ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಅಧಿಕಾರಕ್ಕೆ ಬಂದ್ರೆ ಹಿಂದೂಗಳ ಹತ್ಯೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (BJP General Secretary CT Ravi) ಹೇಳಿಕೆಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ (MLA Yathindra Siddaramaiah) ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಪೊಳ್ಳು ಹಿಂದೂಗಳು (Hindu), ನಾವೇ ನಿಜವಾದ ಹಿಂದೂಗಳು ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವಾಗಲೇ ಹಿಂದೂಗಳ ಹತ್ಯೆ ನಡೆದಿದೆ. ಕಾಂಗ್ರೆಸ್ನ 70 ವರ್ಷದ ಅವಧಿಯಲ್ಲಿ ಹಿಂದೂಗಳ ಹತ್ಯೆಯಾಗಿಲ್ಲ. ತಂದೆ ಸಿದ್ದರಾಮಯ್ಯನವರ 40 ವರ್ಷಗಳ ರಾಜಕೀಯದಲ್ಲಿ ಹಿಂದೂ ಹತ್ಯೆಗಳಾಗಿಲ್ಲ. ಬಿಜೆಪಿ ಅಧಿಕಾರವಿರುವಾಗಲೇ ಹಿಂದೂಗಳ ಹತ್ಯೆಯಾಗುತ್ತಿದೆ ಎಂದು ಆರೋಪಿಸಿದರು. ಜಾತಿ ಧರ್ಮಗಳ ಮಧ್ಯೆ ಕೋಮುಗಲಭೆ ಹಬ್ಬಿಸಿ ಅಧಿಕಾರಕ್ಕೆ ಬರುವುದೇ ಬಿಜೆಪಿ (BJP) ಮುಖ್ಯ ಉದ್ದೇಶ ಎಂದು ಕಿಡಿಕಾರಿದರು.
ಎಲ್ಲಾ ಧರ್ಮಗಳನ್ನು ಒಗ್ಗೂಡಿಸಿ ಶಾಂತಿ ನಿಮ್ಮದಿ ಕಾಪಾಡುವುದು ಕಾಂಗ್ರೆಸ್ ಪಕ್ಷದ ಉದ್ದೇಶ. ಆದರೆ ಹಿಂದೂಗಳೆಲ್ಲ ಬಿಜೆಪಿ ಪರವಿಲ್ಲ. ಹಿಂದೂಗಳ ರಕ್ಷಣೆ ಬಿಜೆಪಿಯಿಂದ ಅಸಾಧ್ಯ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲವೂ ಸರಿಯಾಗಲಿದೆ ಎಂದು ಮೈಸೂರಿನ ವರುಣ ಕ್ಷೇತ್ರದ ಕೊಂತಯ್ಯನಹುಂಡಿಯಲ್ಲಿ ಶಾಸಕ ಯತೀಂದ್ರ ವಾಗ್ದಾಳಿ ನಡೆಸಿದರು.
ಸಿ.ಟಿ.ರವಿ ವಿರುದ್ಧ ಶಾಸಕ ಅಮರೇಗೌಡ ಬಯ್ಯಾಪುರ ವಾಗ್ದಾಳಿ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ್ರೆ ಹಿಂದೂಗಳ ಹತ್ಯೆಯಾಗುತ್ತೆ ಅನ್ನೋ ಹೇಳಿಕೆಗೆ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ವಾಗ್ದಾಳಿ ನಡೆಸಿದ್ದರು. ಸಿ.ಟಿ.ರವಿ ತರಹದವರು ಬಿಜೆಪಿಯಲ್ಲಿ ಬಹಳ ಜನ ಇದ್ದಾರೆ. ಅವರಿಗೆ ಬೇರೆ ಕೆಲಸವೇ ಇಲ್ಲ. ಧರ್ಮದ ವಿಷಯ ತಂದು ಜನರನ್ನ ರೊಚ್ಚಿಗೆಳಿಸೋ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಅವರು ಅಭಿವೃದ್ಧಿ ಬಗ್ಗೆ ಮಾತನಾಡೋಲ್ಲ. ಹಿಂದೂಗಳ ಹತ್ಯೆಯಾಗುತ್ತೆ ಅನ್ನೋಕೆ ಸಿ.ಟಿ.ರವಿನಯೇನು ಬ್ರಹ್ಮನಾ? ಇವರ ಕಾಲದಲ್ಲಿ ಹಿಂದೂಗಳ ಹತ್ಯೆಯೇ ಆಗಿಲ್ವಾ? ನಾವು ಹಿಂದೂ ಅಲ್ವಾ? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಿಂದೂ ಅಲ್ವಾ? ಬಾಯಿ ಇದೆ ಅಂತ ಬಾಯಿಗೆ ಬಂದಂಗೆ ಮಾತನಾಡೋದಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: Bettanagere Shankara: ಬಿಜೆಪಿ ಸೇರಲು ಮುಂದಾಗಿರುವ ಬೆತ್ತನಗೆರೆ ಯಾರು? ಇಲ್ಲಿದೆ ಶಂಕರನ 'ರಕ್ತ'ಚರಿತ್ರೆ!
ಎಲ್ಲರನ್ನೂ ಸಮಾನರನ್ನಾಗಿ ಕಾಣಬೇಕು
ಇನ್ನಾದ್ರು ಅವರು ಅರಿತು ಮಾತನಾಡಲಿ. ಇಲ್ಲಾಂದ್ರೆ ನಾವು ಹಿಂದೂಗಳು ಅನ್ನೋದನ್ನ ತೋರಿಸಬೇಕಾಗುತ್ತೆ ದೇಶದಲ್ಲಿರುವ ಪ್ರತಿಯೊಬ್ಬನು ಇಲ್ಲಿನ ನಾಗರಿಕರು. ಹೀಗಾಗೇ ಎಲ್ಲರನ್ನ ಸಮಾನರನ್ನಾಗಿ ಕಾಣೋರು ನಾವು ಎಂದು ತಿರುಗೇಟು ನೀಡಿದ್ದರು.
ಇದೇ ವೇಳೆ ಬಾಂಬ್ ಹಾಕೋರಿಗೆ ಕಾಂಗ್ರೆಸ್ನವರು ಬಿರಿಯಾನಿ ಕೊಡ್ತಾರೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಯ್ಯಾಪುರ, ಯಾರು, ಯಾರಿಗೆ ಬಿರಿಯಾನಿ ಕೊಟ್ಟಿದ್ದಾರೆ ಎಂಬುದನ್ನು ಹೇಳಬೇಕು. ದುಷ್ಕೃತ್ಯ ಮಾಡೋರು ಮೊದಲಿನಿಂದಲೂ ಇದ್ದಾರೆ. ಒಬ್ಬಿಬ್ಬರು ಮಾಡೋದರಿಂದ ಎಲ್ಲರನ್ನು ಒಂದೇ ದೃಷ್ಠಿಯಿಂದ ನೋಡಬಾರದು ಎಂದು ಹೇಳಿದರು.
ಮಹಾಜನ್ ವರದಿಯೇ ಅಂತಿಮ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿಷಯಕ್ಕೆ ಮಹಾಜನ್ ವರದಿ ಅಂತಿಮ. ಸೌಹಾರ್ದಯುತವಾಗಿ ಬಿಟ್ಟುಕೊಡುವುದು ಕೊಡುವುದು ಯಾವುದೇ ಇಲ್ಲ. ನಮ್ಮ ತಂಟೆಗೆ ಅವರು ಬರಬಾರದು. ಗಡಿ ವಿವಾದ ಈಗ ಎರಡು ತಿಂಗಳಿನಿಂದ ಮುನ್ನಲೆಗೆ ಬಂದಿದೆ. ಮಾಧ್ಯಮದವರು ಸಹ ಯಾವುದು ಸರಿ ತಪ್ಪು ಎಂಬುವುದು ತೋರಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Karnataka Assembly Elections: ಗಲಾಟೆಯ ಬೆಂಕಿಯಲ್ಲಿ ಬೆಂದಿದ್ದ 'ಅಖಂಡ' ಕೋಟೆ! ಪುಲಿಕೇಶಿನಗರದಲ್ಲಿ ಹೇಗಿದೆ ಚುನಾವಣಾ ಕಾವು?
ಟಿಕೆಟ್ ಸಿಗುವ ಭರವಸೆ
ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಜನ ಟಿಕೆಟ್ ಕೇಳಬಹುದು. ಟಿಕೆಟ್ ನೀಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಹಾಲಿ ಮಾಜಿ ಶಾಸಕರಿಗೆ ಟಿಕೆಟ್ ನೀಡುವ ಕುರಿತು ಸಿದ್ದರಾಮಯ್ಯ ಹೇಳಿದ್ದು, ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.
ಕುಷ್ಟಗಿಯಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆದ್ದಿಲ್ಲ ಎಂಬ ವದಂತಿ ಇದೆ. ಇದನ್ನು ಸುಳ್ಳು ಮಾಡೋದಕ್ಕಾಗಿಯೇ ಚುನಾವಣೆಗೆ ನಿಲ್ಲುತ್ತೇನೆ. ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ