• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ನಾವು ಯಾರನ್ನು ವಿರೋಧಿಸಿ ಬಂದೆವೋ, ಅವರೇ ಈಗ ಬಿಎಸ್​ವೈಗೆ ಗೆಳೆಯರಾಗಿದ್ದಾರೆ; ಹಳ್ಳಿಹಕ್ಕಿ ಬೇಸರ

ನಾವು ಯಾರನ್ನು ವಿರೋಧಿಸಿ ಬಂದೆವೋ, ಅವರೇ ಈಗ ಬಿಎಸ್​ವೈಗೆ ಗೆಳೆಯರಾಗಿದ್ದಾರೆ; ಹಳ್ಳಿಹಕ್ಕಿ ಬೇಸರ

ಹೆಚ್. ವಿಶ್ವನಾಥ್

ಹೆಚ್. ವಿಶ್ವನಾಥ್

ಇನ್ನು, ಸಿಪಿವೈಗೆ ಸಚಿವ ಸ್ಥಾನ ನೀಡುತ್ತಿರುವ ವಿಚಾರವಾಗಿ, ಸರ್ಕಾರದ ನಡೆಗೆ ಹಳ್ಳಿಹಕ್ಕಿ ತೀವ್ರ ಬೇಸರ ವ್ಯಕ್ತಪಡಿಸಿದರು. ತಂದೆಯನ್ನು ಕೊಂದವನನ್ನೇ ತಾಯಿ ಮದುವೆ ಆಗಿ ಮೆರವಣಿಗೆ ಹೊರಟಂತಿದೆ. ನಾವು ವಿರೋಧಿಸಿದವರೇ ಈಗ ಸಿಎಂಗೆ ಸ್ನೇಹಿತರಾಗಿದ್ದಾರೆ ಎಂದು  ಸರ್ಕಾರದ ಇಂದಿನ ಸ್ಥಿತಿ ಬಗ್ಗೆ ಮಾರ್ಮಿಕವಾಗಿ ನುಡಿದರು.

ಮುಂದೆ ಓದಿ ...
  • Share this:

ಮೈಸೂರು(ಡಿ.02): ಸಿಎಂ ಬಿಎಸ್​ ಯಡಿಯೂರಪ್ಪ ಸಿ.ಪಿ.ಯೋಗೇಶ್ವರ್​​ಗೆ ಸಚಿವ ಸ್ಥಾನ ನೀಡುವುದು ನಿಶ್ಚಿತ ಎಂದು ಹೇಳಿದ ಬಳಿಕ ಬಿಜೆಪಿ ಪಾಳಯದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್​ ಸಿಪಿವೈಗೆ ಮಂತ್ರಿಸ್ಥಾನ ನೀಡುತ್ತಿರುವುದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಿಎಂ ಬಿಎಸ್​ವೈ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್​ಸಿ ಹೆಚ್​. ವಿಶ್ವನಾಥ್,  ಸಿ.ಪಿ.ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ನೀಡಲು ಇಷ್ಟೊಂದು ಅವಸರ ಯಾಕೆ? ಅವರೇನು ಸರ್ಕಾರ ಬೀಳಿಸೋಕೆ ಕಾರಣರಾದವರೇ? ಅವರೇನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರೇ? ಎಂದು ಸಿಪಿವೈ ವಿರುದ್ಧ ಹಳ್ಳಿಹಕ್ಕಿ ಮತ್ತೆ ಗುಡುಗಿದ್ದಾರೆ. 


ಮುಂದುವರೆದ ಅವರು,  ಸಿಪಿ ಯೋಗೇಶ್ವರ್​​ ಬಾಂಬೆ-ಪುಣೆಯಲ್ಲಿ ಸೂಟ್‌ಕೇಸ್ ಹಿಡ್ಕೊಂಡು ಓಡಾಡುತ್ತಿದ್ದವರು. ಅವರನ್ನ ಮಂತ್ರಿ ಮಾಡೋಕೆ ಅರ್ಜೆಂಟ್ ಯಾಕೆ ಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಯೋಗೇಶ್ವರ್ ಪಾತ್ರ ಏನೂ ಇಲ್ಲ. ಅವನ ಪಾತ್ರ ಏನು ಇಲ್ಲ ಎಂದಮೇಲೆ ಅವನಿಗ್ಯಾಕೆ ಮಂತ್ರಿ ಸ್ಥಾನ ಕೊಡಬೇಕು. ಯತ್ನಾಳ್ ಅಥವಾ ಕತ್ತಿಯಂತಹ ನಾಯಕರು ಸರತಿಯಲ್ಲಿದ್ದಾರೆ. ಅವರನ್ನು ಮಂತ್ರಿ ಮಾಡಿ. ಇಂತಹ ಆತುರದ ನಿರ್ಧಾರ ತೆಗೆದುಕೊಂಡರೆ ನಿಮ್ಮ ನಾಯಕತ್ವದ ಬಗ್ಗೆ ಅಪನಂಬಿಕೆ ಬರಲಿದೆ ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪನವರಿಗೆ ಎಂಎಲ್​ಸಿ ವಿಶ್ವನಾಥ್​​ ನೇರವಾಗಿ ಸಲಹೆ ನೀಡಿದರು.


ರಾಜಕಾರಣ ಸಕಾರಾತ್ಮಕ ಧೋರಣೆಯಿಂದ ಸಮಾನವಾಗಿ ಹೋಗಬೇಕು. ನಕಾರಾತ್ಮಕವಾಗಿ ರಾಜಕಾರಣವನ್ನ ಮಾಡಬಾರದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ‌ ರಾಜಕಾರಣವೇ ಉಸಿರು. ಆ ಉಸಿರು ಹಾಳಾಗಬಾರದು. ಈಗ ಆ ಉಸಿರು ಹೆಚ್ಚೆಚ್ಚು ಹಾಳಾಗುತ್ತಿದೆ. ಇದರಿಂದಾಗಿಯೇ ಜನಪ್ರತಿನಿಧಿಗಳನ್ನ ಅಸಹ್ಯವಾಗಿ ನೋಡ್ತಿದ್ದಾರೆ. ಇದು ಆಗಬಾರದು ಎಂದು ರಾಜ್ಯ ರಾಜಕೀಯದ ಬಗ್ಗೆ ಕಾವ್ಯಾತ್ಮಕವಾಗಿ ಹೇಳಿಕೆ ನೀಡಿದರು.


Sunny Deol: ಬಾಲಿವುಡ್ ನಟ, ಸಂಸದ ಸನ್ನಿ ಡಿಯೋಲ್​ಗೆ ಕೊರೋನಾ ಪಾಸಿಟಿವ್


ಇನ್ನು, ಬಾಂಬೆ ಟೀಂ‌ನಲ್ಲಿ ನಾನು ಒಂಟಿಯಾಗಿಲ್ಲ. ಎಲ್ಲರೂ ಜೊತೆಯಾಗಿದ್ದಾರೆ. ನಾವಿದ್ದೇವೆ ಅಂತ ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ. ಹಾಗಾಗಿ ನಾನು ಒಂಟಿಯಾಗಿಲ್ಲ ಎಂದರು.


ಇದೇ ವೇಳೆ, ಮೈತ್ರಿ ಸರ್ಕಾರ ಪತನವಾದ ವಿಚಾರವಾಗಿ, ನಾವು ಸರ್ಕಾರವನ್ನ ಬೀಳಿಸಲಿಲ್ಲ. ಕಾಂಗ್ರೆಸ್ ಜೆಡಿಎಸ್‌ನವರೇ ಬೀಳಿಸಿಕೊಂಡ್ರು. ಸಿದ್ದರಾಮಯ್ಯ, ಕುಮಾರಸ್ವಾಮಿಯವರೇ ಈ ಬಗ್ಗೆ ಹೇಳಿದ್ದಾರೆ ಎಂದರು.


ನಿನ್ನೆಯ ಮಧ್ಯಂತರ ತೀರ್ಪಿನ ಆದೇಶ ನೋಡಿದ್ದೇನೆ. ಅದರ ತೀರ್ಪಿನ ಆರ್ಡರ್ ಕಾಪಿ‌ ಇನ್ನು ಕೈ ಸೇರಿಲ್ಲ. ಅದರಲ್ಲಿ ಸಚಿವರಾಗಬಾರದು ಅಂತ ಮಾತ್ರ ಹೇಳಿದ್ದಾರೆ. 2027ರವರೆಗೆ ನನ್ನ ವಿಧಾನಪರಿಷತ್ ಸ್ಥಾನಕ್ಕೆ ತೊಂದರೆಯಿಲ್ಲ ಎಂದು ಹೇಳಿದರು.


ಇನ್ನು, ಸಿಪಿವೈಗೆ ಸಚಿವ ಸ್ಥಾನ ನೀಡುತ್ತಿರುವ ವಿಚಾರವಾಗಿ, ಸರ್ಕಾರದ ನಡೆಗೆ ಹಳ್ಳಿಹಕ್ಕಿ ತೀವ್ರ ಬೇಸರ ವ್ಯಕ್ತಪಡಿಸಿದರು. ತಂದೆಯನ್ನು ಕೊಂದವನನ್ನೇ ತಾಯಿ ಮದುವೆ ಆಗಿ ಮೆರವಣಿಗೆ ಹೊರಟಂತಿದೆ. ನಾವು ವಿರೋಧಿಸಿದವರೇ ಈಗ ಸಿಎಂಗೆ ಸ್ನೇಹಿತರಾಗಿದ್ದಾರೆ ಎಂದು  ಸರ್ಕಾರದ ಇಂದಿನ ಸ್ಥಿತಿ ಬಗ್ಗೆ ಮಾರ್ಮಿಕವಾಗಿ ನುಡಿದರು.


ಶೇಕ್ಸ್‌ಪೀಯರ್ ನಾಟಕದ ಉದಾಹರಣೆ ಉಲ್ಲೇಖಿಸಿ ಮಾತನಾಡಿದ ಹೆಚ್.ವಿಶ್ವನಾಥ್, ನಾವು ಯಾರನ್ನು ವಿರೋಧ ಮಾಡಿ ಬಂದ್ವೋ, ಅವರೇ ಈಗ ಬಿಎಸ್‌ವೈ ಸ್ನೇಹಿತರಾಗಿದ್ದಾರೆ. ಇದು ತಂದೆಯನ್ನ ಕೊಂದವನನ್ನು ತಾಯಿ ಮದುವೆಯಾದಂತೆ ಕಾಣುತ್ತಿದೆ. ಶೇಕ್ಸ್‌ಪೀಯರ್ ನಾಟಕದಲ್ಲಿ ಇದೇ ರೀತಿಯ ಪ್ರಸಂಗ ಇದೆ. ನಮ್ಮ‌ ಪರಿಸ್ಥಿತಿ ಹಾಗೂ ಸರ್ಕಾರದ ಪರಿಸ್ಥಿತಿಯೂ ಹಾಗೆಯೇ ಇದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿ ಸಖ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

top videos
    First published: