H Vishwanatah: ಅಕ್ಷರ ವಿಚಾರದಲ್ಲಿ ಸರ್ಕಾರ ಹಠ ಮಾಡೋದು ಬೇಡ; ಬಾಂಬೆ ಡೇಸ್ ಹೆಸರು ಬದಲಿಸಿದ್ರು ಹೆಚ್ ವಿಶ್ವನಾಥ್

ಅದು ಬಾಂಬೆ ಡೇಸ್ ಅಲ್ಲ. ಬದಲಾಗಿ ಕಾಶ್ಮೀರ್ ಫೈಲ್ಸ್ ರೀತಿಯ ಬಾಂಬೆ ಫೈಲ್ಸ್ ಅಂತಾ ಬದಲಾಯಿಸಿದ್ದೇನೆ. ಈ ವರ್ಷದ ಒಳಗೆ ಪುಸ್ತಕ ಬಿಡುಗಡೆ ಆಗುತ್ತದೆ. ಅದು ಬಾಂಬ್ ಅಲ್ಲ, ವಾಸ್ತವ ಸತ್ಯ ಎಂದರು.

ಹೆಚ್ ವಿಶ್ವನಾಥ್

ಹೆಚ್ ವಿಶ್ವನಾಥ್

  • Share this:
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ MLC ಹೆಚ್ ವಿಶ್ವನಾಥ್ (MLC H Vishwanath) ಹಲವು ವಿಚಾರಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಕ್ಷರದ ವಿಚಾರದಲ್ಲಿ ಸರ್ಕಾರ ಹಠ ಮಾಡೋದು ಬೇಡ. ರೋಹಿತ್ ಚಕ್ರತೀರ್ಥ (Rohit Chakratirtha) ಸಮಿತಿ ಮಾಡಿರುವ ಪರಿಕ್ಷರಣೆಗೆ ಇಡೀ ನಾಡು ವಿರೋಧ ವ್ಯಕ್ತಪಡಿಸಿದೆ. ಜನಾಭಿಪ್ರಾಯಕ್ಕೆ ಸರ್ಕಾರ ಮನ್ನಣೆ ಕೊಡಬೇಕು. ನಾವು ಮಾಡಿದ್ದನ್ನೇ ಮಾಡುತ್ತೆವೆ ಅಂತ ಹಠ ಮಾಡೋದು ಸರಿಯಲ್ಲ ಎಂದು ಸರ್ಕಾರಕ್ಕೆ (Government) ಸಲಹೆ ನೀಡಿದರು. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ  (Education System) ಹಾಳಾಗುತ್ತಿದ್ದೆ. ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಮಾತನಾಡಬೇಕು. ಯಾರೋ ಕಂದಾಯ ಮಂತ್ರಿ, ನಗರಾಭಿವೃದ್ಧಿ ಮಂತ್ರಿ ಮಾತನಾಡ್ತಾರೆ  ಅಂದ್ರೆ ಏನ್ ಅರ್ಥ ಎಂದು ಪ್ರಶ್ನೆ ಮಾಡಿದರು.

ಈ ಬಾರಿ ಬರಗೂರು ರಾಮಚಂದ್ರ ನೇತೃತ್ವದ ಪಠ್ಯಗಳನ್ನೇ ಮುಂದುವರಿಸಬೇಕು. ಸರ್ಕಾರ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕು. ಸಾಹಿತಿಗಳು, ಪೋಷಕರು, ತಜ್ಞರು, ಸೇರಿದಂತೆ ಒಂದು ವಿಸ್ತಾರ ಸಮಿತಿ ರಚಿಸಬೇಕು. ಸಮಿತಿಯಲ್ಲಿ ಚರ್ಚೆ ಮಾಡಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲವನ್ನ ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ವಾಧಿಕಾರಿಗಳಾದರೆ ಹೀಗೆ ಆಗುತ್ತೆ

ಮಹಾರಾಷ್ಟ್ರದಲ್ಲಿ ಸರಕಾರ (Maharashtra Politics Crisis) ಅಸ್ಥಿರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಆಗಿದ್ದು, ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ. ಸಿಎಂ ಉದ್ಭವ್ ಠಾಕ್ರೆ ನಡವಳಿಕೆಯೆ ಇದಕ್ಕೆ ಕಾರಣ. ಸಿಎಂ ಆದ್ಮೇಲೆ  ಸರ್ವಾಧಿಕಾರಿಗಳಾದರೆ ಹೀಗೆ ಆಗುತ್ತದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ದರ್ಪ, ದೌರ್ಜನ್ಯದಿಂದ ಇಲ್ಲಿನ ಶಾಸಕರು ದಂಗೆ ಎದ್ದರು. ಇದೇ ಕೆಲಸ ಮಹಾರಾಷ್ಟ್ರದಲ್ಲೂ ಆಗುತ್ತಿದೆ. ಶಾಸಕರ ಸ್ವಾಭಿಮಾನ ಕೆಣಕಿದ್ದಾಗ ಈ ರೀತಿಯ ಕ್ಷಿಪ್ರ ರಾಜಕೀಯ ಕ್ರಾಂತಿ ಆಗುತ್ತದೆ ಎಂದು ನುಡಿದರು.

ಇದನ್ನೂ ಓದಿ:  JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?

ಬಾಂಬೆ ಡೇಸ್ ಹೆಸರು ಬದಲಿಸಿದ ಹಳ್ಳಿ ಹಕ್ಕಿ

ಅದು ಬಾಂಬೆ ಡೇಸ್ ಅಲ್ಲ. ಬದಲಾಗಿ ಕಾಶ್ಮೀರ್ ಫೈಲ್ಸ್ ರೀತಿಯ ಬಾಂಬೆ ಫೈಲ್ಸ್ ಅಂತಾ ಬದಲಾಯಿಸಿದ್ದೇನೆ. ಈ ವರ್ಷದ ಒಳಗೆ ಪುಸ್ತಕ ಬಿಡುಗಡೆ ಆಗುತ್ತದೆ. ಅದು ಬಾಂಬ್ ಅಲ್ಲ, ವಾಸ್ತವ ಸತ್ಯ ಎಂದರು.

ಮೋದಿ ಅವರೇ ನಮ್ಮೂರಿಗೆ ಬಂದರೂ ನಮಗೆ ಏನೂ ಬೇಕು ಅಂತಾ ಒಂದು ಮನವಿ ಕೊಡದೇ ಇರೋದು ಬೇಸರ. ಮೋದಿ ಅವರ ಬಳಿ ಕೇಳಲು ಧೈರ್ಯ ಯಾಕೆ ಬೇಕು.‌ ಅವರೇನೂ ಸಿಂಹವೇ? ಇಂದಿರಾಗಾಂಧಿ ಬಳಿ ಕೇಳಲೂ ಕಾಂಗ್ರೆಸ್ ಗೆ ಧೈರ್ಯವಿತ್ತಾ ಎಂದು ಹೆಚ್.ವಿಶ್ವನಾಥ್ ವ್ಯಂಗ್ಯ ಮಾಡಿದರು.

ತುರ್ತುಪರಿಸ್ಥಿತಿ ಕರ್ನಾಟಕದಲ್ಲಿ ಅಭಿವೃದ್ಧಿ ಯುಗವಾಗಿತ್ತು. ತುರ್ತು ಪರಿಸ್ಥಿತಿಯನ್ನು ದೇವರಾಜ ಅರಸು ರಾಜ್ಯದ ಅಭಿವೃದ್ಧಿಗೆ ಬಳಸಿಕೊಂಡರು. ಕೆಟ್ಟ ಕಾನೂನನ್ನು ಒಳ್ಳೆಯ ರೀತಿ ಬಳಸಿಕೊಂಡರು. ತುರ್ತುಪರಿಸ್ಥಿತಿಯಿಂದ ಕರ್ನಾಟಕಕ್ಕೆ ಒಳ್ಳೆಯದಾಯಿತು ಎಂದರು.

ಅವರ ಮಾತುಗಳಲ್ಲಿ ರಾಜಕೀಯ ದುರ್ನಾತ

ಪಠ್ಯ ಪರಿಷ್ಕರಣೆ ಪರ ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಬ್ಯಾಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಎಸ್.ಎಲ್. ಭೈರಪ್ಪ ಅವರು ದೊಡ್ಡ ಸಾಹಿತಿ. ಆದರೆ ಅವರು ಬಿಜೆಪಿ ವಕ್ತಾರರ ರೀತಿ ಮಾತಾಡುತ್ತಿದ್ದಾರೆ. ಅವರ ಮಾತುಗಳಲ್ಲಿ ರಾಜಕೀಯ ದುರ್ನಾತ ಬರುತ್ತಿದೆ. ಹಿರಿಯ ಸಾಹಿತಿಗಳು ಒಂದು ಪಕ್ಷದ ವಕ್ತಾರರ ರೀತಿ ಮಾತಾಡುವುದು ಅವರಿಗೆ ಶೋಭೆ ತರಲ್ಲ ಎಂದು ಹೆಚ್ ವಿಶ್ವನಾಥ್ ಅಸಮಾಧಾನ ಹೊರ ಹಾಕಿದರು.

ಇದನ್ನೂ ಓದಿ:  BRTS Chigari: ಬರೋಬ್ಬರಿ ₹970 ಕೋಟಿ ಖರ್ಚು ಮಾಡಿ ರಸ್ತೆ ಮಾಡಿದ್ರು, ಮೂರೇ ವರ್ಷದಲ್ಲಿ ಮತ್ತೆ 70 ಕೋಟಿ ವೆಚ್ಚ!

ಅಗ್ನಿಪಥ್ ಯೋಜನೆಯನ್ನು ವಿಪಕ್ಷಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಎಲ್ಲದಕ್ಕೂ RSS ಲಿಂಕ್ ಮಾಡೋದು ಸರಿಯಲ್ಲ ಎಂದು ಹೇಳಿದುರ.
Published by:Mahmadrafik K
First published: