ದೇವರಾಣೆ ನಾವು ಆಪರೇಷನ್​ ಕಮಲ ಮಾಡ್ತಿಲ್ಲ, ತಾಕತ್ತಿದ್ದರೆ ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಿ; ಶ್ರೀರಾಮುಲು ಸವಾಲು

ಯಾವಾಗಲೋ ಹಿಂದೊಮ್ಮೆ ನಾವು ಆಪರೇಷನ್​ ಕಮಲ ಮಾಡಿದ್ದೆವು ಎಂಬ ಕಾರಣಕ್ಕೆ ಬಿಜೆಪಿ ಮೇಲೆ ಆರೋಪ ಮಾಡಲಾಗುತ್ತಿದೆ. ನಾವು ಯಾರ ತಂಟೆಗೂ ಹೋಗಿಲ್ಲ. ಆದರೆ, ಮುಖ್ಯಮಂತ್ರಿಗಳೇ ಬಿಜೆಪಿ ಪಕ್ಷದ ಶಾಸಕರನ್ನು ಸೆಳೆಯಲು ಆಪರೇಷನ್​ ಮಾಡುತ್ತಿದ್ದಾರೆ ಎಂದು ಶ್ರೀರಾಮುಲು ಹೊಸ ಬಾಂಬ್​ ಹಾಕಿದ್ದಾರೆ.

Sushma Chakre | news18
Updated:December 5, 2018, 3:34 PM IST
ದೇವರಾಣೆ ನಾವು ಆಪರೇಷನ್​ ಕಮಲ ಮಾಡ್ತಿಲ್ಲ, ತಾಕತ್ತಿದ್ದರೆ ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಿ; ಶ್ರೀರಾಮುಲು ಸವಾಲು
ಶ್ರೀರಾಮುಲು
  • News18
  • Last Updated: December 5, 2018, 3:34 PM IST
  • Share this:
ಚಿತ್ರದುರ್ಗ (ಡಿ. 5): ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ನಾವು ಯಾವುದೇ ಆಪರೇಷನ್​ ಕಮಲಕ್ಕೆ ಕೈಹಾಕಿಲ್ಲ. ಕುಣಿಯಲು ಆಗದವರು ನೆಲ ಡೊಂಕು ಅಂದ ಹಾಗೆ ಸುಮ್ಮನೆ ನಾಟಕ ಮಾಡಬೇಡಿ. ನಾವು ಯಾರ ತಂಟೆಗೂ ಹೋಗಿಲ್ಲ. ನಿಮ್ಮ ಕೆಲಸ ನೀವು ಮಾಡಿ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶ್ರೀರಾಮುಲು, ಪದೇ ಪದೆ ಆಪರೇಷನ್​ ಕಮಲದ ವಿಚಾರವನ್ನು ಇಟ್ಟುಕೊಂಡು ಯಾಕೆ ಚರ್ಚೆ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಯಾವಾಗಲೋ ಒಮ್ಮೆ ಆಪರೇಷನ್​ ಕಮಲ ಮಾಡಿದ್ದೇವೆ ಎಂದ ಮಾತ್ರಕ್ಕೆ ಅದನ್ನೇ ಇಟ್ಟುಕೊಂಡು ಟೀಕಿಸುವುದು ಸರಿಯಲ್ಲ. ನಮ್ಮ ಮೇಲೆ ಆರೋಪ ಮಾಡುತ್ತ ಜೆಡಿಎಸ್​ನವರೇ ನಮ್ಮ ಎಂಎಲ್​ಎಗಳನ್ನು ಆಪರೇಷನ್​ ಮಾಡಲು ಹೊರಟಿದ್ದಾರೆ ಎಂದು ಹೊಸ ಬಾಂಬ್​ ಹಾಕಿದ್ದಾರೆ.

ಇದನ್ನೂ ಓದಿ: 'ಎಲ್ಲದಕ್ಕೂ ಕಾಲ ಕೂಡಿಬಂದಿದೆ, ಬೆಳಗಾವಿ ಅಧಿವೇಶನದ ನಂತರ ಸರ್ಕಾರ ಬಿದ್ದೇ ಬೀಳುತ್ತೆ'; ಸದಾನಂದ ಗೌಡ ವಿಶ್ವಾಸ

ಬಿಜೆಪಿಯವರು ಕಾಂಗ್ರೆಸ್​-ಜೆಡಿಎಸ್​ ನಾಯಕರನ್ನು ಭೇಟಿ ಮಾಡಿಲ್ಲ. ಯಾರನ್ನೂ ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆದಿಲ್ಲ. ಕಾಂಗ್ರೆಸ್​ ನಾಯಕರು ಜೆಡಿಎಸ್​ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಟ್ಟಿರುವುದರಿಂದ ಕಾಂಗ್ರೆಸ್​ ಶಾಸಕರು ಅಸಮಾಧಾನಗೊಂಡಿದ್ದಾರೆ. ತಾವು ಮಾಡಿದ ತಪ್ಪಿನಿಂದ ಅವರ ಪಕ್ಷದ ಶಾಸಕರು ಬೇರೆ ಪಕ್ಷದೆಡೆಗೆ ಗಮನಹರಿಸುತ್ತಿದ್ದಾರೆ. ಅದನ್ನು ಪ್ಯಾಚ್​ ಮಾಡಲು ಕಾಂಗ್ರೆಸ್​​ ನಾಯಕರು ಆಪರೇಷನ್​ ಕಮಲ ಎಂಬ ಅಸ್ತ್ರವನ್ನು ಬಳಸಿಕೊಂಡು ನಮ್ಮ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ. ಅವರ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡರೆ ಬೇರೆಯವರ ಮೇಲೆ ಆರೋಪ ಮಾಡುವುದು ತಪ್ಪುತ್ತದೆ ಎಂದು ಮೊಳಕಾಲ್ಮೂರಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: '6 ತಿಂಗಳಿನಿಂದ ಭೂಕಂಪ ಆಗ್ತಾನೇ ಇದೆ'; ಜಾವಡೇಕರ್ ಧಮಾಕಾ ಹೇಳಿಕೆಗೆ ಎಚ್ಡಿಕೆ ಸೇರಿ ಮೈತ್ರಿ ನಾಯಕರ ತಿರುಗೇಟು

ಬಿಜೆಪಿ ಮೇಲೆ ಸುಳ್ಳು ಆರೋಪ ಸೃಷ್ಟಿ ಮಾಡುವುದು ಮೈತ್ರಿ ಸರ್ಕಾರಕ್ಕೆ ಹೊಸ ಫ್ಯಾಷನ್  ಆಗಿದೆ. ಆ ಹೊಸ ಫ್ಯಾಷನ್​ನಲ್ಲಿ ಸಿಕ್ಕಿಕೊಳ್ಳಲು ನಾವು ರೆಡಿ ಇಲ್ಲ. ಮೈತ್ರಿ ಸರ್ಕಾರದಲ್ಲಿ ಒಗ್ಗಟ್ಟಿಲ್ಲ. ತಾಕತ್ತಿದ್ದರೆ ಅವರ ಪಕ್ಷದ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲಿ. ಬರಗಾಲದ ಬಗ್ಗೆ ಗಮನ ನೀಡದೆ, ಅಪರೇಷನ್ ಕಮಲ ಅಂತ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿ ಅನುಕಂಪ ಬರುವಂತೆ ಮಾಡುತ್ತಿದ್ದಾರೆ.
ಜನರನ್ನು ತಪ್ಪುದಾರಿಗೆ ಎಳೆದುಕೊಂಡು ಹೋಗಿ ಮಸಿ ಬಳಿಯುವ ಕೆಲಸ ಮಾಡುವುದನ್ನು ಕಾಂಗ್ರೆಸ್​ ನಾಯಕರು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
First published:December 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading