ತನ್ವೀರ್ ಕೊಲೆ ಯತ್ನಕ್ಕೆ ಸ್ಫೋಟಕ ತಿರುವು; ಹಿಂದೂ ಮುಖಂಡನ ಕೊಲೆಗೂ ಈ ಪ್ರಕರಣಕ್ಕೂ ಇದೆ ಲಿಂಕ್?

ತನ್ವೀರ್ ಕೊಲೆಗೆ ಈ ಹಿಂದೆಯೂ ಅಬೀದ್ ಪಾಷ ಪ್ರಯತ್ನ ನಡೆಸಿದ್ದ. ಆದರೆ, ಎರಡು ಮೂರು ಬಾರಿ ಆತ ವಿಫಲನಾಗಿದ್ದ. ಮುಸ್ಲಿಮರೇ ಹೆಚ್ಚಿರುವ ಸ್ಥಳದಲ್ಲಿ ಕೊಲೆ ನಡೆಸಲು ಈತ ಸ್ಕೆಚ್​ ಹಾಕುತ್ತಿದ್ದ.

Rajesh Duggumane | news18-kannada
Updated:November 22, 2019, 10:40 AM IST
ತನ್ವೀರ್ ಕೊಲೆ ಯತ್ನಕ್ಕೆ ಸ್ಫೋಟಕ ತಿರುವು; ಹಿಂದೂ ಮುಖಂಡನ ಕೊಲೆಗೂ ಈ ಪ್ರಕರಣಕ್ಕೂ ಇದೆ ಲಿಂಕ್?
ತನ್ವೀರ್​ ಸೇಟ್​-ಆರೋಪಿ ಫರಾನ್​
  • Share this:
ಬೆಂಗಳೂರು (ನ.22): ಶಾಸಕ ತನ್ವೀರ್​ ಸೇಠ್​ ಕೊಲೆ ಪ್ರಯತ್ನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಚ್ಚರಿ ಎಂದರೆ ಹಿಂದೂ ಮುಖಂಡ ರಾಜು ಕೊಲೆಗೂ ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣಕ್ಕೂ ಲಿಂಕ್​ ಇದೆ ಎನ್ನುವ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.

ರಾಜು ಕೊಲೆಯ ಪ್ರಮುಖ ಆರೋಪಿ ಅಬೀದ್ ಪಾಷ ಈ ಪ್ರಕರಣದ ಮಾಸ್ಟರ್ ಮೈಂಡ್​ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಬೀದ್​ ಪಾಷಾನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೆಲ ಮಹತ್ವದ ಮಾಹಿತಿ ಲಭ್ಯವಾಗಿದೆ.

ಮೈಸೂರಿನಲ್ಲಿ ಪಿಎಫ್‌ಐನ 30 ತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎನ್ನುವ ವಿಚಾರವನ್ನು ಅಬೀದ್​ ಪಾಷಾ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಒಂದು ತಂಡದಲ್ಲಿ 15 ಜನರಂತೆ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕಾರಣಿಗಳು, ಧರ್ಮಗುರುಗಳು, ಗಣ್ಯ ವ್ಯಕ್ತಿಗಳೇ ಇವರ ಟಾರ್ಗೆಟ್.

ಗಣ್ಯ ವ್ಯಕ್ತಿಗಳ ಬಗ್ಗೆ ನಿಗಾ ಇಡಲು ಪ್ರತ್ಯೇಕ ತಂಡಗಳ ರಚನೆ ಮಾಡಲಾಗಿದೆಯಂತೆ. ಪ್ರತಿ ಹಂತದಲ್ಲಿ ಪ್ರಮುಖ ವ್ಯಕ್ತಿಗಳ ಚಲನವಲನ ಅದರ ಪರಿಣಾಮಗಳನ್ನ ಸಂಘಟನೆ ಮುಖಂಡರಿಗೆ ಸದಸ್ಯರು ತಿಳಿಸುತ್ತಿದ್ದರು. ತನ್ವೀರ್ ಹತ್ಯೆ ಯತ್ನ ಪ್ರಕರಣವನ್ನು ಇದೇ ರೀತಿ ವಾಚ್ ಮಾಡಲಾಗಿತ್ತು. ರಾಜಕೀಯವಾಗಿ ಸೋಲಿಸಲು ಸಾಧ್ಯವಾಗದಿದ್ದಾಗ ಕೊಲೆಗೆ ಯತ್ನಿಸಲಾಗಿದೆ ಎನ್ನುವ ವಿಚಾರ ಹೊರಬಿದ್ದಿದೆ.

ರಾಜು‌ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಅಬೀದ್ ಪಾಷಾ ಜೈಲಿನಿಂದ ಹೊರಬಂದಿದ್ದ. ಸದ್ಯ, ಅಬೀದ್ ಪಾಷಾ ಜೊತೆ 5 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ದಿನ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ​ಅನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

ಹಲವು ಬಾರಿ ಕೊಲೆಗೆ ಯತ್ನ:

ತನ್ವೀರ್ ಕೊಲೆಗೆ ಈ ಹಿಂದೆಯೂ ಅಬೀದ್ ಪಾಷಾ ಪ್ರಯತ್ನ ನಡೆಸಿದ್ದ. ಆದರೆ, ಎರಡು ಮೂರು ಬಾರಿ ಆತ ವಿಫಲನಾಗಿದ್ದ. ಮುಸ್ಲಿಮರೇ ಹೆಚ್ಚಿರುವ ಸ್ಥಳದಲ್ಲಿ ಕೊಲೆ ನಡೆಸಲು  ಸ್ಕೆಚ್​ ಹಾಕುತ್ತಿದ್ದ. ಮೈಸೂರಿನ ಮಿಲಾದ್ ಪಾರ್ಕ್ ಬಳಿಯೂ ತನ್ವೀರ್​ ಕೊಲೆಗೆ ಯತ್ನ ನಡೆಸಿ ಫೇಲ್​ ಆಗಿದ್ದ.ಕೊಲೆ ಮಾಡಲು ಪ್ರಯತ್ನ ನಡೆಸಿದ್ದ ಫರಾನ್ ಪಾಷಾಗೆ ಅಬೀದ್ ಪಾಷಾ ಟ್ರೈನಿಂಗ್​ ನೀಡಿದ್ದ. ತೀವ್ರ ವಿಚಾರಣೆ ನಡೆಸಿದ ನಂತರ ಫರಾನ್ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಅಬೀದ್ ಪಾಷಾ ಜೊತೆ ಅಕ್ರಂ, ನೂರಾ ಖಾನ್, ಮುಜೀಬ್ ಹಾಗೂ ಮುಜಾಮಿಲ್‌ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ತನಿಖೆಗೆ ಕೇಂದ್ರ ಗುಪ್ತದಳದ ನೆರವು:

ಘಟನೆಯ ಸಂಪೂರ್ಣ ಹಾಗೂ ವೈಜ್ಞಾನಿಕ ತನಿಖೆಗೆ ಕೇಂದ್ರ ಗುಪ್ತದಳದ ನೆರವು ನೀಡುತ್ತಿದೆ. ಕಳೆದ ಮೂರು ದಿನಗಳಿಂದ ಕೇಂದ್ರ ಗುಪ್ತದಳದ ಅಧಿಕಾರಿಗಳ ತಂಡ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಓರ್ವ ಡಿಸಿಪಿ ಹಾಗೂ ಎಸ್​ಪಿ ದರ್ಜೆಯ ಅಧಿಕಾರಿ ಸೇರಿ ಮೂವರ ಕೇಂದ್ರ ಗುಪ್ತದಳದ ತಂಡ ಮೈಸೂರಿನಲ್ಲೆ ಠಿಕಾಣಿ ಹೂಡಿದೆ. ಕೇಂದ್ರ ಗುಪ್ತದಳದ ತಂಡ ಪ್ರಕರಣದ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದೆ.

(ವರದಿ: ಪುಟ್ಟಪ್ಪ)
First published: November 22, 2019, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading