HOME » NEWS » State » MLA YATNAL HITS OUT CM BS YEDIYURAPPA AND CONGRESS LEADERS LG

ಕಾಂಗ್ರೆಸ್ ನಾಯಕರ ಜೊತೆ ಸಿಎಂ ಬಿಎಸ್​​ ಯಡಿಯೂರಪ್ಪ ಪಾರ್ಟ್ನರ್​​ ಆಗಿದ್ದಾರೆ; ಶಾಸಕ ಯತ್ನಾಳ

ನನ್ನದೇನಾದರೂ ಅಕ್ರಮ ಇದ್ದರೆ, ಭ್ರಷ್ಚಾಚಾರ, ಹಣ ಬೇಕಾದರೆ ನಾನು ಹೆದರಬೇಕು.  ನನಗೆ ಯಾವುದೇ ಅಕ್ರಮ ಆಸ್ತಿ ಇಲ್ಲ.  ಇಂಟಲಿಜನ್ಸ್ ನ್ನು ನನ್ನ ಹಿಂದೆ ಬಿಟ್ಟಿದ್ದಾರೆ.  ಏನು ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.

news18-kannada
Updated:January 27, 2021, 3:31 PM IST
ಕಾಂಗ್ರೆಸ್ ನಾಯಕರ ಜೊತೆ ಸಿಎಂ ಬಿಎಸ್​​ ಯಡಿಯೂರಪ್ಪ ಪಾರ್ಟ್ನರ್​​ ಆಗಿದ್ದಾರೆ; ಶಾಸಕ ಯತ್ನಾಳ
ಬಸನಗೌಡ ಪಾಟೀಲ್ ಯತ್ನಾಳ್.
  • Share this:
ವಿಜಯಪುರ(ಜ. 27): ಖಾತೆ ಹಂಚಿಕೆ, ಮರು ಹಂಚಿಕೆಯಿಂದ ಬಿಜೆಪಿಗೆ ಸಾಕಷ್ಟು ಡ್ಯಾಮೇಜ್ ಆಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಮಾಧುಸ್ವಾಮಿ ಅವರು ಒಳ್ಳೆಯ ಸಚಿವರು.  ಅವರು ವಿಧಾನ ಸಭೆಯಲ್ಲಿ ನಮ್ಮ ಸರಕಾರ ಬರುವಾಗ ಅವರು ಸಮರ್ಥವಾಗಿ ವಿಧಾನ ಸಭೆಯನ್ನು ಎದುರಿಸಿದರು.  ಕಳೆದ ಅಧಿವೇಶನದಲ್ಲಿ ಡಿ. ಕೆ. ಶಿವಕುಮಾರ್ ಅವರನ್ನು ಹಿಗ್ಗಾಮುಗ್ಗಾ ಜಾಡಿಸುವ ಮೂಲಕ ಡಿ. ಕೆ. ಶಿವಕುಮಾರ ಮಾತನಾಡದಂತೆ ಮಾಡಿದ್ದರು.  ಆದರೆ, ದುರ್ದೈವವೆಂದರೆ ನಮ್ಮ ಮುಖ್ಯಮಂತ್ರಿಗಳಿಗೆ ಡಿ. ಕೆ. ಶಿವಕುಮಾರ, ಎಸ್. ಸಿದ್ಧರಾಮಯ್ಯ, ಶಿವಕುಮಾರ, ಜಮೀರ್ ಅಹ್ಮದ್ ಖಾನ್ ಅವರಲ್ಲಿ ಯಾರಿಗಾದರೂ ಬೈದರೆ ಅಂಥವರನ್ನು ಮುಗಿಸುವ ಕೆಲಸವನ್ನು ಸಿಎಂ ಮಾಡುತ್ತಾರೆ.  ಏಕೆಂದರೆ ಅವರೆಲ್ಲರೂ ಪಾರ್ಟನರ್ ಆಗಿದ್ದಾರೆ.  ಹೀಗಾಗಿ ಎಲ್ಲವೂ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಬಳಿಕ ಕಾಲ ಬದಲಾವಣೆಯಾಗುತ್ತದೆ.  ಯುಗಾದಿ ಅಲ್ಲ, ಉತ್ತರಾಯಣದಲ್ಲಿ ಈಗ ಎಲ್ಲ ವಿದ್ಯಮಾನಗಳು ನಡೆಯುತ್ತಿವೆ.  ಉತ್ತರಾಯಣದಲ್ಲಿ ಆರಂಭವಾದ ವಿದ್ಯಮಾನಗಳು ಯುಗಾದಿಯಲ್ಲಿ ಕೊನೆಗೊಳ್ಳಲಿವೆ ಎಂದು ಮತ್ತೊಮ್ಮೆ ಹೊಸ ಬಾಂಬ್ ಹಾಕಿದರು.

HD Kumaraswamy: ಅನ್ಯ ಶಕ್ತಿಗಳು ರೈತ ಹೋರಾಟವನ್ನೇ ತಲೆಕೆಳಗು ಮಾಡಲು ಯತ್ನಿಸುತ್ತಿವೆ; ಹೆಚ್​.ಡಿ. ಕುಮಾರಸ್ವಾಮಿ

ತಮ್ಮ ವಿರುದ್ಧ ತನಿಖೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬೇಕಾದ ಅಧಿಕಾರಿಗಳು ಬರಲಿ.  ನಾನಂತೂ ಅಧಿಕಾರಿಗಳ ಬಳಿ ರೊಕ್ಕ ತಿನ್ನುವುದಿಲ್ಲ.  ಜನರ ಕೆಲಸ ಹೇಳುತ್ತೇನೆ.  ಎಲ್ಲ ಅಧಿಕಾರಿಗಳು ಒಳ್ಳೆಯವರಿದ್ದಾರೆ.  ವಿಜಯಪುರ ಜಿಲ್ಲಾಧಿಕಾರಿಯನ್ನು ಬದಲಾವಣೆ ಮಾಡಿದರು.  ಹೊಸದಾಗಿ ಬಂದ ಜಿಲ್ಲಾಧಿಕಾರಿಗಳೂ ಒಳ್ಳೆಯವರಾಗಿದ್ದು, ಪಾಪ ಎಲ್ಲ ಕೆಲಸ ಮಾಡುತ್ತಿದ್ದಾರೆ. ವಿಜಯಪುರ ಎಸ್ಪಿಯವರೂ ಒಳ್ಳೆಯವರಾಗಿದ್ದಾರೆ.  ಅಧಿಕಾರಿಗಳೊಂದಿಗೆ ನನ್ನ ಸಂಘರ್ಷವಿಲ್ಲ.  ನನ್ನದೇನಾದರೂ ಅಕ್ರಮ ಇದ್ದರೆ, ಭ್ರಷ್ಚಾಚಾರ, ಹಣ ಬೇಕಾದರೆ ನಾನು ಹೆದರಬೇಕು.  ನನಗೆ ಯಾವುದೇ ಅಕ್ರಮ ಆಸ್ತಿ ಇಲ್ಲ.  ಇಂಟಲಿಜನ್ಸ್ ನ್ನು ನನ್ನ ಹಿಂದೆ ಬಿಟ್ಟಿದ್ದಾರೆ.  ಏನು ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.

ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲಾಗುತ್ತದೆ ಎಂಬುದರ ಕುರಿತು ಪ್ರತಿಕ್ರಿಯೆ ನಡೆಸಿದ ಅವರು, ಯಾರು ಏನು ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ.  ಕಡೆ ಜಾತ್ರೆ ಇದೆ.  ಏನಾದರೂ ಹೊಡೆದುಕೊಂಡು ಹೋಗಲಿ ಎಂದು ಅವರು ತಿಳಿಸಿದರು. ಶಿಸ್ತು ಉಲ್ಲಂಘನೆ ಬಗ್ಗೆ ತಮಗೆ ಯಾವುದೇ ನೊಟೀಸ್ ಬಂದಿಲ್ಲ.  ಮಾಧ್ಯಮದವರಿಗೆ ಇದನ್ನು ಕೇಳುವಂತೆ ವಿಜಯೇಂದ್ರ ಹೇಳಿರುತ್ತಾರೆ ಎಂದು ಸಿಎಂ ಪುತ್ರ ವಿಜಯೇಂದ್ರ ವಿರುದ್ಧವೂ ಮತ್ತೊಮ್ಮೆ ಯತ್ನಾಳ ವ್ಯಂಗ್ಯವಾಡಿದರು.

ನನಗೆ ನೊಟೀಸ್ ಬಂದರೆ ಮಾಧ್ಯಮದವರಿಗೆ ನಾನಾಗಿಯೇ ಮಾಹಿತಿ ನೀಡುತ್ತೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.        ಇದಕ್ಕೂ ಮುನ್ನ ಯತ್ನಾಳ ಅವರು ವಿಜಯಪುರ ನಗರದ ಗಾಂಧಿಚೌಕ್ ಬಳಿ ವಾಜಪೇಯಿ ರಸ್ತೆಯಿಂದ ನೂತನ ಕಿರಾಣಾ ಬಜಾರ್ ವರೆಗಿನ ನೂತನ ಸಿಟಿ ಬಸ್ ಸೇವೆ ಯತ್ನಾಳ ಚಾಲನೆ ನೀಡಿದರು.  ಅಲ್ಲದೇ, ವಾಜಪೇಯಿ ಸರ್ಕಲ್ ವರೆಗೆ ತಮ್ಮ ಬೆಂಬಲಿಗರು ಮತಗತು ವ್ಯಾಪಾರಿಗಳೊಂದಿಗೆ ಸಂಚಾರ ಮಾಡಿದರು.
Published by: Latha CG
First published: January 27, 2021, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories