• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • H Vishwanath: ರಕ್ತದ ಕಣ ಕಣದಲ್ಲೂ ಕಾಂಗ್ರೆಸ್, ಬಿಜೆಪಿ ತೊರೆಯಲು ಸಿದ್ಧ; ಹೆಚ್ ವಿಶ್ವನಾಥ್

H Vishwanath: ರಕ್ತದ ಕಣ ಕಣದಲ್ಲೂ ಕಾಂಗ್ರೆಸ್, ಬಿಜೆಪಿ ತೊರೆಯಲು ಸಿದ್ಧ; ಹೆಚ್ ವಿಶ್ವನಾಥ್

ಎಚ್​ ವಿಶ್ವನಾಥ್​

ಎಚ್​ ವಿಶ್ವನಾಥ್​

ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ. ನಾನು ಹಿಡಿಯುವ ಧ್ವಜ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ. ಆದರೆ ನನ್ನ ತತ್ವ ಸಿದ್ದಾಂತಗಳು ಎಂದಿಗೂ ಬದಲಾಗಿಲ್ಲ. ಬಿಜೆಪಿ ತೊರೆಯುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.

  • Share this:

ಮೈಸೂರು: ಸಿಡಿ ರಾಜಕಾರಣ ತಾರಕಕ್ಕೇರಿರುವುದಕ್ಕೆ ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ (BJP MLC H Vishwanath) ಬೇಸರ ವ್ಯಕ್ತಪಡಿಸಿದ್ದಾರೆ. ನೀನು ಅಧಿಕಾರದಲ್ಲಿದ್ದಾಗ, ಮಂತ್ರಿ ಆಗಿದ್ದಾಗ ಏನು ಮಾಡಿದೆ ಎಂದು ಪ್ರಶ್ನಿಸಿದ ಹೆಚ್.ವಿಶ್ವನಾಥ್. ಅದು ಬಿಟ್ಟು ನೀನು ಅಲ್ಲಿ ಮಲಗಿದ್ದೆ, ಇಲ್ಲಿ ಮಲಗಿದ್ದೇ ಎಂದು ಮಾತನಾಡುವುದು ಸರಿಯಲ್ಲ. ಎಲ್ಲರಿಗೂ ಅವರವರದೇ ಆದ ವೈಯಕ್ತಿಕ ಬದುಕು ಇರುತ್ತದೆ.ವೈಯುಕ್ತಿಕ ಟೀಕೆಗೆ ತೂ ತೂ ಎಂದು ಕಿಡಿಕಾರಿದರು. ಭದ್ರಾವತಿಯಲ್ಲಿರುವ (Bhadravati) ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚಲು ಸರ್ಕಾರ ಹೊರಟಿದೆ. ಭದ್ರಾವತಿ ಉಕ್ಕು ಕಾರ್ಖಾನೆ ಲಾಭದಲ್ಲಿದ್ದರೂ ಮುಚ್ಚಲು ಹೊರಟಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (CM BS Yediyurappa) ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.


ಆ ಭಾಗದ ಸಂಸದರು ಶಾಸಕರು ಏಕೆ ಸುಮ್ಮನಿದ್ದೀರಿ? ಮೋದಿ, ಅಮಿತ್ ಶಾ ಸೇರಿಕೊಂಡು ಕರ್ನಾಟಕದ ಎಲ್ಲಾ ಆಸ್ತಿಗಳನ್ನು ಒಂದೊಂದಾಗಿ ಗುಜರಾತ್ ಮಾರ್ವಾಡಿಗಳಿಗೆ ಕೊಡುತ್ತಿದ್ದಾರೆ. ಭದ್ರಾವತಿ ವಿಧಾನಸಭೆ ಕ್ಷೇತ್ರದಲ್ಲಿ ಇದುವರೆಗೂ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ. ಹಾಗಾಗಿ ಭದ್ರಾವತಿ ಕಂಡರೆ ಬಿಜೆಪಿಯವರಿಗೆ ಆಗುವುದಿಲ್ಲ. ಇದಕ್ಕೇನಾ ರಾಜ್ಯದಲ್ಲಿ 25 ಎಂಪಿಗಳನ್ನು ರಾಜ್ಯದ ಜನರು ಬಿಜೆಪಿಗೆ ಕೊಟ್ಟಿರೋದು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.


ಬಿಜೆಪಿ ತೊರೆಯುವ ಕಾಲ ಸನ್ನಿಹಿತ


ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ. ನಾನು ಹಿಡಿಯುವ ಧ್ವಜ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ. ಆದರೆ ನನ್ನ ತತ್ವ ಸಿದ್ದಾಂತಗಳು ಎಂದಿಗೂ ಬದಲಾಗಿಲ್ಲ. ಬಿಜೆಪಿ ತೊರೆಯುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.


ಬಿಜೆಪಿಯಿಂದ ಹಣ ಪಡೆದು ಸರ್ಕಾರ ತಂದಿದ್ದರೆ ಹೀಗೆ ಹೇಳಲು ಸಾಧ್ಯವಿತ್ತಾ? ಐ ಆಮ್ ಕ್ಲೀನ್ ಮ್ಯಾನ್ ಎಂದ ವಿಶ್ವನಾಥ್, ನಾನು ಇಷ್ಟು ವರ್ಷ ರಾಜಕಾರಣದಲ್ಲಿದ್ದರೂ ಚಿಕ್ಕ ಮನೆಯಲ್ಲಿಯೇ ವಾಸವಾಗಿದ್ದೇನೆ. ಅಪ್ಪನಿಂದ ಬಂದ ಜಮೀನಿನಲ್ಲಿಯೇ ದುಡಿದು ಮಕ್ಕಳನ್ನು ಓದಿಸಿದ್ದೇನೆ ಎಂದು ಹೇಳಿದರು.


ಬಜೆಟ್ ಬಗ್ಗೆ ವಿಶ್ವನಾಥ್ ಪ್ರತಿಕ್ರಿಯೆ


ಈ ವರ್ಷದ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಪ್ರಮುಖ ಅಂಶಗಳಾದ ಅನ್ನ, ಅಕ್ಷರ, ಆರೋಗ್ಯವನ್ನೇ ಕಡೆಗಣಿಸಲಾಗಿದೆ ಎಂದು ಬೇಸರ ಹೊರ ಹಾಕಿದರು. ದೇಶಕ್ಕೆ ವಿಮಾನ ನಿಲ್ದಾಣಕ್ಕಿಂತ ಅಕ್ಷರ, ಅನ್ನ ಮತ್ತು ಆರೋಗ್ಯ ಬೇಕಿದೆ. ಆದರೆ ಮೋದಿ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದು ಬಜೆಟ್ ಕುರಿತು ಪ್ರತಿಕ್ರಿಯಿಸಿದರು.




ದೇಶ ಎಲ್ಲಾ ಕ್ಷೇತ್ರಗಳಲ್ಲಯೂ ಹಿಂದುಳಿಯುತ್ತಿದೆ. ದೇಶಕ್ಕೆ ಏನು ಬೇಕು ಅನ್ನೋದು ಕೇಂದ್ರ ಸರ್ಕಾರಕ್ಕೆ ಆರ್ಥವಾಗುತ್ತಿಲ್ಲ ಎಂದರು.


ಅಮಿತ್ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ


ಸಿಡಿ ಪ್ರಕರಣವನ್ನು (CD Case) ತಾರ್ಕಿಕ ಅಂತ್ಯಕ್ಕೆ ಕೊಂಡ್ಯೊಯಲು ನಿರ್ಧರಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.


ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿರುವ ಅಮಿತ್ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ಜೊತೆಯಲ್ಲಿರುವ ರಮೇಶ್ ಜಾರಕಿಹೊಳಿ ಇತರೆ ಮುಖಂಡರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಇನ್ನು ಎರಡು ದಿನ ನವದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ:   Pramod Mutalik: ಈ ಬಾರಿ ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಚುನಾವಣೆಗೆ ನಿಲ್ತಾರೆ, ಬಿಜೆಪಿ ಅಭ್ಯರ್ಥಿ ಹಾಕಬಾರದು: ಶ್ರೀರಾಮ ಸೇನೆ


ಸುಮಾರು 20 ನಿಮಿಷ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ನೀಡುತ್ತೇನೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು