HOME » NEWS » State » MLC H VISHWANATH STATEMENTS ON JAMBU SAVARI OF DASARA 2020 HK

ಜನ ಸೇರಿಸಿಕೊಂಡು ದಸರಾ ಮಾಡಿದ್ರೆ ಅದು ಜಂಬೂ ಸವಾರಿ ಆಗೋಲ್ಲ ಬಂಬೂ ಸವಾರಿ ಆಗುತ್ತೆ: ಹೆಚ್ ವಿಶ್ವನಾಥ್ ಆತಂಕ

ಜಂಬೂ ಸವಾರಿಗೆ ಎರಡು ಸಾವಿರ ಜನರು ಸೇರಲು ಕೇಂದ್ರಕ್ಕೆ ಅನುಮತಿ‌ ಕೋರಲಾಗಿದೆ. ಒಂದು ವೇಳೆ ಇಷ್ಟು ಜನರಿಗೆ ಅನುಮತಿ‌ ಕೊಟ್ಟರೆ ಇದರ ಸಂಖ್ಯೆ ದೊಡ್ಡದಾಗುತ್ತೆ ಎಂಬ ಆತಂಕ ಎದುರಾಗಿದೆ. ಈ ವೇಳೆ‌ ಇದು ಜಂಬೂ ಸವಾರಿ ಆಗಲ್ಲ, ಬದಲಿಗೆ ಕೋವಿಡ್ ಬಂಬೂ ಸವಾರಿ ಆಗಲಿದೆ‌ ಎಂದು ಕಳವಳ ವ್ಯಕ್ತಪಡಿಸಿದ್ದಾರೆ

news18-kannada
Updated:October 5, 2020, 6:04 PM IST
ಜನ ಸೇರಿಸಿಕೊಂಡು ದಸರಾ ಮಾಡಿದ್ರೆ ಅದು ಜಂಬೂ ಸವಾರಿ ಆಗೋಲ್ಲ ಬಂಬೂ ಸವಾರಿ ಆಗುತ್ತೆ: ಹೆಚ್ ವಿಶ್ವನಾಥ್ ಆತಂಕ
ಹೆಚ್. ವಿಶ್ವನಾಥ್
  • Share this:
ಮೈಸೂರು(ಅಕ್ಟೋಬರ್​. 05): ನಾಡಹಬ್ಬ ದಸರೆಗೆ ದಿನಗಣನೆ ಪ್ರಾರಂಭವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಮಾಡಬೇಕು ಅಂತ ಸರ್ಕಾರ ಕೂಡ ನಿರ್ಧಾರ ಮಾಡಿದೆ. ಆದರೆ, ಈಗ ಸರಳ ದಸರಾಕ್ಕು ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಸರಳವಾಗಿ ಆಚರಣೆ ಮಾಡಿದರು ಸಮಸ್ಯೆ ಎದುರಾಗುವ ಆತಂಕ ಎದುರಾಗಿದೆ. ಹೀಗೆ ಎರಡು ಸಾವಿರ ಮಂದಿಯನ್ನ ಸೇರಿಸಿಕೊಂಡ್ರೆ ಜಂಬೂ ಸವಾರಿ ಆಗಲ್ಲ. ಅದು ಕೋವಿಡ್‌ನಿಂದ ಬಂಬೂ ಸವಾರಿಯಾಗುತ್ತೆ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್.ವಿಶ್ವನಾಥ್ ಆತಂಕ ಹೊರಹಾಕಿದ್ದಾರೆ. ಈ‌ ನಡುವೆ ಸಚಿವರು ಕೂಡ ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನಾಡಹಬ್ಬ ದಸರಾ ಅಂದ್ರೆ ಸಾಕು ಮೈಸೂರಿನಲ್ಲಿ ಜನಜಾತ್ರೆಯೇ ಸೇರುತ್ತೆ. ಆದರೆ, ಕೋವಿಡ್‌ನಿಂದ ಈ ಬಾರಿ ದಸರಾವನ್ನ ಸರಳವಾಗಿ ಆಚರಣೆ ಮಾಡಬೇಕು ಅಂತ ಸರ್ಕಾರ ನಿರ್ಧಾರ ಮಾಡಿದ್ದು, ದಸರಾಕ್ಕೆ ದಿನಗಣನೆ ಪ್ರಾರಂಭವಾಗಿದೆ. ಈ‌ ನಡುವೆ ಗಜಪಡೆ ಕೂಡ ಮೈಸೂರಿನ ಅರಮನೆ ಅಂಗಳಕ್ಕೆ ಎಂಟ್ರಿ ಕೊಟ್ಟು ತಾಲೀಮು ಶುರು ಮಾಡಿದೆ.

ಆದರೆ, ಈಗ ಈ ಸರಳ ದಸರಾಕ್ಕು ಸಾಕಷ್ಟು ಆಕ್ಷೇಪ ವ್ಯಕ್ತವಾಗುತ್ತಿದ್ದು, ಈಗಾಗಲೇ ಮೈಸೂರಿನಲ್ಲಿ ದೀಪಾಲಂಕಾರದ ಕೆಲಸವು ಶುರುವಾಗಿದೆ. ಇದರಿಂದಲೂ ಸಾಕಷ್ಟು ಜನರು ಸೇರುವ ಆತಂಕ ಎದುರಾಗಿದ್ದು, ಅದರಲ್ಲು ದಸರಾ ಸಂಧರ್ಭದಲ್ಲಿ ಅರಮನೆ ಆವರಣದಲ್ಲಿ ಎರಡು ಸಾವಿರ ಜನರನ್ನು ಸೇರಿಸಿ ಕಾರ್ಯಕ್ರಮವನ್ನು ಮಾಡುವ ನಿರ್ಧಾರ ಕೈಗೊಂಡಿರುವುದು ದೊಡ್ಡ ಸಮಸ್ಯೆಗೆ ಆಹ್ವಾನ ನೀಡುವ ಮೂನ್ಸೂಚನೆ ನೀಡಿದೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್, ಜಂಬೂ ಸವಾರಿಗೆ ಎರಡು ಸಾವಿರ ಜನರು ಸೇರಲು ಕೇಂದ್ರಕ್ಕೆ ಅನುಮತಿ‌ ಕೋರಲಾಗಿದೆ. ಒಂದು ವೇಳೆ ಇಷ್ಟು ಜನರಿಗೆ ಅನುಮತಿ‌ ಕೊಟ್ಟರೆ ಇದರ ಸಂಖ್ಯೆ ದೊಡ್ಡದಾಗುತ್ತೆ ಎಂಬ ಆತಂಕ ಎದುರಾಗಿದೆ. ಈ ವೇಳೆ‌ ಇದು ಜಂಬೂ ಸವಾರಿ ಆಗಲ್ಲ, ಬದಲಿಗೆ ಕೋವಿಡ್ ಬಂಬೂ ಸವಾರಿ ಆಗಲಿದೆ‌ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ಕೇವಲ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಹಾಗೂ ಜಂಬೂ ಸವಾರಿಗೆ ಸಾಂಪ್ರದಾಯಿಕ ಪುಷ್ಪಾರ್ಚನೆ ಮಾಡಿದ್ರೆ ಸಾಕು ಎಂದು ಸಲಹೆ ನೀಡಿದ್ದಾರೆ.

ಇನ್ನು ಈಗಾಗಲೇ ಮೈಸೂರಿನಲ್ಲಿ ಕೊರೋನಾ ನಿಯಂತ್ರಣ ತಪ್ಪಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಸೇರಿಸಿ ದಸರಾವನ್ನು ಆಚರಣೆ ಮಾಡಿದ್ರೆ ದೊಡ್ಡ ಮಟ್ಟದಲ್ಲಿ ಕೊರೋನಾ ಹಂಚಿಕೆಯಾಗುತ್ತೆ ಎಂಬ ಆತಂಕ ಎಲ್ಲರದ್ದು. ಅದರಲ್ಲು ಕೇರಳದಲ್ಲಿ ಓಣಂ ಆಚರಣೆಯಿಂದ ಕೊರೋನಾ ಹೆಚ್ಚಾಗಿರುವ ಉದಾಹರಣೆ ಸಹ ಇದೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಇದನ್ನೂ ಓದಿ : ಉಪ ಚುನಾವಣೆಯಲ್ಲಿ ಸೋಲುವ ಭೀತಿ - ಡಿಕೆಶಿ ಮೇಲೆ ಬಿಜೆಪಿ ಪ್ರಾಯೋಜಿತ ದಾಳಿ ; ಅಜಯಸಿಂಗ್

ಈ ಕಾರಣದಿಂದ ಇಂದು ಕೂಡ ವೈದ್ಯಕೀಯ ಸಚಿವರು ಈ ಬಗ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ವಿವರಣೆ ಪಡೆದಿದ್ದಾರೆ. ಈ ಬಗ್ಗೆ ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಿ ದಸರಾ ಆಚರಣೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸಚಿವ ಸುಧಾಕರ್ ಹೇಳಿದ್ದಾರೆ.
ಒಟ್ಟಾರೆ ಈಗಾಗಲೇ ದಸರಾ ಸಿದ್ದತೆ ಭರದಿಂದ ನಡೆಯುತ್ತಿದ್ರೆ, ಮತ್ತೊಂದೆಡೆ ಕೊರೋನಾ ಪ್ರಕರಣಗಳು ಮೈಸೂರಿನಲ್ಲಿ ದಿನೆ ದಿನೆ ಹೆಚ್ಚಾಗುತ್ತ ಆತಂಕ ಸೃಷ್ಟಿಸಿದೆ. ಇದರಿಂದ ದಸರಾ ಕೇವಲ ಸರಳವಾಗಿ ಮಾಡಲು ಮಾತ್ರ ಸೀಮಿತ ಮಾಡಿದ್ರೆ ಮಾತ್ರ ಕೊರೋನಾ ಕಟ್ಟಿ ಹಾಕಕುವುದಕ್ಕೆ ಸಾಧ್ಯ ಎಂಬುದು ಸಾಮಾನ್ಯ ಜನರು ಹಾಗೂ ಜನಪ್ರತಿನಿಧಿಗಳ ಮಾತು.
Published by: G Hareeshkumar
First published: October 5, 2020, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories