ನಾನು ಕಾಂಗ್ರೆಸ್​ ವಿರೋಧಿ ಚಟುವಟಿಕೆ ಮಾಡಿಲ್ಲ: ಕೆ.ಎಚ್​​ ಮುನಿಯಪ್ಪ ವೈಯಕ್ತಿಕ ದ್ವೇಷ ಸಾಧಿಸುವುದು ಬಿಡಲಿ; ಎಸ್​​.ಎನ್​​ ನಾರಾಯಣಸ್ವಾಮಿ

ಇನ್ನು ಕಳೆದ ಲೋಕಸಭೆ ಚುನಾವಣೆಗಿಂತ ಹೆಚ್ಚು ಮತಗಳು ಈ ಬಾರಿ ಕೊಡಿಸಿದ್ದೇನೆ. ಬಂಗಾರಪೇಟೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕೆಎಚ್ ಮುನಿಯಪ್ಪ ಬರಲೇ ಇಲ್ಲ. ನಾವೇ ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದೇವೆ ಎಂದರು ಎಸ್​.ಎನ್​​ ನಾರಾಯಣ ಸ್ವಾಮಿ.

news18-kannada
Updated:October 29, 2019, 7:21 AM IST
ನಾನು ಕಾಂಗ್ರೆಸ್​ ವಿರೋಧಿ ಚಟುವಟಿಕೆ ಮಾಡಿಲ್ಲ: ಕೆ.ಎಚ್​​ ಮುನಿಯಪ್ಪ ವೈಯಕ್ತಿಕ ದ್ವೇಷ ಸಾಧಿಸುವುದು ಬಿಡಲಿ; ಎಸ್​​.ಎನ್​​ ನಾರಾಯಣಸ್ವಾಮಿ
ಶಾಸಕ ನಾರಾಯಣಸ್ವಾಮಿ
  • Share this:
ಕೋಲಾರ(ಅ.29): ಕಾಂಗ್ರೆಸ್​​ನ ಮಾಜಿ ಸಂಸದ ಕೆ.ಎಚ್​​ ಮುನಿಯಪ್ಪ ವಿರುದ್ಧ ಬಂಗಾರಪೇಟೆ ಶಾಸಕ ಎಸ್​​. ಎನ್​​​ ನಾರಯಣಸ್ವಾಮಿ ಕಿಡಿಕಾರಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಆರೋಪಿಸಿ ತನ್ನ ಮೇಲೆ ಹೈಕಮಾಂಡ್​ಗೆ ದೂರು ನೀಡಿದ್ದ ಕೆ.ಎಚ್​​ ಮುನಿಯಪ್ಪ ವಿರುದ್ಧ ಬಹಿರಂಗವಾಗಿಯೇ ಎಸ್​​.ಎನ್​​ ನಾರಾಯಣಸ್ವಾಮಿ ಹರಿಹಾಯ್ದಿದ್ದಾರೆ.

ಇಂದು ನ್ಯೂಸ್​​-18 ಕನ್ನಡದೊಂದಿಗೆ ಮಾತಾಡಿದ ಎಸ್​.ಎನ್​​ ನಾರಾಯಣಸ್ವಾಮಿ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕೆ.ಎಚ್​​ ಮುನಿಯಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. "ಕಾಂಗ್ರೆಸ್​​ ಪಕ್ಷದಿಂದ ಉಚ್ಚಾಟನೆ ಮಾಡುವಂತ ತಪ್ಪು ನಾವೇನು ಮಾಡಿಲ್ಲ. ವೈಯಕ್ತಿಕ ದ್ವೇಷದಿಂದ ಕೆ.ಎಚ್​​ ಮುನಿಯಪ್ಪ ನಮ್ಮ ಮೇಲೆ ಆರೋಪ ಮಾಡೋದು ಬಿಡಲಿ. ಬೇರೆಯವರ ಮಾತನ್ನು ಕೇಳೋದು ಸ್ವಲ್ಪ ಕಡಿಮೆ ಮಾಡಲಿ" ಎಂದು ಎಸ್​​.ಎನ್​​ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಇನ್ನು ಕಳೆದ ಲೋಕಸಭೆ ಚುನಾವಣೆಗಿಂತ ಹೆಚ್ಚು ಮತಗಳು ಈ ಬಾರಿ ಕೊಡಿಸಿದ್ದೇನೆ. ಬಂಗಾರಪೇಟೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕೆಎಚ್ ಮುನಿಯಪ್ಪ ಬರಲೇ ಇಲ್ಲ. ನಾವೇ ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದೇವೆ ಎಂದರು ಎಸ್​.ಎನ್​​ ನಾರಾಯಣ ಸ್ವಾಮಿ.

ಈ ಹಿಂದೆಯೇ ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ‌ ಚಟುವಟಿಕೆ ಮಾಡಿದವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಕೆ.ಎಚ್. ಮುನಿಯಪ್ಪ ಹೇಳಿದ್ದರು. ಬಿಜೆಪಿಪರ ಕೆಲಸ ಮಾಡಿದವರು ಮಾನ ಮರ್ಯಾದೆ ಇದ್ದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಹೆಸರೇಳಬಾರದು. ಬಿಜೆಪಿ ಜತೆಗೆ ಕೆಲಸ ಮಾಡಿದವರು ಕಾಂಗ್ರೆಸ್ ಕಚೇರಿಗೆ ಬರಬಾರದು. ಈಗಾಗಲೇ ರಮೇಶ್ ಕುಮಾರ್, ಎಸ್.ಎನ್. ನಾರಾಯಣಸ್ವಾಮಿ, ವಿ ಮುನಿಯಪ್ಪ ಪಕ್ಷ ವಿರೋದಿ ಚಟುವಟಿಕೆ ಮಾಡಿದ್ದಾರೆಂದು ದೂರು ನೀಡಿದ್ದೇನೆ. ಇವರ ವಿರುದ್ದ ಹೈಕಮಾಂಡ್​ ಕ್ರಮ ಸಾಧ್ಯತೆ ಇದೆ ಎಂದಿದ್ದರು.

ಇದನ್ನೂ ಓದಿ: Dengue cases in Delhi: ದೆಹಲಿಯಲ್ಲಿ 833 ಡೆಂಗ್ಯೂ ಪ್ರಕರಣಗಳು ಪತ್ತೆ

ಕೋಲಾರ ಲೋಕಸಭಾ ಕ್ಷೇತ್ರದಿಂದ ಕೆ.ಎಚ್ ಮುನಿಯಪ್ಪಗೆ ಟಿಕೆಟ್​​ ನೀಡಬಾರದು ಎಂದು​ ಮಾಜಿ ಸ್ಪೀಕರ್​​ ರಮೇಶ್​ ಕುಮಾರ್ ಬಣ ಪಟ್ಟು ಹಿಡಿದಿತ್ತು. ರಮೇಶ್​​ ಕುಮಾರ್​​ ಜತೆಗೆ ಎಸ್​​.ಎನ್​​ ನಾರಾಯಣಸ್ವಾಮಿ ಸೇರಿದಂತೆ ಹಲವು ಜಿಲ್ಲಾ ಮುಖಂಡರು ಹೈಕಮಾಂಡ್​ ಭೇಟಿ ಮಾಡಿ ಮನವಿ ಮಾಡಿದ್ದರು. ಆದರೂ ಟಿಕೆಟ್ ಪಡೆಯುವಲ್ಲಿ ಮುನಿಯಪ್ಪ ಯಶಸ್ವಿಯಾಗಿದ್ದರು. ಆದರೆ, ಕಾಂಗ್ರೆಸ್​ ನಾಯಕರು ಮುನಿಯಪ್ಪಗೆ ಬೆಂಬಲ ನೀಡಲಿಲ್ಲ. ಇದೇ ಕಾರಣದಿಂದಲೇ ಸತತ ಏಳು ಬಾರಿ ಗೆಲುವು ಕಂಡಿದ್ದ ಮುನಿಯಪ್ಪ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಸೋತು ಹೋದರು. ಅಂದಿನಿಂದಲೂ ಜಿಲ್ಲಾ ಕಾಂಗ್ರೆಸ್​ ನಾಯಕರ ಮೇಲೆ ಮುನಿಯಪ್ಪ ಕೆಂಡ ಕಾರುತ್ತಾ ಬಂದಿದ್ದಾರೆ.
---------
First published: October 29, 2019, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading