• Home
 • »
 • News
 • »
 • state
 • »
 • Siddaramaiah: ವರುಣಾ ಸಿದ್ದರಾಮಯ್ಯ ಲಕ್ಕಿ ಕ್ಷೇತ್ರ, ಅಲ್ಲಿ ನಿಂತ್ರೆ ಸಿಎಂ ಆಗೋದು ಪಕ್ಕಾ- ಯತೀಂದ್ರ

Siddaramaiah: ವರುಣಾ ಸಿದ್ದರಾಮಯ್ಯ ಲಕ್ಕಿ ಕ್ಷೇತ್ರ, ಅಲ್ಲಿ ನಿಂತ್ರೆ ಸಿಎಂ ಆಗೋದು ಪಕ್ಕಾ- ಯತೀಂದ್ರ

ಯತೀಂದ್ರ, ಸಿದ್ದರಾಮಯ್ಯ

ಯತೀಂದ್ರ, ಸಿದ್ದರಾಮಯ್ಯ

ವರುಣಾ ಕ್ಷೇತ್ರದಲ್ಲಿ ನಿಂತಾಗೆಲ್ಲ ಅವರಿಗೆ ಅಧಿಕಾರ ಸಿಕ್ಕಿದೆ. ಹೀಗಾಗಿ ಈ ಬಾರಿಯೂ ಸಿಗಬಹುದು ಎಂದ್ರು.  ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಕೂಗಿಗೆ‌  ಶಾಸಕ ಯತೀಂದ್ರ ಕೂಡ ಧ್ವನಿಯಾಗಿದ್ದಾರೆ.

 • News18 Kannada
 • 4-MIN READ
 • Last Updated :
 • Karnataka, India
 • Share this:

ಮೈಸೂರು (ನ.30) : ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಇದೇ ನನ್ನ ಕೊನೆಯ ಚುನಾವಣಾ (Election) ಸ್ಪರ್ಧೆ ಎಂದು ಸಿದ್ದರಾಮಯ್ಯ ಘೋಷಿಸಿದ್ದು, ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಸಿದ್ದರಾಮಯ್ಯ ಬಾದಾಮಿ (Badami) ಬಿಟ್ಟು ಬೇರೆ ಕ್ಷೇತ್ರದಿಂದ (Constituency) ಸ್ಪರ್ಧಿಸೋದು ಫಿಕ್ಸ್  ಆಗಿದೆ. ಆದ್ರೆ 2023ರ ವಿಧಾನಸಭೆ ಚುನಾವಣೆಯಲ್ಲಿ (Assembly Election) ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋದು ಮಾತ್ರ ಇನ್ನು ಅಧಿಕೃತಗೊಂಡಿಲ್ಲ. ಕೋಲಾರದಿಂದ ಸಿದ್ದರಾಮಯ್ಯ ಅಖಾಡಕ್ಕಿಳೀತಾರೆ ಎನ್ನಲಾಗ್ತಿದೆ. ಆದ್ರೆ ವರುಣ ಕೂಡ ಸಿದ್ದರಾಮಯ್ಯ ಸ್ಪರ್ಧೆಗೆ ಸೂಕ್ತ ಕ್ಷೇತ್ರ ಎನ್ನುವ ಮಾತುಗಳು ಸಹ ಕೇಳಿಬರ್ತಿದೆ.


ಸಿದ್ದರಾಮಯ್ಯ ಆಯ್ಕೆ ಕ್ಷೇತ್ರ ಯಾವುದು?


ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮತ್ತೆ ಸಿಎಂ ಮಾಡಲು ಸಿದ್ದು ಆಪ್ತರು ಪಣತೊಟ್ಟಿದ್ದು, ಹೋದಲಿ-ಬದಲ್ಲೆಲ್ಲಾ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎನ್ನುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಗೆಲ್ಲೋ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. 2023ರ ವಿಧಾನಸಭೆಯಲ್ಲಿ ಸ್ಪರ್ಧಿಸಲು 3 ಕ್ಷೇತ್ರಗಳನ್ನ ಶಾರ್ಟ್ ಲಿಸ್ಟ್ ಮಾಡಿದ್ದಾರೆ. ಕೋಲಾರ, (Kolara) ಬಾದಾಮಿ (Badami) ಹಾಗೂ ವರುಣ (Varuna) ಕ್ಷೇತ್ರ ಶಾರ್ಟ್ ಲಿಸ್ಟ್​ನಲ್ಲಿದೆ. ವರುಣದಿಂದ ಸಿದ್ದರಾಮಯ್ಯ ಸ್ಪರ್ಧಿಸ್ತಾರೆ ಅನ್ನೋ ಸುಳಿವನ್ನು ಮಗ ಯತೀಂದ್ರ ನೀಡಿದ್ದಾರೆ.


ವರುಣಾ ಕ್ಷೇತ್ರ ಸಿದ್ದರಾಮಯ್ಯಗೆ ಲಕ್ಕಿ!


ವರುಣಾ ಕ್ಷೇತ್ರ ಸಿದ್ದರಾಮಯ್ಯಗೆ ಲಕ್ಕಿ ಕ್ಷೇತ್ರ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತಾಡಿದ ಯತೀಂದ್ರ, ತಂದೆ ಅವರು ವರುಣಾ ಕ್ಷೇತ್ರಕ್ಕೆ ಬಂದು ನಿಲ್ಲಲಿ ಎನ್ನುವುದು ನನ್ನ ಒತ್ತಾಯ. ಇದು ನನ್ನ ವೈಯಕ್ತಿಕವಾಗಿ ಕೂಡ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಜಾತಿ ಹಾಗೂ ಪಕ್ಷದ ದೃಷ್ಟಿಯಿಂದ ನೋಡಿದ್ರೆ ಹಲವಾರು ಕ್ಷೇತ್ರಗಳು ಸೇಫ್ ಇವೆ ಎಂದು ಹೇಳಿದ್ರು.
ನಾನು ಸ್ಪರ್ಧಿಸಲ್ಲ, ಅಪ್ಪನಿಗಾಗಿ ದುಡಿಯುತ್ತೇನೆ


ಕೊನೇ ಚುನಾವಣೆಯಲ್ಲಿ ಅವರು ವರುಣಾದಿಂದ ನಿಲ್ಲಲಿ ಎನ್ನುವುದು ನನ್ನ ಆಸೆ ಎಂದು ಯತೀಂದ್ರ ಅಭಿಪ್ರಾಯಪಟ್ಟಿದ್ದಾರೆ. ಅಪ್ಪ ವರುಣಾಗೆ ಬಂದರೆ ನಾನು ಸ್ಪರ್ಧೆ ಮಾಡಲ್ಲ. ಅಪ್ಪನಿಗಾಗಿ ದುಡಿಯುತ್ತೇನೆ. ಕ್ಷೇತ್ರ ಸುತ್ತಿ ಪ್ರಚಾರ ಮಾಡುತ್ತೇನೆ ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದ್ರು.


ಸಿದ್ದರಾಮಯ್ಯ ಮುಂದಿನ ಸಿಎಂ ಎಂದ್ರು ಯತೀಂದ್ರ


ತಂದೆ ಸಿದ್ದರಾಮಯ್ಯ ಅವರು ಇದು ತಮ್ಮ ಕೊನೆ ಚುನಾವಣೆ ಎನ್ನುತ್ತಿದ್ದಾರೆ. ಈ ಹಿಂದೆ‌ ವರುಣಾ ಕ್ಷೇತ್ರದಿಂದ ಗೆದ್ದು ವಿರೋಧ ಪಕ್ಷದ ನಾಯಕರಾಗಿದ್ದರು, ಸಿಎಂ ಆಗಿದ್ದರು. ಈಗಲೂ ಸಿದ್ದರಾಮಯ್ಯ ಗೆದ್ದರೆ ಮುಖ್ಯಮಂತ್ರಿ ಆಗುವ ಅವಕಾಶಗಳಿವೆ. ವರುಣಾ ಕ್ಷೇತ್ರದಲ್ಲಿ ನಿಂತಾಗೆಲ್ಲ ಅವರಿಗೆ ಅಧಿಕಾರ ಸಿಕ್ಕಿದೆ. ಹೀಗಾಗಿ ಈ ಬಾರಿಯೂ ಸಿಗಬಹುದು ಎಂದ್ರು.  ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಕೂಗಿಗೆ‌  ಶಾಸಕ ಯತೀಂದ್ರ ಕೂಡ ದನಿಯಾಗಿದ್ದಾರೆ.


ಇದನ್ನೂ ಓದಿ: Siddaramaiah: ಮೂರು ಕ್ಷೇತ್ರಗಳ ಮೇಲೆ ಸಿದ್ದು ಕಣ್ಣು! ಅಲ್ಲಿ ಬಿಟ್, ಇಲ್ಲಿ ಬಿಟ್ ಸಿದ್ದರಾಮಯ್ಯ ಸ್ಪರ್ಧಿಸೋದೆಲ್ಲಿ?


ಬಿಜೆಪಿ ಹಿರಿಯ ನಾಯಕರ ಭವಿಷ್ಯ


ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಅಲ್ಲದೇ ಇದು ಭಾರೀ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಕೇವಲ ಸುಳಿವು ಮಾತ್ರ ಕೊಟ್ಟಿದ್ದಾರೆ. ಆದ್ರೆ, ಸಿದ್ದರಾಮಯ್ಯ ನೂರಕ್ಕೆ 99%ರಷ್ಟು ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಭವಿಷ್ಯ ನುಡಿದಿದ್ದರು.ಬಿಜೆಪಿ ನಾಯಕ ಬಸವರಾಜ್ ಹೊರಟ್ಟಿ, ನನಗೆ ಬಹಳ ಚೆನ್ನಾಗಿ ರಾಜಕಾರಣ ಗೊತ್ತಿದೆ. ಸಿದ್ದರಾಮಯ್ಯ ನೂರಕ್ಕೆ 99%ರಷ್ಟು ವರುಣಾ ಕ್ಷೇತ್ರದಿಂದಲೇ ನಿಲ್ಲುತ್ತಾರೆ. ಬಹಳ ಪಾಪ್ಯುಲರ್ ಆದ್ರೆ ಹೀಗೆ ಆಗತ್ತೆ. ಸಿದ್ದರಾಮಯ್ಯ ಬದಾಮಿಗೆ ಜಾತಿ ಮೇಲೆ ಬಂದು ನಿಂತ್ರು ಎಂದು ಹೇಳಿದರು.

Published by:ಪಾವನ ಎಚ್ ಎಸ್
First published: