12 ಮಕ್ಕಳ ಹೆತ್ತೋರು ಸಬ್ಸಿಡಿ ತಗೋತಾರೆ, 2 ಮಕ್ಕಳ ಹೆತ್ತೋರು ತೆರಿಗೆ ಕಟ್ತಾರೆ: ವಿವಾದಾತ್ಮಕ ಹೇಳಿಕೆ ನೀಡಿದ ಯತ್ನಾಳ

news18
Updated:September 2, 2018, 10:59 PM IST
12 ಮಕ್ಕಳ ಹೆತ್ತೋರು ಸಬ್ಸಿಡಿ ತಗೋತಾರೆ, 2 ಮಕ್ಕಳ ಹೆತ್ತೋರು ತೆರಿಗೆ ಕಟ್ತಾರೆ: ವಿವಾದಾತ್ಮಕ ಹೇಳಿಕೆ ನೀಡಿದ ಯತ್ನಾಳ
news18
Updated: September 2, 2018, 10:59 PM IST
ರಾಚಪ್ಪ ಬನ್ನಿದಿನ್ನಿ, ನ್ಯೂಸ್​18 ಕನ್ನಡ

ಬಾಗಲಕೋಟೆ (ಸೆ. 2): 12 ಮಕ್ಕಳನ್ನು ಹೆತ್ತವರು ಸಬ್ಸಿಡಿ ತಗೋತಾರೆ. ಎರಡು ಮಕ್ಕಳನ್ನು ಹೆತ್ತವರು ತೆರಿಗೆ ಕಟ್ಟುತ್ತಾರೆ. ನಮ್ಮ ದೇಶದ ಹಣೆಬರಹ ಹಿಂಗಾಗೈತಿ. ಇದಕ್ಕೆ ಕಾರಣ ಯಾರೂಂತ ಗೊತ್ತೇನು? ಎಂದು ಬಾಗಲಕೋಟೆಯಲ್ಲಿ ಬಸನಗೌಡ ಪಾಟೀಲ್​  ಯತ್ನಾಳ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ವಿಧಾನಪರಿಷತ್ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೃತೀಯರಂಗದವರೆಲ್ಲ ಬಂದಿದ್ದರು. ಈಗ ಭ್ರಷ್ಟರೆಲ್ಲ ಒಂದಾಗಿದ್ದಾರೆ. ಮಮತಾ ಬ್ಯಾನರ್ಜಿಯಂಥವರಿಗೆಲ್ಲ ಬಾಂಗ್ಲಾ ವಲಸಿಗರು ಬಂದು ಮತ ಹಾಕುತ್ತಿದ್ದಾರೆ.  ಇಟಲಿಯಿಂದ ಬಂದವರು ಇಲ್ಲಿ ಆಡಳಿತ ಮಾಡಬೇಕು ಅಂತಿದ್ದಾರೆ ಎಂದು ಟೀಕಿಸಿದ್ದಾರೆ.

ಲಾಲುಪ್ರಸಾದ್ ಯಾದವ್​ ಅವರ ಮಗ ನಿನ್ನೆಪ್ರಧಾನಿ  ಮೋದಿ ಭ್ರಷ್ಟ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಲಾಲುಪ್ರಸಾದ್ ಯಾದವ್ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ದರಾ?

- ಬಸನಗೌಡ ಪಾಟೀಲ್​ ಯತ್ನಾಳ


ರಾಹುಲ್ ಗಾಂಧಿಯೊಬ್ಬ ಹುಚ್ಚ. ಹುಚ್ಚನ ಪಕ್ಷದಲ್ಲಿ ಹುಚ್ಚರನ್ನು ಬಿಟ್ಟರೆ ಮತ್ಯಾರು ಇರ್ತಾರೆ? ಇಷ್ಟು ದಿನ ಕಾಂಗ್ರೆಸ್​ನವರು ಬಿಜೆಪಿ ಕೋಮುವಾದಿ ಪಕ್ಷ ಅಂತ ಹೇಳುತ್ತಿದ್ದರು. ಈಗ ರಾಹುಲ್​ ಗಾಂಧಿಗೆ ಇದ್ದಕ್ಕಿದ್ದಂತೆ ಹಿಂದೂ ದೇವರ ನೆನಪಾಗಿದೆ ಎಂದು ಬಿಜೆಪಿ ಎಂಎಲ್​ಸಿ ಬಸವನಗೌಡ ಪಾಟೀಲ್​ ಯತ್ನಾಳ ಲೇವಡಿ ಮಾಡಿದ್ದಾರೆ.
Loading...

ರಾಹುಲ್​ ಗಾಂಧಿಗೆ ಈಗ ಹಿಂದೂ ದೇವರ ಮೇಲೆ ಒಮ್ಮಿಂದೊಮ್ಮೆಲೇ ಭಕ್ತಿ ಬಂದಿದೆ. ಅದಕ್ಕೆ ಮಾನಸ ಸರೋವರ ಯಾತ್ರೆಗೆ ಹೋಗ್ತೀನಿ ಅಂತ ಹೇಳುತ್ತಿದ್ದಾರೆ. ಅತೀ ಹೆಚ್ಚು ಶಿವನ ದರ್ಶನ ಪಡೆದವರು ಪ್ರಧಾನಿ ಮೋದಿಯೊಬ್ಬರೇ. 50 ವರ್ಷ ದೇಶವನ್ನು ಲೂಟಿ ಹೊಡೆದವರು ಪ್ರಧಾನಿಮಂತ್ರಿ ಆಗಬೇಕಾ? ಇವರಿಗೆ ಮಹಾತ್ಮ ಗಾಂಧಿ ಸಂಬಂಧವೇ ಇಲ್ಲದಿದ್ದರೂ ತಮ್ಮ ಹೆಸರಿನ ಮುಂದೆ ಗಾಂಧಿ ಎಂದು ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.

 

 
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ