Zameer Ahmed Khan: ಬಾಯಿ ಮುಚ್ಕೊಂಡು ಕೆಲಸ ಮಾಡಿ; ಡಿಕೆಶಿ ಹೇಳಿಕೆಗೆ ಜಮೀರ್ ತಿರುಗೇಟು

ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಗಳಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ.

ಜಮೀರ್ ಅಹ್ಮದ್​ ಖಾನ್

ಜಮೀರ್ ಅಹ್ಮದ್​ ಖಾನ್

  • News18
  • Last Updated :
  • Share this:
ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ನೀಡಿದ ಬಾಯಿ ಮುಚ್ಕೊಂಡು ಪಕ್ಷದ ಕೆಲಸ ಮಾಡಿ ಎಂಬ ಹೇಳಿಕೆಗೆ ಬೆಳಗಾವಿಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ಪ್ರತಿಕ್ರಿಯೆ ನೀಡುವ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದರು ಇದಕ್ಕೆ ಚಾಲನೆ ಕೊಟ್ಟಿರೋರು ಯಾರು, ಒಕ್ಕಲಿಗ ಸಮಾವೇಶದಲ್ಲಿ ಹೇಳಿದೋರು‌ ಅವರೇ. ಅವರೇನು ನನ್ನ ಹೆಸರು ತೆಗೆದುಕೊಂಡು ಹೇಳಿದ್ದರಾ ಎಂದು ಮಾಧ್ಯಮಗಳಿಗೆ ಪ್ರಶ್ನೆ ಮಾಡಿದರು. ಎಲ್ಲರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತೆ. ಕೆಲವರಿಗೆ ಮುಸ್ಲಿಂ ಸಮದಾಯದವರು ಸಿಎಂ ಆಗಬೇಕೆಂಬ ಆಸೆ ಇದೆ. ಅದೇ ರೀತಿ ನಾನು ಸಹ ಹೇಳಿದ್ದೇನೆ ಎಂದರು.

ಮೊದಲು ಕಾಂಗ್ರೆಸ್ ಪಕ್ಷ ಆಮೇಲೆ ಸಿದ್ದರಾಮಯ್ಯ ನಂತರ ಡಿಕೆಶಿನಾ ಪ್ರಶ್ನೆಗೆ ಉತ್ತರಿಸುವ ಮೂಲಕ ತಮ್ಮ ಹೇಳಿಕೆಯನ್ನು ಜಮೀರ್ ಅಹ್ಮದ್ ಸಮರ್ಥಿಸಿಕೊಂಡರು. ಮೊದಲು ಕಾಂಗ್ರೆಸ್ ಆಮೇಲೆ ಸಿದ್ದರಾಮಯ್ಯ ಎಂದು ಜಮೀರ್ ಅಹ್ಮದ್ ಪುನರುಚ್ಛಾರ ಮಾಡಿದರು.

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಅಗ್ಬೇಕು ಅನ್ನೋದು ವೈಯಕ್ತಿಯ ಅಭಿಪ್ರಾಯ

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಗಳಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನ ಕಲ್ಪಿಸಿದೆ. ಆದರೆ, ನಮಗೆ ಎಲ್ಲಕ್ಕಿಂತ ಮೊದಲು ಪಕ್ಷ ಮುಖ್ಯ. ನಾವೆಲ್ಲರೂ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿ ನಾಡಿನ ಜನರ ಸೇವೆ ಮಾಡುತ್ತಿದ್ದೇವೆ  ಎಂದು ಜಮೀರ್ ಅಹ್ಮದ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Navyasri R: ಅತೃಪ್ತ ಶಾಸಕರು ಮುಂಬೈಗೆ ಹೋದಾಗ ಸೀಕ್ರೆಟ್ ಟಾಸ್ಕ್, ಇದರ ಸೂತ್ರಧಾರಿ ಮಹಾನಾಯಕ; ನವ್ಯಶ್ರೀ ಸ್ಪೋಟಕ ಹೇಳಿಕೆ

ಸಿದ್ದರಾಮಯ್ಯ ಅವರ ಗುಣಗಾನ

ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು 75ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಹುಟ್ಟುಹಬ್ಬ ಆಚರಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಅಪಾರ ಅನುಭವ ಮತ್ತು ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಮನೋಭಾವ, ನಿಸ್ವಾರ್ಥ ಜನಸೇವೆಯ ಗುರಿ ಹೊಂದಿರುವ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಅನುದಾನಗಳು ಮತ್ತು ಸೌಕರ್ಯಗಳನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ.

5 ದಿನ ಸಭೆ

ಹಾಗಾಗಿ, ಅವರ ಜನ್ಮದಿನೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂಬುದು ನನ್ನ ಆಶಯ. ಅದಕ್ಕಾಗಿ 5 ದಿನಗಳ ಕಾಲ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಕುರಿತು ಸಭೆ ನಡೆಸಲಿದ್ದೇನೆ ಎಂದು ಶಾಸಕರಾದ ಜಮೀರ್ ಅಹ್ಮದ್ ವಿವರಿಸಿದರು.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ

ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಗಳಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.

ಆಗಸ್ಟ್‌ 3ರಂದು ನಡೆಯಲಿರುವ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ದ ಕುರಿತು ಇಂದು, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ವಿಭಾಗದ ಚಿಂತನ ಸಭೆಯಲ್ಲಿ ಜಮೀರ್ ಅಹ್ಮದ್ ಖಾನ್ ಭಾಗಿಯಾಗಿದ್ದರು.

ಡಿಕೆ ಶಿವಕುಮಾರ್ ಹೇಳಿದ್ದೇನು?

ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವಷ್ಟು ಕೆಲಸವನ್ನು ಎಲ್ಲರೂ ಬಾಯಿ ಮುಚ್ಕೊಂಡು ಮಾಡಬೇಕು ಎಂದು ಅಂತಿಮ ಎಚ್ಚರಿಕೆ ನೀಡಿದರು. ಯಾರಾದ್ರು ನನ್ನ ಲೆವಲ್ ನಲ್ಲಿ ಮಾತಾಡೋರು ಇದ್ರೆ ಮಾತಾಡ್ತೇನೆ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವಷ್ಟು ಕೆಲಸವನ್ನು ಎಲ್ಲರೂ ಬಾಯಿ ಮುಚ್ಕೊಂಡು ಮಾಡಬೇಕು ಎಂದು ಗುಡುಗಿದರು.

ಇದನ್ನೂ ಓದಿ: BS Yediyurappa: ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ಯಾಕೆ? ಇಲ್ಲಿವೆ ಯಡಿಯೂರಪ್ಪ ನಿರ್ಧಾರದ ಹಿಂದಿನ 8 ರಹಸ್ಯಗಳು

ಮೊದಲು ಅಧಿಕಾರಕ್ಕೆ ತೆಗೆದುಕೊಂಡು ಬನ್ನಿ. ಕಷ್ಟಪಟ್ಟು ಎಲ್ಲ ಸಮುದಾಯಗಳನ್ನು ಸೆಳೆಯಿರಿ. ನಿಮ್ಮ ನಿಮ್ಮ ಸಮುದಾಯಗಳನ್ನು ಸಂಘಟನೆ ಮಾಡಿ. ನಿಮಗೆ ಪಕ್ಷದ ಬಗ್ಗೆ ಆಸಕ್ತ ತೋರಿಸಬೇಕು ಅಂದ್ರೆ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟರು.
Published by:Mahmadrafik K
First published: