HOME » NEWS » State » MLC BASAVARAJ HORATTI SAYS THAT MEMBERS BEHAVIOR IN UPPER DAMAGED REPUTATION OF LEGISLATIVE COUNCIL HK

ವಿಧಾನ ಪರಿಷತ್​ನಲ್ಲಿ ಜನಪ್ರತಿನಿಧಿಗಳಿಂದ ಘನತೆಗೆ ಕುತ್ತು ತರುವ ಕೆಲಸ ನಡೆದಿದೆ: ಬಸವರಾಜ್ ಹೊರಟ್ಟಿ

ನಾಲ್ಕು ದಶಕಗಳ ತಮ್ಮ ರಾಜಕೀಯ ಜೀವನದಲ್ಲಿ ಈ ಕಲಾಪ ಗಲಾಟೆ ತಂದ ಮುಜುಗರ, ಬೇರೆ ಯಾವ ಘಟನೆ ತಂದಿಲ್ಲ. ಈ ಕುರಿತು ನಾನು ಈಗಾಗಲೇ ರಾಜ್ಯದ ಜನರ ಕ್ಷಮೆ ಸಹ ಕೇಳಿರುವುದಾಗಿ ಹೇಳಿದರು

news18-kannada
Updated:December 17, 2020, 8:02 PM IST
ವಿಧಾನ ಪರಿಷತ್​ನಲ್ಲಿ ಜನಪ್ರತಿನಿಧಿಗಳಿಂದ ಘನತೆಗೆ ಕುತ್ತು ತರುವ ಕೆಲಸ ನಡೆದಿದೆ: ಬಸವರಾಜ್ ಹೊರಟ್ಟಿ
ವಿಧಾನ ಪರಿಷತ್​​ ಸದಸ್ಯ ಬಸವರಾಜ್​​​ ಹೊರಟ್ಟಿ
  • Share this:
ಧಾರವಾಡ(ಡಿಸೆಂಬರ್​. 17): ದೇಶಕ್ಕೆ ಮಾದರಿಯಾದ ಮೇಲ್ಮನೆಯಲ್ಲಿ ಗಲಾಟೆ ನಡೆದಿರುವುದು ದುರದೃಷ್ಟಕರ. ಜವಾಬ್ದಾರಿ ಮರೆತಿರುವ ಜನಪ್ರತಿನಿಧಿಗಳಿಂದ ನಾಚಿಗೇಡಿತನದ ಕೃತ್ಯ ನಡೆದಿದೆ ಎಂದು ಜೆಡಿಎಸ್ ವಿಧಾನ ಪರಿಷತ್​​ ಸದಸ್ಯ ಬಸವರಾಜ್​​ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ನಾಲ್ಕು ದಶಕಗಳ ತಮ್ಮ ರಾಜಕೀಯ ಜೀವನದಲ್ಲಿ ಈ ಕಲಾಪ ಗಲಾಟೆ ತಂದ ಮುಜುಗರ, ಬೇರೆ ಯಾವ ಘಟನೆ ತಂದಿಲ್ಲ. ಈ ಕುರಿತು ನಾನು ಈಗಾಗಲೇ ರಾಜ್ಯದ ಜನರ ಕ್ಷಮೆ ಸಹ ಕೇಳಿರುವುದಾಗಿ ಹೇಳಿದರು. ಚಿಂತಕರ ಚಾವಡಿ, ಹಿರಿಯ ಅಥವಾ ಮುತ್ಸದ್ಧಿಗಳ ಮನೆ ಎಂದು ಕರೆಯಿಸಿಕೊಂಡ ವಿಧಾನ ಪರಿಷತ್ ಈಗ ಮುನ್ಸಿಪಾರ್ಟಿ ಹಂತಕ್ಕೆ ಬಂದು ನಿಂತಿದೆ. ಗಲಾಟೆಯಿಂದ ನಾಗರಿಕ ಸಮಾಜದ ಎದುರಿಗೆ ಜನಪ್ರತಿನಿಧಿಗಳು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದರು.

113 ವರ್ಷದ ಇತಿಹಾಸದಲ್ಲಿ ವಿಧಾನ ಪರಿಷತ್‌ನಲ್ಲಿ ಈ ರೀತಿ ಘಟನೆ ನಡೆದಿದ್ದು ನನಗೆ ನೋವು ತಂದಿದೆ. ದೇಶದ ಗೌರವಕ್ಕೆ ಪಾತ್ರವಾದ ಪರಿಷತ್ ಘನತೆಯನ್ನು ಕಳೆಯಲಾಗಿದೆ. ಗಲಾಟೆಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು.

 ಕಾಮಗಾರಿಗಳು ಕುಂಠಿತ : ಸಚಿವ ಸಿ ಸಿ ಪಾಟೀಲ್​​

ಕೊರೋನಾ ಸಂಕಷ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ರಾಜಧನ ಹೆಚ್ಚಳಕ್ಕೆ ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ತಂದಿರುವುದಾಗಿ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ ಹೇಳಿದರು. ಲಾಕ್‌ಡೌನ್ ಪರಿಣಾಮ ಮರಳು ಕೊರತೆಯಿಂದ ಸರ್ಕಾರಿ, ಖಾಸಗಿ ಬಹುತೇಕ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿವೆ. ಅಭಿವೃದ್ಧಿಗೆ ವೇಗ ಹೆಚ್ಚಳಕ್ಕೆ ಆದ್ಯತೆ ನೀಡಿದೆ ಎಂದರು.

ಇದೇ ಕಾರಣಕ್ಕೆ ಕರ್ನಾಟಕ ಸರ್ಕಾರದಿಂದ ಹೊಸ ಮರಳು ನೀತಿ ಜಾರಿಗೆ ತರಲಾಗಿದೆ. ಇದರಿಂದ ಅತ್ಯಂತ ಕಡಿಮೆ ದರದಲ್ಲಿ ಮರಳು ಲಭಿಸಲಿದೆ. ಎಂ ಸ್ಯಾಂಡಿಗೆ ಉತ್ತೇಜಿಸಿದ್ದರಿಂದ ಸರ್ಕಾರಕ್ಕೆ ಬರವ ರಾಜಧನ ಬರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಸತೀಶ್ ಜಾರಕಿಹೋಳಿ ಆಪ್ತರ ಮೇಲೆ ಗುಂಡಿನ ದಾಳಿ; ರಾಜಕೀಯ ವೈಷಮ್ಯವೋ, ಆಸ್ತಿ ಕಲಹವೋ..!?

ಹೊಸ ನೀತಿಯಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ, ಅವರಾಟ ನಡೆಯಲ್ಲ. ಇನ್ನೂ ಕಲ್ಲಿನ ಕ್ವಾರಿಗಳಿಂದ ಅಕ್ಕಪಕ್ಕದ ಜಮೀನುಗಳಿಗೆ ಪೌಡರ್ ಸಮಸ್ಯೆಯಾಗುವುದು ನಿಜ. ಸೇಫರ್ ಝೋನ್ ಮಾಡಲು ಹೇಳಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳಲಿದೆ ಎಂದರು.

ಡಿವೈಎಸ್ಪಿ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ನಮ್ಮ ಸರ್ಕಾರ ಯಾವುದೇ ಅಧಿಕಾರಿಗಳಿಗೆ ಒತ್ತಡ ಹಾಕಿಲ್ಲ. ಡಿವೈಎಸ್ಪಿ ಆತ್ಮಹತ್ಯೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು.
Published by: G Hareeshkumar
First published: December 17, 2020, 7:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories