ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರೆ ಶಾಸಕರ ಅಮಾನತು: ಪರಿಷತ್ ಸದಸ್ಯರಿಗೆ ಎಚ್ಚರಿಕೆ

ರಾಜ್ಯಪಾಲರು ವಿಧಾನಸಭೆ ಪ್ರವೇಶಿಸಿ ಭಾಷಣ ಮುಗಿಸಿ ವಾಪಸ್ ಹೋಗುವವರೆಗೂ ಯಾರೂ ಅಡ್ಡಿ ಮಾಡಬಾರದು. ಹಾಗೇನಾದರೂ ಮಾಡಿದರೆ ಅದು ರಾಜ್ಯಪಾಲರಿಗೆ ಅಗೌರವ ಎಂದು ಪರಿಗಣಿಸಿ, ಅಂಥ ಶಾಸಕರನ್ನು ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

news18
Updated:January 30, 2020, 1:48 PM IST
ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರೆ ಶಾಸಕರ ಅಮಾನತು: ಪರಿಷತ್ ಸದಸ್ಯರಿಗೆ ಎಚ್ಚರಿಕೆ
ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ.
  • News18
  • Last Updated: January 30, 2020, 1:48 PM IST
  • Share this:
ಬೆಂಗಳೂರು(ಜ. 30): ಮುಂಬರಲಿರುವ ವಿಧಾನಪರಿಷತ್ ಅಧಿವೇಶನ ಸರಾಗವಾಗಿ ನಡೆಯಲು ವಿಧಾನಪರಿಷತ್ ಕಾರ್ಯದರ್ಶಿ ಕೆಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದಾರೆ. ವಿಪಕ್ಷಗಳು ವಿವಿಧ ಕಾರಣಗಳನ್ನ ಮುಂದೊಡ್ಡಿ ಅಧಿವೇಶನಕ್ಕೆ ಅಡ್ಡಿಪಡಿಸಲು ಮಾಡುವ ಪ್ರಯತ್ನಗಳಿಗೆ ಈಗಾಗಲೇ ಲಗಾಮು ಹಾಕಲು ಸರಕಾರ ಮುಂದಾಗಿರುವಂತಿದೆ. ಫೆ. 17ರಂದು ಪ್ರಾರಂಭವಾಗಲಿರುವ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸುವ ಶಾಸಕರನ್ನು ಅಮಾನತುಗೊಳಿಸಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ವಿಧಾನಪರಿಷತ್ ಕಾರ್ಯದರ್ಶಿ ಹೊರಡಿಸಿರುವ ಆದೇಶದ ಪ್ರತಿ ನ್ಯೂಸ್18 ವಾಹಿನಿಗೆ ಲಭ್ಯವಿದೆ.

ವಿಧಾನಪರಿಷತ್ ಕಾರ್ಯ ವಿಶ್ವಾಸ ಮತ್ತು ನಡವಳಿಕೆ ನಿಯಾವಳಿಯ 26ನೇ ನಿಯಮವನ್ನ ಉಲ್ಲೇಖಿಸಿ, “ರಾಜ್ಯಪಾಲರು ಬರುವಾಗ ಅಥವಾ ಹೊರಡುವಾಗ ಅಥವಾ ಅವರ ಭಾಷಣದ ಅವಧಿಯಲ್ಲಿ ಯಾರೇ ಸದಸ್ಯರು ಯಾವುದೇ ಭಾಷಣ ಮಾಡುವ ಮೂಲಕ ಅಥವಾ ಯಾವುದೇ ಕ್ರಿಯಾಲೋಪವೆತ್ತಿ ರಾಜ್ಯಪಾಲರ ಭಾಷಣಕ್ಕೆ ಮುಂಚೆಯಾಗಲಿ ಅಥವಾ ತರುವಾಯವಾಗಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಯನ್ನುಂಟು ಮಾಡತಕ್ಕುದ್ದಲ್ಲ ಅಥವಾ ವಿಘ್ನವನ್ನುಂಟು ಮಾಡತಕ್ಕುದ್ದಲ್ಲ ಮತ್ತು ಅಂಥ ಅಡ್ಡಿಯನ್ನು ಅಥವಾ ವಿಘ್ನವನ್ನು ಸದನದ ಆದೇಶದ ತೀವ್ರ ಉಲ್ಲಂಘನೆಯೆಂದು ಹಾಗೂ ರಾಜ್ಯಪಾಲರಿಗೆ ತೋರಿದ ಅಗೌರವವೆಂದು ಪರಿಗಣಿಸತಕ್ಕುದ್ದು ಮತ್ತು ಅಂಥ ಸದಸ್ಯ ಅಥವಾ ಸದಸ್ಯರನ್ನು ಸದನದಲ್ಲಿ ಮಂಡಿಸಬಹುದಾದ ಪ್ರಸ್ತಾವದ ಮೇರೆಗೆ ಅಧಿವೇಶನದ ಗೊತ್ತುಪಡಿಸಿದ ಅವಧಿಗೆ ಅಥವಾ ಉಳಿದ ಅವಧಿಗೆ ಅಮಾನತುಗೊಳಿಸತಕ್ಕದ್ದು” ಎಂದು ಆದೇಶ ನೀಡಲಾಗಿದೆ.

ಇದನ್ನು ಓದಿ: ಸೋತ ಸವದಿಗೆ ಡಿಸಿಎಂ ಸ್ಥಾನ ಕೊಡುತ್ತೀರಿ; ನಮಗ್ಯಾಕೆ ಮಂತ್ರಿಗಿರಿ ಇಲ್ಲ?: ಹೆಚ್. ವಿಶ್ವನಾಥ್

ಕಳೆದ ವರ್ಷದ ಜುಲೈ ತಿಂಗಳಲ್ಲಿ ವಿಧಾನಸಭಾ ಅಧಿವೇಶನದ ವೇಳೆ ಸಿದ್ದರಾಮಯ್ಯ, ಕೃಷ್ಣ ಭೈರೇಗೌಡ ಮೊದಲಾದ ಅನೇಕ ಮುಖಂಡರು ಕ್ರಿಯಾಲೋಪ ಸೇರಿದಂತೆ ವಿವಿಧ ಆಕ್ಷೇಪಗಳನ್ನೆತ್ತಿ ಆಡಳಿತರೂಢ ಬಿಜೆಪಿ ಸದಸ್ಯರಿಗೆ ಮುಜುಗರ ತಂದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವ ಸಾಧ್ಯತೆ ಇದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: January 30, 2020, 10:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading