನೋ ಒಂದು ಹೇಳಿದ್ರೆ ನಾನು ಟೀಕೆ ಮಾಡಲ್ಲ.


ಇದನ್ನೂ ಓದಿ:  Janardhana Reddy: ಜನಾರ್ದನ ರೆಡ್ಡಿಗೆ ಮತ್ತೆ ಶುರುವಾಗುತ್ತಾ ಸಂಕಷ್ಟ? ಮಗಳ ಅದ್ಧೂರಿ ಮದುವೆ ಬಗ್ಗೆ ಮತ್ತೊಂದು ದೂರು ದಾಖಲು


ಮಸೀದಿ ನವೀಕರಣ ಮಾಡೋವಾಗ ದೇವರುಗಳ ಸಿಕ್ಕಿದೆ..ಅದೇ ಚರ್ಚೆ ನಡೆಯುತ್ತಿದೆ. ಕುಮಾರಸ್ವಾಮಿ ಅವರ ತಂದೆ ದೇವೇಗೌಡರು ಒಳ್ಳೆಯ ಕೆಲಸ ಮಾಡಿದ್ದಾರೆ.‌ದೇವೇಗೌಡರ ಬಗ್ಗೆ ಹೆಚ್ಚು ಟೀಕೆ ಮಾಡೋಕೆ ಹೋಗಲ್ಲ. ದೇವೇಗೌಡರು & ಯಡಿಯೂರಪ್ಪ ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸ ಮಾಡಿ ಅಭಿವೃದ್ಧಿ ಮಾಡಿದ ನಾಯಕರು ಎಂದು ಹೇಳಿದರು.


ಅದೇ ಮಂದಿರಕ್ಕೆ ಹೋಗಿ ದರ್ಶನ ಮಾಡ್ತಾರೆ


ಕುಮಾರಸ್ವಾಮಿ ಅವರ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದ್ರೆ ಸುಮ್ಮನಿರುತ್ತಿದ್ದಾರಾ? ಕಾಶಿ, ಮಥುರಾ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಲಿ. ರಾಮ ಮಂದಿರ ಬಗ್ಗೆ ಟೀಕೆ ಮಾಡಿದ್ರು. ಇವತ್ತಲ್ಲ ನಾಳೆ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತದೆ. ಅದೇ ಕುಮಾರಸ್ವಾಮಿ, ಡಿಕೆಶಿ, ಸಿದ್ದರಾಮಯ್ಯ ದೇವೇಗೌಡರು ಅದೇ ರಾಮ ಮಂದಿರಕ್ಕೆ ಹೋಗಿ ದರ್ಶನ ಮಾಡೋ ಕಾಲ ದೂರವಿಲ್ಲ ಎಂದು ವಾಗ್ದಾಳಿ ನಡೆಸಿದರು.


ಅಂತವರ ವೈಭವೀಕರಣ ಪಠ್ಯದಲ್ಲಿತ್ತು!


ದೇಶದ ಸಂಸ್ಕೃತಿ ವಿಚಾರದಲ್ಲಿ ಹೆಡ್ಗೇವಾರ್ ಮಾಡಿರುವ ಭಾಷಣದ ಒಂದಂಶವನ್ನು ಸೇರಿಸಲಾಗಿದೆ. ಪಠ್ಯದಲ್ಲಿ ಮಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ? ಈಶ್ವರ ಲಿಂಗ ಒಡೆದ ಔರಂಗಜೇಬನ ಹೆಸರು ಸೇರಿಸಬೇಕಿತ್ತಾ? ಪಠ್ಯದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್, ಅಲೆಗ್ಸಾಂಡರ್ ದಿ ಗ್ರೇಟ್ ಇವುಗಳನ್ನು ನಮ್ಮ ಮಕ್ಕಳು ಓದುತ್ತಿದ್ದರು. ಯಾರು ನಮ್ಮ ದೇಶವನ್ನು ಹಾಳು ಮಾಡಿದ್ರೋ, ನಮ್ಮ ಸಂಸ್ಕೃತಿಯನ್ನು ಒಡೆದು ಪುಡಿ ಪುಡಿ ಮಾಡಿದ್ರೋ, ಅಂಥವರ ವೈಭವೀಕರಣ ನಮ್ಮ ಪಠ್ಯದಲ್ಲಿ ಇತ್ತು ಎಂದರು.


ರಾಷ್ಟ್ರದ್ರೋಹಿಗಳು, ಭಯೋತ್ಪಾದಕರು ಆಟ ಆಡ್ತಿದಾರೆ


ಭಗತ್ ಸಿಂಗ್ ಪಠ್ಯ ತೆಗೆದಿದ್ದು ಸುಳ್ಳು. ನಾರಾಯಣ್ ಗುರು ವಿಚಾರ ತೆಗೆದಿದ್ದು ಸುಳ್ಳು. ಹೆಡ್ಗೇವಾರ್ ಹೆಸರು ಹೇಳ್ತಿದಾರೆ ಸುಳ್ಳ. 1925 ರಲ್ಲಿ ಹಿಂದೂ ಸಮಾಜ ಒಂದು ಮಾಡುವ ಪ್ರಯತ್ನವನ್ನು ಹಡ್ಗೇವಾರ್ ಮಾಡಿದ್ರು. ಹಡ್ಗೇವಾರ್ ವಿಚಾರ ಹರಡದೇ ಇದ್ದಿದ್ರೇ ಈ ದೇಶ ತುಂಡು ತುಂಡಾಗಿ ಹೋಗ್ತಿತ್ತು. ಹಿಂದುತ್ವ ಇಷ್ಟೂ ಜಾಗೃತವಾಗಿರೋವಾಗಲೇ ರಾಷ್ಟ್ರದ್ರೋಹಿಗಳು, ಭಯೋತ್ಪಾದಕರು ಆಟ ಆಡ್ತಿದಾರೆ. ವಿಚಾರವಾದಿಗಳು ಅಂತಾ ಹೇಳಿಕೊಂಡು ತಿರುಗಾಡೋರಿಗೆ ಅದೇ ಆನಂದ ಎಂದು ಆಕ್ರೋಶ ಹೊರ ಹಾಕಿದರು.


ವಿಜಯೇಂದ್ರ ಪ್ರಶ್ನೆಗೆ ಈಶ್ವರಪ್ಪ ಗರಂ


ಬಿ.ವೈ.ವಿಜಯೇಂದ್ರಗೆ ಟಿಕೆಟ್ ತಪ್ಪಿದ ವಿಚಾರದ ಕುರಿತು ಪ್ರಶ್ನೆ ಕೇಳುತ್ತಲೇ ಈಶ್ವರಪ್ಪ ಗರಂ ಆದರು. ಯಾಕೆ ಅದೊಂದನ್ನೇ ಕೇಳ್ತಿರಿ. ಲಕ್ಷಾಂತರ ಜನರು ಟಿಕೆಟ್ ತಪ್ಪಿದವರು ಇದ್ದಾರೆ‌. ಈ ಬಗ್ಗೆ ಯಡಿಯೂರಪ್ಪ, ವಿಜಯೇಂದ್ರ ಸ್ಪಷ್ಟವಾಗಿ ಹೇಳಿದ್ದಾರೆ. ಕೇಂದ್ರ ನಾಯಕರ ತೀರ್ಮಾನಕ್ಕೆ ಬದ್ಧ ಅಂತ ಹೇಳಿದ್ದಾರೆ. ಅಷ್ಟಕ್ಕೆ ನೀವು ವಿಜಯೇಂದ್ರ.. ವಿಜಯೇಂದ್ರ ನೆನಪು ಮಾಡ್ತೀರಿ. ರಾಘವೇಂದ್ರ ದೇವರು ಅಂತ ನೆನಪು ಮಾಡಿಕೊಂಡ ಹಾಗಾಯ್ತು ಎಂದರು.


ಇದನ್ನೂ ಓದಿ:  Instagram Love: ಯಾರೋ ಬಂದ್ರು ಮಗು ಕೊಟ್ರು ಅಂತ ಹೇಳಿದ್ದ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಬಯಲಾಯ್ತು ಅಕ್ರಮ ಸಂಬಂಧ


ಅವರ ಬಗ್ಗೆ ಯಾಕೆ ಕೇಳ್ತಿಲ್ಲ


ತುಂಬಾ ಜನರು ಅರ್ಜಿ ಹಾಕಿದ್ದಾರೆ. ಅವರ ಬಗ್ಗೆ ಯಾಕೆ ಕೇಳೋದಿಲ್ಲ. 30-40 ವರ್ಷ ಕೆಲಸ ಮಾಡಿದ ಕಾರ್ಯಕರ್ತರಿಗೆ ಸಿಕ್ಕಿಲ್ಲ. ಅವರೆಲ್ಲ ಸುಮ್ಮನಿದಾರೆ ಇಲ್ವೊ. ನಮ್ಮ ಲಿಂಗರಾಜ ಪಾಟೀಲ್ ಕೂಡ ಟಿಕೆಟ್ ಸಿಗದಿದ್ದಕ್ಕೆ ಸುಮ್ಮನಿದ್ದಾರೆ. ಅವರ ಬಗ್ಗೆ ಯಾಕೆ ಕೇಳ್ತಿಲ್ಲ. ನಿಮಗೂ ರಾಜಕೀಯ ಮಾಡುವ ಚಟ ಎಂದು ಮಾದ್ಯಮದವರ ಪ್ರಶ್ನೆಗೆ ಗರಂ ಆಗಿ ಉತ್ತರ ನೀಡಿದರು.

First published: