• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ವೇದಾವತಿ ನದಿ ಪಾತ್ರಗಳಲ್ಲಿ ಮರಳು ತೆಗೆಯಲು ಶಾಸಕ ಟಿ.ರಘುಮೂರ್ತಿ ತೀವ್ರ ವಿರೋಧ; ಜನರ ಜೊತೆ ಧರಣಿ ಕೂರುವುದಾಗಿ ಎಚ್ಚರಿಕೆ

ವೇದಾವತಿ ನದಿ ಪಾತ್ರಗಳಲ್ಲಿ ಮರಳು ತೆಗೆಯಲು ಶಾಸಕ ಟಿ.ರಘುಮೂರ್ತಿ ತೀವ್ರ ವಿರೋಧ; ಜನರ ಜೊತೆ ಧರಣಿ ಕೂರುವುದಾಗಿ ಎಚ್ಚರಿಕೆ

ಶಾಸಕ ಟಿ.ರಘುಮೂರ್ತಿ

ಶಾಸಕ ಟಿ.ರಘುಮೂರ್ತಿ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಕೃಷಿಗೆ ಹಾಗೂ ಕುಡಿಯುವ ನೀರು ಸಮರ್ಪಕವಾಗಿ ಸಿಗುವುದಿಲ್ಲ. ಅದರಲ್ಲೂ ಬೇಸಿಗೆ ಸಮಯಕ್ಕೆ  ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗುತ್ತದೆ.

  • Share this:

ಚಿತ್ರದುರ್ಗ(ಏ.18): ವೇದಾವತಿ ನದಿ ಪಾತ್ರಗಳಲ್ಲಿ ನಿಯಮ ಮೀರಿ ಮರಳು ತೋಡಲಾಗಿದೆ ಅಂಥವರ ವಿರುದ್ದ ಕ್ರಮ ಕೈಗೊಳ್ಳಬೇಕು. ಆಳವಾಗಿ ಮರಳು ತುಂಬಿದ್ದು, ಅಂತರ್ಜಲ ಬತ್ತಿಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ.


ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಕೃಷಿಗೆ ಹಾಗೂ ಕುಡಿಯುವ ನೀರು ಸಮರ್ಪಕವಾಗಿ ಸಿಗುವುದಿಲ್ಲ. ಅದರಲ್ಲೂ ಬೇಸಿಗೆ ಸಮಯಕ್ಕೆ  ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗುತ್ತದೆ. ಅಷ್ಟೆ ಅಲ್ಲ, ಮಳೆಯನ್ನೆ ಆಶ್ರಯಿಸಿ ಬದುಕು ಕಟ್ಟಿಕೊಳ್ಳುವ ಇಲ್ಲಿನ ಜನರು, ಬೋರ್ವೆಲ್ ಮೊರೆ ಹೋಗಿ ಸಣ್ಣಪುಟ್ಟ ತೋಟಗಳನ್ನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಶತಸಿದ್ದವಾಗಿರುತ್ತದೆ.


ಆದ್ದರಿಂದಲೇ ಈ ಎರಡೂ ತಾಲ್ಲೂಕುಗಳಲ್ಲಿ  ನೀರಿನ ಅಭಾವ ಹೆಚ್ಚುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಎಚ್ಚೆತ್ತಿರುವ ಶಾಸಕ ಟಿ.ರಘುಮೂರ್ತಿ ಹಾಗೂ ಸಚಿವ ಬಿ.ಶ್ರೀರಾಮುಲು ವಾಣಿ ವಿಲಾಸ ಸಾಗರದಿಂದ ವೇದಾವತಿ ನದಿ ಪಾತ್ರಗಳ ಮೂಲಕ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕಿನ ಹಳ್ಳಿಗಳಿಗಾಗಿ ನೀರು ಬಿಡಿಸಲು ಸರ್ಕಾರದಿಂದ ಆದೇಶ ಮಾಡಿಸಿದ್ದಾರೆ.


ಕೊರೋನಾ ಲಾಕ್​ಡೌನ್ ನಡುವೆಯೂ 69 ಕೋಟಿ ಆದಾಯ ಗಳಿಸಿದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ


ಆದರೆ ನೀರು ಬಿಡುವ ಸಮಯದಲ್ಲಿ ನದಿ ಪಾತ್ರಗಳಲ್ಲಿ ಮರಳು ತೆಗೆಯಲು ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ  ವಿಜ್ಞಾನ ಇಲಾಖೆ ಮರಳು ಪಾಯಿಂಟ್ ಟೆಂಡರ್ ನೀಡಿದ್ದು, ಅಲ್ಲಿ ನಿಯಮ ಮೀರಿ‌ ಮರಳು ತೆಗೆಯಲಾಗುತ್ತಿದೆ. ಆದರಿಂದ ನದಿ ಪಾತ್ರದ ಅಕ್ಕಪಕ್ಕದ ಗ್ರಾಮಗಳಲ್ಲಿ ಅಂತರ್ಜಲ ಕುಸಿದು ಜನರಿಗೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಅಷ್ಟೆ ಅಲ್ಲದೇ ಬೋರ್ವೆಲ್ ಗಳಲ್ಲಿ ನೀರು ಬರದೆ ಬತ್ತಿ ಹೋಗುತ್ತಿವೆ.


ಹಾಗಾಗಿ ಈ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ  ಆಕ್ರೋಶಗೊಂಡ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ವೇದಾವತಿ ನದಿ ಪಾತ್ರಗಳಲ್ಲಿ ನಿಯಮ ಮೀರಿ ಮರಳು ತುಂಬಿ‌ರುವ ಗುಂಡಿಗಳನ್ನ ಮುಚ್ಚಬೇಕು. ಯಾವುದೇ ಕಾರಣಕ್ಕೂ ಮರಳು ತೆಗೆಯಲು ಅವಕಾಶ ನೀಡಬಾರದು ಅಂತ ಅಧಿಕಾರಿಗಳಿಗೆ ತಿಳಿಸಿದ್ದರು.


ಆದರೆ ಶಾಸಕರ ಮಾತಿಗೆ ಕಿಮ್ಮತ್ತು ಕೊಡದ ಗಣಿ ಇಲಾಖೆ  ಅಧಿಕಾರಿಗಳು ಚಳ್ಳಕೆರೆ ತಾಲೂಕಿನ ಗೊರ್ಲತ್ತು, ಕಲಮರಹಳ್ಳಿ ಗ್ರಾಮಗಳ ಬಳಿಯ ವೇದಾವತಿ ನದಿ ಪಾತ್ರಗಳಲ್ಲಿ ಮತ್ತೆ ಮರಳು ತುಂಬಲು ಅನುಮತಿ‌ ನೀಡಿದ್ದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.


ಇದರಿಂದ ಬೇಸರ ವ್ಯಕ್ತಪಡಿಸಿರುವ ಶಾಸಕ ರಘುಮೂರ್ತಿ, ಗಣಿ ಇಲಾಖೆ ಡಿಡಿ ಚಂದ್ರಶೇಖರ್​​ಗೆ ಫೋನ್ ಮಾಡಿ ನೀವು ಈಗಲೇ ಮರಳು ಗಣಿಗಾರಿಕೆ ತಡೆಯಬೇಕು ಗುಂಡಿ ಮುಚ್ಚಿಸಬೇಕು, ಇಲ್ಲವಾದಲ್ಲಿ ನದಿ ಪಾತ್ರದ ಜನರ ಜೊತೆ ನಾನೂ ಧರಣಿ ಕೂರುತ್ತೇನೆ ಅಂತ ತಾಕೀತು ಮಾಡಿದ್ರು. ಅಷ್ಟೆ ಅಲ್ಲದೇ ನಿಮ್ಮ ಕಚೇರಿ, ಡಿಸಿ ಕಚೇರಿ ಬಳಿಯೂ ಟೆಂಟ್ ಹಾಕುತ್ತೇನೆ ಅಂತ ಧರಣಿ,ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Published by:Latha CG
First published: