Zameer Ahmed Khan ಮುಂದೆ ಸಿಎಂ ಆಗುವ ನಾಯಕ: ಪಂಚಾಕ್ಷರಿ ಸ್ವಾಮೀಜಿ ಆರ್ಶಿವಚನ

ಜಮೀರ್ ಅಹ್ಮದ್ ಖಾನ್

ಜಮೀರ್ ಅಹ್ಮದ್ ಖಾನ್

ಬೆಳಗಾವಿ (Belagavi) ಪ್ರವಾಸದಲ್ಲಿರುವ  ಜಮೀರ್ ಅಹ್ಮದ್ ಯಕ್ಕುಂಡಿ ಗ್ರಾಮದ ಹಿಂದೂ ಮುಸ್ಲಿಂ‌ ಭಾವೈಕ್ಯದ ಪ್ರತೀಕವಾದ ಐತಿಹಾಸಿಕ ಪೀರ ದಿಲಾವರಗೋರಿ ಶಾಹವಲಿ ದರ್ಗಾ ಮತ್ತು ವಿರಕ್ತ ಮಠಕ್ಕೆ (Virakta Math) ಭೇಟಿ ನೀಡಿದ್ದರು.

  • Share this:

ಬೆಳಗಾವಿ: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Congress MLA Zameer Ahmed Khan) ಮುಂದೆ ಸಿಎಂ ಆಗೋವವರು ಎಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ (Yakkundi) ಗ್ರಾಮದ ಕುಮಾರೇಶ್ವರ ವಿರಕ್ತಮಠದ ಪಂಚಾಕ್ಷರಿ ಸ್ವಾಮೀಜಿ (Panchakshari Swamiji) ಭವಿಷ್ಯ ನುಡಿದಿದ್ದಾರೆ. ಬೆಳಗಾವಿ (Belagavi) ಪ್ರವಾಸದಲ್ಲಿರುವ  ಜಮೀರ್ ಅಹ್ಮದ್ ಯಕ್ಕುಂಡಿ ಗ್ರಾಮದ ಹಿಂದೂ ಮುಸ್ಲಿಂ‌ ಭಾವೈಕ್ಯದ ಪ್ರತೀಕವಾದ ಐತಿಹಾಸಿಕ ಪೀರ ದಿಲಾವರಗೋರಿ ಶಾಹವಲಿ ದರ್ಗಾ ಮತ್ತು ವಿರಕ್ತ ಮಠಕ್ಕೆ (Virakta Math) ಭೇಟಿ ನೀಡಿದ್ದರು. ಭೇಟಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ವೇಳೆ ಜಮೀರ್ ಅಹ್ಮದ್ ಮುಂದೆ ಸಿಎಂ ಆಗಲಿ ಎಂದಿ ಪಂಚಾಕ್ಷರಿ ಸ್ವಾಮೀಜಿಗಳು ಆಶೀರ್ವಚನ ನೀಡಿದರು.


ಭೇಟಿ ಬಳಿಕ ಮಾತನಾಡಿದ ಜಮೀರ್ ಅಹ್ಮದ್ ಖಾನ್, ದರ್ಗಾಗೆ ಭೇಟಿ‌ ‌‌ನೀಡಿದ್ದು ನನಗೆ ಖುಷಿ ತಂದಿದೆ. ಮಹಾಂತೇಶ್ ಕೌಜಲಗಿ ನಮ್ಮಲ್ಲಿ ವಿಶಿಷ್ಟ ಪವಾಡದ ದರ್ಗಾ ಇದೆ ಅಲ್ಲಿ ಬರಬೇಕು ಅಂತಾ ಹೇಳಿದ್ದರು. ಆದ್ರೆ ಆಗ ಬರಲಿಕ್ಕೆ ಆಗಿರಲಿಲ್ಲ, ನಾನು ಸಚಿವನಾಗಿದ್ದಾಗ ಅನುದಾನ ನೀಡಿದ್ದೆ. ಇಂದು ಬಾಬಾ ನನ್ನ ಕರೆಸಿಕೊಂಡಿದ್ದಾರೆ ಅದು ನನ್ನ ಪುಣ್ಯ ಎಂದು ಹೇಳಿದರು.


ದರ್ಗಾದಲ್ಲಿ ಏನೋ ಶಕ್ತಿ ಇದೆ


ದರ್ಗಾ ಕಮಿಟಿಯವರಿಗೆ ಐದು ಲಕ್ಷ ರೂಪಾಯಿ ಹಣ ನೀಡುತ್ತಿದ್ದೇನೆ. ದರ್ಗಾದಲ್ಲಿ ನಿಜವಾಗಲೂ ಏನೋ ಪವಾಡ ಇದೆ. ಮಠಕ್ಕೆ ಹೋಗಿದ್ದೆ ಅಲ್ಲಿಯೂ ಏನೋ ಶಕ್ತಿ ಇದೆ ಅನಿಸಿತು. ದರ್ಗಾದಲ್ಲಿ ಪ್ರಾರ್ಥನೆ ಮಾಡಿ ಕೇಳಿಕೊಂಡೆ ಒಂದು ಹರಕೆ ಮಾಡಿಕೊಂಡಿದ್ದೇನೆ ಎಂದು ಮಾಹಿತಿ ನೀಡಿದರು.


ಇದನ್ನೂ ಓದಿ:  Navyasri R: ಅತೃಪ್ತ ಶಾಸಕರು ಮುಂಬೈಗೆ ಹೋದಾಗ ಸೀಕ್ರೆಟ್ ಟಾಸ್ಕ್, ಇದರ ಸೂತ್ರಧಾರಿ ಮಹಾನಾಯಕ; ನವ್ಯಶ್ರೀ ಸ್ಪೋಟಕ ಹೇಳಿಕೆ


ದರ್ಗಾದಲ್ಲಿ ಏನೋ ಪವಾಡ ಇದೆ ಅಂತಾ ಅನಿಸಿತು ಎಂಬ ಭಾವ ಬಂದಿತು. 2023ರಲ್ಲಿ ಚುನಾವಣೆ ಬರ್ತಿದೆ ಏನಾದರೂ ಮಾಡಿ ಆಶೀರ್ವಾದ ಮಾಡಿ. ಮಹಾಂತೇಶ್ ಕೌಜಲಗಿ ಹೆಚ್ಚಿನ ಮತದಿಂದ ಆರಿಸಿ ಬರಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ನನ್ನ ವೈಯಕ್ತಿಕವಾಗಿ ನಾನು ಬಂದು ನಿರೀಕ್ಷೆ ಮಾಡಿಲ್ಲ ಅಷ್ಟು ದುಡ್ಡು ನೀಡ್ತೀನಿ ಎಂದರು.


ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 50 ಲಕ್ಷ ನೀಡುವೆ


ನಮ್ಮ ಕಾಂಗ್ರೆಸ್ ಸರ್ಕಾರ ಬಂದ್ರೆ ಕನಿಷ್ಟ 50 ಲಕ್ಷ ಹಣ ನೀಡ್ತೀನಿ. ನಮ್ಮ ಸರ್ಕಾರ ಬಂದ ಮೂರು ತಿಂಗಳೊಳಗೆ ಬಂದು‌ ನೀಡ್ತೀನಿ. ನನಗೆ ಸಿಕ್ಕಷ್ಟು ಪ್ರೀತಿ ದೇಶದಲ್ಲಿ ಯಾರಿಗೂ ಸಿಕ್ಕಿಲ್ಲ ಎಂದು ಹೇಳಿದರು.ಡಿಕೆಶಿ ವರ್ಸಸ್ ಜಮೀರ್ ಅಹ್ಮದ್ 


ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ನೀಡಿದ ಬಾಯಿ ಮುಚ್ಕೊಂಡು ಪಕ್ಷದ ಕೆಲಸ ಮಾಡಿ ಎಂಬ ಹೇಳಿಕೆಗೆ ಬೆಳಗಾವಿಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ಪ್ರತಿಕ್ರಿಯೆ ನೀಡುವ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದರು. ಎಲ್ಲರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತೆ. ಕೆಲವರಿಗೆ ಮುಸ್ಲಿಂ ಸಮದಾಯದವರು ಸಿಎಂ ಆಗಬೇಕೆಂಬ ಆಸೆ ಇದೆ. ಅದೇ ರೀತಿ ನಾನು ಸಹ ಹೇಳಿದ್ದೇನೆ ಎಂದರು.
ಇದನ್ನೂ ಓದಿ:  Belagavi ಕಾಂಗ್ರೆಸ್​ನಲ್ಲಿ ಜಾರಕಿಹೊಳಿ v/s ಸೇಠ್ ಬಣ ರಾಜಕೀಯ! 


ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ


ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಗಳಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನ ಕಲ್ಪಿಸಿದೆ. ಆದರೆ, ನಮಗೆ ಎಲ್ಲಕ್ಕಿಂತ ಮೊದಲು ಪಕ್ಷ ಮುಖ್ಯ. ನಾವೆಲ್ಲರೂ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿ ನಾಡಿನ ಜನರ ಸೇವೆ ಮಾಡುತ್ತಿದ್ದೇವೆ ಎಂದು ಜಮೀರ್ ಅಹ್ಮದ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

top videos
    First published: