• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೆರಡು ವರ್ಷದೊಳಗೆ ರಾಷ್ಟ್ರೀಯ ಯೋಜನೆ ಆಗಲಿದೆ; ಶಾಸಕ ವೀರಣ್ಣ ಚರಂತಿಮಠ ವಿಶ್ವಾಸ

ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೆರಡು ವರ್ಷದೊಳಗೆ ರಾಷ್ಟ್ರೀಯ ಯೋಜನೆ ಆಗಲಿದೆ; ಶಾಸಕ ವೀರಣ್ಣ ಚರಂತಿಮಠ ವಿಶ್ವಾಸ

ಶಾಸಕ ವೀರಣ್ಣ ಚರಂತಿಮಠ

ಶಾಸಕ ವೀರಣ್ಣ ಚರಂತಿಮಠ

ನಾನು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ವಿರೋಧಿಸಿಲ್ಲ. ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಸರ್ಕಾರಿ ಪದವಿ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಆರಂಭಿಸಿದ್ದೇನೆ ಎಂದರು.

  • Share this:

ಬಾಗಲಕೋಟೆ (ಏ.02): ಬಾಗಲಕೋಟೆಯ ಬಿವಿವಿ ಸಂಘದ ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ, ಹಾನಗಲ್ ಕುಮಾರೇಶ್ವರ ಆಸ್ಪತ್ರೆಯಲ್ಲಿ ಇಂದಿನಿಂದ ಮುಂದಿನ ಆದೇಶದವರೆಗೆ ಉಚಿತ ಹಾಗೂ ರಿಯಾಯ್ತಿ ದರದಲ್ಲಿ ಸೇವೆ ಆರಂಭಿಸಲಾಗಿದ್ದು, ಜಿಲ್ಲೆಯ ಜನತೆ ಸದುಪಯೋಗ  ಪಡೆದುಕೊಳ್ಳಬೇಕೆಂದು ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.


ಬಾಗಲಕೋಟೆಯ ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಾತನಾಡಿದ ಅವರು,ಕೊರೊನಾ ಎರಡನೇ ಅಲೆ ತಂದೊಡ್ಡಿರುವ ಸಂಕಷ್ಟ ಕಾಲದಲ್ಲಿ ಸಾರ್ವಜನಿಕ ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯದೇ ತೊಂದರೆಗೊಳಗಾಗುತ್ತಿದ್ದಾರೆ‌. ಪ್ರಸ್ತುತ ಕೋವಿಡ್ -19 ಸೃಷ್ಟಿಸಿರುವ ಆರ್ಥಿಕ ಸಮಸ್ಯೆಯಿಂದಾಗಿ ಬಡಜನರಿಗೆ ವೈದ್ಯಕೀಯ ಚಿಕಿತ್ಸೆ ಪರದಾಡುವಂತಾಗಿದೆ. ಬಡ ಮತ್ತು ನಿರ್ಗತಿಕರ ಸಮಸ್ಯೆ ಅರಿತು ಬಿವಿವಿ ಸಂಘದ ಹಾನಗಲ್  ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ ಉಚಿತ, ಹಾಗೂ ರಿಯಾಯ್ತಿ ದರದಲ್ಲಿ ಸೇವೆ ಆರಂಭಿಸಲಾಗಿದೆ. ಕೆಲ ಚಿಕಿತ್ಸೆ ಸಂಪೂರ್ಣ ಉಚಿತ, ಕೆಲವು ಚಿಕಿತ್ಸೆ ರಿಯಾಯಿತಿ ದರದಲ್ಲಿ ನೀಡಲು ಯೋಜಿಸಲಾಗಿದೆ. ಆರ್ಥಿಕವಾಗಿ ಬಿವಿವಿ ಸಂಘಕ್ಕೆ ಒಂದು ವರ್ಷದಲ್ಲಿ 10ಕೋಟಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.


ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೋವಿಡ್ ಕೇಂದ್ರ ಸ್ಥಾಪಿಸಿ, ಒಂದು ತಿಂಗಳ ಕಾಲ ಚಿಕಿತ್ಸೆ ನೀಡಲಾಯಿತು. ಕೋವಿಡ್ ರೋಗ ಪತ್ತೆಗಾಗಿ ಅತೀ ವೆಚ್ಚದ ಪ್ರಯೋಗಾಲಯ ಸ್ಥಾಪನೆ, ನಮ್ಮ ಸಂಸ್ಥೆಯ ಮತ್ತೊಂದು ಹೆಮ್ಮೆ, ಕೋವಿಡ್ ಮುಕ್ತ ಅಭಿಯಾನದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ಹೆಜ್ಜೆ ಹಾಕುತ್ತಿರುವುದು ಹೆಮ್ಮೆ, ಲಾಕ್ ಡೌನ್ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗೆ ಸಂಪೂರ್ಣ ವೇತನ ಪಾವತಿ ಮಾಡಲಾಗಿದೆ.ಇನ್ನು ಕೋವಿಡ್ ನಿರ್ವಹಣೆಗಾಗಿ ರಾಜ್ಯ ಸರ್ಕಾರಕ್ಕೆ 2ಕೋಟಿ, ಹಾಗೂ ಪ್ರವಾಹ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ2ಕೋಟಿ ದೇಣಿಗೆ ನೀಡಿ ಸಂಸ್ಥೆ ಸಾಮಾಜಿಕ ಬದ್ಧತೆ ಮೆರೆದಿದೆ.


ಇನ್ನು ಹೊರರೋಗಿ ನೊಂದಣಿ, ಸಾಮಾನ್ಯ ರಕ್ತ,ಮೂತ್ರ ,ಜನರಲ್ ವಾರ್ಡ್ , ಸಾಮಾನ್ಯ ಹೆರಿಗೆ, ಅಲ್ಟ್ರಾಸೌಂಡ್ ಉಚಿತ ಸೇವೆ ನೀಡುತ್ತಿದ್ದು,ಇತರೆ ರಕ್ತ ಪರೀಕ್ಷೆ, ಅಲ್ಟ್ರಾಸೌಂಡ್ ಒಬಿಜಿ,ಎಕ್ಸರೇ,ಮೆಮೋಗ್ರಾಫಿ,ಇಸಿಜಿ,ಸಿಜಿರಿಯನ್ ,,ಇತರೆ ಶಸ್ತ್ರ  ಚಿಕಿತ್ಸೆಯಂತಹದಕ್ಕೆ ಶೇಕಡಾ 50ರಷ್ಟು ರಿಯಾಯ್ತಿ ದರದಲ್ಲಿದ್ದು ಜಿಲ್ಲೆಯ ಬಡರೋಗಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಮನವಿ ಮಾಡಿಕೊಂಡರು.


Ashita Chandrappa Wedding: ರೋಹನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸ್ಪರ್ಧಿ, ನಟಿ ಆಶಿತಾ ಚಂದ್ರಪ್ಪ


ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ನನ್ನದು ವಿರೋಧವಿಲ್ಲ- ಶಾಸಕ ವೀರಣ್ಣ ಸ್ಪಷ್ಟನೆ


ನಾನು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ವಿರೋಧಿಸಿಲ್ಲ. ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಸರ್ಕಾರಿ ಪದವಿ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಆರಂಭಿಸಿದ್ದೇನೆ. ಕೆಲವರು ಹೋರಾಟ ಮಾಡುತ್ತಿದ್ದಾರೆ.ಆರ್ಥಿಕ ಪರಿಸ್ಥಿತಿಯಿಂದ ಅನುದಾನ ಸಿಗುತ್ತಿಲ್ಲ. ಹೀಗಾಗಿ ವಿಳಂಬವಾಗಿದೆ.ನನ್ನ ರಾಜಕೀಯ ಏಳಿಗೆ ಸಹಿಸದೆ ,ಹೊಟ್ಟೆ ಕಿಚ್ಚಿನಿಂದ ಹೋರಾಟ ಮಾಡುತ್ತಿದ್ದಾರೆ. ನಾನು ತಡೆ ಹಿಡಿ ಎಂದಿಲ್ಲ ಎಂದರು..


ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಆಗಲಿದೆ!!


ಭದ್ರಾ ಯೋಜನೆ ರಾಷ್ಟ್ರೀಯ ಯೋಜನೆ ಘೋಷಣೆಯಾದ ಬಳಿಕ ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಲಿ ಎಂದು ಕೂಗು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೆರಡು ವರ್ಷದೊಳಗೆ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಸಿಎಂ ಒಪ್ಪಿಕೊಂಡಿದ್ದಾರೆ. ಭದ್ರಾ ಯೋಜನೆ ಬಹಳ ಹಳೆಯ ಯೋಜನೆ, ಯುಕೆಪಿಗೆ ಹೆಚ್ಚಿನ ಅನುದಾನ ಕೊಡಿ,ಇಲ್ಲವೇ ರಾಷ್ಟ್ರೀಯ ಯೋಜನೆ ಮಾಡಿ ಎಂದು ಮನವಿ ಮಾಡಿದ್ದೇವೆ. ರಾಷ್ಟ್ರೀಯ ಯೋಜನೆ ಮಾಡಿಯೇ ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದರು.


ಪ್ರವಾಹ ಕೋವಿಡ್ ದಿಂದಾಗಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಯುಕೆಪಿ ಯೋಜನೆ ರಾಷ್ಟ್ರೀಯ ಯೋಜನೆ ಆಗಲಿ, ಇಲ್ಲವೇ ರಾಜ್ಯ ಸರ್ಕಾರ ತುಡುಗು (ಕಳ್ಳತನ) ಮಾಡಿ ದುಡ್ಡು ತಂದು ಪೂರ್ಣಗೊಳಿಸಲಿ ಎಂದು ವಿಧಾನಪರಿಷತ್ ವಿಪಕ್ಷ ಎಸ್ ಆರ್ ಪಾಟೀಲ್ ಆಗ್ರಹಿಸಿದ್ದರು.


ಇನ್ನು ಕೋವಿಡ್ ಲಸಿಕೆಯನ್ನು 45ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಹಾಕಿಸಿಕೊಳ್ಳಿ, ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಮಾಸ್ಕ್ , ಸಾಮಾಜಿಕ ಅಂತರ ,ಸ್ಯಾನಿಟೈಜ್ ಬಳಸುವುದನ್ನು ಮರೆಯಬೇಡಿ ಎಂದು ಮನವಿ ಮಾಡಿಕೊಂಡರು. ಸ್ಪಿನ್ನಿಂಗ್ ಮಿಲ್ ನಲ್ಲಿ ಒಂದು ಸಾವಿರ ಬೆಡ್ ಯುಳ್ಳ ಕೋವಿಡ್ ಸೆಂಟರ್ ತೆರೆಯಲು ಯೋಜಿಸಲಾಗಿತ್ತು. ಸರ್ಕಾರದಿಂದ ಯಾವುದೇ ಅನುದಾನ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು