ಸಭಾಪತಿ ಸ್ಥಾನಕ್ಕಾಗಿ ವಿಧಾನ ಪರಿಷತ್ ಕಲಾಪ ಬಲಿ: ಎಂಎಲ್​​ಸಿ ಬಸವರಾಜ್ ಹೊರಟ್ಟಿ ಬೇಸರ

ಶಿಕ್ಷಕರ ಬೇಡಿಕೆ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್​ ಅವರು ಡಿಸೆಂಬರ್​ 14ರಂದು ಸಭೆ ಕರೆದಿದ್ದು, ಸಭೆಯ ತೀರ್ಮಾನದ ಬಳಿಕ ಹೋರಾಟದ ರೂಪರೇಷ ಸಿದ್ದಪಡಿಸಲಿದೆ

ಬಸವರಾಜ್ ಹೊರಟ್ಟಿ

ಬಸವರಾಜ್ ಹೊರಟ್ಟಿ

  • Share this:
ಧಾರವಾಡ(ಡಿಸೆಂಬರ್​. 11): ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪರಿಷತ್ ಸಭಾಪತಿ ಕುರ್ಚಿಗಾಗಿ ಕಿತ್ತಾಟ ನಡೆದಿದೆ. ಆದರೆ, ವಿಧಾನ ಪರಿಷತ್ ಸದನ ಡಿಸೆಂಬರ್​ 15 ರವರೆಗೆ ನಡೆಯಬೇಕಿತ್ತು. ಏಕಾಏಕಿ ನಿಲ್ಲಿಸಿರುವುದಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಸದ್ಯದ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದನ ಡಿಸೆಂಬರ್​ 15 ರವರೆಗೆ ನಡೆಯಬೇಕಿತ್ತು. ಸದನವನ್ನು ನಿಲ್ಲಿಸಿದ ಸರ್ಕಾರದ ತೀರ್ಮಾನ ಸರಿಯಾದ ಬೆಳವಣಿಗೆ ಅಲ್ಲ ಎಂದರು. ಸರ್ಕಾರವೇ ಈಗ ಸದನ ಅವಧಿ ಮೊಟಕುಗೊಳಿಸಿದೆ. ಮುಂದೆ ಸದನ ಪುನರ್ ನಡೆಸುವುದಕ್ಕೆ ತಾಂತ್ರಿಕ ತೊಂದರೆ ಇದೆಯೇ? ಅಥವಾ ರಾಜ್ಯಪಾಲರ ತೀರ್ಮಾನ ಇಲ್ಲವೇ ಸಂಪುಟ ಏನು ಹೇಳುತ್ತದೆ ಎಂಬುದು ನೋಡಬೇಕಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ವಿಧಾನ ಪರಿಷತ್ ಸಭಾಪತಿ ಕುರ್ಚಿಗಾಗಿ ಕಲಾಪ ಬಲಿಯಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ  ಬಸವರಾಜ್ ಹೊರಟ್ಟಿ ತಿಳಿಸಿದರು.

ಹಿಂದೆ ಡಿ ಹೆಚ್ ಶಂಕರಮೂರ್ತಿ ಯವರು ಸಭಾಪತಿಯಾಗಿದ್ದಾಗ ಹೀಗೆ ಆಗಿತ್ತು. ಆಗ ಅವರು ಉಪಾಧ್ಯಕ್ಷರಿಂದ ಸದನ ನಡೆಸಿ, ತಾವು ಕೆಳಗೆ ಕುಳಿತು ಅವಿಶ್ವಾಸ ಎದುರಿಸಿದ್ದರು ಎಂದರು.

ಬಿಜೆಪಿ ಸದಸ್ಯರು ಅವಿಶ್ವಾಸ ಮಂಡಿಸಿದಾಗ ಸಭಾಪತಿಗಳು ಉಪಾಧ್ಯಕ್ಷರಿಗೆ ಸದನ ಬಿಡಬೇಕು. ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರು ಈ ಹಿಂದೆ ಬಿಲ್‌ವೊಂದರ ಚರ್ಚೆ ನಡೆದಾಗ ಸಭೆ ನಿಲ್ಲಿಸಿದ್ದಕ್ಕೆ ಅವರ ವಿರುದ್ಧ ಅವಿಶ್ವಾಸ ಮಂಡಿಸಿದ್ದಕ್ಕೆ ತಾವು ಬೆಂಬಲಿಸಿದ್ದಾಗಿ ಹೇಳಿದರು.

ಶಿಕ್ಷಕರ ಬೇಡಿಕೆ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್​ ಅವರು ಡಿಸೆಂಬರ್​ 14ರಂದು ಸಭೆ ಕರೆದಿದ್ದು, ಸಭೆಯ ತೀರ್ಮಾನದ ಬಳಿಕ ಹೋರಾಟದ ರೂಪರೇಷ ಸಿದ್ದಪಡಿಸಲಿದೆ. ಈ ಕುರಿತಂತೆ ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : 350 ಸಹಾಯಕ ಪ್ರಾಧ್ಯಾಪಕರ ನೇಮಕ: ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಡಿಸಿಎಂ ಅಶ್ವತ್ಥನಾರಾಯಣ ಸೂಚನೆ

ವಿಧಾನ ಪರಿಷತ್‌ನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಚರ್ಚೆಯಾಗಿಲ್ಲ. ಗೋ ಹತ್ಯೆಗೆ ಅನೇಕ ಕಾರಣಗಳಿವೆ. ಈಗಿನ ಕಾಯ್ದೆ ಸಾಧಕ ಬಾಧಕ ಏನಿದೆ ನೋಡಬೇಕು. ಉತ್ತರ ಪ್ರದೇಶದಲ್ಲಿ ಸಾಕಷ್ಟು ಗೋ ಶಾಲೆಗಳಿವೆ. ಆದರೆ, ನಮ್ಮಲ್ಲಿ ಗೋ ಶಾಲೆಗಳಿಲ್ಲ ಎಂದರು.

ಕಾಯ್ದೆಯನ್ನು ತರುವ ಮುಂಚೆ ಸರ್ಕಾರ ಪೂರ್ವ ತಯಾರಿ ಮಾಡಬೇಕಿತ್ತು. 463 ಕೋಟಿ  ರೂಪಾಯಿ ದನದ ಮಾಂಸ ಭಾರತದಿಂದ ಹೊರ ದೇಶಕ್ಕೆ ಹೋಗುತ್ತಿದೆ. ಇದರಲ್ಲಿ ಅನೇಕ ಸಮಸ್ಯೆಗಳಿವೆ. ಈ ಬಗ್ಗೆ ಚರ್ಚಿಸಬೇಕು. ಎಲ್ಲ ಪಕ್ಷಗಳು ಸೇರಿಸಿ ಸಮಿತಿ ರಚಿಸಿ, ಚರ್ಚಿಸಿದ ಬಳಿಕವೇ ಕಾಯ್ದೆ ತರಬೇಕು ಎಂದು ತಿಳಿಸಿದರು.
Published by:G Hareeshkumar
First published: