Karnataka Politics: ಅಪ್ಪ ಬಿಜೆಪಿ ಕಡೆ, ಮಗ ಕಾಂಗ್ರೆಸ್ ಕಡೆ! ಏನಿದು ‘ಹಳ್ಳಿಹಕ್ಕಿ’ ಮ್ಯಾಚ್ ಫಿಕ್ಸಿಂಗ್?

ನಂಜನಗೂಡು ತಾಲೂಕಿನ ತಗಡೂರಿನಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮದಲ್ಲಿ ಸೋಮವಾರ ಪಾಲ್ಗೊಂಡಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಪೂರ್ವಜ್ ವಿಶ್ವನಾಥ್, ಪಕ್ಷ ಸೇರುವ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಕಾಂಗ್ರೆಸ್​ ಸೇರಲಿದ್ದಾರೆ ಹೆಚ್​ ವಿಶ್ವನಾಥ್ ಪುತ್ರ

ಕಾಂಗ್ರೆಸ್​ ಸೇರಲಿದ್ದಾರೆ ಹೆಚ್​ ವಿಶ್ವನಾಥ್ ಪುತ್ರ

  • Share this:
ಮೈಸೂರು (ಆ.08): ಜೆಡಿಎಸ್​ನಿಂದ (JDS) ಬಿಜೆಪಿಗೆ ಹಾರಿದ ಹಳ್ಳಿಹಕ್ಕಿ H​. ವಿಶ್ವನಾಥ್ (H Vishwanth)​, ಸಮಿಶ್ರ ಸರ್ಕಾರ (Coalition Government) ಕೆಡವುವಲ್ಲಿ ಕೂಡ ಮಹತ್ವದ ಪಾತ್ರವಹಿಸಿದ್ರು.  ಬಿಜೆಪಿ ಸೇರಿದ ಬಳಿಕ ವಿಧಾನಪರಿಷತ್‌ ಸದಸ್ಯ ಹೆಚ್.ವಿಶ್ವನಾಥ್ ಬಿಜೆಪಿಯಲ್ಲಿ ತನ್ನ ಸ್ಥಾನ ಬಲಪಡಿಸಿಕೊಂಡಿದ್ದು, ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿದ್ದಾರೆ. ಬಾಯ್ಬಿಟ್ರೆ ಕಾಂಗ್ರೆಸ್​ ಬಗ್ಗೆ ಕಿಡಿಕಾರುವ ಹೆಚ್ ವಿಶ್ವನಾಥ್, ಇದೀಗ ಮಗನಿಗೆ ಕಾಂಗ್ರೆಸ್ ಪಕ್ಷ ಸೇರಲು ಗ್ರೀನ್​ ಸಿಗ್ನಲ್​  (Green Signal) ಕೊಟ್ಟಿದ್ದಾರಂತೆ. ಈ ಅನಿರೀಕ್ಷಿತ ಬೆಳವಣಿಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ

ಶೀಘ್ರದಲ್ಲೇ ಪೂರ್ವಜ್ ವಿಶ್ವನಾಥ್ ಕಾಂಗ್ರೆಸ್​

ಕಾಂಗ್ರೆಸ್​ ಕೈ ಹಿಡಿಯಲು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎಚ್​ ವಿಶ್ವನಾಥ್​ ಪುತ್ರ ಪೂರ್ವಜ್ ವಿಶ್ವನಾಥ್ ತುದಿಗಾಲಿನಲ್ಲಿ ನಿಂತಿದ್ದಾರೆ. ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದೇನೆ ಸ್ವತಃ ಪೂರ್ವಜ್ ವಿಶ್ವನಾಥ್ ಅವರೇ ಹೇಳಿದ್ದಾರೆ. 

H Vishwanath slam vhp bajaraga dal for Communal Crisis in karnataka
ಹೆಚ್​ ವಿಶ್ವನಾಥ್​


ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ

ನಂಜನಗೂಡು ತಾಲೂಕಿನ ತಗಡೂರಿನಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮದಲ್ಲಿ ಸೋಮವಾರ ಪಾಲ್ಗೊಂಡಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಪೂರ್ವಜ್ ವಿಶ್ವನಾಥ್, ಪಕ್ಷ ಸೇರುವ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ನಿನ್ನಿಷ್ಟ ಎಂದಿದ್ದಾರಂತೆ ವಿಶ್ವನಾಥ್​

ತಂದೆ ವಿಶ್ವನಾಥ್ ಅವರಿಗೂ ತಿಳಿಸಿದ್ದೇನೆ. ನಿನ್ನಿಷ್ಟ ಎಂದಿದ್ದಾರೆ. ಸಿದ್ದರಾಮಯ್ಯ ಕೈ ಬಲಪಡಿಸಲು ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಿರುವೆ. ದಾವಣಗೆರೆ ಕಾರ್ಯಕ್ರಮಕ್ಕೂ ಹೋಗಿದ್ದೆ. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ವಿಶ್ವಾಸವಿದೆ ಎಂದು ಹೇಳಿದರು.

ಇದನ್ನೂ ಓದಿ: Free Scheme: ಆಮ್‌ ಆದ್ಮಿಯಿಂದ ಗುಜರಾತ್ ಮತದಾರರಿಗೆ ಉಚಿತ ಕೊಡುಗೆ! ಫ್ರೀ ಸ್ಕೀಮ್‌ನಿಂದ ನಷ್ಟ ಯಾರಿಗೆ?

ಸಿದ್ದು ಕೈ ಬಲಪಡಿಸಲಿದ್ದಾರಾ  ಪೂರ್ವಜ್ ವಿಶ್ವನಾಥ್

ಅಪ್ಪ ನೋಡಿದ್ರೆ  ಸಿದ್ದರಾಮಯ್ಯ ವಿರುದ್ಧ ಕೆಂಡಾಕಾರುತ್ತಾರೆ. ಇತ್ತ ಮಗ  ಸಿದ್ದರಾಮಯ್ಯ ಕೈ ಬಲಪಡಿಸಲು ಕಾಂಗ್ರೆಸ್​ಗೆ ಸೇರುತ್ತಿದ್ದಾರೆ. ಈ ವಿಚಾರ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಏನಿದು ಅಪ್ಪ-ಮಗನ ಹೊಸ ಆಟ ಅನ್ನೋ ಮಾತುಗಳು ಸಹ ಕೇಳಿಬರ್ತಿದೆ.

ಲೋಕಾಯುಕ್ತ ಬಲಪಡಿಸಬೇಕು ಎಂದ ವಿಶ್ವನಾಥ್​


ಲೋಕಾಯುಕ್ತಕ್ಕೆ ಮೂಲ ಸ್ವರೂಪ ‌ನೀಡಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವ ನಾಯಕರು ಮುಂದಾಗುತ್ತಿಲ್ಲ. ಏಕೆಂದರೆ ಮೂರು ಪಕ್ಷಗಳ ನಾಯಕರಿಗೂ ಲೋಕಾಯುಕ್ತದ ಬಗ್ಗೆ ಭಯವಿದೆ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ನುಡಿದರು.

ಮೈಸೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಗ್ರಹ ಮಾಡುವ ನಿಟ್ಟಿನಲ್ಲಿ ಹೈಕೋರ್ಟ್ ಬೀಸಿದ ಚಾಟಿಯಿಂದಾಗಿ ಓರ್ವ ಜಿಲ್ಲಾಧಿಕಾರಿ, ಓರ್ವ ಐಪಿಎಸ್ ಅಧಿಕಾರಿಯೇ ಜೈಲು ಸೇರಿದ್ದಾರೆ. ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆಂದು ನಾಡಿನ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದಾರೆ. ಇದು ಜನ ಸಾಮಾನ್ಯರಲ್ಲಿ ನ್ಯಾಯಾಂಗದ ಬಗ್ಗೆ ನಂಬಿಕೆ ಹುಟ್ಟಿಸಿದೆ. ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ‌ ಎಂದರು.


15 ಜನರಿಗೆ ಎಷ್ಟು ಕೋಟಿ..?

ನನ್ನ ಸಂಪರ್ಕದಲ್ಲಿ ಬೇರೆ ಪಕ್ಷದ ಶಾಸಕರು ಸಚಿವರು ಇದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಮಿಸ್ಟರ್ ಸಿದ್ದರಾಮಯ್ಯ, 15ಜನರಿಗೆ ಎಷ್ಟು ಕೋಟಿ ಕೊಟ್ಟು ಖರೀದಿ ಮಾಡುತ್ತಿದ್ದೀರಾ..? ನಾವು 17ಜನ ಹೋದಾಗ ಏನೇಲ್ಲಾ ಮಾತನಾಡಿದಿರಿ..? ರಮೇಶ್ ಕುಮಾರ್ ಕೈಲಿ ಏನೆಲ್ಲಾ ಮಾಡಿಸಿದಿರಿ. ಜನರನ್ನು ದಡ್ಡರು ಅಂದುಕೊಂಡಿದ್ದೀರಾ..? ಅವರಿಗೆ ಎಲ್ಲಾ ಗೊತ್ತಿದೆ ನಿಮಗೆ ಪಾಠ ಕಲಿಸುತ್ತಾರೆ ಅಂತ ಹೇಳಿದ್ರು.

ಇದನ್ನೂ ಓದಿ: Suicide: ಬೆಂಗಳೂರಿನಲ್ಲಿ ಮಹಿಳಾ ಡಾಕ್ಟರ್, ಮಗಳು ನಿಗೂಢ ಸಾವು
 ಶಾಸಕಾಂಗ, ಕಾರ್ಯಾಂಗ ವಿಫಲವಾದಾಗ ನ್ಯಾಯಾಂಗ ತನ್ನ ಮಹತ್ವದ ಕಾರ್ಯ ಮಾಡಿ ತೋರಿಸಿದೆ. ಭ್ರಷ್ಟಾಚಾರ ನಿಗ್ರಹ ದಳ, ಸಿಒಡಿಗೆ ಮುಕ್ತ ಅವಕಾಶ ನೀಡಿದ್ದರಿಂದ 30 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಜೈಲು ಪಾಲಾಗಿದ್ದಾರೆ ಎಂದವರು ತಿಳಿಸಿದರು.
Published by:Pavana HS
First published: