ಶಾಸಕರ ಮೇಲಿನ ಹಲ್ಲೆ ಘಟನೆ ಎಲ್ಲರಿಗೂ ಮುಜುಗರ ತಂದಿದೆ: ಅರುಣ್ ಶಹಾಪುರ

ರೆಸಾರ್ಟ್ ಘಟನೆ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಕಾಂಗ್ರೆಸ್ಸಿನ ನಾಯಕರು ಈ ಘಟನೆಯ ಬಳಿಕ  ಸಮರ್ಥಿಸಿಕೊಂಡಿರುವುದನ್ನು ನೋಡಿದರೆ, ಇದು ಆ ಪಕ್ಷದ ನಾಯಕರಿಗೆ ಶೋಭೆ ತರುವಂಥದ್ದಲ್ಲ ಎಂದು ಅರುಣ್ ಶಹಾಪುರ ತಿಳಿಸಿದರು.

G Hareeshkumar | news18
Updated:January 23, 2019, 11:04 PM IST
ಶಾಸಕರ ಮೇಲಿನ ಹಲ್ಲೆ ಘಟನೆ ಎಲ್ಲರಿಗೂ ಮುಜುಗರ ತಂದಿದೆ: ಅರುಣ್ ಶಹಾಪುರ
ರೆಸಾರ್ಟ್ ಘಟನೆ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಕಾಂಗ್ರೆಸ್ಸಿನ ನಾಯಕರು ಈ ಘಟನೆಯ ಬಳಿಕ  ಸಮರ್ಥಿಸಿಕೊಂಡಿರುವುದನ್ನು ನೋಡಿದರೆ, ಇದು ಆ ಪಕ್ಷದ ನಾಯಕರಿಗೆ ಶೋಭೆ ತರುವಂಥದ್ದಲ್ಲ ಎಂದು ಅರುಣ್ ಶಹಾಪುರ ತಿಳಿಸಿದರು.
G Hareeshkumar | news18
Updated: January 23, 2019, 11:04 PM IST
- ಮಹೇಶ ವಿ ಶಟಗಾರ

ವಿಜಯಪುರ ( ಜ.23) : ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ಗಲಾಟೆ ರಾಜಕೀಯದಲ್ಲಿರುವ ಎಲ್ಲರಿಗೂ ಮುಜುಗರ ಉಂಟು ಮಾಡಿದೆ. ರಾಜಕಾರಣಕ್ಕೆ ಎಂಥ ಸ್ಥಿತಿ ಬಂದಿದೆ ಎನ್ನುವಂತಾಗಿದೆ. ಇದು ಅವರ ಸಂಸ್ಕೃತಿ, ವ್ಯಕ್ತಿತ್ವವನ್ನು ತೋರಿಸಿ ಕೊಡುತ್ತದೆ ಎಂದು  ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಹೇಳಿದರು.

ಶಾಸಕ ಆನಂದ ಸಿಂಗ್ ಮೇಲೆ ನಡೆದಿರುವ ಹಲ್ಲೆಯ ಘಟನೆಯ ಕುರಿತು ರಾಜಕೀಯ ಪಕ್ಷಗಳು ನುಣುಚಿಕೊಳ್ಳಬಾರದು, ರಾಜಕೀಯ ಕ್ಶೇತ್ರದಲ್ಲಿ ಎಂಥವರಿಗೆ ಮಣೆ ಹಾಕುತ್ತೇವೆ?  ಜಾತಿ ಬಲ, ಹಣಬಲ, ತೋಳು ಬಲಕ್ಕೆ ಆದ್ಯತೆ ನೀಡಬಾರದು.ಇದಿರಂದ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು

ರೆಸಾರ್ಟ್ ಘಟನೆ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಮುಂಬರುವ ದಿನಗಳಲ್ಲಿ ಇದನ್ನು ತಿದ್ದಿಕೊಳ್ಳಲು ಈ ಘಟನೆ ಎಲ್ಲರಿಗೂ ಒಂದು ಪಾಠವಾಗಬೇಕು. ಕಾಂಗ್ರೆಸ್ಸಿನ ನಾಯಕರು ಈ ಘಟನೆಯ ಬಳಿಕ  ಸಮರ್ಥಿಸಿಕೊಂಡಿರುವುದನ್ನು ನೋಡಿದರೆ, ಇದು ಆ ಪಕ್ಷದ ನಾಯಕರಿಗೆ ಶೋಭೆ ತರುವಂಥದ್ದಲ್ಲ ಎಂದು ತಿಳಿಸಿದರು.

ಇದನ್ನೂ ಓದಿ : ಕೌಂಟರ್ ಕೇಸ್ ಹಾಕದೆ ರಾಜಿಗೆ ಮುಂದಾದ ಶಾಸಕ ಗಣೇಶ್; ಸಂಧಾನಕ್ಕೆ ಕಳುಹಿಸಿದ್ದು ಯಾರನ್ನು ಗೊತ್ತಾ?

ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಕಾಂಗ್ರೆಸ್ ನಾಯಕರು ಈ ಘಟನೆಯ ಬಳಿಕ ಹೇಳಬೇಕಿತ್ತು. ಘಟನೆಯ ಬಳಿಕ ಕಾಂಗ್ರೆಸ್ ನಾಯಕುರ ವರ್ತಿಸಿದ ರೀತಿಯನ್ನು ನೋಡಿದರೆ, ಆಪರೇಶನನ್ ನಲ್ಲಿ ಪಾಲ್ಗೋಳ್ಳಬಹುದು ಎಂಬ ಸಂಶಯದಿಂದ ಹತಾಶೆಗೊಂಡ ಕಾಂಗ್ರೆಸ್ ನಾಯಕರು ರೆಸಾರ್ಟ್ ನಲ್ಲಿ ಶಾಸಕರನ್ನು ಕೂಡಿ ಹಾಕಿ ನಡೆಸಿರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ ಎಂದು ಹೇಳಿದರು

ಮಾರಣಾಂತಿಕ ಹಲ್ಲೆ ನಡೆದಿರುವವಾಗ ಆರೋಪಿಯನ್ನು ಬಂಧಿಸಲೇಬೇಕು. ಅವರು ತಲೆ ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎನ್ನುವುದು ಪೊಲೀಸ್ ಇಲಾಖೆಗೆ ಸವಾಲು. ಮೊದಲ ದಿನ ಮಾಧ್ಯಮಗಳಲ್ಲಿ ವರದಿಯಾದರೂ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿಲ್ಲ. ಅಷ್ಟೇ ಅಲ್ಲ, ಶಾಸಕ ಆನಂದ್ ಸಿಂಗ್ ಪ್ರಜ್ಞೆ ಬಂದ ಬಳಿಕ ದೂರು ನೀಡಿದ್ದಾರೆ. ಅವರಿಗೇನಾದರೂ ಹೆಚ್ಚೂ ಕಡಿಮೆಯಾಗಿದ್ದರೆ ಈ ಪ್ರಕರಣವನ್ನು ಸರಕಾರವೇ ಮುಚ್ಚಿ ಹಾಕುತ್ತಿತ್ತು ಎಂಬ ಸಂಶಯವೂ ಕಾಡುತ್ತಿದೆ ಎಂದರು
Loading...

 

 

 


 
First published:January 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ