HOME » NEWS » State » MLC H VISHWANTH ATTACK HIS OWN BJP PARTY PMTV SESR

ರಾಜ್ಯದಲ್ಲಿರೋದು ಬಿಜೆಪಿ ಸರ್ಕಾರ ಅಲ್ಲ, ಇದು ನ್ಯಾಷನಲ್ ಸರ್ಕಾರ; ಸ್ವಪಕ್ಷದ ವಿರುದ್ದ ವಿಶ್ವನಾಥ್ ವಾಗ್ದಾಳಿ

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯರನ್ನು ಕುಮಾರಸ್ವಾಮಿ ರಕ್ಷಣೆ ಮಾಡುತ್ತಾರೆ. ಕುಮಾರಸ್ವಾಮಿಯವರನ್ನು ಸಿದ್ದರಾಮಯ್ಯ ರಕ್ಷಣೆ ಮಾಡುತ್ತಾರೆ. ಇಬ್ಬರು ಸೇರಿ ಯಡಿಯೂರಪ್ಪರನ್ನ ರಕ್ಷಿಸುತ್ತಿದ್ದಾರೆ, ಇದು ಒಬ್ಬೊರಿಗೊಬ್ಬರು ಮಾಡುತ್ತಿರುವ ಹೊಂದಾಣಿಕೆ ರಾಜಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

news18-kannada
Updated:March 20, 2021, 3:52 PM IST
ರಾಜ್ಯದಲ್ಲಿರೋದು ಬಿಜೆಪಿ ಸರ್ಕಾರ ಅಲ್ಲ, ಇದು ನ್ಯಾಷನಲ್ ಸರ್ಕಾರ; ಸ್ವಪಕ್ಷದ ವಿರುದ್ದ ವಿಶ್ವನಾಥ್ ವಾಗ್ದಾಳಿ
ಹೆಚ್‌. ವಿಶ್ವನಾಥ್.‌
  • Share this:
ಮೈಸೂರು (ಮಾ. 20): ಕಾಂಗ್ರೆಸ್‌ನಲ್ಲಿದ್ದಾಗ ಸ್ವಪಕ್ಷದ ವಿರುದ್ದ ವಾಗ್ದಾಳಿ ಮಾಡಿದ ಎಚ್.ವಿಶ್ವನಾಥ್‌,  ಜೆಡಿಎಸ್‌ ಬಂದಾಗಲೂ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದುಕೊಂಡೆ ಜನತಾದಳದ ನಾಯಕರ‌ ವಿರುದ್ದ ವಾಗ್ದಾಳಿ ಮಾಡಿದ್ದರು. ಇದೀಗ ಬಿಜೆಪಿಯಲ್ಲೂ ಸ್ವಪಕ್ಷದ ವಿರುದ್ದವೇ ಸಿಡಿದೆದ್ದಿರುವ ಹಳ್ಳಿಹಕ್ಕಿ, ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ ಅಲ್ಲ. ಇದು ನ್ಯಾಷನಲ್ ಸರ್ಕಾರ ಎಂದು ಟೀಕಿಸಿದ್ದಾರೆ.  ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯರನ್ನು ಕುಮಾರಸ್ವಾಮಿ ರಕ್ಷಣೆ ಮಾಡುತ್ತಾರೆ. ಕುಮಾರಸ್ವಾಮಿಯವರನ್ನು ಸಿದ್ದರಾಮಯ್ಯ ರಕ್ಷಣೆ ಮಾಡುತ್ತಾರೆ. ಇಬ್ಬರು ಸೇರಿ ಯಡಿಯೂರಪ್ಪರನ್ನ ರಕ್ಷಿಸುತ್ತಿದ್ದಾರೆ, ಇದು ಒಬ್ಬೊರಿಗೊಬ್ಬರು ಮಾಡುತ್ತಿರುವ ಹೊಂದಾಣಿಕೆ ರಾಜಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ನ್ಯಾಷನಲ್ ಗೌರ್ನಮೆಂಟ್ ಚೀಫ್ ಮಿನಿಸ್ಟರ್,  ಯಡಿಯೂರಪ್ಪ ಬುದ್ದಿ ಚಾತುರ್ಯದಿಂದ ಎಲ್ಲರನ್ನು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅವರವರ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಈ ರೀತಿ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ನಾವು ಯಾವ ಪುರುಷಾರ್ಥಕ್ಕೆ ದಂಗೆ ಎದ್ದು ಸರ್ಕಾರ ಬೀಳಿಸಿದ್ವಿ ಎಂದು ಈಗ ಅನಿಸುತ್ತಿದೆ.  ಭ್ರಷ್ಟಾಚಾರ ಅಷ್ಟೇ ಅಲ್ಲ ಈಗಿನ ಸಿಡಿಯಲ್ಲೂ ಹೊಂದಾಣಿಕೆ ನಡೆದಿದೆ. ಸಿದ್ದರಾಮಯ್ಯರ ಅರ್ಕಾವತಿ ಪ್ರಕರಣ ಮುಚ್ಚಿಕೊಳ್ಳಲು, ಕುಮಾರಸ್ವಾಮಿ ಪೋನ್ ಕದ್ದಾಲಿಕೆ ಮುಚ್ಚಿಕೊಳ್ಳಲು ಹೊಂದಾಣಿಕೆ ನಡೆದಿದೆ. ಹಾಗಾಗಿ ಇದೊಂದು ನ್ಯಾಷನಲ್ ಗೌರ್ಮೆಂಟ್ ಎಂದು ತಮ್ಮ ಸರ್ಕಾರದ ವಿರುದ್ದವೇ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರಕ್ಕೆ ಲಸಿಕೆ ಯಾವಾಗ ಎಂಬ ಸಿದ್ದರಾಮಯ್ಯ ಟ್ವೀಟ್​​ಗೆ ಕಿಡಿಕಾರಿ,  ಇದ್ದ ಲೋಕಯುಕ್ತ ಎಂಬ ಲಸಿಕೆಯನ್ನು ನಾಶ ಮಾಡಿದವರು ಯಾರು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ನಿಮ್ಮ ಅರ್ಕಾವತಿ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಲೋಕಾಯುಕ್ತವನ್ನು ಬಾಗಿಲು ಹಾಕಿದರು, ಜನ ಏನು ದಡ್ಡರು ಎಂದು ಕೊಂಡಿದ್ದೀರಾ. ಔಷಧಿ ತಯಾರಿಸುವ ಫ್ಯಾಕ್ಟರಿಯನ್ನೇ ಮುಚ್ಚಿದ್ದೀರಲ್ಲ, ಇನ್ಯಾವಾಗ ಲಸಿಕೆ ಸಿಗುತ್ತೆ ಹೇಳಿ ಅಂತ ತಿರುಗೇಟು ನೀಡಿದರು.

ಇದನ್ನು ಓದಿ: ಶಾಲೆಗಳನ್ನು ಮುಚ್ಚುವುದಿಲ್ಲ; ಸಚಿವ ಸುರೇಶ್​ ಕುಮಾರ್​ ಸ್ಪಷ್ಟನೆ

ಸಿದ್ದರಾಮಯ್ಯ ಅಂಡ್ ಟೀಮ್ ಬ್ರಿಟಿಷರಿದ್ದಂತೆ, ಬ್ರಿಟಿಷರು ಹೇಗೆ ಭಾರತಕ್ಕೆ ಬಂದು ಭಾರತಿಯರನ್ನೆ ಓಡಾಡಿಸಿದರು. ಅದೇ ರೀತಿ ಸಿದ್ದರಾಮಯ್ಯ ಅಂಡ್ ಗ್ಯಾಂಗ್ ಮೂಲ ಕಾಂಗ್ರೆಸಿಗರನ್ನು ಓಡಾಡಿಸುತ್ತಿದೆ. ವಲಸಿಗರೆಲ್ಲ ಸೇರಿ ಮೂಲ ಕಾಂಗ್ರೆಸಿಗರನ್ನು ಮುಗಿಸುತ್ತಿದ್ದಾರೆ.  ರೋಷನ್ ಬೇಗ್ ಹಾದಿಯಾಗಿ ಅಲ್ಪಸಂಖ್ಯಾತರನ್ನು ತುಳಿದರು. ಸಿದ್ದರಾಮಯ್ಯರನ್ನ ಯಾರು ಪ್ರಶ್ನೆ ಮಾಡುವಂತಿಲ್ಲ. ಮೈಸೂರು ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆ ಕಾಂಗ್ರೆಸನ್ನೇ ಮುಗಿಸುವಂತೆ ಕಾಣುತ್ತಿದೆ ಎಂದು ಜಿಲ್ಲೆಯ ಕಾಂಗ್ರೆಸ್‌ ಬೆಳವಣಿಗೆ ಬಗ್ಗೆ ಲೇವಡಿ ಮಾಡಿದರು.

ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಹಳ್ಳಿಹಕ್ಕಿಗೆ ನ್ಯಾಯಾಲಯದ ತೀರ್ಪು ಬೇಸರ ತರಿಸಿದ ಮೇಲೆ, ಮತ್ಯಾವುದಾದರೂ ಹುದ್ದೆಯನ್ನ ಗಿಟ್ಟಿಸಿಕೊಳ್ಳುವುದಕ್ಕಾಗಿ ಈ ರೀತಿ ವಾಗ್ದಾಳಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
Published by: Seema R
First published: March 20, 2021, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories