’ಮುಂದಿನ ಆರು ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನ‘ - ಎಂಎಲ್​​ಸಿ ಎಂ.ಎ ಗೋಪಾಲಸ್ವಾಮಿ

ರೈತರು ಹಾಗೂ ಕಾರ್ಮಿಕರನ್ನು ವಿರೋಧ ಕಟ್ಟಿಕೊಂಡು ಯಾವುದೇ ಸರ್ಕಾರ ಹೆಚ್ಚು ಕಾಲ ಬಾಳುವುದಿಲ್ಲ. ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಬಿಜೆಪಿ ಪಕ್ಷದಲ್ಲಿ ಒಳಸಂಚು ನಡೆಯುತ್ತಿದೆ. ಇದನ್ನು ಕಾರ್ಯಗತ ಮಾಡಲು ಅವರ ಪಕ್ಷದಲ್ಲಿಯೇ ಸಂಘಟನೆಯೊಂದು ಪಿತೂರಿ ನಡೆಸುತ್ತಿದೆ ಎಂದರು ಗೋಪಾಲಸ್ವಾಮಿ.

news18-kannada
Updated:September 28, 2020, 10:44 PM IST
’ಮುಂದಿನ ಆರು ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನ‘ - ಎಂಎಲ್​​ಸಿ ಎಂ.ಎ ಗೋಪಾಲಸ್ವಾಮಿ
ಎಂಎಲ್​​ಸಿ ಗೋಪಾಲಸ್ವಾಮಿ
  • Share this:
ಹಾಸನ(ಸೆ.28): ಮುಂದಿನ ಆರೇ ತಿಂಗಳಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಪತನವಾಗಲಿದೆ. ಅವರ ಪಕ್ಷದವರೇ ಇದನ್ನು ಮಾಡಿ ಮುಗಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಂ.ಎ ಗೋಪಾಲಸ್ವಾಮಿ ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ಇಂದು ಕರ್ನಾಟಕ ಬಂದ್ ಭಾಗವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುದ್ದಿಗಾರರೊಂದಿಗೆ ಮಾತನಾಡಿ ಎಂ.ಎ ಗೋಪಾಲಸ್ವಾಮಿ ಬಿಜೆಪಿ ಸರ್ಕಾರಕ್ಕೆ ಭವಿಷ್ಯವಿಲ್ಲ. ಇನ್ನು ಆರು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ . ಈ ಸರ್ಕಾರವನ್ನು ಬೀಳಿಸುವುದೇ ನಮ್ಮ ಉದ್ದೇಶವಾಗಿದೆ. ರೈತರು ಕಾರ್ಮಿಕರ ವಿರುದ್ಧ ಕಾಯ್ದೆಗಳನ್ನು ಜಾರಿ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರು ಹಾಗೂ ಕಾರ್ಮಿಕರನ್ನು ವಿರೋಧ ಕಟ್ಟಿಕೊಂಡು ಯಾವುದೇ  ಸರ್ಕಾರ ಹೆಚ್ಚು ಕಾಲ ಬಾಳುವುದಿಲ್ಲ. ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಬಿಜೆಪಿ ಪಕ್ಷದಲ್ಲಿ ಒಳಸಂಚು ನಡೆಯುತ್ತಿದೆ. ಇದನ್ನು ಕಾರ್ಯಗತ ಮಾಡಲು ಅವರ ಪಕ್ಷದಲ್ಲಿಯೇ ಸಂಘಟನೆಯೊಂದು ಪಿತೂರಿ ನಡೆಸುತ್ತಿದೆ ಎಂದರು.

ಬಿಜೆಪಿ ಪಕ್ಷ ಸೇರಿರುವ ಕಾಂಗ್ರೆಸ್ ನಾಯಕರು ಸ್ವಪಕ್ಷಕ್ಕೆ ಹಿಂದಿರುಗುವಂತೆ ಕರೆ ನೀಡಿರುವ ಎಂ.ಎ ಗೋಪಾಲಸ್ವಾಮಿ ಅವರು, ಈ ಕಾಯ್ದೆ ವಿರೋಧಿಸಿ. ದಯವಿಟ್ಟು ನಮ್ಮ ಪಕ್ಷಕ್ಕೆ ವಾಪಸ್ಸು ಬನ್ನಿ ಎಂದರು.

ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಮತ್ತು ಪ್ರಗತಿಪರ ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಹಾಸನದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ರೈತ ಮತ್ತು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ: ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸ ಸಾಧ್ಯತೆ

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಎಪಿಎಂಸಿ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತರಿಗೆ ಮಾರಕವಾಗಿದೆ. ಬಂಡವಾಳಶಾಹಿಗಳ ಪರವಾಗಿದೆ. ಕಾಯ್ದೆ ಜಾರಿಯಾದರೆ ರೈತ ಭೂಮಿ ಕಳೆದುಕೊಂಡು ನಿರುದ್ಯೋಗಿ ಆಗುತ್ತಾನೆ. ಹಣವಂತರು ನೂರಾರು ಎಕರೆ ಭೂಮಿಯನ್ನು ಸುಲಭವಾಗಿ ಕಬಳಿಸಲು ಕಾಯ್ದೆ ಅನುವು ಮಾಡಿಕೊಡುತ್ತದೆ. ಹಾಗಾಗಿ ಸರ್ಕಾರ ಕೂಡಲೇ ಉದ್ದೇಶಿತ ಕಾಯ್ದೆಯನ್ನು ಹಿಂಪಡೆಯಬೇಕು. ಅದಕ್ಕಾಗಿಯೇ ಬೀದಿಗಳಿದು ಇಂದು ಹೋರಾಟ ನಡೆಸಲಾಗುತ್ತಿದೆ ಎಂದು ರೈತರು ಒತ್ತಾಯಿಸಿದ್ಧಾರೆ.
Published by: Ganesh Nachikethu
First published: September 28, 2020, 8:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading