ಅಗತ್ಯಕ್ಕಿಂತ ಹೆಚ್ಚು ತಿಂದ್ರೆ ವಾಂತಿಯಾಗುತ್ತೆ - ಮತ್ತೊಂದು ಅಪರೇಷನ್ ಕಮಲದ ವಿರುದ್ಧ ಹೊರಟ್ಟಿ ಕಿಡಿ

ನಮ್ಮವರ ತಪ್ಪಿನಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕೆಲ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ಅಧಿಕಾರದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರೆದಿದೆ. ಅಲ್ಲೇ ಬಹಳ ಜನ ಇದ್ದಾರೆ, ನಮ್ಮವರು ಹೋಗಿ ಮಾಡೋದೇನು

news18-kannada
Updated:January 21, 2020, 1:25 PM IST
ಅಗತ್ಯಕ್ಕಿಂತ ಹೆಚ್ಚು ತಿಂದ್ರೆ ವಾಂತಿಯಾಗುತ್ತೆ - ಮತ್ತೊಂದು ಅಪರೇಷನ್ ಕಮಲದ ವಿರುದ್ಧ ಹೊರಟ್ಟಿ ಕಿಡಿ
ವಿಧಾನ ಪರಿಷತ್​ ಸದಸ್ಯ ಬಸವರಾಜ್​​​​ ಹೊರಟ್ಟಿ
  • Share this:
ಕಲಬುರ್ಗಿ(ಜ.20) : ಅಗತ್ಯವಿದ್ದಷ್ಟು ತಿನ್ನಬೇಕು, ಅಗತ್ಯಕ್ಕಿಂತ ಹೆಚ್ಚು ತಿಂದಲ್ಲಿ ವಾಂತಿಯಾಗೋದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ನಮ್ಮವರ ತಪ್ಪಿನಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕೆಲ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ಅಧಿಕಾರದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರೆದಿದೆ. ಅಲ್ಲೇ ಬಹಳ ಜನ ಇದ್ದಾರೆ, ನಮ್ಮವರು ಹೋಗಿ ಮಾಡೋದೇನು. ಅಗತ್ಯವಿದ್ದಷ್ಟು ತಿಂದ್ರೆ ಜೀರ್ಣಿಸಿಕೊಳ್ಳಬಹುದು. ಹೆಚ್ಚು ತಿಂದರೆ ಪಚನ ಆಗಲ್ಲ. ಮತ್ತಷ್ಟು ಶಾಸಕರು ಯಾಕೆ ಬೇಕು ಅವರಿಗೆ. ಪ್ರಜಾಪ್ರಭುತ್ವದಲ್ಲಿ ಬಿಜೆಪಿ ಕೆಟ್ಟ ಸಂಪ್ರದಾಯ ಹುಟ್ಟು ಹಾಕಿದೆ ಎಂದು ಕಿಡಿಕಾರಿದರು.

ಈಗ ಒಂದಷ್ಟು ಜನರನ್ನು ಕರೆದುಕೊಂಡು ಸರ್ಕಾರ ರಚಿಸಿದ ಮೇಲೆ ಮತ್ತೆ ಮತ್ತೆ ಶಾಸಕರನ್ನು ಸೆಳೆಯೋದು ಯಾಕೆ ?. ಜಾಸ್ತಿ ತಿಂದ್ರೆ ವಾಂತಿಮಾಡಿಕೊಂಡಂತೆ ಬಿಜೆಪಿಗೆ ಮುಂದಿನ ದಿನಗಳಲ್ಲಿ ತೊಂದರೆ ಖಚಿತ ಎಂದು ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.

ಅಲ್ಲಿ ಈಗ ಯಾರೂ ಹೋಗುತ್ತಾರೋ ಅವರಿಗೆ ಒಳ್ಳೆಯ ಗೌರವ ಸಿಗಲ್ಲ. ಅಲ್ಲೇ ಸಾಕಷ್ಟು ಜನ ಸಚಿವ ಸ್ಥಾನಕ್ಕಾಗಿ ಕಾದು ಕುಳಿತಿದ್ದಾರೆ. ಒಂದು ವೇಳೆ ನಮ್ಮ ಶಾಸಕರು ಬಿಜೆಪಿಗೆ ಹೋದರೂ ಸಚಿವ ಸ್ಥಾನ ನೀಡಬಹುದು. ಸಚಿವ ಸ್ಥಾನ ಎಷ್ಟು ವರ್ಷ ನೀಡಲಾಗುತ್ತದೆ.  ಹೆಚ್ಚು ಅಂದರೇ ನಾಲ್ಕೈದು ವರ್ಷ. ಆಮೇಲೆ ಇವರೂ ಮಾಜಿ ಆಗಲೇಬೇಕಲ್ಲವೆ ಎಂದು ಹೊರಟ್ಟಿ ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಹೊರಟ್ಟಿ ಗರಂ

ಜೆಡಿಎಸ್ ನಾಯಕರ ವಿರುದ್ಧದ ನಮ್ಮ ಸಿಟ್ಟು ಬಹಳ ಸಣ್ಣದು ಎಂದು ಕುಮಾರಸ್ವಾಮಿ ವಿರುದ್ಧ ಹೊರಟ್ಟಿ ಮತ್ತೊಮ್ಮೆ ಕಿಡಿಕಾರಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಶಾಸಕರು - ಎಚ್ ಡಿ ಕೆ ನಡುವೆ ಬಿರುಕಿನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರ ಇದ್ದಾಗ ಕು ಮಾರಸ್ವಾಮಿಯವರು  ಎಂಎಲ್​​ಸಿಗಳನ್ನು ವಿಶ್ವಾಸಕ್ಕೆ ತಗೋಬೇಕಿತ್ತು. ಈಗ ಲೆಕ್ಕಕ್ಕೆ ತಗೊಂಡ್ರೆ ಯಾವ ಪ್ರಯೋಜನ ಆಗಲ್ಲ ಎಂದರು.

ಇದನ್ನೂ ಓದಿ : ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಿ - ಸೋನಿಯಾಗೆ ಪತ್ರ ಬರೆದ ಪರಮೇಶ್ವರ್ದೇವೇಗೌಡರಷ್ಟು ಸಹನೆ ಕುಮಾರಸ್ವಾಮಿಯವರಿಗೆ ಇಲ್ಲ. ಹೀಗಾಗಿಯೇ ಈ ರೀತಿಯ ಸಮಸ್ಯೆಗಳು ಉದ್ಭವವಾಗಿವೆ. ದೇವೇಗೌಡರು ಭರವಸೆ ಕೊಟ್ಟಿದ್ದಾರೆ, ಮಕ್ಕಳು ಅತ್ತಾಗ ಚಾಕ್ ಲೆಟ್ ಕೊಟ್ಟ ರೀತಿಯಲ್ಲಿ ಸಮಾಧಾನ ಮಾಡಿದ್ದಾರೆ. ದೇವೇಗೌಡರ ಮಾತಿಗೆ ಮಣಿದು ನಾವು ಸುಮ್ಮನಾಗಿದ್ದೇವೆ. ಆದರೆ, ಅಧಿಕಾರ ಹೋದ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ್ರೆ ಏನು ಪ್ರಯೋಜನವಾಗಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading