HOME » NEWS » State » MLAS GRAM PANCHAYAT POLITICS LEADERS CLAIMING ALL WINNERS ARE THEIR FOLLOWERS LCTV HK

ಶಾಸಕರ ಗ್ರಾಮ ಪಂಚಾಯಿತಿ ರಾಜಕೀಯ; ಗೆದ್ದವರೆಲ್ಲಾ ತಮ್ಮವರೇ ಎನ್ನುತ್ತಿರುವ ನಾಯಕರು

ಗೋಕಾಕ್ ಮತಕ್ಷೇತ್ರದಲ್ಲಿ ಗೆದ್ದ ಗ್ರಾಮ ಪಂಚಾಯತಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ‌ ಏರ್ಪಡಿಸಿದ್ದ ರಮೇಶ್ ಜಾರಕಿಹೊಳಿ ತಾವು ಮನಸು ಮಾಡಿದ್ರೆ ಕೇವಲ 24 ಗಂಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನ ಬಿಜೆಪಿಗೆ ಕರೆತರಬಲ್ಲೆ ಎಂದು ಹೇಳಿಕೆ ನೀಡಿದ್ದಾರೆ.

news18-kannada
Updated:January 5, 2021, 4:44 PM IST
ಶಾಸಕರ ಗ್ರಾಮ ಪಂಚಾಯಿತಿ ರಾಜಕೀಯ; ಗೆದ್ದವರೆಲ್ಲಾ ತಮ್ಮವರೇ ಎನ್ನುತ್ತಿರುವ ನಾಯಕರು
ಸಾಂದರ್ಭಿಕ ಚಿತ್ರ
  • Share this:
ಚಿಕ್ಕೋಡಿ(ಜನವರಿ. 05): ಪಕ್ಷಾಧಾರಿತ ಚುನಾವಣೆಯಾಗಿರದ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದಿದೆ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಈಗ ಗೆದ್ದವರೆಲ್ಲ ತಮ್ಮವರೇ ಎಂದು ಹೇಳುತ್ತಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನ ಮನಸು ಮಾಡಿದ್ರೆ 24 ಗಂಟೆಯಲ್ಲಿ ಬಿಜೆಪಿಗೆ ಕರೆತರಬಲ್ಲೆ ಎಂದು ಹೇಳಿಕೆ ನೀಡಿದ್ದಾರೆ. ರಾಜಕೀಯ ಮೇಲಾಟಗಳಿಗೆ ಹೆಸರುವಾಸಿಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಈಗ ಹೊಸ ರಾಜಕೀಯದ ಟ್ರೆಂಡ್ ಶುರುವಾಗಿದೆ. ರಾಜ್ಯ ರಾಜಕೀಯದ ಬಳಿಕ ಈಗ ಗ್ರಾಮದ ರಾಜಕೀಯದಲ್ಲಿ ನಾಯಕರು ತಮ್ಮ ಮೇಲುಗೈ ತೋರಿಸಲು ಮುಂದಾಗಿದ್ದು ಗೆದ್ದವರೆಲ್ಲ ನಮ್ಮವರೆ ಎಂದು ಹೇಳುತ್ತಾ ಸಾಗಿದ್ದಾರೆ.

ರಾಜ್ಯ ರಾಜಕಾರಣದ ಕೇಂದ್ರ ಬಿಂದು ಬಿಜೆಪಿಯ ಪ್ರಭಾವಿ ಶಾಸಕ ರಮೇಶ್ ಜಾರಕಿಹೊಳಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಗೋಕಾಕ್ ಮತಕ್ಷೇತ್ರದಲ್ಲಿ ಗೆದ್ದ ಗ್ರಾಮ ಪಂಚಾಯತಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ‌ ಏರ್ಪಡಿಸಿದ್ದ ರಮೇಶ್ ಜಾರಕಿಹೊಳಿ ತಾವು ಮನಸು ಮಾಡಿದ್ರೆ ಕೇವಲ 24 ಗಂಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನ ಬಿಜೆಪಿಗೆ ಕರೆತರಬಲ್ಲೆ ಎಂದು ಹೇಳಿಕೆ ನೀಡಿದ್ದಾರೆ.

ಗೋಕಾಕ್​​​ನ ಗೃಹ ಕಚೇರಿ ಎದುರು ಏರ್ಪಡಿಸಲಾದ ಗ್ರಾಮ ಪಂಚಾಯಿತಿ ಅಭಿನಂದನಾ ಸಮಾವೇಶದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಈ ಹೇಳಿಕೆ ನೀಡಿದ್ದು ಜಿಲ್ಲೆಯಲ್ಲಿ 18 ಕ್ಷೇತ್ರಗಳ ಪೈಕಿ ಚಿಕ್ಕೋಡಿ, ನಿಪ್ಪಾಣಿ, ಕ್ಷೇತ್ರದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಾಗಿ ಗೆದ್ದಿದ್ದಾರೆ. ಹಾಹಾಗಿ ಅವರೆಲ್ಲರನ್ನು ನಾನು ಮನಸ್ಸು ಮಾಡಿದ್ರೆ ಬಿಜೆಪಿಗೆ ತರಬಲ್ಲೆ ಎಂದಿದ್ದರು.

ಇನ್ನು ಇದು ರಮೇಶ್ ಜಾರಕಿಹೊಳಿ ಬಿಜೆಪಿಗೆ ಕರೆತರುವ ಹೇಳಿಕೆ ನೀಡುತ್ತಿದ್ದರೆ ಅತ್ತ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರ ಗಣೇಶ ಹುಕ್ಕೇರಿಯವರು ಚಿಕ್ಕೋಡಿ ತಾಲೂಕಿನಾದ್ಯಂತ 18 ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬಹುಮತ ಸಾಭೀತುಪಡಿಸಿದೆ. ಉಳಿದ ಮೂರು ಗ್ರಾಮ ಪಂಚಾಯತಿಗಳು ಸ್ವತಂತ್ರವಾಗಿ ಗೆದ್ದಿದ್ದು ಅವುಗಳ ಸದಸ್ಯರು  ಸಹ ಕಾಂಗ್ರೆಸ್ ಸೇರ್ಪಡೆಯಾಗುವ ನಿಟ್ಟಿನಲ್ಲಿ ಮಾತುಕಥೆ ನಡೆಸಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಗಳನ್ನು ನೀಡುತ್ತಿದ್ದಾರೆ.

ಇನ್ನು ಈ ಇಬ್ಬರು ನಾಯಕರು ಮಾತು ಒಂದೆಡೆಯಾದ್ರೆ ಇನ್ನೊಂದೆಡೆ ಬಿಜೆಪಿಯ ಸಂಸದ ಅಣ್ಣಾಸಾಬ ಜೊಲ್ಲೆ ಮಾತನಾಡಿದ್ದು, ಚಿಕ್ಕೋಡಿ ಹಾಗೂ ನಿಪ್ಪಾಣಿ ಕ್ಷೇತ್ರದಲ್ಲಿ ಅತಿ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರೆ ಗೆಲುವು ಸಾಧಿಸಿದ್ದಾರೆ. ಸರಿಯಾದ ಮಹಿತಿ ಬೇರೆ ನಾಯಕರಿಗೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಕೊರೋನಾ ವ್ಯಾಕ್ಸಿನ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಮಾಜಿ ಸಂಸದ ಆರ್​. ಧ್ರುವನಾರಾಯಣ್

ಇತ್ತ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಮಾತನಾಡಿ ಜಿಲ್ಲೆಯಲ್ಲೆ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅತಿ ಹೆಚ್ಚು ಗೆಲುವು ಸಾಧಿಸಿದ್ದಾರೆ. ಅಲ್ಲದೆ ಚಿಕ್ಕೋಡಿ 12 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ನಮ್ನ ತೆಕ್ಕೆಗೆ ಬಂದಿದ್ದು, ನಮ್ಮ ಬಳಿ ದಾಖಲೆ ಇವೆ ಎಂದು ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಸುಳ್ಳು ಹೇಳಿ ದಾರಿ ತಪ್ಪಿಸಬಾರದು ದಾಖಲೆ ಇದ್ರೆ ಮುಂದೆ ಬಂದು ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷ  ಆಧಾರಿತ ಚುನಾವಣೆಯಲ್ಲ ಎಂದು ತಿಳಿದಿದ್ದರೂ ಸಹ ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರು ಗೆದ್ದವರೆಲ್ಲರೂ ತಮ್ಮವರೆ ವಿರೋಧ ಪಕ್ಷದವರನ್ನು ನಾವು ಕರೆ ತರುತ್ತೇವೆ ಎಂದು ಹೇಳಿಕೆ ಪತ್ರಿಕಾ ಪ್ರಕಟಣೆ ಹೊರಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ.
Published by: G Hareeshkumar
First published: January 5, 2021, 4:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories