ಸ್ಥಳೀಯ ಶಾಸಕರಾಗಿ ಕ್ರೈಸ್ತರಿಗೆ ಡಿಕೆ ಶಿವಕುಮಾರ್​ ಸಹಾಯ ಮಾಡಿದ್ದು ತಪ್ಪಲ್ಲ: ಐವಾನ್​​​ ಡಿಸೋಜಾ

ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಸರ್ಕಾರ‌ ಕಾನೂನಾತ್ಮಾಕವಾಗಿಯೇ ಗೋಮಾಳ ಭೂಮಿಯಲ್ಲಿ 10 ಎಕರೆ ಭೂಮಿಯನ್ನು ನೀಡಿದೆ. 2018 ರ ಫೆಬ್ರವರಿ 2 ರಂದು ಸರ್ಕಾರ ಧಾರ್ಮಿಕ‌ ಮತ್ತು ಸಾಮಾಜಿಕ ಚಟುವಟಿಕೆ ನಡೆಸಲು ಭೂಮಿ ಮಂಜೂರು ಮಾಡಿದೆ

ಐವಾನ್​ ಡಿಸೋಜಾ

ಐವಾನ್​ ಡಿಸೋಜಾ

  • Share this:
ಬೆಂಗಳೂರು(ಜ. 23): ಪ್ರತಿಯೊಬ್ಬರಿಗೂ ತಮ್ಮ ತಮ್ಮ ಧಾರ್ಮಿಕ ನಾಯಕರ ಪ್ರತಿಮೆ ನಿರ್ಮಿಸಲು ಹಕ್ಕಿದೆ. ಸ್ಥಳೀಯ ಶಾಸಕರಾಗಿ ಕ್ರೈಸ್ತರಿಗೆ ಡಿಕೆ ಶಿವಕುಮಾರ್​ ಸಹಾಯ ಮಾಡಿದ್ದು ತಪ್ಪಲ್ಲ. ಕಲ್ಲಡ್ಕ​​​​​ದಲ್ಲಿ ಅವರು ಬೇಕಾದರೆ ಕೃಷ್ಣನ ಪ್ರತಿಮೆ ನಿರ್ಮಿಸಿದರೆ ನಾವು ನೆರವು ನೀಡುತ್ತೇವೆ ಎಂದು ಪ್ರಭಾಕರ್​ ಭಟ್​​ ವಿರುದ್ದ ವಿಧಾನ ಪರಿಷತ್ ಸದಸ್ಯ ಐವಾನ್​​ ಡಿಸೋಜಾ ವಾಗ್ದಾಳಿ ನಡೆಸಿದ್ದಾರೆ.  

ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಸರ್ಕಾರ‌ ಕಾನೂನಾತ್ಮಾಕವಾಗಿಯೇ ಗೋಮಾಳ ಭೂಮಿಯಲ್ಲಿ 10 ಎಕರೆ ಭೂಮಿಯನ್ನು ನೀಡಿದೆ. 2018 ರ ಫೆಬ್ರವರಿ 2 ರಂದು ಸರ್ಕಾರ ಧಾರ್ಮಿಕ‌ ಮತ್ತು ಸಾಮಾಜಿಕ ಚಟುವಟಿಕೆ ನಡೆಸಲು ಭೂಮಿ ಮಂಜೂರು ಮಾಡಿದೆ. ನ್ಯಾಯವಾಗಿ ಮಂಜೂರಾದ ಭೂಮಿ ವಾಪಸ್ ಪಡೆಯಲು ಮುಂದಾಗಿರುವುದು ಸರಿಯಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ವಾಸ್ತವ ಸ್ಥಿತಿ ಅರಿಯಲು ಕ್ರಿಶ್ಚಿಯನ್ ಸಮುದಾಯದ ಮುಖಂಡರ ಸತ್ಯ ಶೋಧನಾ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಪ್ರಕರಣ ಸಂಬಂಧ ವರದಿ ಸಿದ್ಧಪಡಿಸಿದೆ. ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಅಧಿಕೃತವಾಗಿ ಮಂಜೂರು ಮಾಡಲಾಗಿತ್ತು. ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಸರ್ಕಾರದಿಂದ ಭೂಮಿ ಮಂಜೂರು ಮಾಡಲಾಗಿತ್ತು. ಬೇರೆ ಸಮುದಾಯಗಳ ಜೊತೆಗೆ ಕ್ರೈಸ್ತರು  ಉತ್ತಮ ಸಂಬಂಧ ಹೊಂದಿದ್ದರು ಎಂದರು.

ಕಪಾಲ ಬೆಟ್ಟ ಅಂತ ಹೆಸರು ಬರಲು ಕಾರಣ ಇದೆ. ಕಲವಾರಿ ಬೆಟ್ಟದಲ್ಲಿ ಏಸುಕ್ರಿಸ್ತನನ್ನು ಶಿಲುಬೆಗೇರಿಸಲಾಗಿತ್ತು. ಹಾಗಾಗಿ ಆ ಪ್ರದೇಶಕ್ಕೆ ಕಪಾಲ ಬೆಟ್ಟ ಅಂತ ಕರೆಯಲಾಗುತ್ತಿದೆ. ಇದುವರೆಗೆ ಅಲ್ಲಿ ಯಾವುದೇ ವ್ಯಾಜ್ಯ, ಸಮಸ್ಯೆ ಇರಲಿಲ್ಲ. 1661 ರಲ್ಲಿ ಹಾರೋಬೆಲೆಯಲ್ಲಿ ಪ್ರಥಮ ಚರ್ಚ್ ನಿರ್ಮಿಸಲಾಗಿದೆ. ಆಗಲೇ 160 ಕ್ರೈಸ್ತ ಕುಟುಂಬಗಳು ಅಲ್ಲಿ ವಾಸವಾಗಿದ್ದವು ಎಂದು ಹೇಳಿದರು.

ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ್ದು ಜೆರುಸಲೆಮ್​ನ ಮೌಂಟ್ ಕಲವಾರಿಯಲ್ಲಿ. ಈ ಕಲವಾರಿ ಬೆಟ್ಟಕ್ಕೆ ತಲೆ ಬುರುಡೆ ಎಂಬ ಇನ್ನೊಂದು ಹೆಸರಿದೆ. ಈ ಕಾರಣಕ್ಕೆ ರಾಮನಗರದಲ್ಲಿ ಕ್ರೈಸ್ತರು ನೆಲಸಿದ್ದ ಪ್ರದೇಶಕ್ಕೆ ಕಪಾಲ ಬೆಟ್ಟ ಎಂದು ಹೆಸರಿಟ್ಟಿರಬಹುದು ಎಂಬುದು ಕೆಲ ಇತಿಹಾಸಜ್ಞರ ಅಭಿಪ್ರಾಯ ಎಂದರು.

ಇದನ್ನೂ ಓದಿ :  ಮೌಢ್ಯ ವಿರೋಧಿ ಕಾಯ್ದೆ ಜಾರಿಗೊಳಿಸಿದ ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಅಭಿನಂದನೆ; ಬಿಜೆಪಿಗೆ ಈಗ ಜ್ಞಾನದೋಯವಾಗಿದೆ ಎಂದ ಮಾಜಿ ಸಿಎಂ

ಮುಸ್ಲಿಮರ ವಿರುದ್ಧ ಎಂ ಪಿ ರೇಣುಕಾಚಾರ್ಯ ಹೇಳಿಕೆ ಹಿನ್ನೆಲೆಯಲ್ಲಿ ಇವರ ಹೇಳಿಕೆ ದೇಶದ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದ್ದು, ರೇಣುಕಾಚಾರ್ಯ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಹೀಗೆ ಮಾತನಾಡುವುದು ಸರಿಯಲ್ಲ. ಮುಸ್ಲಿಮರಿಗೆ ಎಲ್ಲಿಡಬೇಕು ಅಲ್ಲಿಡುತ್ತೇವೆ ಅಂದ್ರೆ ಏನರ್ಥ? ಮುಸ್ಲಿಮರಿಗೆ ಈ ದೇಶದಲ್ಲಿ ಯಾವುದೇ ಹಕ್ಕು, ಸ್ವಾತಂತ್ರ್ಯ ಇಲ್ವಾ. ಅವರು ಒಂದು ಸಮುದಾಯಕ್ಕೆ ಮಾತ್ರ ಶಾಸಕರಾ ಎಂದು ರೇಣುಕಾಚಾರ್ಯ ವಿರುದ್ಧ ಎಂಎಲ್ಸಿ ಐವಾನ್ ಡಿಸೋಜಾ ಆಕ್ರೋಶ ವ್ಯಕ್ತಪಡಿಸಿದರು.

 
First published: