ಗೃಹ ಸಚಿವರ ವೈಮಾನಿಕ ಸಮೀಕ್ಷೆ ಜಾಲಿ ಟ್ರಿಪ್​​ ಎಂದ ಐವನ್​​ ಡಿಸೋಜಾ; ಕಾಂಗ್ರೆಸ್​​ ಸದಸ್ಯನ ಮಾತಿಗೆ ಬಿಜೆಪಿ ಕೆಂಡಾಮಂಡಲ

ಸಿಎಂ ಬಿ.ಎಸ್​ ಯಡಿಯೂರಪ್ಪ ಕೇಂದ್ರ ಸರ್ಕಾರದ ಬಳಿ ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಜೊತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​​ ರಾಜ್ಯಕ್ಕಾಗಮಿಸಿ ಪ್ರವಾಹ ಪೀಡಿತ ಪ್ರದೇಶದಲ್ಲಿ ವೈಮಾನಿಕ ಪರೀಕ್ಷೆ ನಡೆಸಿದರು.

news18
Updated:October 10, 2019, 7:56 PM IST
ಗೃಹ ಸಚಿವರ ವೈಮಾನಿಕ ಸಮೀಕ್ಷೆ ಜಾಲಿ ಟ್ರಿಪ್​​ ಎಂದ ಐವನ್​​ ಡಿಸೋಜಾ; ಕಾಂಗ್ರೆಸ್​​ ಸದಸ್ಯನ ಮಾತಿಗೆ ಬಿಜೆಪಿ ಕೆಂಡಾಮಂಡಲ
ಐವನ್​​ ಡಿಸೋಜಾ
news18
Updated: October 10, 2019, 7:56 PM IST
ಬೆಂಗಳೂರು(ಅ.10): ಕೇಂದ್ರ ಗೃಹ ಸಚಿವ ಅಮಿತ್​​ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆಸಿದ ವೈಮಾನಿಕ ಪರೀಕ್ಷೆಯನ್ನು ಜಾಲಿ ಟ್ರಿಪ್​​ ಎಂದು ವಿಧಾನ ಪರಿಷತ್ ಸದಸ್ಯ ಐವನ್​ ಡಿಸೋಜಾ ವ್ಯಂಗ್ಯವಾಡಿದ್ದಾರೆ. 

ಇಂದು ವಿಧಾನ ಪರಿಷತ್ ಕಲಾಪದಲ್ಲಿ ಭಾಷಣದ ವೇಳೆ ಐವನ್​​ ಡಿಸೋಜಾ, ಕೇಂದ್ರ ಗೃಹ ಸಚಿವ ಅಮಿತ್​​ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​​ ವೈಮಾನಿಕ ಪರೀಕ್ಷೆ ಬಗ್ಗೆ ಟೀಕಿಸುವ ಮೂಲಕ ಆಡಳಿತ ಪಕ್ಷದ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೇಂದ್ರ ಗೃಹ ಸಚಿವರ ವೈಮಾನಿಕ ಪರೀಕ್ಷೆಯನ್ನು ಜಾಲಿ ಟ್ರಿಪ್​​ ಎಂದು ಬಣ್ಣಿಸಿದ ಐವನ್​​ ಡಿಸೋಜಾ ನಡೆಗೆ ಭಾರೀ ಆಕ್ರೋಶವೂ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರ ರಾಜ್ಯದ ಪ್ರವಾಹ ಪರಿಸ್ಥಿತಿಗೆ ಪರಿಹಾರ ನೀಡಲು ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರ್ಕಾರ ನೀಡಿದ ಪರಿಹಾರ ಹಾನಿ ಕುರಿತಾದ ವರದಿಯನ್ನು ತಿರಿಸ್ಕರಿಸಲಾಗಿದೆ. ಕೇಂದ್ರ ಗೃಹ ಸಚಿವರು ನಡೆಸಿದ ವೈಮಾನಿಕ ಪರೀಕ್ಷೆಯನ್ನಾದರೂ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಬಹುದಿತ್ತಲ್ಲವೇ. ಒಂದು ವೇಳೆ ಗೃಹ ಸಚಿವರು ವೈಮಾನಿಕ ಪರೀಕ್ಷೆ ಪ್ರಧಾನಿಗೆ ನೀಡಲಿಲ್ಲ ಎಂದ ಮೇಲೆ ಯಾಕೇ ರಾಜ್ಯಕ್ಕೆ ಬರಬೇಕಿತ್ತು ಎಂದು ಪ್ರಶ್ನಿದ್ದಾರೆ.

ಇನ್ನು ವಿಧಾನ ಪರಷತ್​​ ಸದಸ್ಯ ಐವನ್​​ ಡಿಸೋಜಾ ಮಾತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಪಕ್ಷದ ಸದಸ್ಯರು ಕಲಾಪದ ಬಾವಿಗಿಳಿದು ಪ್ರತಿಭಟಿಸಿದ್ದಾರೆ. ಜಾಲಿ ಟ್ರಿಪ್ ಎನ್ನುವುದು ಅಸಂಸದೀಯ ಪದ. ಹಾಗಾಗಿ ಇದನ್ನು ಕಡತದಿಂದ ತೆಗೆಯಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸದನದಲ್ಲಿ ಸಿ.ಟಿ ರವಿ ಟೂರಿಸ್ಟ್​​​ ಮಿನಿಸ್ಟರ್​​​ ಎಂದು ಕಾಲೆಳೆದ ಮಾಜಿ ಸಿಎಂ ಸಿದ್ದರಾಮಯ್ಯ

ಬಿಜೆಪಿ ಸದಸ್ಯರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್​​ ಸದಸ್ಯ ಪ್ರಕಾಶ್ ರಾಥೋಡ್, ಜಾಲಿ ಟ್ರಪ್​​ ಎಂಬುದು ಅಸಂಸದೀಯ ಪದವಲ್ಲ. ಹಾಗಾಗಿ ಇದನ್ನು ಕಡತದಿಂದ ತೆಗೆಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ, ಈ ಪದದ ಬಗ್ಗೆ ನಾನು ಪರಿಶೀಲನೆ ನಡೆಸುತ್ತೇನೆ ಎಂದು ಉಭಯ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಡಿವಾಣ ಹಾಕಿದ್ದಾರೆ.

ಈ ಹಿಂದೆಯೇ ರಾಜ್ಯದ ಜನ ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದರು. ಈ ವೇಳೆ ನೆರೆ ಸಂತ್ರಸ್ತರು ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬೀಳುವಂತಾಯ್ತು. ಸಿಎಂ ಬಿ.ಎಸ್​ ಯಡಿಯೂರಪ್ಪ ಕೇಂದ್ರ ಸರ್ಕಾರದ ಬಳಿ ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಜೊತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​​ ರಾಜ್ಯಕ್ಕಾಗಮಿಸಿ ಪ್ರವಾಹ ಪೀಡಿತ ಪ್ರದೇಶದಲ್ಲಿ ವೈಮಾನಿಕ ಪರೀಕ್ಷೆ ನಡೆಸಿದರು.
Loading...

---------
First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...