ಪಕ್ಷದಲ್ಲಿ ನಮ್ಮ ತಂದೆಯನ್ನು ಮೂಲೆಗುಂಪು ಮಾಡಿದ್ದು ಸೋಕಾಲ್ಡ್​ ಲೀಡರ್​​; ಸೌಮ್ಯಾ ರೆಡ್ಡಿ

ಏಳು ಬಾರಿ ಶಾಸಕ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿದ ತಂದೆಯನ್ನು ಮೈತ್ರಿ ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ. ಇದಕ್ಕೆ ಕಾರಣ ಸೋ ಕಾಲ್ಡ್​ ಲೀಡರ್​. ಅವರ ಹೆಸರನ್ನು ನಾನು ಹೇಳಲು ಇಚ್ಛಿಸುವುದಿಲ್ಲ.

Seema.R | news18
Updated:July 13, 2019, 1:19 PM IST
ಪಕ್ಷದಲ್ಲಿ ನಮ್ಮ ತಂದೆಯನ್ನು ಮೂಲೆಗುಂಪು ಮಾಡಿದ್ದು ಸೋಕಾಲ್ಡ್​ ಲೀಡರ್​​; ಸೌಮ್ಯಾ ರೆಡ್ಡಿ
ಸೌಮ್ಯಾ ರೆಡ್ಡಿ-ರಾಮಲಿಂಗಾರೆಡ್ಡಿ
  • News18
  • Last Updated: July 13, 2019, 1:19 PM IST
  • Share this:
ಬೆಂಗಳೂರು (ಜು.13): ಪಕ್ಷದಲ್ಲಿ ನಮ್ಮ ತಂದೆ ಮೂಲೆಗುಂಪಾಗಲು ಕಾರಣ ಸೋಕಾಲ್ಡ್​​ ಸ್ಟೇಟ್​ ಲೀಡರ್​. ಇದೇ ಬೇಸರದಿಂದ ಅವರು ರಾಜೀನಾಮೆ ನೀಡಿರುವುದು ಎಂದು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಗುಡುಗಿದ್ದಾರೆ. 

ನಮ್ಮ ತಂದೆ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಅವರು ಸಚಿವ ಸ್ಥಾನ ಸಿಗುತ್ತದೆ ಎಂದು ರಾಜೀನಾಮೆ ನೀಡಿಲ್ಲ. ಅವರ ರಾಜೀನಾಮೆಗೆ ಕಾರಣ ಬೇರೆ. ಅದು ಎಲ್ಲರಿಗೂ ಗೊತ್ತಿದೆ ಎಂದರು.

ಏಳು ಬಾರಿ ಶಾಸಕ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿರುವ ತಂದೆಯನ್ನು ಮೈತ್ರಿ ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ. ಇದಕ್ಕೆ ಕಾರಣ ಸೋ ಕಾಲ್ಡ್​ ಲೀಡರ್​. ಅವರ ಹೆಸರನ್ನು ನಾನು ಹೇಳಲು ಇಚ್ಛಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕೆಲವು ನಾಯಕರು ತಂದೆಯವರನ್ನು ಹೇಗೆ ನಡೆಸಿಕೊಂಡರು ಎಂಬುದು ಗೊತ್ತಿದೆ. 45 ವರ್ಷಗಳಿಂದ ಕಾಂಗ್ರೆಸ್​ಗಾಗಿ ದುಡಿದಿದ್ದಾರೆ. ಈಗ ರಾಜೀನಾಮೆ ನೀಡಿದ ಮೇಲೆ  ಮನವೊಲಿಕೆಗೆ ಮುಂದಾಗುತ್ತಿದ್ದಾರೆ. ಈಗ ಅವರಿಗೆ ನಮ್ಮ ತಂದೆ ಬೆಲೆ ಅರ್ಥವಾಯಿತಾ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಕಿಡಿ ಕಾರಿದರು.

ಶಾಸಕ ಸ್ಥಾನಕ್ಕೆ  ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದಾಗಿನಿಂದ ಯಾರಿಂದ ತಾವು ಈ ನಿರ್ಧಾರ ತೆಗೆದುಕೊಂಡೆವು. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಇದುವರೆಗೂ ರಾಮಲಿಂಗಾರೆಡ್ಡಿ ತಿಳಿಸಿಲ್ಲ. ರಾಮಲಿಂಗಾ ರೆಡ್ಡಿ ಬೆನ್ನಲ್ಲೇ  ಮಗಳು ಸೌಮ್ಯಾ  ರೆಡ್ಡಿ ಪಕ್ಷದ ನಾಯಕರ ನಡೆ ಬಗ್ಗೆ ಬೇಸರ ಹೊರಹಾಕಿದರು. ಆದರೆ ಯಾವ ನಾಯಕರಿಂದ ಈ ರೀತಿ ಪರಿಸ್ಥಿತಿ ಉದ್ಭವಿಸಿತು ಎಂಬುದರ ಬಗ್ಗೆ ಮಾತ್ರ ಬಾಯ್ಬಿಟ್ಟಿಲ್ಲ.

ಇದನ್ನು ಓದಿ: ಸೋಮವಾರದವರೆಗೂ ತ್ರಿಪಕ್ಷಗಳ ಶಾಸಕರಿಗೆ ರೆಸಾರ್ಟ್​ವಾಸವೇ ಗತಿ; ವಿಶ್ವಾಸ ಗಳಿಸಲು ಹೆಚ್​ಡಿಕೆ ಕಸರತ್ತು

ಶಾಸಕರ ರೆಸಾರ್ಟ್​ ರಾಜಕಾರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಶಾಸಕರು ರೆಸಾರ್ಟ್​ಗೆ ಹೋದ್ರೆ ನಾನೇನ್ ಮಾಡುವುದು.  ಕಾಂಗ್ರೆಸ್ ರೆಸಾರ್ಟ್ ರಾಜಕಾರಣದ ಬಗ್ಗೆ ಮಾತಾಡಲ್ಲ. ಜನ ನಮ್ಮನ್ನು ಆಯ್ಕೆ ಮಾಡಿರುವುದು ಪ್ರಾಮಾಣಿಕವಾಗಿ ಕೆಲಸ ಮಾಡಲಿ ಎಂದು. ಪದೇ ಪದೇ ರೆಸಾರ್ಟ್​ ರಾಜಕೀಯ ಮಾಡುತ್ತಿರುವುದರಿಂದ ಜನ ಬಾಯಿಗೆ ಬಂದಂಗೆ ಬೈಯ್ತಾರೆ ಎಂದು ಗುಡುಗಿದರು.
Loading...

ರಾಮಲಿಂಗಾ ರೆಡ್ಡಿ ಬೆನ್ನಲ್ಲೇ ಸೌಮ್ಯಾ ರೆಡ್ಡಿ ಕೂಡ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸೋನಿಯಾ ಗಾಂಧಿ ಭೇಟಿ ಬಳಿಕ ಸೌಮ್ಯಾ ರೆಡ್ಡಿ ತಮ್ಮ ನಿರ್ಧಾರವನ್ನು ಇನ್ನು ಸ್ಪಷ್ಟಪಡಿಸಿಲ್ಲ. 
First published:July 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...