ಸಮುದಾಯದ ಒಳಿತಿಗೆ ಸ್ವಾಮೀಜಿ ಆದೇಶಿಸಿದರೆ ರಾಜೀನಾಮೆ ನೀಡಲು ಸಿದ್ಧ; ಮಾಜಿ ಸಚಿವ ಶ್ರೀರಾಮುಲು

ಶ್ರೀರಾಮುಲು ಯಾವುದೇ ಪಕ್ಷದವನಾಗಿರಬಹುದು. ಆದ್ರೆ ಸಮುದಾಯ ಎಂದು ಬಂದರೆ ನಾವೆಲ್ಲರೂ ಒಂದೇ. ಏಕಲವ್ಯ ಗುರಿ ಇಟ್ಟ ಬಾಣ ಯಾವತ್ತೂ ತಪ್ಪಿಲ್ಲ. ನಾವು ಗುರಿಯಿಟ್ಟು ಬೀದಿಗಿಳಿದರೆ ತಪ್ಪ ಬಾರದು.

Seema.R | news18
Updated:June 25, 2019, 4:08 PM IST
ಸಮುದಾಯದ ಒಳಿತಿಗೆ ಸ್ವಾಮೀಜಿ ಆದೇಶಿಸಿದರೆ ರಾಜೀನಾಮೆ ನೀಡಲು ಸಿದ್ಧ; ಮಾಜಿ ಸಚಿವ ಶ್ರೀರಾಮುಲು
ಶಾಸಕ ಶ್ರೀರಾಮುಲು
  • News18
  • Last Updated: June 25, 2019, 4:08 PM IST
  • Share this:
ಬೆಂಗಳೂರು (ಜೂ.25): ನನ್ನ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ನಮ್ಮ ಸ್ವಾಮೀಜಿಗಳ ಆಶೀವಾರ್ದದಿಂದ ನಾವು ಇಂದು ಇಲ್ಲಿದ್ದೇವೆ. ಸಮುದಾಯದ ಒಳಿತಿಗೆ ಸ್ವಾಮೀಜಿಗಳು ಆದೇಶ ನೀಡಿದರೆ ತಾನು ರಾಜೀನಾಮೆ ನೀಡಲು ಕೂಡ ಸಿದ್ಧನಿದ್ದೇನೆ ಎಂದು ಶಾಸಕ ಶ್ರೀರಾಮುಲು ಗುಡುಗಿದ್ದಾರೆ.

ಪರಿಶಿಷ್ಟ ಪಂಗಡದ 7.5ರಷ್ಟು ಮೀಸಲಾತಿಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು,  ಇಂದು ನಾವು ಈ ಸ್ಥಾನದಲ್ಲಿರಲು ಕಾರಣ ಸ್ವಾಮೀಜಿ. ನಮ್ಮವರ ಅಭಿವೃದ್ಧಿ ಮುಖ್ಯ. ನಮ್ಮ ಸಮುದಾಯದ ಪರ ಹೋರಾಡಲು ನಾವು ಸಿದ್ಧ ಎಂದರು.

ವಾಲ್ಮೀಕಿ ಸಮುದಾಯದ ಪ್ರತಿಭಟನೆಯಲ್ಲಿನ ಜನರು


ಕಾಲ್ನಡಿಗೆ ಮೂಲಕ ತುಂಬಾ‌ ಕಷ್ಟಪಟ್ಟು ಸ್ವಾಮೀಜಿಗಳು ಇಂದು ಬೆಂಗಳೂರಿಗೆ ಬಂದು ತಲುಪಿದ್ದಾರೆ. ಈ ಹೋರಾಟಕ್ಕೆ ಬೆಂಬಲ‌ ಮಾತ್ರವಲ್ಲದೇ ನಮ್ಮ ರಕ್ತವನ್ನು ಕೊಡುತ್ತೇವೆ.‌ ಬಿಸಿಲು‌ ಚಳಿ ಲೆಕ್ಕಿಸದೇ ಸಮುದಾಯಸ್ಥರು ಬೆಂಗಳೂರಿಗೆ ಇಂದು ಪಾದಯಾತ್ರೆ ಮೂಲಕ ತಲುಪಿದ್ದಾರೆ. ನಮ್ಮ ಕೂಗಿಗೆ ಎಲ್ಲಾ ಸ್ವಾಮೀಜಿಗಳು ಇದಕ್ಕೆ ಸಹಕಾರ ಕೊಟ್ಟಿದ್ದಾರೆ.  ಪಾದಯಾತ್ರೆ ನಡೆಸಿದ ಸ್ವಾಮೀಜಿಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಇದರ ಪ್ರತಿಫಲ ನಮಗೆ ಸಿಗಲಿದೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ಉಜ್ವಲ ಭವಿಷ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಾಮುಲು ಯಾವುದೇ ಪಕ್ಷದವನಾಗಿರಬಹುದು. ಆದ್ರೆ ಸಮುದಾಯ ಎಂದು ಬಂದರೆ ನಾವೆಲ್ಲರೂ ಒಂದೇ. ಏಕಲವ್ಯ ಗುರಿ ಇಟ್ಟ ಬಾಣ ಯಾವತ್ತೂ ತಪ್ಪಿಲ್ಲ. ನಾವು ಗುರಿಯಿಟ್ಟು ಬೀದಿಗಿಳಿದರೆ ತಪ್ಪ ಬಾರದು. ತಮ್ಮವರು ಬೀದಿಗಿಳಿದರೆ ಮುಖ್ಯಮಂತ್ರಿಗಳು ನಡುಗಬೇಕು ಎಂದಿದ್ದಾರೆ.

ಮೀಸಲಾತಿ ಭಿಕ್ಷೆಯಲ್ಲ: ಉಗ್ರಪ್ಪ

ಮೀಸಲಾತಿ ಭಿಕ್ಷೆಯಲ್ಲ, ಅದು ಸಾಂವಿಧಾನಿಕ ಹಕ್ಕು. ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಮೀಸಲಾತಿ ಸಿಗಬೇಕು. ಉದ್ಯೋಗ, ಶಿಕ್ಷಣದಲ್ಲೂ ಮೀಸಲಾತಿ ಹೆಚ್ಚಿಸಬೇಕು. ನ್ಯಾಯಯುತವಾಗಿ ನಾವು ಹೋರಾಡುತ್ತಿದ್ದೇವೆ. ಕಳೆದ 16ದಿನಗಳಿಂದ ಈ ಪಾದಯಾತ್ರೆ ನಡೆಯುತ್ತಿದೆ. ಪ್ರಾರಂಭದಲ್ಲಿ ಕೇವಲ 8 ಜಾತಿಗಳಿಂದ ಕೂಡಿದ್ದ ಪರಿಶಿಷ್ಟ ವರ್ಗ ಈಗ 26ಕ್ಕೂ ಅಧಿಕ ಜಾತಿಗಳ ಗುಂಪು ಒಂದಾಗಿದೆ ಎಂದು ಮಾಜಿ ಶಾಸಕ ವಿಎಸ್​ ಉಗ್ರಪ್ಪ ತಿಳಿಸಿದರು.ಸಾಮೂಹಿಕ ರಾಜೀನಾಮೆಗೆ ಸಿದ್ಧ; ನಾಗೇಂದ್ರಬಾಬು

ನಾವು ನಡೆಸುತ್ತಿರುವುದು ನ್ಯಾಯಯುತವಾದ ಹೋರಾಟ. ಸಂವಿಧಾನದ ಹಕ್ಕಿನ ರಕ್ಷಣೆಗೆ ಪಕ್ಷಬೇಧ ಮರೆತು ಎಲ್ಲಾ ಪಕ್ಷದ ಮುಖಂಡರು ಹೋರಾಟದಲ್ಲಿ ಭಾಗಿಯಾಗಿದ್ದೇವೆ. ಹೋರಾಟ‌ಕ್ಕೆ ಸ್ಪಂದಿಸದಿದಿದ್ದರೆ ಸಾಮೂಹಿಕ ರಾಜೀನಾಮೆ ನೀಡಲು ಸಿದ್ಧ ಎಂದು ಶಾಸಕ ನಾಗೇಂದ್ರಬಾಬು ಎಚ್ಚರಿಕೆ ನೀಡಿದರು.

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಕೂಗು ಹೆಚ್ಚಾದ ಹಿನ್ನೆಲೆ  ಜೂ.9ರಿಂದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ರಾಜಧಾನಿಗೆ ಪಾದಯಾತ್ರೆ ಆರಂಭಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳ ಸಮುದಾಯಸ್ಥರು ಇದಕ್ಕೆ ಸಾಥ್​ ನೀಡಿದ್ದರು.

ಇದನ್ನು ಓದಿ: ಕೆಎಂಎಫ್​ ಅಧ್ಯಕ್ಷ ಗಾದಿ ಮೇಲೆ ರೇವಣ್ಣ ಕಣ್ಣು; ಮತ್ತೊಂದು ಹಂತದ ಕಿತ್ತಾಟಕ್ಕೆ ಮೈತ್ರಿಯಲ್ಲಿ ಸಜ್ಜಾಗಿದೆ ವೇದಿಕೆ!

ಕಳೆದ 16ಗಳಿಂದ ರಾಜ್ಯದ ವಿವಿಧ ಮೂಲೆಗಳಿಂದ ಬಂದ ಸಮುದಾಯದ ಜನರು ಇಂದು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿಯಲ್ಲಿ ಪ್ರತಿಭಟನೆ ಕಾವೇರಿದ್ದು ಸಿಎಂ ಕುಮಾರಸ್ವಾಮಿ ಸಮುದಾಯದ ಮುಖ್ಯಸ್ಥರೊಂದಿಗೆ ಮಾತುಕತೆ ಮಾಡುವುದಾಗಿ ತಿಳಿಸಿದರು.

ಸಿಎಂ‌ ಕುಮಾರಸ್ವಾಮಿಗೆ ಎರಡು ಗಂಟೆ ಗಡುವು ನೀಡಿದ್ದು, ಪ್ರಸನ್ನಾನಂದಪುರಿ ಶ್ರೀಯನ್ನು ಭೇಟಿ ಮಾಡಬೇಕು ಒಂದು ವೇಳೆ ಭೇಟಿ ಯಾಗದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಲಾಗಿದೆ.

First published:June 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ